500 ಕೋಟಿ ಬಜೆಟ್​ನ​ ಸಿನಿಮಾ ಮಾಡ್ತೀನಿ ಅಂತ ಕಾಗೆ ಹಾರಿಸಿದ್ದ: ವಂಚಕನ ನಂಬಿ ಮೋಸ ಹೋದೆ ಎಂದ ಜಾಕಲಿನ್ ಫರ್ನಾಂಡಿಸ್​!

Jacqueline Fernandez: ಒಂದು ಸಂಭಾಷಣೆಯಲ್ಲಿ ಸುಕೇಶ್ “ಹಾಲಿವುಡ್ ವಿಎಫ್ಎಕ್ಸ್ ಕಲಾವಿದರನ್ನು ಒಳಗೊಂಡಿರುವ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಯೋಜನೆಯನ್ನು ಜಾಕ್ವೆಲಿನ್‌ನೊಂದಿಗೆ ಮಾಡಲು ಭರವಸೆ ನೀಡಿದರು

 ನಟಿ ಜಾಕ್ವೆಲಿನ್ ಫರ್ನಾಂಡಿಸ್

ನಟಿ ಜಾಕ್ವೆಲಿನ್ ಫರ್ನಾಂಡಿಸ್

  • Share this:
ಸುಕೇಶ್ ಚಂದ್ರಶೇಖರ್ (Sukesh) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ದಿನ ಹೊಸ ಹೊಸ ವಿವರಗಳು ಹೊರ ಬರುತ್ತಿರುವುದನ್ನು ನಮಗೆಲ್ಲಾ ತಿಳಿದಿರುವ ವಿಚಾರವೇ ಆಗಿದೆ. ಈಗ ಇವರ ಪ್ರಕರಣದಲ್ಲಿ (Case) ಹೊಸದಾಗಿ ತಳುಕು ಹಾಕಿಕೊಂಡಿರುವ ಸುದ್ದಿ (Latest news) ಏನು ಎಂದರೆ ಇವರು ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಜೊತೆ ಬಿಗ್ ಬಜೆಟ್ (Big budget) ಚಿತ್ರ (Film) ಮಾಡಲು ಬಯಸಿದ್ದರಂತೆ ಎಂದು ಹೇಳಲಾಗುತ್ತಿದೆ.

ಮಹಿಳಾ ಸೂಪರ್ ಹೀರೋ ಸರಣಿ
ಇತ್ತೀಚೆಗೆ ಸುದ್ದಿ ಮಾಧ್ಯಮವೊಂದು ಬಿತ್ತರಿಸಿದ ವರದಿಯು ಸುಕೇಶ್ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರ ಜೊತೆಗೆ, ಜಾಕ್ವೆಲಿನ್ ಅನ್ನು ಹಾಕಿಕೊಂಡು ಸರಣಿ ಚಲನಚಿತ್ರಗಳನ್ನು ಸಹ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 500 ಕೋಟಿ ರೂಪಾಯಿಗಳ 3 ಭಾಗಗಳನ್ನು ಹೊಂದಿರುವ ಮಹಿಳಾ ಸೂಪರ್ ಹೀರೋ ಸರಣಿ ಚಿತ್ರಗಳನ್ನು ಮಾಡುವ ಯೋಜನೆಯ ಬಗ್ಗೆ ಇವರು ನಟಿಗೆ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಜಾಕಲಿನ್​​, ನೋರಾ ಬಳಿಕ ಶಿಲ್ಪಾ ಶೆಟ್ಟಿ, ಶ್ರದ್ಧಾ ಕಪೂರ್​​ಗೆ ಸಂಕಷ್ಟ​: ಇವ್ನು ಹೇಳ್ತಿರೋದೆಲ್ಲ ನಿಜನಾ...?

ದುರ್ಬಲತೆ ಬಳಸಿಕೊಂಡ
ನಟಿ ಜಾಕ್ವೆಲಿನ್ ಬಾಲಿವುಡ್‌ನಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಾರೆ ಎಂದು ಸುಕೇಶ್‌ಗೆ ಚೆನ್ನಾಗಿ ತಿಳಿದಿತ್ತು. ಅವರು ಹೆಚ್ಚು ಚಲನಚಿತ್ರಗಳಿಗೆ ಸಹಿ ಹಾಕುತ್ತಿರಲಿಲ್ಲ ಮತ್ತು ಅವನು ನಟಿಯನ್ನು ಇನ್ನಷ್ಟು ತನ್ನ ಕಡೆಗೆ ಸೆಳೆಯಲು ಜಾಕ್ವೆಲಿನ್‌ಳ ಈ ದುರ್ಬಲತೆ ಬಳಸಿಕೊಂಡನು ಎಂದು ಹೇಳಬಹುದು.

ಹಾಲಿವುಡ್ ವಿಎಫ್ಎಕ್ಸ್ ಕಲಾವಿದರು
ಒಂದು ಸಂಭಾಷಣೆಯಲ್ಲಿ ಸುಕೇಶ್ “ಹಾಲಿವುಡ್ ವಿಎಫ್ಎಕ್ಸ್ ಕಲಾವಿದರನ್ನು ಒಳಗೊಂಡಿರುವ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಯೋಜನೆಯನ್ನು ಜಾಕ್ವೆಲಿನ್‌ನೊಂದಿಗೆ ಮಾಡಲು ಭರವಸೆ ನೀಡಿದರು ಮತ್ತು ಅದನ್ನು ಜಾಗತಿಕ ಮಟ್ಟದಲ್ಲಿ ಚಿತ್ರೀಕರಿಸಲಾಗುವುದು. ನೀವು ಹಾಲಿವುಡ್ ನಟಿ ಏಂಜಲೀನಾ ಜೋಲಿ ಅವರಂತೆ ಕಾಣುತ್ತೀರಾ ಮತ್ತು ನೀವು ಸೂಪರ್ ಹೀರೋ ಸರಣಿಗೆ ಅರ್ಹರಾಗಿದ್ದೀರಾ” ಎಂದು ಜಾಕ್ವೆಲಿನ್‌ಗೆ ಹೇಳಿದರು ಎಂದು ಸುದ್ದಿ ಮಾಧ್ಯಮ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇದ್ದೆಲ್ಲದರ ಮಧ್ಯೆ ಕೋಟ್ಯಧಿಪತಿ ಸುಕೇಶ್, ನಟಿ ಜಾಕ್ವೆಲಿನ್ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಆಕೆಯ ಸಹೋದರಿಗೆ ವರ್ಗಾಯಿಸಿದ ಹಣದ ಕುರಿತಾಗಿ ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದ ಸಲ್ಲಿಕೆಗಳಲ್ಲಿ ಸತ್ಯ ಹೇಳುತ್ತಿಲ್ಲ ಎಂದು ಸಹ ಆರೋಪಿಸಿದರು.

180,000 ಡಾಲರ್ ಹಣ ವರ್ಗಾವಣೆ
ಇತರರ ನಡುವೆ ಸುಮಾರು 200 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾನೂನು ಕ್ರಮ ಎದುರಿಸುತ್ತಿರುವ ಚಂದ್ರಶೇಖರ್, ನಟಿ ಹೇಳಿದಂತೆ 150,000 ಡಾಲರ್ ಬದಲಿಗೆ ಅಮೆರಿಕದಲ್ಲಿ ವಾಸಿಸುವ ಫರ್ನಾಂಡಿಸ್ ಸಹೋದರಿ ಜೆರಾಲ್ಡಿನ್‌ಗೆ 180,000 ಡಾಲರ್ ಹಣವನ್ನು ವರ್ಗಾಯಿಸಿದ್ದಾರೆ ಎಂದು ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದರು.

ಆರೋಪ
ಸುಕೇಶ್ ಚಂದ್ರಶೇಖರ್ ಮತ್ತು ಲೀನಾ ಮಾರಿಯಾ ಪಾಲ್‌ರನ್ನು ಇತ್ತೀಚೆಗೆ ದೆಹಲಿಯ ತಿಹಾರ್ ಜೈಲಿನಿಂದ ಸುಲಿಗೆ ದಂಧೆ ನಡೆಸುತ್ತಿರುವ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇ.ಡಿ. ಬಂಧಿಸಿದೆ.

ಇದನ್ನೂ ಓದಿ: ಜಾಕಲಿನ್​ ಫರ್ನಾಂಡಿಸ್​ ಅಸಲಿ ಬಣ್ಣ ತೆರೆದಿಟ್ಟ ಸುಕೇಶ್​: ಏನೆಲ್ಲಾ ಗಿಫ್ಟ್​ ಕೊಟ್ಟಿದ್ದಾನಪ್ಪ..!

ಜೈಲಿನಲ್ಲಿರುವ ರ‍್ಯಾನ್‌ಬ್ಯಾಕ್ಸಿ ಪ್ರವರ್ತಕ ಶಿವಿಂದರ್ ಸಿಂಗ್ ಪತ್ನಿ ಅದಿತಿ ಸಿಂಗ್ ದೂರಿನ ಹಿನ್ನೆಲೆಯಲ್ಲಿ ದಂಪತಿ ಈಗಾಗಲೇ ದೆಹಲಿ ಪೊಲೀಸ್ ವಶದಲ್ಲಿದ್ದಾರೆ. ಚಂದ್ರಶೇಖರ್ ಮತ್ತು ಪಾಲ್ ವಿದೇಶಗಳಲ್ಲಿ ಹಣ ಸಂಗ್ರಹಿಸಲು ಶೆಲ್ ಕಂಪನಿಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಉಳಿದ ನಟಿಯರ ಹೆಸರು ಇನ್ನೂ ನಿಗೂಢ! ಜಾಕ್ವೆಲಿನ್ ಫರ್ನಾಂಡಿಸ್​ ಹಾಗೂ ನೋರಾ ಫತೇಹಿ ಸಿನಿಮಾ ಹೆಸರು ಮಾತ್ರ ಸದ್ಯ ಸಿಲುಕಿದೆ. ಇವರ ಜತೆಗೆ ಇನ್ನೂ ಕೆಲವರು ಸ್ಟಾರ್​ ನಟಿಯರು ಹಾಗೂ ಮಾಡೆಲ್​ಗಳು ಜೈಲಿಗೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.ಜಾಕ್ವೆಲಿನ್ ಫರ್ನಾಂಡಿಸ್​ ಮತ್ತು ಸುಕೇಶ್ ಚಂದ್ರಶೇಖರ್ ಇಬ್ಬರ ನಡುವಿನ ರೋಮ್ಯಾಂಟಿಕ್ ಪೋಟೋ ಬಿಡುಗಡೆ ಆಗಿತ್ತು. ಕೆಲ ತಿಂಗಳ ಹಿಂದಷ್ಟೇ ಈ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ. ಅಕ್ಟೋಬರ್​​ನಲ್ಲಿ ಜಾರಿ ನಿರ್ದೇಶನಾಲಯದಿಂದ ಜಾಕ್ವೆಲಿನ್ ಫರ್ನಾಂಡೀಸ್​​ಗೆ ಸಮನ್ಸ್ ನೀಡಲಾಗಿತ್ತು.
Published by:vanithasanjevani vanithasanjevani
First published: