Sushant Sing Rajput Biopic: ಸಿನಿಮಾ ಆಗಲಿದೆ ಸುಶಾಂತ್​ ಜೀವನ: ರಿಲೀಸ್​ ಆಯ್ತು ಟೈಟಲ್​ ಪೋಸ್ಟರ್​..!

Suicide or Murder: A Star Was Lost: ವಿಜಯ್​ ಶೇಖರ್ ಗುಪ್ತಾ ನಿರ್ಮಾಣದ ಸಿನಿಮಾವನ್ನು ಶಾಮಿಕ್ ಮೌಲಿಕ್​ ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ಸೂಯಿಸೈಡ್ ಆರ್​ ಮರ್ಡರ್: ಎ ಸ್ಟಾರ್ ವಾಸ್​ ಲಾಸ್ಟ್​ ಎಂದು ಶೀರ್ಷಿಕೆ ನೀಡಲಾಗಿದೆ. ಈ ಸಿನಿಮಾದ ಟೈಟಲ್​ ಪೋಸ್ಟರ್​ ಅನ್ನು ಇನ್​ಸ್ಟಾಗ್ರಾಂನಲ್ಲಿ ರಿಲೀಸ್​ ಮಾಡಲಾಗಿದೆ.

ಸುಶಾಂತ್​ ಸಿಂಗ್​ ರಜಪೂತ್​

ಸುಶಾಂತ್​ ಸಿಂಗ್​ ರಜಪೂತ್​

  • Share this:
ಸುಶಾಂತ್ ಸಿಂಗ್​ ರಜಪೂತ್ ಅವರ ಅಗಲಿಕೆ ಇನ್ನೂ ನಂಬಲಾರದ ಕಹಿ ಸತ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್​ ಅವರ ಸಾವಿಗೆ ನ್ಯಾಯ ಸಿಗಬೇಕೆಂದು ಅಭಿಮಾನಿಗಳು ಸಮರ ನಡೆಸುತ್ತಿದ್ದಾರೆ. ಬಾಲಿವುಡ್​ನಲ್ಲಿರುವ ಸ್ವಜನಪಕ್ಷಪಾತದಿಂದಲೇ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.

ಸುಶಾಂತ್ ಜೀವನಾಧಾರಿತ ಸಿನಿಮಾ ಬಾಲಿವುಡ್​ನಲ್ಲಿ ಬರಿದೆ. ಅದರಲ್ಲೂ ಯಾವುದಾದರೂ ಸ್ಟಾರ್ ಕಿಡ್​ ಅಭಿಯಿಸುತ್ತಾರೆ ಎಂದು ನೆಟ್ಟಿಗರು ವ್ಯಂಗ್ಯ ಮಾಡುತ್ತಿದ್ದರು. ಆದರೆ ಈ ಮಾತು ಈಗ ಸುಳ್ಳಾಗಿದೆ.

Celebrity photographer Dabboo Ratnani shared exclusive photos of Sushant Sing Rajput in his Instagram
ಸುಶಾಂತ್​ ಸಿಂಗ್​ ರಜಪೂತ್​


ವಿಜಯ್​ ಶೇಖರ್ ಗುಪ್ತಾ ನಿರ್ಮಾಣದ ಸಿನಿಮಾವನ್ನು ಶಾಮಿಕ್ ಮೌಲಿಕ್​ ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ಸೂಯಿಸೈಡ್ ಆರ್​ ಮರ್ಡರ್: ಎ ಸ್ಟಾರ್ ವಾಸ್​ ಲಾಸ್ಟ್​ ಎಂದು ಶೀರ್ಷಿಕೆ ನೀಡಲಾಗಿದೆ. ಈ ಸಿನಿಮಾದ ಟೈಟಲ್​ ಪೋಸ್ಟರ್​ ಅನ್ನು ಇನ್​ಸ್ಟಾಗ್ರಾಂನಲ್ಲಿ ರಿಲೀಸ್​ ಮಾಡಲಾಗಿದೆ.

Suicide or Murder A Star Was Lost film on Sushant Sing Rajputs Life 
ಸೂಯಿಸೈಡ್ ಆರ್​ ಮರ್ಡರ್: ಎ ಸ್ಟಾರ್ ವಾಸ್​ ಲಾಸ್ಟ್ ಟೈಟಲ್​ ಪೋಸ್ಟರ್​


ಸುಶಾಂತ್​ ಜೀವನ ತೆರೆ ಮೇಲೆ ಬರಲಿದೆ ನಿಜ. ಆದರೆ ಅದು ಸುಶಾಂತ್​ ಅವರ ಬಯೋಪಿಕ್​ ಅಲ್ಲ. ಅವರ ಜೀವನದಿಂದ ಪ್ರೇರಿತವಾದ ಚಿತ್ರವಾಗಿರಲಿದೆಯಂತೆ. ​ ಸೆಟ್ಟೇರಲಿರುವ ಮಾತು ನಿಜ. ಆದರೆ ಅವರ ಪಾತ್ರಕ್ಕೆ ಯಾವ ಕಿಡ್ಸ್​ ಅನ್ನೂ ತೆಗೆದುಕೊಳ್ಳಲಾಗುತ್ತಿಲ್ಲ. ಬದಲಿಗೆ ಹೊಸ ಪ್ರತಿಭೆಯನ್ನು ಪರಿಚಯಿಸಲಿದ್ದಾರಂತೆ ನಿರ್ದೇಶಕರು.

ಇದನ್ನೂ ಓದಿ: ಟ್ರೋಲ್​ ಆಗುತ್ತಿದೆ ಮಹೇಶ್​ ಭಟ್​ - ರಿಯಾ ಚಕ್ರವರ್ತಿ ಫೋಟೋ: ಸುಶಾಂತ್ ಜೊತೆಗಿನ ಚಿತ್ರಗಳನ್ನು ಡಿಲೀಟ್​ ಮಾಡಿದ ನಟಿ..!

ಈ ಸಿನಿಮಾಗಾಗಿ ಕತೆ ಸಿದ್ಧವಾಗಲಿದೆ. ಕತೆಯನ್ನು ಸುಶಾಂತ್ ಜೀವನದ ಪ್ರೇರಣೆಯಿಂದಲೇ ಬರೆಯಲಾಗುತ್ತದೆಯಂತೆ. ಸುಶಾಂತ್​ ಜೊತೆ ಇನ್ನೂ ಹಲವರ ಜೀವನವನ್ನೂ ಕತೆಗೆ ಸೇರಿಸಲಾಗುವುದು ಎಂದಿದ್ದಾರಂತೆ ನಿರ್ದೇಶಕರು. ಅದಕ್ಕೆ ಇದು ಸುಶಾಂತ್ ಬಯೋಪಿಕ್​ ಆಗುವುದಿಲ್ಲ ಎನ್ನಲಾಗುತ್ತಿದೆ,

Sushant Singh Rajput: ಸೆಲೆಬ್ರಿಟಿ ಫೋಟೋಗ್ರಾಫರ್​ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಸುಶಾಂತ್: ಇಲ್ಲಿವೆ​ ಫೋಟೋಗಳು..! 

ಇದನ್ನೂ ಓದಿ: Abhay Deol: ಹೃತಿಕ್​ ರೋಷನ್​ನಿಂದಾಗಿ ಅಭಯ್​ಗೆ ಆಗಿತ್ತಾ ಮೋಸ: ತಮ್ಮ ಅನುಭವ ಹಂಚಿಕೊಂಡ ನಟ..!
First published: