Suhana Khan: ಸುಹಾನಾ ಬಿ-ಟೌನ್ನ ಸ್ಟಾರ್ ಮಕ್ಕಳಲ್ಲಿ ಒಬ್ಬರು. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಫೋಟೋಗಳಿಂದಲೇ ಸದ್ದು ಮಾಡುವ ಸುಹಾನಾ, ಈಗ ಮತ್ತೆ ಇದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಮೂರು ಮಕ್ಕಳ ತಂದೆ. ಅವರ ಒಬ್ಬಳೇ ಮಗಳಾದ ಸುಹಾನಾ ಸದ್ಯ ಪದವಿ ಮುಗಿಸಿ, ಈಗ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ನ್ಯೂಯಾರ್ಕ್ನ ವಿಶ್ವವಿದ್ಯಾಲಯಕ್ಕೆ ಈಗಷ್ಟೆ ಎಂಟ್ರಿ ಕೊಟ್ಟಿದ್ದಾರೆ.
ಸುಹಾನಾ ಬಿ-ಟೌನ್ನ ಸ್ಟಾರ್ ಮಕ್ಕಳಲ್ಲಿ ಒಬ್ಬರು. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಫೋಟೋಗಳಿಂದಲೇ ಸದ್ದು ಮಾಡುವ ಸುಹಾನಾ, ಈಗ ಮತ್ತೆ ಇದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಸುಹಾನಾ ಖಾನ್
ಸುಹಾನಾರ ಒಂದು ಚಿತ್ರವನ್ನು ಪೋಸ್ಟ್ ಮಾಡಿದರೆ ಸಾಕು ಅದು ವೈರಲ್ ಆಗುತ್ತದೆ. ಈ ಹಿಂದೆಯೂ ಸಾಕಷ್ಟು ಸಲ ಸುಹಾನಾ ಕೇವಲ ತಮ್ಮ ಫೋಟೋಗಳಿಂದಲೇ ಸದ್ದು ಮಾಡಿದ್ದರು. ಈಗಲೂ ಸಹ ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿದ್ದು, ಅಲ್ಲಿನ ಕ್ಯಾಂಪಸ್ನಲ್ಲಿ ಸುಹಾನಾ ಇರುವ ಒಂದು ಚಿತ್ರ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ಈಗ ವೈರಲ್ ಆಗುತ್ತಿದೆ.
A post shared by Suhana Khan (@suhanakhanoffcial) on
ಪ್ರತಿ ಸಲದಂತೆ ಈ ಬಾರಿಯೂ ಸುಹಾನಾರ ಫೋಟೋ ನೋಡಿದ ನೆಟ್ಟಿಗರು ಅವರು ತೊಟ್ಟಿರುವ ಡ್ರೆಸ್ ಕುರಿತು ಕಮೆಂಟ್ ಮಾಡುತ್ತಿದ್ದಾರೆ. ಜತೆಗೆ ಅವರಿಗೆ ಬಟ್ಟೆಗಳ ಆಯ್ಕೆ ಕುರಿತಂತೆ ಸಲಹೆಗಳನ್ನೂ ನೀಡುತ್ತಿದ್ದಾರೆ. ಮತ್ತೆ ಕೆಲವರು ಸುಹಾನಾ ಪೋಸ್ ಕೊಟ್ಟಿರುವ ರೀತಿಗೂ ಕಮೆಂಟ್ ಮಾಡುತ್ತಿದ್ದಾರೆ.
ಸುಹಾನಾ ಖಾನ್
ಸುಹಾನಾ ಮಾಡರ್ನ್ ಬಟ್ಟೆ ತೊಟ್ಟಿದ್ದು, ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಅವರು ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಫೈಲ್ ಹಿಡಿದು ಬೆಂಚ್ ಮೇಲೆ ಕೂರಲು ಹೋಗುವಾಗ ಈ ಚಿತ್ರ ತೆಗೆಯಲಾಗಿದ್ದು, ಅದರಲ್ಲಿ ಸುಹಾನಾ ಕ್ಯೂಟ್ ಸ್ಮೈಲ್ ಸಹ ಕೊಟ್ಟಿದ್ದಾರೆ.
ಒಂದು ವಿಷಯವಂತೂ ಸತ್ಯ. ಸುಹಾನಾ ಬಾಲಿವುಡ್ಗೆ ಎಂಟ್ರಿ ಕೊಡುವ ಮೊದಲೇ ಸೂಪರ್ ಸ್ಟಾರ್ಗಳಷ್ಟೇ ಫೇಮಸ್ ಆಗಿದ್ದಾರೆ. ಇನ್ನು ಅವರು ಸಿನಿ ರಂಗಕ್ಕೆ ಯಾವಾಗ ಬರಲಿದ್ದಾರೆ ಅಂತ ಸಾಕಷ್ಟು ಮಂದಿ ಕಾಯುತ್ತಿದ್ದಾರೆ.
Riya Sen: ಬಿಕಿನಿ ತೊಟ್ಟು ಬಿಸಿ ಏರಿಸಿದ ಹಾಟ್ ಬೇಬಿ ರಿಯಾ ಸೇನ್..!
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ