ಹೆಣ್ಣು ಮಕ್ಕಳ ವಯಸ್ಸು ಕೇಳಬಾರದು... ಗಂಡಸರ ಸಂಬಳ ಕೇಳಬಾರದು ಅಂತಾರೆ. ಈಗಲೂ ಸಹ ಸಾಕಷ್ಟು ಹೆಣ್ಣು ಮಕ್ಕಳು ಅವರ ವಯಸ್ಸು ಕೇಳಿದರೆ ಇದೇ ಗಾದೆ ಮಾತನ್ನು ಹೇಳಿ ಪ್ರಶ್ನೆಯನ್ನೇ ತಳ್ಳಿ ಹಾಕುತ್ತಾರೆ.
ಕಿಂಗ್ ಖಾನ್ ಮಗಳು
ಸುಹಾನಾ ಖಾನ್ ಈಗಿನ ಜಮಾನದ ಹುಡುಗಿ. ಅದಕ್ಕೆ ಅವರೇ ತಮ್ಮ ವಯಸ್ಸಿನ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಒಂದು ಸ್ಲೊಮೊ ವಿಡಿಯೋವನ್ನೂ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದೆ.
![Suhana Kahans no makeup photo captured by Gauri khan gone viral in social media]()
ಸುಹಾನಾ ಖಾನ್
ನಿನ್ನೆಯಷ್ಟೆ ಸುಹಾನಾ ಖಾನ್ 20ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಲಾಕ್ಡೌನ್ನಲ್ಲಿ ಮನೆಯಲ್ಲೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ತಮ್ಮ ವಯಸ್ಸಿನ ಬಗ್ಗೆ ಬರೆದುಕೊಂಡಿದ್ದಾರೆ.
ಹುಟ್ಟುಹಬ್ಬದಂದು ತೊಟ್ಟಿದ್ದ ಬಾಡಿಕಾನ್ ಡ್ರೆಸ್ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಸುತ್ತಿರುವ ಸುಹಾನಾ ತಮ್ಮ ಸ್ಲೊಮೊ ವಿಡಿಯೋವೊಂದನ್ನು ಮಾಡಿದ್ದು, ಅದನ್ನೂ ಹಂಚಿಕೊಂಡಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗುತ್ತಿದೆ.
ಸುಹಾನಾಗೆ ಈಗ 20ರ ಹರೆಯ.ಈ ವಯಸ್ಸಿಗಾಗಲೇ ಬೇರೆಯವರು ನಾಯಕಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿ, ಹಿಟ್ ಸಹ ಆಗಿದ್ದಾರೆ. ಆದರೆ ಸುಹಾನಾ ಮಾತ್ರ ಇನ್ನೂ ವಿದ್ಯಾಭ್ಯಾಸ ಅಂತಿದ್ದಾರೆ. ಆದರೆ ಒಂದಂತೂ ಸತ್ಯ, ಇಷ್ಟರಲ್ಲೇ ಬಾಲಿವುಡ್ಗೆ ಸುಹಾನಾ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಇವರ ಸ್ನೇಹಿತೆ ಅನನ್ಯಾ ಪಾಂಡೆ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಮೂರನೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
Parineeti Chopra: ಬೀಚ್ನಲ್ಲಿ ಕಳೆದ ದಿನಗಳ ನೆನಪಿನಲ್ಲಿ ಪರಿಣೀತಿ ಚೋಪ್ರಾ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ