Video: ಸುಹಾನಾ ಬೋಲ್ಡ್​ ಲುಕ್‍ಗೆ ಫ್ಯಾನ್ಸ್ ಫಿದಾ: ಮಗಳ ಫೋಟೋ ಇರೋ ನಿಯತಕಾಲಿಕೆ ಬಿಡುಗಡೆ ಮಾಡಿದ ಶಾರುಖ್​

news18
Updated:August 1, 2018, 7:37 PM IST
Video: ಸುಹಾನಾ ಬೋಲ್ಡ್​ ಲುಕ್‍ಗೆ ಫ್ಯಾನ್ಸ್ ಫಿದಾ: ಮಗಳ ಫೋಟೋ ಇರೋ ನಿಯತಕಾಲಿಕೆ ಬಿಡುಗಡೆ ಮಾಡಿದ ಶಾರುಖ್​
news18
Updated: August 1, 2018, 7:37 PM IST
ನ್ಯೂಸ್​ 18 ಕನ್ನಡ 

ಸ್ಟಾರ್ ಸೆಲೆಬ್ರೆಟಿಗಳ ಮಕ್ಕಳು ಅಂದ್ರೆ ಅವರ ಮೇಲೆ ನಿರೀಕ್ಷೆಗಳು ಸ್ವಲ್ಪ ಜಾಸ್ತಿ. ಇದೀಗ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಮಗಳು ಸುಹಾನ ಖಾನ್ ಕೂಡ ನಿಯತಕಾಲಿಕೆಯೊಂದರ ಹಾಟ್ ಹಾಟ್ ಪೋಟೋಶೂಟ್ ಒಂದಕ್ಕೆ ಪೋಸ್ ನೀಡಿ ಸುದ್ದಿಯಲ್ಲಿದ್ದಾರೆ. ಹಾಗಾದ್ರೆ ಸುಹಾನ ಸಿನಿಮಾಗೆ ಎಂಟ್ರಿಯಾಗುತ್ತಿದ್ದಾರೆ ಅಂದುಕೊಂಡರಾ? ಇದರ ಬಗ್ಗೆ ತಿಳಿಯೋಕೆ ಈ ವರದಿ ಓದಿ.

ಹೇಳಿ ಕೇಳಿ ಶಾರುಖ್ ಮುದ್ದಿನ ಮಗಳು ಸುಹಾನಾ. ಇವರು ಬಿ ಟೌನ್‍ಗೆ ಎಂಟ್ರಿಯಾಗುತ್ತಾರೆ ಅಂತ ಈ ಹಿಂದೆಯೂ ಸಾಕಷ್ಟು ಬಾರಿ ಸುದ್ದಿಯಾಗಿದ್ದರೂ, ಇನ್ನು ಬೆಳ್ಳಿತೆರೆಗೆ ಸುಹಾನಾ ಎಂಟ್ರಿಯಾಗಿಲ್ಲ. ಹೀಗಿರುವಾಗಲೇ ಸದ್ಯ ಈ ಹಾಟ್ ಬ್ಯೂಟಿ ಬೋಲ್ಡ್ ಪೋಟೋ ಶೂಟ್ ಒಂದಕ್ಕೆ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ.

 

ಹಾಗಂತ ಇದು ಸಿನಿಮಾ ಎಂಟ್ರಿಗೆ ತಯಾರಿ ಅಂತ ತಿಳಿಯಬೇಡಿ. ಇದು ಖಾಸಗಿ ನಿಯತಕಾಲಿಕೆ ಒಂದಕ್ಕೆ ನೀಡಿರುವ ಪೋಸ್‍ ಅಷ್ಟೆ. ಸುಮಾರು 4 ರಿಂದ 5 ಕಾಸ್ಟ್ಯುಮ್‍ಗಳಲ್ಲಿ ಈ ದುಬಾರಿ ಫೋಟೋ ಶೂಟ್ ನಡೆದಿದೆ.

 
ಸುಹಾನಾಗೆ ಹಿಪ್‍ಪಾಪ್ ಡ್ಯಾನ್ಸ್ ಅಂದರೆ ತುಂಬ ಇಷ್ಟ. ಹೀಗಾಗಿ ಡ್ಯಾನ್ಸ್ ಪರಿಕಲ್ಪನೆಯಲ್ಲಿ ಫೋಟೋಗಳನ್ನ ಸೆರೆಹಿಡಿಯಲಾಗಿದ್ದು, ಫೈನಲ್ ಔಟ್ ಪುಟ್ ಸಖತ್ ಹಾಟ್ ಆಗಿ ಮೂಡಿಬಂದಿದೆ. ಹಾಗೆ ನಿಯತಕಾಲಿಕೆಯ ಕವರ್ ಪೇಜ್‍ನಲ್ಲೂ ಸುಹಾನಾ ಸಖತ್​ ಆಗಿ ಕಂಗೊಳಿಸುತ್ತಾ ಇದ್ದಾರೆ.
ಇದರ ಇನ್ನೊಂದು ವಿಶೇಷ ಅಂದರೆ ಸುಹಾನಾ ಫೋಟೋ ಇರುವ ನಿಯತಕಾಲಿಕೆಯನ್ನು ಕಾರ್ಯಕ್ರಮವೊಂದರಲ್ಲಿ ಖುದ್ದು ಶಾರುಖ್​ ಬಿಡುಗೆಡೆ ಮಾಡಿದ್ದಾರೆ.

 
 
ಚಿತ್ರ ಕೃಪೆ: ವೋಗ್​
First published:August 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ