Shah Rukh Khan: ಚಿತ್ರರಂಗಕ್ಕೆ ಕಾಲಿಟ್ಟ ಶಾರುಖ್ ಖಾನ್ ಮಗಳು! ಯಾವ ಸಿನಿಮಾ? ಏನ್​ ಕಥೆ? ಇಲ್ಲಿದೆ ನೋಡಿ

ಇದೀಗ ಆರ್ಚಿ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ, ಆರ್ಚಿ ಆ್ಯಂಡ್ರ್ಯೂಸ್, ವೆರೋನಿಕಾ ಮತ್ತು ಬೆಟ್ಟಿ ಈಗ ನಮ್ಮ ಬಾಲಿವುಡ್(Bollywood) ಅಂಗಳಕ್ಕೂ ಕಾಲಿಡುತ್ತಿದ್ದಾರೆ..! ಅಂದರೆ , ಜನಪ್ರಿಯ ಆರ್ಚಿ ಕಾಮಿಕ್ಸ್‌ನ ಹಿಂದಿ(Hindi) ಅವತರಣಿಕೆ ಸದ್ಯದಲ್ಲಿಯೇ ತೆರೆಗೆ ಬರಲಿದೆ.

ಶೂಟಿಂಗ್​ನಲ್ಲಿ ಭಾಗಿಯಾದ ಸುಹಾನಾ ಖಾನ್​

ಶೂಟಿಂಗ್​ನಲ್ಲಿ ಭಾಗಿಯಾದ ಸುಹಾನಾ ಖಾನ್​

  • Share this:
ಆರ್ಚಿ ಆ್ಯಂಡ್ರ್ಯೂಸ್(Archie Andrews) , ವೆರೋನಿಕಾ(Veronica)ಮತ್ತು ಬೆಟ್ಟಿ.. ಕಾಮಿಕ್ಸ್ ಪ್ರಿಯ(Comics Lovers)ರಿಗಂತೂ ಅವು ಅಚ್ಚುಮೆಚ್ಚಿನ ಪಾತ್ರಗಳು. ಇನ್ನು ಆರ್ಚಿ ಆ್ಯಂಡ್ರ್ಯೂಸ್ ಮತ್ತು ಸಂಗಡಿಗರ ಸಾಹಸಗಾಥೆಗಳಿಗೆ ಮಾರು ಹೋಗದ ಕಾಮಿಕ್ಸ್ ಪ್ರಿಯರೇ ಇಲ್ಲ. ಇದೀಗ ಆರ್ಚಿ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ, ಆರ್ಚಿ ಆ್ಯಂಡ್ರ್ಯೂಸ್, ವೆರೋನಿಕಾ ಮತ್ತು ಬೆಟ್ಟಿ ಈಗ ನಮ್ಮ ಬಾಲಿವುಡ್(Bollywood) ಅಂಗಳಕ್ಕೂ ಕಾಲಿಡುತ್ತಿದ್ದಾರೆ..! ಅಂದರೆ , ಜನಪ್ರಿಯ ಆರ್ಚಿ ಕಾಮಿಕ್ಸ್‌ನ ಹಿಂದಿ(Hindi) ಅವತರಣಿಕೆ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಜೋಯಾ ಅಖ್ತರ್(Zoya Akhtar)ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಹಾಗಾದರೆ, ವಿಶ್ವಾದ್ಯಂತ ಜನಪ್ರಿಯವಾಗಿರುವ ಈ ಮೂರು ಪಾತ್ರಗಳನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆ ನಿಮ್ಮ ಮನಸ್ಸನ್ನು ಹೊಕ್ಕಿರಬಹುದು ಅಲ್ಲವೇ..? ಪರವಾಗಿಲ್ಲ, ಅದಕ್ಕೆ ಉತ್ತರ ಇಲ್ಲಿದೆ.

ವೆರೋನಿಕಾ ಗೆಟಪ್​ನಲ್ಲಿ ಸುಹಾನಾ ಖಾನ್​!

ಸಿನಿಮಾದ ಸೆಟ್‍ನಿಂದ ವೈರಲ್ ಆಗಿರುವ ಚಿತ್ರಗಳನ್ನು ಗಮನಿಸಿದರೆ, ಸುಹಾನಾ ಖಾನ್ ವೆರೋನಿಕಾ ಲಾಡ್ಜ್ ಆಗಿರುವಂತೆ ಕಾಣುತ್ತದೆ (ನಡು ಬೈತಲೆ ತೆಗೆದಿರುವ ಕಪ್ಪು ಕೂದಲು ಮತ್ತು ಪೋಷಾಕನ್ನು ಗಮನಿಸಿ ಹೀಗೆ ಅಂದಾಜಿಸಬಹುದು) , ಖುಷಿ ಕಪೂರ್ ಅವರ ವೇಷಭೂಷಣ ಬೆಟ್ಟಿ ಕೂಪರ್ ಅನ್ನು ನೆನಪಿಸುತ್ತದೆ (ಆಕೆ ಧರಿಸಿರುವ ಸ್ವೆಟರ್ ಮತ್ತು ಸ್ಕರ್ಟ್‍ನಿಂದ ಇದನ್ನು ಊಹಿಸಬಹುದು), ಇನ್ನು ಚಿತ್ರದಲ್ಲಿ ಕಾಣ ಸಿಗುವ ವಿಭಿನ್ನ ಪೋಷಾಕಿನ ಹುಡುಗ ಅಗಸ್ತ್ಯ ನಂದಾ, ಆರ್ಚಿ ಆ್ಯಂಡ್ರ್ಯೂಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಹುದು.

ಬೆಳ್ಳೆತೆರೆ ಮೇಲೆ ರಾರಾಜಿಸಿದೆ ಆರ್ಚಿ ಕಾಮಿಕ್ಸ್​ನ ಪಾತ್ರಗಳು!

ಆರ್ಚಿ ಕಾಮಿಕ್ಸ್‌ನ ಪಾತ್ರಗಳು ದೊಡ್ಡ ಪರದೆಯ ಮೇಲೆ ಮೂಡಿ ಬರುತ್ತಿರುವುದು ಇದೇ ಮೊದಲೇನಲ್ಲ. ಅದರ ಪಾತ್ರಗಳು ಹಲವಾರು ಸಿನಿಮಾಗಳಲ್ಲಿ ಮತ್ತು ಕಾರ್ಟೂನ್ ಸರಣಿಗಳಲ್ಲಿ ಈಗಾಗಲೇ ಮೂಡಿ ಬಂದಿದ್ದು, ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದುಕೊಂಡಿವೆ. ಆರ್ಚಿ ಆ್ಯಂಡ್ರ್ಯೂಸ್‌ನ ಪಾತ್ರವು ಮೊದಲು ಕಾಣಿಸಿಕೊಂಡದ್ದು, ಪೆಪ್ ಕಾಮಿಕ್ಸ್‌ನಲ್ಲಿ. ಆ ಮೂಲಕ ಪಾಪ್ ಸಂಸ್ಕೃತಿಯಲ್ಲಿ ಸ್ವತಂತ್ರ ಪಾತ್ರವಾಗಿ ಅತ್ಯಧಿಕ ಜನಪ್ರಿಯತೆಯನ್ನು ಗಳಿಸಿತು.ಇದನ್ನೂ ಓದಿ: ಬಂದ್ ಆಗಲಿದ್ಯಂತೆ ಸೂಪರ್​ ಹಿಟ್​ ‘ದಿ ಕಪಿಲ್ ಶರ್ಮಾ ಶೋ’.. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಕಳೆದ ವರ್ಷ, ನಿರ್ದೇಶಕಿ ಜೋಯಾ ಅಖ್ತರ್ ಈ ಪ್ರಾಜೆಕ್ಟ್‌ನಲ್ಲಿ ತಾನು ಕೆಲಸ ಮಾಡುತ್ತಿರುವುದಾಗಿ, ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಘೋಷಿಸಿಕೊಂಡಿದ್ದರು. ಹಾಗಂತ ಜೋಯಾ ಒಬ್ಬರೇ ಇದರಲ್ಲಿ ತೊಡಗಿಕೊಂಡಿಲ್ಲ, ದ ಆರ್ಚಿ ಕಾಮಿಕ್ಸ್‌ನ ಹಿಂದಿ ಅವತರಣಿಕೆಯು ಹಲವರ ಸಹಭಾಗಿತ್ವವನ್ನು ಒಳಗೊಂಡಿದೆ. ಹೌದು, ಜೋಯಾ ಅಖ್ತರ್, ರೀಮಾ ಕಾಗ್ಟಿ ಮತ್ತು ಶರದ್ ದೇವರಾಜನ್ ಅವರ ನಿರ್ಮಾಣ ಸಂಸ್ಥೆಗಳಾದ ಟೈಗರ್ ಬೇಬಿ ಮತ್ತು ಗ್ರಾಫಿಕ್ ಇಂಡಿಯಾದ ಅಡಿಯಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ.

ಶೀಘ್ರದಲ್ಲೇ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್!

“ಆರ್ಚಿ ಮತ್ತು ಅವರ ಸಹಭಾಗಿಗಳು ದೇಸಿ ಅವತಾರದಲ್ಲಿ ಬರಲಿದ್ದಾರೆ..! ‘ದ ಆರ್ಚೀಸ್’ ಮುಂಬರಲಿರುವ ಮ್ಯೂಸಿಕಲ್‌ ಡ್ರಾಮಾ, ನನ್ನಿಂದ ನಿರ್ದೇಶಿಸಲ್ಪಡುತ್ತಿದೆ. ಶೀಘ್ರದಲ್ಲೇ ನೆಟ್‍ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ” ಎಂದು ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: ಈ ಸಿನಿಮಾದಿಂದ ರಣವೀರ್ ಸಿಂಗ್​ ಬೇರೆ ಲೆವೆಲ್​ಗೆ ಹೋಗ್ತಾರಂತೆ.. ಅವ್ರು ಕೇವಲ ನಟ ಅಲ್ಲ ಎಂದಿದ್ಯಾಕೆ `ಆ’ ನಿರ್ದೇಶಕ?

ಸುಹಾನಾ, ಅಗಸ್ತ್ಯ ಮತ್ತು ಖುಶಿ , ಈ ಮೂವರು ಬಾಲಿವುಡ್‍ನ ಪ್ರತಿಷ್ಟಿತ ತಾರಾ ಕುಟುಂಬಗಳಿಗೆ ಸೇರಿದವರು. ಸುಹಾನಾ ಖಾನ್, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಇಂಟೀರಿಯರ್ ಡಿಸೈನಿಂಗ್ ಉದ್ಯಮಿ ಗೌರಿ ಖಾನ್ ಅವರ ಮುದ್ದಿನ ಮಗಳು. ಸಹಜವಾಗಿಯೇ ಸುಹಾನಾ, ನಟನೆಯ ಬಗೆಗಿನ ಪ್ರೀತಿಯನ್ನು ತಂದೆ ಶಾರುಖ್ ಖಾನ್ ಅವರಿಂದ ಅನುವಂಶಿಕವಾಗಿ ಪಡೆದಿದ್ದಾರೆ.
Published by:Vasudeva M
First published: