ಸಾಮಾಜಿಕ ಜಾಲತಾಣದಲ್ಲಿ ನಿನ್ನೆಯಿಂದ ಡಾ. ರಾಜ್ಕುಮಾರ್ ಅವರ ಪ್ರತಿಮೆ ವಿಷಚಾರವಾಗಿ ಸುದ್ದಿಯೊಂದು ಹರಿದಾಡುತ್ತಿದೆ. ರಾಜಕುಮಾರ್ ಅವರ ಬಗ್ಗೆ ಅವಹೇಳನಕಾರಿ ದಾಟಿಯಲ್ಲಿ ಶಾಸಕ ಎನ್ ಎ ಹ್ಯಾರಿಸ್ ಅವರು ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋ ನೋಡಿದ ನೆಟ್ಟಿಗರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹ್ಯಾರಿಸ್ ಅವರು ನಡೆದುಕೊಂಡ ರೀತಿಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಈ ವಿಷಯವಾಗಿ ಶಾಸಕ ಎನ್ ಎ ಹ್ಯಾರಿಸ್ ಅವರು ಈಗಾಗಲೇ ಸ್ಪಷ್ಟನೆ ಸಹ ಕೊಟ್ಟಿದ್ದಾರೆ. ತಾನು ಹಾಗೇ ಮಾತನಾಡಿಲ್ಲ ಎಂದು ಹೇಳುವ ಹ್ಯಾರಿಸ್ ಅವರು ಪ್ರಕರಣದ ಕುರಿತಾಗಿ ಕ್ಷಮೆ ಸಹ ಯಾಚಿಸಿದ್ದಾರೆ. ಈಗ ಇದೇ ವಿಷಯವಾಗಿ ನಟಿ ಸುಧಾರಾಣಿ ಸಹ ಯಾರ ಹೆಸರನ್ನೂ ಹೇಳದೆಯೇ ಎಚ್ಚರಿಕೆಯ ಸಂದೇಶ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ದೊಮ್ಮಲೂರು ಭಾಗದಲ್ಲಿ ಕೆಲಸ ನಡೆಯುತಿತ್ತು ಎಂದು ವೀಕ್ಷಣೆಗೆ ಹೋಗಿದ್ದ ಹ್ಯಾರಿಸ್ ಅವರು ಅಲ್ಲಿ ಇಡಲಾಗಿದ್ದ ಡಾ.ರಾಜಕುಮಾರ್ ಅವರ ಪ್ರತಿಮೆ ಕುರಿತಾಗಿ ತಕರಾರು ತೆಗೆದಿದ್ದಾರೆ. ನಂತರ ಅದನ್ನು ಇಡಲು ರಸ್ತೆಯೇ ಬೇಕಾ ಎಂದೆಲ್ಲ ಮಾತನಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಹ್ಯಾರಿಸ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಫೇಸ್ಬುಕ್ನಲ್ಲಿ ವೈಲ್ ಬಂದ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಕುಮಾರ್ ಅವರ ಪ್ರತಿಮೆಯ ಬಳಿ ಅಂಬೇಡ್ಕರ್ ಪ್ರತಿಮೆ ಕೂಡ ಇದೆ. ಕೆಲಸ ನಡೆಯುತ್ತಿರೋದನ್ನು ನೋಡಲು ಹೋಗಿದ್ದು ಅಷ್ಟೆ. ರಾಜ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಇಡೀ ಮಾನವ ಕುಲಕ್ಕೆ ಸಂದೇಶ ಕೊಟ್ಟಿದ್ದಾರೆ ಅಣ್ಣಾವ್ರು. ಅವರ ಬಗ್ಗೆ ಯಾರಾದ್ರೂ ಮಾತಾಡೋದಕ್ಕೆ ಆಗತ್ತಾ? ಯಾರೋ ಬೇಕೂ ಅಂತ ಕಟ್ ಆ್ಯಂಡ್ ಪೇಸ್ಟ್ ಮಾಡಿದ್ದಾರೆ ನನ್ನ ವಿಡಿಯೋವನ್ನು, ನಾನು ಹಾಗೇ ಮಾತನಾಡಿಲ್ಲ ಎಂದಿದ್ದಾರೆ. ಯಾರಿಗಾದರೂ ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ.
ಇದನ್ನೂ ಓದಿ: ಅಭಿಮಾನಿಯ ಆತ್ಮಹತ್ಯೆ ಕುರಿತಾಗಿ ಟ್ವೀಟ್ ಮಾಡಿದ ಯಶ್: ಯುವಕನ ಅಂತಿಮ ದರ್ಶನ ಪಡೆದ ಸಿದ್ಧರಾಮಯ್ಯ..!
ಇನ್ನು ಇದೇ ವಿಷಯವಾಗಿ ನಟಿ ಸುಧಾರಾಣಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಜನರ ಭಾವನೆಗಳ ಜೊತೆ ಆಟವಾಡಬೇಡ. ಮಾತನಾಡುವ ಮೊದಲು ಯೋಚಿಸಿ... ಎಂದು ಬರೆದುಕೊಂಡಿರುವ ನಟಿ, ರಾಜ್ ಕುಮಾರ್ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಇನ್ನು ಸುಧಾರಾಣಿ ಅವರು ಮಾಡಿರುವ ಪೋಸ್ಟ್ನಲ್ಲಿ ಯಾರ ಹೆಸರೂ ಇಲ್ಲ. ಯಾವುದೇ ಘಟನೆ ಬಗ್ಗೆ ಅವರು ಉಲ್ಲೇಖ ಮಾಡಿಲ್ಲ. ಆದರೆ ಅವರು ಬರೆದಿರುವುದನ್ನು ನೋಡಿದರೆ ಮಾತ್ರ ಅವರು ರಾಜ್ ಅವರ ಪ್ರತಿಮೆ ವಿಚಾರವಾಗಿ ನಡೆದ ಘಟನೆ ಬಗ್ಗೆ ಅನ್ನೋದು ಮೇಲ್ನೋಟಕ್ಕೆ ತಿಳಿಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ