Leelavathi: ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಶ್ರುತಿ-ಸುಧಾರಾಣಿ

ನಟಿ ಸುಧಾರಾಣಿ, ಶ್ರುತಿ ಹಾಗೂ ಮಾಳವೀಕಾ ಅವರು ಲೀಲಾವತಿ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಕಳೆದ ಸಂತಸದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಆ ಫೋಟೋಗಳನ್ನು ಶ್ರುತಿ ಹಾಗೂ ಸುಧಾರಾಣಿ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಜೊತಗೆ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಲೀಲಾವತಿ ಮನೆಗೆ ಭೇಟಿ ಕೊಟ್ಟ ಸುಧಾರಾಣಿ, ಶ್ರುತಿ ಹಾಗೂ ಮಾಳವೀಕಾ ಅವಿನಾಶ್​

ಲೀಲಾವತಿ ಮನೆಗೆ ಭೇಟಿ ಕೊಟ್ಟ ಸುಧಾರಾಣಿ, ಶ್ರುತಿ ಹಾಗೂ ಮಾಳವೀಕಾ ಅವಿನಾಶ್​

  • Share this:
ಹಿರಿಯ ನಟಿ ಲೀಲಾವತಿ... ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ. ನೂರಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ. ಇಂತಹ ಹಿರಿಯ ನಟಿ ಇತ್ತೀಚೆಗಷ್ಟೆ ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಬಚ್ಚಲ ಮನೆಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ಸೊಂಟಕ್ಕೆ ಗಾಯ ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಲಾಯಿತು. ಸದ್ಯ ಆಸ್ಪತ್ರೆಯಿಂದ ಮನೆಗೆ ಬಂದಿರುವ ಲೀಲಾವತಿ ಅವರು ಕೆಲ ತಿಂಗಳು ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ತಿಳಿಸಿದ್ದಾರಂತೆ. ಈ ನಡುವೆ ಸುಧಾರಾಣಿ, ಶ್ರುತಿ ಹಾಗೂ ಮಾಳಾವೀಕಾ ಅವಿನಾಶ್​ ಅವರು ಲೀಲಾವತಿ ಅವರ ಮನೆಗೆ ಭೇಟಿ ಕೊಟ್ಟು, ಅವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಹಿರಿಯ ನಟಿಗೆ ಧೈರ್ಯ ತುಂಬಿದ್ದಾರೆ. ಕೆಲ ಸಮಯ ಅವರ ಜೊತೆ ಕಾಲ ಕಳೆದಿರುವ ಇವರು, ಲೀಲಾವತಿ ಅವರ ಜೊತೆಗಿದ್ದ ಆ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. 

ನಟಿ ಸುಧಾರಾಣಿ, ಶ್ರುತಿ ಹಾಗೂ ಮಾಳವೀಕಾ ಅವರು ಲೀಲಾವತಿ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಕಳೆದ ಸಂತಸದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಆ ಫೋಟೋಗಳನ್ನು ಶ್ರುತಿ ಹಾಗೂ ಸುಧಾರಾಣಿ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಜೊತಗೆ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.


ಲೀಲಾವತಿ ಅಮ್ಮ, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ ಇವರು. ನೂರಾರು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ. ಲೀಲಾವತಿ ಎನ್ನುವುದು ದುರ್ಗಾದೇವಿಯ ಮತ್ತೊಂದು ಹೆಸರು,.ಕನ್ನಡದಲ್ಲಿ ಲೀಲಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ವಿನೋದ. ಲೀಲಾವತಿ ಅಮ್ಮ ದುರ್ಗೆಯ ಅವತಾರವಾದರು. ಜೀವನದ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇಂದು ಎಲ್ಲ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ. ಅವರು ವಾಸವಿರುವ ಊರಿನಲ್ಲಿ ಬಡಜನರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ. ಹಸು ಕರುಗಳಿಗೆ ನೀರಿನ ಟ್ಯಾಂಕ್ ಕಟ್ಟಿಸಿ ಅವುಗಳಿಗೆ ಮೇವು ನೀಡಿದ್ದಾರೆ. ಎಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡುತ್ತಾ ಇರುವ ಇವರನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎಂದು ಕರೆಯುವುದೋ ಅಥವಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು, ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ನಿಭಾಯಿಸಿರವ ಇವರನ್ನು ಭೂಮಿ ತಾಯಿಯ ಸ್ವರೂಪ ಎಂದು ಕರೆಯುವುದೋ ಎಂದು ಸುಧಾರಾಣಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಚಿತಾ ರಾಮ್​- ಅಜಯ್ ರಾವ್​ ಅಭಿನಯದ ಸಿನಿಮಾದ ಶೂಟಿಂಗ್​ನಲ್ಲಿ ಅವಘಡ: ಸಾಹಸ ಕಲಾವಿದನ ಸಾವು..!

ಇಂತಹ ವ್ಯಕ್ತಿತ್ವ ಹೊಂದಿರುವ ಲೀಲಾವತಿ ಅವರ ಜೊತೆ ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು. ನಾಯಕಿಯಾದ ಮೇಲು ಲೀಲಾವತಿ ಅವರ ಜೊತೆ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ. ಇಲ್ಲಿರುವ ಎರಡು ಫೋಟೋಗಳಲ್ಲಿ ಮೊದಲನೆಯದು ನಾನು ಬಾಲನಟಿಯಾಗಿ ನಟಿಸಿದ ಮೊದಲ ಸಿನಿಮಾ "ಕಿಲಾಡಿ ಕಿಟ್ಟು" ಚಿತ್ರೀಕರಣದ ಸಮಯದ ಫೋಟೋ ಮತ್ತೊಂದು ಇಂದು ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ. ವರ್ಷಗಳು ಉರುಳಿವೆ ಹೊರತು ನಮ್ಮ ನಡುವೆ ಇರುವ ಬಾಂಧವ್ಯವಲ್ಲ ಎಂದು ಹಳೆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಸುಧಾರಾಣಿ.

ಇದನ್ನೂ ಓದಿ: Weight Loss: ಹೆಚ್ಚಿಸಿಕೊಂಡಿದ್ದ 15 ಕೆಜಿ ತೂಕವನ್ನು ಇಳಿಸುವುದು ಕೃತಿ ಸನೋನ್​ಗೆ ಸುಲಭವಾಗಿರಲಿಲ್ಲ

ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ಹಾಗೂ ಅತ್ಯಂತ ಸುಂದರಿ ಲೀಲಾವತಿ ಅವರು. ಇವರು ನಟಿಸಿರುವ ಚಿತ್ರಗಳ ಸಂಖ್ಯೆ ಗೊತ್ತೇನು..? 650 ಕ್ಕಿಂತಲೂ ಹೆಚ್ಚು. ಎರಡು ಬಾರಿ ರಾಷ್ಟ್ರಪ್ರಶಸ್ತಿ 5ಕ್ಕೂ ಹೆಚ್ಚು ಬಾರಿ ರಾಜ್ಯ ಪ್ರಶಸ್ತಿ, ಭಾರತದ ಬಹುತೇಕ ಭಾಷೆಗಳಲ್ಲಿ ನಟನೆ ಎಲ್ಲದಕ್ಕಿಂತಲೂ ಮುಖ್ಯವಾಗಿ ಚಲವಾದಿ. ಆತ್ಮ  ಗೌರವಕ್ಕೆ ಕೊಡುವ ಪ್ರಾಮುಖ್ಯತೆ, ತ್ಯಾಗಮಯಿ,  ಸ್ಪುರದ್ರೂಪಿ, ಮಾದರಿ ಇವರು. ಕರುಣಾಮಯಿ, ಅದ್ಭುತವಾದ ಹಾಸ್ಯಪ್ರಜ್ಞೆ, ಇಂದಿಗೂ ಎಲ್ಲರನ್ನೂ ಹುರಿದುಂಬಿಸುವ ಜೀವನೋತ್ಸಾಹ, ಇತ್ತೀಚಿನ ದಿನಗಳಲ್ಲಿ ರೈತ ಮಹಿಳೆ, ಇದೆಲ್ಲಕ್ಕೂ ಒಂದೇ ಹೆಸರು
"ಡಾಕ್ಟರ್ ಲೀಲಾವತಿ ಅಮ್ಮ " ಎಂದು ಶ್ರುತಿ ಸಹ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
View this post on Instagram


A post shared by Shruthi (@shruthi__krishnaa)


ಲೀಲಾವತಿ ಅವರನ್ನು ನೋಡಬೇಕೆನ್ನುವುದು ನಮ್ಮ ಮೂವರ ಬಹುದಿನದ ಆಸೆಯಾಗಿತ್ತು. ಇತ್ತೀಚಿಗೆ ಜಾರಿ ಬಿದ್ದು ಅಮ್ಮ ಪೆಟ್ಟು ಮಾಡಿಕೊಂಡಿದ್ದಾರೆ ಎಂದು ತಿಳಿದು, ಕೂಡಲೇ ನಾವು ಮೂವರು ಹೋಗಿ ಭೇಟಿ ಆದೆವು. ದೇವರ ದಯೆ ಅಮ್ಮ ಆರೋಗ್ಯವಾಗಿದ್ದಾರೆ ನಮ್ಮೆಲ್ಲರೊಂದಿಗೆ ಗಂಟೆಗಟ್ಟಲೆ ಹರಟುತ್ತಾ ಹಾಡುತ್ತಾ ನಮ್ಮೊಂದಿಗೆ ಹೆಜ್ಜೆ ಹಾಕಿದ್ದು ನೋಡಿ ಕಣ್ತುಂಬಿ ಬಂತು ಹೃದಯ ತುಂಬಿ ಬಂತು, ನಮಗಂತೂ ತವರುಮನೆಗೆ ಹೋದಷ್ಟೇ ಖುಷಿ ಪಟ್ಟೆವು. ಅಮ್ಮ ಹೀಗೆ ನಗು ನಗುತ್ತಾ ಆರೋಗ್ಯವಾಗಿ ನೂರಾರು ಕಾಲ ಬಾಳಲಿ ಎಂಬುದೇ ನಮ್ಮ ಹಾರೈಕೆ. ಬಹುಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಹಾಗೂ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುಳ್ಳು ಅವಹೇಳನಕಾರಿ ವರದಿಗಳನ್ನು ನೋಡಿ ತುಂಬಾ ನೋವುಂಟು ಮಾಡಿತ್ತು. ಅದನ್ನು ಖಂಡಿಸುತ್ತೇನೆ. ಅಮ್ಮ ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಹಾಗೂ ನೆಮ್ಮದಿಯಾಗಿದ್ದಾರೆ.ಹಾಗೇ ಅವರನ್ನು ಇರಲು ಬಿಡಿ ಎಂದು ಶ್ರುತಿ ಮನವಿ ಮಾಡಿದ್ದಾರೆ.
Published by:Anitha E
First published: