ಖ್ಯಾತ ನಿರ್ದೇಶಕನ ಚಿತ್ರದ ಮೂಲಕ ನಟಿ ಸುಧಾರಾಣಿ ಮಗಳು ಸ್ಯಾಂಡಲ್​ವುಡ್​ಗೆ ಎಂಟ್ರಿ?

ಪ್ರೇಮ್​ ನಿರ್ದೇಶನ ಹೊಸ ಚಿತ್ರ ಏಕ್​ ಲವ್​ ಯಾ ಸಿನಿಮಾ ಮೂಲಕ ನಿಧಿ ರಾವ್​ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

zahir | news18
Updated:May 25, 2019, 8:00 PM IST
ಖ್ಯಾತ ನಿರ್ದೇಶಕನ ಚಿತ್ರದ ಮೂಲಕ ನಟಿ ಸುಧಾರಾಣಿ ಮಗಳು ಸ್ಯಾಂಡಲ್​ವುಡ್​ಗೆ ಎಂಟ್ರಿ?
@TOI
zahir | news18
Updated: May 25, 2019, 8:00 PM IST
ಸ್ಯಾಂಡಲ್​ವುಡ್​ ಎವರ್​ಗ್ರೀನ್ ಮೋಹಕ ತಾರೆ ಸುಧಾರಾಣಿ ಮಗಳು ನಿಧಿ ರಾವ್​ ಚಿತ್ರರಂಗಕ್ಕೆ ಶೀಘ್ರದಲ್ಲೇ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಕಳೆದ ವರ್ಷವೇ ಸುಧಾರಾಣಿ ಪುತ್ರಿ ಕನ್ನಡಕ್ಕೆ ಪರಿಚಿತರಾಗಲಿದ್ದಾರೆ ಎಂಬ ಅಂತೆ ಕಂತೆಗಳು ಹುಟ್ಟಿಕೊಂಡಿದ್ದವು.

ಇದೀಗ ಪ್ರೇಮ್​ ನಿರ್ದೇಶನ ಹೊಸ ಚಿತ್ರ 'ಏಕ್​ ಲವ್​ ಯಾ' ಸಿನಿಮಾ ಮೂಲಕ ನಿಧಿ ರಾವ್​ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ 12ನೇ ತರಗತಿ ಮುಗಿಸಿರುವ ನಿಧಿ, ಕಾಲೇಜ್​ ಮೆಟ್ಟಿಲೇರುವ ಮುನ್ನವೇ ಬಣ್ಣದ ಲೋಕದಲ್ಲಿ ಹೆಜ್ಜೆಯಿಡಲು ತಯಾರಾಗಿದ್ದಾರೆ ಎಂಬ ಸುದ್ದಿಗಳು ಹುಟ್ಟಿಕೊಂಡಿದೆ.

ಕ್ರೇಜಿ ಕ್ವೀನ್ ರಕ್ಷಿತಾ ಅವರ ಸಹೋದರ ಅಭಿಷೇಕ್(ರಾಣಾ) ಅಭಿನಯಿಸುತ್ತಿರುವ 'ಏಕ್​ ಲವ್​ ಯಾ' ಚಿತ್ರಕ್ಕೆ ಜೋಗಿ ಪ್ರೇಮ್ ಚಾಲನೆ ನೀಡಿದ್ದಾರೆ. ಆದರೆ ಇದುವರೆಗೆ ಈ ಚಿತ್ರದ ನಾಯಕಿ ಯಾರು ಎಂಬ ಕುತೂಹಲವನ್ನು ಚಿತ್ರತಂಡ ಎಲ್ಲೂ ಬಿಟ್ಟು ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಭಾಮೈದನ ಚಿತ್ರಕ್ಕೆ ಪ್ರೇಮ್ ಸುಧಾರಾಣಿಯವರ ಮಗಳನ್ನು ಕರೆ ತರಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಸುಧಾರಾಣಿ ಆ ರೀತಿಯ ಯಾವುದೇ ಆಫರ್ ಇಲ್ಲ. ಮಗಳಿನ್ನೂ ಓದುತ್ತಿದ್ದಾಳೆ. ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತೀರ್ಣಳಾಗಿದ್ದಾಳೆ. ಹೀಗಾಗಿ ಮುಂದೆ ಯಾವ ಕೋರ್ಸ್​ ತೆಗೆದುಕೊಳ್ಳಬೇಕು ಮತ್ತು ಯಾವ ಕಾಲೇಜ್​ ಸೇರಬೇಕೆಂಬ ಆಲೋಚನೆಯಲ್ಲಿದ್ದಾಳೆ. ಇದರ ನಡುವೆ ಮಗಳು ಸಿನಿಮಾರಂಗಕ್ಕೆ ಬರಲಿದ್ದಾರೆ ಎಂಬ ಸುದ್ದಿ ಯಾರು ಹಬ್ಬಿಸಿದ್ದಾರೊ ಎಂಬುದು ಕೂಡ ಗೊತ್ತಿಲ್ಲ ಎಂದು ಸುಧಾರಾಣಿ ಪ್ರತಿಕ್ರಿಯಿಸಿದ್ದಾರೆ.ನಮ್ಮ ಮಗಳು ಶಿಕ್ಷಣದ ಕಡೆ ಹೆಚ್ಚಿನ ಒಲವು ತೋರಿದ್ದಾರೆ. ಹೀಗಾಗಿ ಅವಳನ್ನು ಚಿತ್ರರಂಗಕ್ಕೆ ತರುವ ಯಾವುದೇ ಯೋಚನೆಗಳು ನಮ್ಮಲ್ಲಿ ಇಲ್ಲ. ಸದ್ಯ ಗಾಂಧೀನಗರದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಸುಧಾರಾಣಿ ಮಗಳ ಸ್ಯಾಂಡಲ್​ವುಡ್ ಎಂಟ್ರಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Loading...

ಇದನ್ನೂ ಓದಿ: ಬೆತ್ತಲೆ ಫೋಟೋ ಕಳಿಸಿ ಎಂದವನಿಗೆ 'ನ್ಯೂಡ್ಸ್ ಪಿಕ್​' ಕಳಿಸಿದ ಗಾಯಕಿ..!

First published:May 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...