ಗಾಳಿಪಟ 2 (Gaalipata 2) ಚಿತ್ರ ಸ್ಯಾಂಡಲ್ವುಡ್ನ (Sandalwood) ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಅದರ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡಿನ (Song) ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ಅನಂತ್ ನಾಗ್ (Ananth Nag) ಅವರು ಸುಧಾ ಮೂರ್ತಿ (Sudha Murty) (ಶಿಕ್ಷಕಿ, ಲೇಖಕಿ ಮತ್ತು ಇನ್ಫೋಸಿಸ್ ಫೌಂಡೇಶನ್ನ ಅಧ್ಯಕ್ಷೆ) ಯೋಗರಾಜ್ ಭಟ್ಗೆ ಗುರು ಇದ್ದಂತೆ ಎಂಬ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಚಿತ್ರತಂಡ ಹಾಗೂ ಚಿತ್ರದ ಸಂಪೂರ್ಣ ಸಿಬ್ಬಂದಿಗಳ ಜೊತೆ ಮೊದಲ ಹಾಡು ದಿ ಎಕ್ಸಾಮ್ ಅನ್ನು ಬಿಡುಗಡೆ ಮಾಡಲಾಗಿತ್ತು.
ಈ ಸಮಾರಂಭದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ನಾನು ಧನ್ಯವಾದ ಹೇಳುವ ಜನರ ಲಿಸ್ಟ್ ಬಹಳ ದೊಡ್ಡದಿದೆ. ನಾನು ಮೊದಲು ಈ ಕಥೆಯನ್ನು ಸುಧಾ ಮೂರ್ತಿ ಅವರ ಜೊತೆ ಹಂಚಿಕೊಂಡಿದ್ದೆ, ಕಥೆ ಕೇಳಿದ ಸುಧಾ ಮುರ್ತಿಯವರು ಇದನ್ನು ನಿರ್ಮಾಪಕ ರಮೇಶ್ ರೆಡ್ಡಿ ಅವರೊಂದಿಗೆ ಮಾತನಾಡಿ, ಈ ಚಿತ್ರ ಬರಲು ಕಾರಣಕರ್ತರಾಗಿದ್ದಾರೆ ಎಂದು, ಚಿತ್ರದ ಹಿಂದಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ.
ಗಾಳಿಪಟ 2 ತನಗೆ ವಿಶೇಷವಾದ ಚಿತ್ರ ಎಂದು ಅನಂತ್ ನಾಗ್ ಹೇಳಿದ್ದು, ಅದರಲ್ಲೂ ವಿಶೇಷವಾಗಿ ಕಥೆ ಮತ್ತು ಪಾತ್ರಗಳನ್ನು ಬರೆಯುವ ರೀತಿ ವಿಭಿನ್ನ ಎಂದು ಅಭಿಪ್ರಾಯಪಟ್ಟಿದ್ದಾರೆ. "ಚಿತ್ರದ ಹಲವು ದೃಶ್ಯಗಳನ್ನು ನಿರ್ವಹಿಸುವುದು ನಿಜಕ್ಕೂ ತುಂಬಾ ಸವಾಲಾಗಿತ್ತು, ಅದನ್ನು ನಿಭಾಯಿಸುವ ಬಗ್ಗೆ ನನಗೆ ಅನುಮಾನವಿತ್ತು ಎಂದು ಅನಂತ್ ನಾಗ್ ಹೇಳಿದ್ದಾರೆ. ಇನ್ನು ಈ ಚಿತ್ರಕ್ಕೆ ಸುಧಾಮೂರ್ತಿ ಅವರು ಮಾಡಿದ ಉಪಕಾರವನ್ನು ಸಹ ಈ ಸಮಯದಲ್ಲಿ ನೆನೆದು ಶ್ಲಾಘಿಸಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದು, ಅಭಿಮಾನಿಗಳ ಮೆಚ್ಚುಗೆಗ ಸಹ ಪಾತ್ರವಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ ಅವರು, ತಮ್ಮ ಕೊನೆಯ ನಾಲ್ಕು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇದೆ. ಗಾಳಿಪಟ- 2 ಸಕ್ಸಸ್ ಕಾಣಲಿದೆ ಎಂದಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಮೇಲೆ ಮುನಿಸಿಕೊಂಡ ಪದ್ಮಾವತಿ - ಲಿಂಗ ತಾರತಮ್ಯದ ವಿರುದ್ದ ರಮ್ಯಾ ಗರಂ
ಇನ್ನು, ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಶನ್ನಲ್ಲಿ ಮೂಡಿಬಂದಿದ್ದ ‘ಗಾಳಿಪಟ’ ಚಿತ್ರ ಸೂಪರ್ ಹಿಟ್ ಆಗಿತ್ತು. ಈಗ ಮತ್ತದೇ ಜೋಡಿ ಮತ್ತೂಮ್ಮೆ 'ಗಾಳಿಪಟ-2' ಚಿತ್ರವನ್ನು ಸಿದ್ಧಗೊಳಿಸಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಎಕ್ಸಾಂ ಲಿರಿಕಲ್ ವಿಡಿಯೋ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರವನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ.
ದೇಶ - ವಿದೇಶದಲ್ಲಿ ಹಾರಾಡಲಿದೆ ಗಾಳಿಪಟ 2:
ಗಾಳಿಪಟ 2 ಚಿತ್ರವು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶ- ವಿದೇಶಗಳಲ್ಲಿಯೂ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಮತ್ತು ಹಾಡು ಸಖತ್ ಹಿಟ್ ಆಗಿದ್ದು, ಎಲ್ಲಡೇ ಗಾಳಿಪಟ ಹಾರಾಡಲು ಸಿದ್ಧವಾಗಿದೆ. ಬಹುತಾರಾಣಗಣ ಹಾಗೂ ಅದ್ಧೂರಿಯಾಗಿ ಸಿದ್ದವಾಗಿರುವ ಗಾಳಿಪಟ 2 ಇದೇ ಆಗಸ್ಟ್ 12ರಂದು ರಿಲೀಸ್ ಅಗಲಿದೆ.
ಇದನ್ನೂ ಓದಿ: ರಾಮಾರ್ಜುನ'ನ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ, ನಿಶ್ವಿಕಾ ನಾಯ್ಡು ಬಗ್ಗೆ ತಿಳಿದ್ರೆ ಮರಳಿ ಮನಸ್ಸಾಗೋದು ಗ್ಯಾರಂಟಿ!
ಬಹುತಾರಾಗಣದ ಗಾಳಿಪಟ 2
ಇನ್ನು, ಚಿತ್ರದಲ್ಲಿ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್ ನಾಗ್, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರ ದಂಡೇ ಈ ಚಿತ್ರದಲಲ್ಲಿದೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ