ಕನ್ನಡದಲ್ಲಿ ಪ್ರಸಾರವಾಗುವ ಫೇಮಸ್ ರಿಯಾಲಿಟಿ ಶೋ (Reality Show) ಬೊಂಬಾಟ್ ಭೋಜನದಲ್ಲಿ ಸುಧಾಮೂರ್ತಿ (Sudha Murty) ಭಾಗವಹಿಸಿದ್ದಾರೆ. ಸ್ಟಾರ್ ಸುವರ್ಣ ಚಾನೆಲ್ನಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಅವರು ಭಾಗವಹಿಸಿದ್ದಾರೆ. ಸುಂದರವಾದ ಗುಲಾಬಿ ಬಣ್ಣದ ಸೀರೆ (Saree) ಉಟ್ಟುಕೊಂಡು ಬಂದ ಸುಧಾಮೂರ್ತಿ ಅವರು ಖುಷಿ ಖುಷಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾವಲ್ ರೊಟ್ಟಿಯನ್ನು ಟೇಸ್ಟ್ ಮಾಡಿದ್ದಾರೆ.
ಪಿಂಕ್ ಸೀರೆ ಉಟ್ಟು ಬಂದ ಸುಧಾಮ್ಮ
ಮಹಿಳಾ ದಿನಾಚರಣೆಯ ಪ್ರಯುಕ್ತ ಈ ಬಾರಿಯ ಬೊಂಬಾಟ್ ಭೋಜನ ಕಾರ್ಯಕ್ರಮಕ್ಕೆ ಸುಧಾಮ್ಮ ಅವರು ಬಂದಿದ್ದಾರೆ. ಗುಲಾಬಿ ಬಣ್ಣದ ಸೀರೆ ಉಟ್ಟುಕೊಂಡು ಬಂದಿದ್ದ ಸುಧಾಮೂರ್ತಿ ಎಂದಿನಂತೆ ಸರಳವಾದ ಲುಕ್ನಲ್ಲಿಯೇ ಕಾಣಿಸಿಕೊಂಡಿದ್ದಾರೆ.
ಇವತ್ತು ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಸಿಹಿಕಹಿ ಚಂದ್ರು ಇದ್ರು. ಅವರು ಅಡುಗೆ ಮಾಡುವ ರೀತಿ ನನಗೆ ಬಹಳ ಇಷ್ಟ. ನಾನು ಸಮಯ ಸಿಕ್ಕಾಗ ಕಾರ್ಯಕ್ರಮವನ್ನು ನೋಡುತ್ತೇನೆ. ಅವರು ಮಾಡಿದ ಹೊಸ ರೆಸಿಪಿ ರಾವಲ್ ರೊಟ್ಟಿ ಕೊಟ್ಟರು.
ಚೆನ್ನಾಗಿತ್ತು. ಅದರ ಜೊತೆ ಅವರ ಜೊತೆ ಮಾತಾಡುತ್ತಾ ಖುಷಿ ಆಯ್ತು. ಅವರು ಬಹಳ ಆಪ್ತತೆಯಿಂದ ಮಾತನಾಡುತ್ತಿದ್ದರು. ನನಗೆ ಬಹಳ ಖುಷಿ ಆಯ್ತು ಎಂದಯ ಹೇಳಿದ್ದಾರೆ.
ಸಿಂಪಲ್ ಮೇಕಪ್
ಸುಧಾಮ್ಮ ಕ್ಯಾಮೆರಾ ಮುಂದೆ ಬರುವ ಮುನ್ನ ಸಿಂಪಲ್ ಆಗಿ ಮೇಕಪ್ ಮಾಡಲಾಗಿತ್ತು. ಅವರ ಅತ್ಯಂತ ಸರಳ ಶೈಲಿಯಲ್ಲಿ ಕೂದಲು ಬಾಚಿ ಹೂವಿಟ್ಟುಕೊಂಡು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಸನ್ಮಾನ
ಕಾರ್ಯಕ್ರಮದ ಕೊನೆಗೆ ಸುಧಾಮ್ಮ ಅವರಿಗೆ ಸನ್ಮಾನ ಮಾಡಿ ಅರಶಿನ ಕುಂಕುಮ ಕೊಟ್ಟು ಉಡುಗೊರೆ ಕೊಟ್ಟು ಕಳುಹಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಎಂದಿನಂತೆಯೇ ಸುಧಾಮೂರ್ತಿ ಸರಳವಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Infosys ಶುರು ಮಾಡೋಕೆ ಪತಿಗೆ ಸಾಲ ಕೊಟ್ಟಿದ್ರಂತೆ ಸುಧಾ ಮೂರ್ತಿ! ಈ ಬಗ್ಗೆ ಅವರೇ ಹೇಳಿದ್ದಾರೆ ನೋಡಿ
ಬೊಂಬಾಟ್ ಭೋಜನ
ಬೊಂಬಾಟ್ ಭೋಜನ ಕಾರ್ಯಕ್ರಮ ಕನ್ನಡ ಕಿರುತೆರೆಯ ಪ್ರಸಿದ್ಧ ಕುಕ್ಕರಿ ಶೋ. ಸಿಹಿಕಹಿ ಚಂದ್ರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ವಿಶೇಷ ಅಡುಗೆಗಳನ್ನು ಮಾಡಿ ತೋರಿಸುವ ಸಿಹಿಕಹಿ ಚಂದ್ರು ಅವರ ಈ ಕಾರ್ಯಕ್ರಮಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ಬಹಳಷ್ಟು ಜನರು ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ.
ಪ್ರೋಮೋ ವೈರಲ್
ಸೂಧಾಮೂರ್ತಿ ಬರುತ್ತಿರುವ ಈ ಕಾರ್ಯಕ್ರಮದ ಪ್ರೋಮೋ ವೈರಲ್ ಆಗಿದೆ. ವಿಡಿಯೋಗೆ 9 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಬಹಳಷ್ಟು ಜನರು ವಿಡಿಯೋಗೆ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಧಾಮೂರ್ತಿ ಅವರ ಇನ್ಫೋಸಿಸ್ ಸ್ಟೋರಿ -7 ಇಂಜಿನಿಯರ್ ಗಳಿಂದ ಶುರುವಾಗಿತ್ತಂತೆ ಇನ್ಫೋಸಿಸ್
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ನಾಸ್ಡಾಕ್-ಪಟ್ಟಿ ಮಾಡಲಾದ ಐಟಿ ಕಂಪನಿ ಇನ್ಫೋಸಿಸ್ ಅನ್ನು 1981 ರಲ್ಲಿ ಬರೀ ಏಳು ಎಂಜಿನಿಯರ್ ಗಳು ಸೇರಿಕೊಂಡು ಸ್ಥಾಪಿಸಿದ್ದರು. ಕಳೆದ ವರ್ಷ, ಇದು ಮಾರುಕಟ್ಟೆ ಬಂಡವಾಳೀಕರಣದಲ್ಲಿ 100 ಬಿಲಿಯನ್ ಡಾಲರ್ ತಲುಪಿದ ನಾಲ್ಕನೇ ಭಾರತೀಯ ಕಂಪನಿಯಾಗಿದೆ.
ಇದೆಲ್ಲವನ್ನೂ ದಾಟಿದ ನಂತರ, ಸುಧಾ ಮೂರ್ತಿ ಅವರು ಕಂಪನಿಯನ್ನು ಪ್ರಾರಂಭಿಸಲು ಬಯಸುವವರಿಗೆ ಏನಂತ ಸಲಹೆ ನೀಡಿದ್ದಾರೆ ನೋಡಿ. "ಈ ಪೀಳಿಗೆಯು ತಾಳ್ಮೆಯನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಒಂದು ದಿನದಲ್ಲಿ ಏನೂ ಆಗುವುದಿಲ್ಲ. ರೋಮ್ ಅನ್ನು ಅವರು ಹೇಳಿದಂತೆ ಒಂದೇ ದಿನದಲ್ಲಿ ನಿರ್ಮಿಸಲಾಗಿಲ್ಲ. ಒಂದು ಕಂಪನಿಯನ್ನು ನಿರ್ಮಿಸಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಆ ಎಲ್ಲಾ ವಿಷಯಗಳು ಅತ್ಯಗತ್ಯವಾಗುತ್ತವೆ. ಆದರೆ ಇದಕ್ಕೆಲ್ಲಾ ಮುಖ್ಯವಾದದ್ದು ಎಂದರೆ ನೀವು ತಾಳ್ಮೆಯನ್ನು ಹೊಂದಿರಬೇಕು" ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ