Pailwaan Audio: ಬೆಂಗಳೂರಿನಲ್ಲಿ ನಡೆಯಲಿದೆ ಪೈಲ್ವಾನ್​ ಆಡಿಯೋ ಬಿಡುಗಡೆ..!

Pailwaan Audio: ಕಾರಣಾಂತರಗಳಿಂದ ಪದೇ ಪದೇ ಮುಂದಕ್ಕೆ ಹೋಗುತ್ತಿದ್ದ ಪೈಲ್ವಾನ್​ ಸಿನಿಮಾದ ಆಡಿಯೋ ಬಿಡುಗಡೆ ಕೊನೆಗೂ ಕಾಲ ಕೂಡಿ ಬಂದಿದೆ. ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮ ಈಗ ಬೆಂಗಳೂರಿನಲ್ಲೇ ನಡೆಯಲಿದೆ.

Anitha E | news18
Updated:August 14, 2019, 11:24 AM IST
Pailwaan Audio: ಬೆಂಗಳೂರಿನಲ್ಲಿ ನಡೆಯಲಿದೆ ಪೈಲ್ವಾನ್​ ಆಡಿಯೋ ಬಿಡುಗಡೆ..!
ಪೈಲ್ವಾನ್​ ಚಿತ್ರದಲ್ಲಿ ಸುದೀಪ್​
Anitha E | news18
Updated: August 14, 2019, 11:24 AM IST
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಪೈಲ್ವಾನ್' ಸಿನಿಮಾದ ಲಿರಿಕಲ್​ ವಿಡಿಯೋಗಳು ಒಂದರ ಹಿಂದೆ ಒಂದರಂತೆ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಚಿತ್ರದ ಆಡಿಯೋ ಬಿಡುಗಡೆ ಮಾತ್ರ ಮುಂದಕ್ಕೆ ಹೋಗುತ್ತಲೇ ಇದೆ.

ಆದರೆ ಕಿಚ್ಚನ ಅಭಿಮಾನಿಗಳಿಗೆ ಈ ಸಲ ಸಂತೋಷದ ಸುದ್ದಿಯೊಂದು ಸಿಕ್ಕಿದೆ. ಅದು 'ಪೈಲ್ವಾನ್​' ಚಿತ್ರದ ಆಡಿಯೋ ಬಿಡುಗಡೆಯ ಸುದ್ದಿ. ಹೌದು, ಚಿತ್ರದುರ್ಗದಲ್ಲಿ ನಡೆಯಲು ನಿಶ್ಚಯಿಸಲಾಗಿದ್ದ ಆಡಿಯೋ ಲಾಂಚ್​ ಕಾರ್ಯಕ್ರಮ ಈಗ ಬೆಂಗಳೂರಿನಲ್ಲೇ ನಡೆಯಲಿದೆ.

 




ಈ ಹಿಂದೆ ಸಿನಿಮಾದ ಟೀಸರ್​ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಪದೇ ಪದೇ ಮುಂದಕ್ಕೆ ಹೋಗುತ್ತಿತ್ತು. ಟೀಸರ್​ ಏನೋ ಬಿಡುಗಡೆಯಾಯಿತು. ಆದರೆ ಆಡಿಯೋ ಮಾತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ಮುಂದಕ್ಕೆ ಹೋಗುತ್ತು. ನಂತರ ರಾಜ್ಯದಲ್ಲಿ ಸುರಿದ ಮಹಾಮಳೆಗೆ 'ಪೈಲ್ವಾನ್' ಹಾಡುಗಳೂ ಕೊಚ್ಚಿ ಹೋದವು. ರಾಜ್ಯದಲ್ಲಿ ಪ್ರವಾಹದಿಂದ ಜನರು ಒದ್ದಾಡುತ್ತಿದ್ದಾಗ ಈ ಕಾರ್ಯಕ್ರಮ ಮಾಡಬಾರದು ಎಂದು ಸುದೀಪ್​ ಅದನ್ನು ಮತ್ತೆ ಮುಂದಕ್ಕೆ ಹಾಕಿದ್ದರು.

ಇದನ್ನೂ ಓದಿ: ಟ್ವಿಟರ್​ನಲ್ಲಿ ದರ್ಶನ್​ರನ್ನು ಅನ್​ಫಾಲೋ ಮಾಡಿದ ಹೆಂಡತಿ ವಿಜಯಲಕ್ಷ್ಮಿ..!

ಪಂಚಭಾಷೆಗಳಲ್ಲಿ ರಿಲೀಸ್ ಆಗ್ತಿರೋ 'ಪೈಲ್ವಾನ್' ಚಿತ್ರದ ಕನ್ನಡ ಹಾಡುಗಳು ಚಿತ್ರದುರ್ಗದಲ್ಲಿ ಮುರುಘಾಮಠದ ಕ್ರೀಡಾಂಗಣದಲ್ಲಿ ಆಗಸ್ಟ್ 9ಕ್ಕೆ ಬಿಡುಗಡೆ ಆಗಬೇಕಿತ್ತು. ಅರ್ಜುನ್ ಜನ್ಯ ಸಂಗೀತದ ಹಾಡುಗಳನ್ನು ಬಿಡುಗಡೆ ಮಾಡಲು ಪವರ್​ಸ್ಟಾರ್​ ಪುನೀತ್​ ಸಹ ಓಕೆ ಅಂದಿದ್ದರು.

Baaro Pailwaan Kanada Song Poster
'ಪೈಲ್ವಾನ್​' ಸಿನಿಮಾದ ಎರಡನೇ ಲಿರಿಕಲ್​ ವಿಡಿಯೋ


ಸದ್ಯ ಬೆಂಗಳೂರಿಗೆ ಶಿಫ್ಟ್ ಆಗಿರೋ ಆಡಿಯೋ ರಿಲೀಸ್‍ನಲ್ಲೂ ಅಪ್ಪು ಅತಿಥಿಯಾಗಿರುತ್ತಾರಂತೆ. ಆಡಿಯೋ ಬಿಡುಗಡೆ ದಿನಾಂಕ ನಿಗಧಿಯಾಗಿದ್ದು, ಸದ್ಯದ್ಲಲೇ ಚಿತ್ರತಂಡ ಅದನನ್ನು ಪ್ರಕಟಿಸಲಿದೆಯಂತೆ.

ಇದನ್ನೂ ಓದಿ: Sudeep: ಕಿಚ್ಚ ಸುದೀಪ್​ ಖಾರವಾಗಿ ಬರೆದ ಟ್ವೀಟ್​ ಯಾವ ಸ್ಟಾರ್​ ನಟನಿಗೆ ಗೊತ್ತಾ..?

ಸೆಪ್ಟಂಬರ್ 2ರಂದು ಕಿಚ್ಚ ಸುದೀಪ್ ಹುಟ್ಟುಹಬ್ಬ. 'ಪೈಲ್ವಾನ್​' ಸಿನಿಮಾ ಅಂದೇ  ಬಿಡುಗಡೆಯಾಗಲಿದೆ ಅನ್ನೋ ಆಸೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸ್ವಪ್ನ ಕೃಷ್ಣ ನಿರ್ದೇಶನದ ಸಿನಿಮಾವನ್ನು ಕೃಷ್ಣ ಅವರು ನಿರ್ದೇಶಿಸಿದ್ದು, ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಇದರಲ್ಲಿ ಅಭಿನಯಿಸಿರುವುದು ವಿಶೇಷ.

 

Ira Khan: ಲುಕ್ಸ್​ ಮೇಲೆ ಪ್ರಯೋಗ ಮಾಡುತ್ತಿರುವ ಅಮೀರ್​ ಖಾನ್​ ಮಗಳು ಇರಾ ಖಾನ್..!

First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...