ಪೈಲ್ವಾನ್ ನಿರ್ದೇಶಕರಿಗೆ ಹೊಸ ಚಾಲೆಂಜ್​ ಹಾಕಿದ ಕಿಚ್ಚ ಸುದೀಪ್..!

ಹಿಂದೆಂದೂ ಕಂಡರಿಯದ ರೀತಿಯಲ್ಲಿ ಈ ಸಿನಿಮಾಗಾಗಿ ದೇಹ ದಂಡಿಸಿದ್ದ ಸುದೀಪ್ ಅವರ ಮಸಲ್​ಮ್ಯಾನ್ ಅವತಾರ ಒಂದಷ್ಟು ಅಭಿಮಾನಿಗಳಿಗೆ ಫಿಟ್​ನೆಸ್ ಮಂತ್ರಕ್ಕೆ ಪ್ರೇರಣೆಯಾಗಿದೆ.

zahir | news18
Updated:March 17, 2019, 7:00 AM IST
ಪೈಲ್ವಾನ್ ನಿರ್ದೇಶಕರಿಗೆ ಹೊಸ ಚಾಲೆಂಜ್​ ಹಾಕಿದ ಕಿಚ್ಚ ಸುದೀಪ್..!
@KKSFA
zahir | news18
Updated: March 17, 2019, 7:00 AM IST
ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ.  ಆರಂಭದಿಂದಲೇ ಸಾಕಷ್ಟು ಸುದ್ದಿ ಮಾಡಿದ್ದ ಪೈಲ್ವಾನ್ ತಂಡ,  ಫಸ್ಟ್​ ಲುಕ್ ಮೂಲಕ ಸಿಕ್ಕಾಪಟ್ಟೆ ಪ್ರಚಾರಗಿಟ್ಟಿಸಿಕೊಂಡಿತ್ತು. ಇದರ ನಡುವೆ ಪೋಸ್ಟರ್​ನಲ್ಲಿ ಕಿಚ್ಚ ಸುದೀಪ್ ಅವರ ಎಡಿಟ್ ಮಾಡಿದ ಫೋಟೋ ಬಳಸಿದ್ದಾರೆ ಎಂಬ ಟೀಕೆಗಳು ಸಹ ಕೇಳಿ ಬಂದಿದ್ದವು.

ಕಿಚ್ಚನ ಹುರಿಗೊಳಿಸಿದ ದೇಹ ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟಕ್ಕೆ ಸಾಕ್ಷಿಯಾಗಿತ್ತು. ಆದರೆ ಇದಕ್ಕೆಲ್ಲಾ ದಾಖಲೆ ಒದಗಿಸಿ ನಿರ್ದೇಶಕರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇದೀಗ ಕಿಚ್ಚನ ಕಟುಮಸ್ತು ದೇಹವೇ ಚಿತ್ರತಂಡಕ್ಕೆ ಒಂದಷ್ಟು ಮಾರ್ಕೆಟ್ ಸೃಷ್ಟಿಸಿ ಕೊಟ್ಟಿದೆ. ಸಲ್ಮಾನ್ ಖಾನ್ ಸೇರಿದಂತೆ ಹಲವು ಖ್ಯಾತ ನಟರು ಪೈಲ್ವಾನ್ ಟೀಸರ್​ಗೆ ಈಗಾಗಲೇ ಮರುಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೈಲ್ವಾನ್​ ಅನ್ನು 9 ಭಾಷೆಯಲ್ಲಿ ಅಖಾಡಕ್ಕಿಳಿಸಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

ಹಿಂದೆಂದೂ ಕಂಡರಿಯದ ರೀತಿಯಲ್ಲಿ ಈ ಸಿನಿಮಾಗಾಗಿ ದೇಹ ದಂಡಿಸಿದ್ದ ಸುದೀಪ್ ಅವರ ಮಸಲ್​ಮ್ಯಾನ್ ಅವತಾರ ಒಂದಷ್ಟು ಅಭಿಮಾನಿಗಳಿಗೆ ಫಿಟ್​ನೆಸ್ ಮಂತ್ರಕ್ಕೆ ಪ್ರೇರಣೆಯಾಗಿದೆ. ಕಿಚ್ಚ ಕೂಡ ತಮ್ಮ ದೇಹಸಿರಿಯನ್ನು ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ಆಗಿ ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ. ಅದರಂತೆ ಹಲವರು ದೇಹ ದಂಡಿಸಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ನಡುವೆ  ಚಿತ್ರದ ನಿರ್ದೇಶಕರಿಗೆ ಸುದೀಪ್ ಚಾಲೆಂಜ್ ಹಾಕಿದ್ದಾರೆ. ಅದು ಅಂತಿಂಥ ಚಾಲೆಂಜ್ ಅಲ್ಲ, ಬದಲಾಗಿ ತನ್ನಂತೆ ಪೈಲ್ವಾನ್ ಲುಕ್​ನಲ್ಲಿ ಕಾಣಿಸಿಕೊಳ್ಳುವಂತಹ ಚಾಲೆಂಜ್. ಹೌದು, ಸುದೀಪ್ ಅವರ ಪೈಲ್ವಾನ್ ಚಾಲೆಂಜ್​ ಅನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ನನ್ನ ನಿರ್ದೇಶಕ ಕೃಷ್ಣ ಸಹ ಈ ಚಾಲೆಂಜ್​ ಅನ್ನು ಸ್ವೀಕರಿಸಿದ್ದು, ನನ್ನ ಚಿತ್ರವಿರುವ ಭಂಗಿಯಲ್ಲೇ ತಕ್ಷಣ ಅವರ ಶರ್ಟ್​ ಇಲ್ಲದ ಫೋಟೋ ಹಾಕಬೇಕೆಂದು ​ಸುದೀಪ್ ಟ್ವಿಟ್ಟರ್​ನಲ್ಲಿ ಕೇಳಿಕೊಂಡಿದ್ದಾರೆ.


ಮೇಲ್ನೋಟಕ್ಕೆ ನಿರ್ದೇಶಕ ಕೃಷ್ಣ ಅವರ ಕಾಲೆಳೆಯಲು ಸುದೀಪ್ ಈ ರೀತಿಯಾಗಿ ಟ್ವೀಟ್ ಮಾಡಿರುವುದು ಸ್ಪಷ್ಟ. ಏಕೆಂದರೆ ಪೈಲ್ವಾನ್ ನಿರ್ದೇಶಕರು ದಪ್ಪಗಿರುವ ಕಾರಣ, ಅವರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವಂತೆ ಅಭಿನಯ ಚಕ್ರವರ್ತಿ ಕೇಳಿಕೊಂಡಿದ್ದಾರೆ.
First published:March 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626