ಈ ಬಾರಿ ಸರಳವಾಗಿ ನಡೆಯಲಿದೆ ಕಿಚ್ಚ ಸುದೀಪ್​ ಹುಟ್ಟುಹಬ್ಬ..!

news18
Updated:August 29, 2018, 12:18 PM IST
ಈ ಬಾರಿ ಸರಳವಾಗಿ ನಡೆಯಲಿದೆ ಕಿಚ್ಚ ಸುದೀಪ್​ ಹುಟ್ಟುಹಬ್ಬ..!
news18
Updated: August 29, 2018, 12:18 PM IST
ನ್ಯೂಸ್​ 18 ಕನ್ನಡ 

ಸ್ಟಾರ್ ಸೆಲೆಬ್ರಿಟಿಗಳ ಹುಟ್ಟುಹಬ್ಬ ಬಂತು ಅಂದರೆ ಸಾಕು, ಅಭಿಮಾನಿಗಳಿಗೆ ಅದು ಹಬ್ಬವೇ ಸರಿ. ಅಂತೇಯೆ ಇದೀಗ ಕಿಚ್ಚಾ ಸುದೀಪ್ ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಕಳೆದ ವರ್ಷ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳೊದಿಲ್ಲ ಎಂದಿದ್ದ ಸುದೀಪ್, ಆ ನಿರ್ಧಾರವನ್ನ ಬದಲಾಯಿಸಿ ಕೊಂಡಿದ್ದಾರೆ.

ಸೆಪ್ಟೆಂಬರ್ 2 ಅಂದರೆ ಕಿಚ್ಚಾ ಸುದೀಪ್ ಅಭಿಮಾನಿಗಳಿಗೆ ಹಬ್ಬ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲು ತಯಾರಿ ಮಾಡಿಕೊಂಡಿರುತ್ತಾರೆ. ಅಂತೆಯೇ ಕಳೆದ ವರ್ಷ ತನ್ನ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳೊದಿಲ್ಲ ಎಂದಿದ್ದ ಸುದೀಪ್, ಮತ್ತೆ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಅದು ಕೂಡ  ಒಂದು ಷರತ್ತಿನ ಮೇರೆಗೆ.

ಹೌದು ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲು ಮತ್ತೆ ಮನಸ್ಸು ಮಾಡಿರೋ ಸುದೀಪ್, ಅನಗತ್ಯ ಖರ್ಚು, ಗಿಫ್ಟ್, ಬ್ಯಾನರ್​, ಹೂ ಗುಚ್ಚಗಳನ್ನ ತೆಗೆದುಕೊಂಡು ಬರಬಾರದು ಎಂದಿದ್ದಾರೆ. ಹಾಗೆ ದುಂದುವೆಚ್ಚ ಮಾಡಬಾರದು ಎಂದು ಅಭಿಮಾನಿಗಳಿಗೆ ಕರೆನೀಡಿದ್ದಾರೆ.

ಹೀಗೆ ಸುದೀಪ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದು, ಅಭಿಮಾನಿಗಳು ಮಾಡುತ್ತಿದ್ದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಹಾಗೆ ಸರಳವಾಗಿ ಹುಟ್ಟುಹಬ್ಬಕ್ಕೆ ಮುಂದಾಗಿದ್ದಾರೆ ಈ ಸ್ಟಾರ್​.

 
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ