HOME » NEWS » Entertainment » SUDEEP WROTE A HEART TOUCHING NOTE TO HIS DRIVER VISHWA AE

Kichcha Sudeep: ಚಾಲಕನ ಹುಟ್ಟುಹಬ್ಬಕ್ಕೆ ಹೃದಯ ಸ್ಪರ್ಶಿ ಟ್ವೀಟ್​ ಮಾಡಿದ ಕಿಚ್ಚ ಸುದೀಪ್​

Kichcha Sudeep: ಕಿಚ್ಚ ಆಗೊಂದು ಈಗೊಂದು ಪೋಸ್ಟ್​ಗಳನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡರೂ, ಅವರಿಗೆ ಅಭಿಮಾನಿಗಳು ಮಾಡುವ ಟ್ವೀಟ್​ಗಳಿಗೆ ಮಾತ್ರ ಸದಾ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. ಅಭಿಮಾನಿಗಳನ್ನುಯ ಇಷ್ಟು ಇಷ್ಟ ಪಡುವ ಕಿಚ್ಚ ಈಗ ತಮ್ಮ ಓರ್ವ ಅಭಿಮಾನಿಯ ಕುರಿತಾಗಿ ಒಂದು ಹೃದಯ ಸ್ಪರ್ಶಿ ಟ್ವೀಟ್​ ಮಾಡಿದ್ದಾರೆ.

Anitha E | news18
Updated:July 23, 2019, 5:16 PM IST
Kichcha Sudeep: ಚಾಲಕನ ಹುಟ್ಟುಹಬ್ಬಕ್ಕೆ ಹೃದಯ ಸ್ಪರ್ಶಿ ಟ್ವೀಟ್​ ಮಾಡಿದ ಕಿಚ್ಚ ಸುದೀಪ್​
ಸುದೀಪ್ ಹಾಗೂ​ ಅವರ ಕಾರಿನ ಚಾಲಕ ವಿಶ್ವ
  • News18
  • Last Updated: July 23, 2019, 5:16 PM IST
  • Share this:
ಕಿಚ್ಚ ಸುದೀಪ್​ ತಮ್ಮ ಅಭಿಮಾನಿಗಳಿಗೆ ಸದಾ ಹತ್ತಿರವಾಗಿರಲು ಬಯಸುತ್ತಾರೆ. ಅದಕ್ಕಾಗಿಯೇ ಯಾವ ಸೆಲೆಬ್ರಿಟಿಯೂ ಸಿಗದಷ್ಟು ಸುಲಭವಾಗಿ ಕಿಚ್ಚ ತಮ್ಮ ಅಭಿಮಾನಿಗಳಿಗೆ ಸಿಗುತ್ತಾರೆ. ಅವರ ಪ್ರತಿಯೊಂದು ಪೋಸ್ಟ್​ಗಳಿಗೂ ಸ್ಪಂದಿಸುತ್ತಾರೆ.

ಕಿಚ್ಚ ಆಗೊಂದು ಈಗೊಂದು ಪೋಸ್ಟ್​ಗಳನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡರೂ, ಅವರಿಗೆ ಅಭಿಮಾನಿಗಳು ಮಾಡುವ ಟ್ವೀಟ್​ಗಳಿಗೆ ಮಾತ್ರ ಸದಾ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. ಅಭಿಮಾನಿಗಳನ್ನುಯ ಇಷ್ಟು ಇಷ್ಟ ಪಡುವ ಕಿಚ್ಚ ಈಗ ತಮ್ಮ ಓರ್ವ ಅಭಿಮಾನಿಯ ಕುರಿತಾಗಿ ಒಂದು ಹೃದಯ ಸ್ಪರ್ಶಿ ಟ್ವೀಟ್​ ಮಾಡಿದ್ದಾರೆ.

ಹೌದು, ಸುದೀಪ್​ ತಮ್ಮ ಅಭಿಮಾನಿ ಹಾಗೂ ಕಾರಿನ ಚಾಲಕ ವಿಶ್ವ ಅವರ ಹುಟ್ಟುಹಬ್ಬಕ್ಕೆ ಟ್ವೀಟ್​ ಮೂಲಕ ವಿಶ್​ ಮಾಡಿದ್ದಾರೆ.



ಸುದೀಪ್​ ಅವರ ಕಟ್ಟಾ ಅಭಿಮಾನಿಯಾಗಿರುವ ವಿಶ್ವ ವರ್ಷಗಳ ಹಿಂದೆ ಕಿಚ್ಚನ ಬಳಿ ಕಾರಿನ ಚಾಲಕರಾಗಿ ಕೆಲಸಕ್ಕೆ ಸೇರಿದವರು. ಅಂದಿನಿಂದ ಅವರ ಮನೆಯ ಸದಸ್ಯನಾದ ವಿಶ್ವ, ಸಹೋದರನಾಗಿ ಸುದೀಪ್​ ಅವರ ಕಾಳಜಿ ಮಾಡುತ್ತಿದ್ದಾರಂತೆ. ಹೀಗೆಂದು ಸುದೀಪ್​ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Pailwaan: ಸಿಹಿ ಸುದ್ದಿ ಕೊಡುವುದಾಗಿ ಹೇಳಿ ನಿರಾಶೆ ಮಾಡಿದ ಪೈಲ್ವಾನ್​ ನಿರ್ದೇಶಕ ಕೃಷ್ಣ..!

ಅಷ್ಟೇ ಅಲ್ಲ ವಿಶ್ವ 'ಮೈ ಆಟೋಗ್ರಾಫ್​' ಸಿನಿಮಾದಲ್ಲಿ ಹಳ್ಳಿಯಲ್ಲಿ ಕಿಚ್ಚನ ಸ್ನೇಹಿತನ ಪಾತ್ರದಲ್ಲೂ ಅಭಿನಯಿಸಿದ್ದಾರೆ.

Rashmika Mandanna: ಹೇಗಿದ್ದಾನೆ ಗೊತ್ತಾ ರಶ್ಮಿಕಾರ ಕನಸಿನ ಹುಡುಗ..!

First published: July 23, 2019, 4:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories