ರಕ್ಷಿತ್​ ಶೆಟ್ಟಿಗೆ ಆತ್ಮಸ್ಥೈರ್ಯ ತುಂಬಿದ ಕಿಚ್ಚ ಸುದೀಪ್​..!

news18
Updated:September 12, 2018, 5:30 PM IST
ರಕ್ಷಿತ್​ ಶೆಟ್ಟಿಗೆ ಆತ್ಮಸ್ಥೈರ್ಯ ತುಂಬಿದ ಕಿಚ್ಚ ಸುದೀಪ್​..!
news18
Updated: September 12, 2018, 5:30 PM IST
ನ್ಯೂಸ್​ 18 ಕನ್ನಡ 

ಗಾಂಧೀನಗರದಲ್ಲೆಲ್ಲ ಈಗ ರಕ್ಷಿತ್ ಶೆಟ್ಟಿ- ರಶ್ಮಿಕಾ ಅವರ ನಿಶ್ಚಿತಾರ್ಥ ಮುರಿದು ಬಿದ್ದದ್ದೇ ಸುದ್ದಿ. 2 ವರ್ಷಗಳ ಪ್ರೀತಿ ಕೊನೆಯಾಯಿತು, ಯಾಕ್ ಹೀಗ್ ಆಯ್ತು ಅಂತೆಲ್ಲ ಸುದ್ದಿಗಳು ಬರುತ್ತಲೇ ಇದೆ.

ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ  ರಕ್ಷಿತ್​-ರಶ್ಮಿಕಾ ನಿಶ್ಚಿತಾರ್ಥ ಮುರಿದು ಬಿದ್ದ ಸುದ್ದಿ ಕುರಿತಂತೆ ನಿನ್ನೆ (ಸೆ.11) ರಕ್ಷಿತ್​ ತಮ್ಮ ಸಾಮಾಜಿಕ ಜಾಲತಾಣದ ಖಾತೆಯ  ಮೂಲಕ ಪೋಸ್ಟ್​ ಮಾಡಿದ್ದರು.ರಕ್ಷಿತ್​ ತಮ್ಮ ಪೋಸ್ಟ್​ನಲ್ಲಿ ಏನು ಬರೆದಿದ್ದಾರೆ ಎಂದು ಓದಲು ಈ ಲಿಂಕ್​ ಕ್ಲಿಕ್​ ಮಾಡಿ...

https://kannada.news18.com/news/entertainment/first-time-rakshith-shetty-opens-his-mouth-on-his-breakup-with-rashmika-mandanna-86865.html
Loading...

ರಕ್ಷಿತ್​ ಶೆಟ್ಟಿ ಮಾಡಿರುವ ಪೋಸ್ಟ್​ಗೆ ಈಗ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ರಕ್ಷಿತ್ ಶೆಟ್ಟಿಗೆ ಆತ್ಮಸ್ಥೈರ್ಯ ತುಂಬವ ಕೆಲಸ ಮಾಡಿದ್ದಾರೆ. ಇದು ರಕ್ಷಿತ್ ಘನತೆ ಮತ್ತು ಪರಿಪಕ್ವತೆಯನ್ನು ತೋರಿಸುತ್ತದೆ. ಎಲ್ಲವು ಒಳ್ಳೆಯದಾಗುತ್ತೆ ಗೆಳೆಯ. ಸಾರ್ವಜನಿಕ ವ್ಯಕ್ತಿ ಅಂದ ಮಾತ್ರಕ್ಕೆ, ಖಾಸಗಿ ವಿಚಾರಗಳನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಕಾ?ಎಲ್ಲರಿಗೂ ಕೂಡ ಖಾಸಗಿ ಬದುಕಿದೆ. ಈ ಕುರಿತು ಜಾಸ್ತಿ ಕೇಳುವುದು ಉತ್ತಮವಲ್ಲ ಎಂದು  ಬರೆದುಕೊಂಡಿದ್ದಾರೆ ಸುದೀಪ್​.

First published:September 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...