News18 India World Cup 2019

ಕ್ರಿಕೆಟಿಗ ಯುವರಾಜ್​ ಸಿಂಗ್​ ನಿವೃತ್ತಿ: ಕಿಚ್ಚ ಸುದೀಪ್​ ಭಾವಾನಾತ್ಮಕ ಟ್ವೀಟ್​

ಕಿಚ್ಚ ಸುದೀಪ್​ ಕೂಡ ಕ್ರಿಕೆಟ್ ಪಟುವಾಗಿದ್ದು, ಹತ್ತಿರದಿಂದ ಕ್ರಿಕೆಟ್​ ಬಲ್ಲವರಾಗಿದ್ದಾರೆ. ಭಾರತ ತಂಡದ ಕ್ರಿಕೆಟಿಗರೊಬ್ಬರು ನಿವೃತ್ತಿ ಹೊಂದಿರುವುದು ಸುದೀಪ್​ಗೆ ಬೇಸರ ತಂದಿರುವುದು ಅವರ ಟ್ವೀಟ್​ ಅಲ್ಲಿ ಅಭಿವ್ಯಕ್ತವಾಗಿದೆ

Seema.R | news18
Updated:June 12, 2019, 6:52 PM IST
ಕ್ರಿಕೆಟಿಗ ಯುವರಾಜ್​ ಸಿಂಗ್​ ನಿವೃತ್ತಿ: ಕಿಚ್ಚ ಸುದೀಪ್​ ಭಾವಾನಾತ್ಮಕ ಟ್ವೀಟ್​
ನಟ ಸುದೀಪ್​
Seema.R | news18
Updated: June 12, 2019, 6:52 PM IST
ಕ್ರಿಕೆಟಿಗ ಯುವರಾಜ್​ ಸಿಂಗ್​ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿದೆ. ಅದರಲ್ಲಿಯೂ ಕ್ರಿಕೆಟ್​ ಪಟುವಾಗಿರುವ ಸುದೀಪ್​ ಯುವಿ ನಿವೃತ್ತಿಗೆ ವಿಷಾದ ವ್ಯಕ್ತಪಡಿಸಿ, ಭಾವನಾತ್ಮಕವಾಗಿ ಟ್ವೀಟ್​ ಮಾಡಿದ್ದಾರೆ.

ಕ್ರಿಕೆಟ್​ನಲ್ಲಿ ಯುವರಾಜ್​ ಸಿಂಗ್​ ಸಾಧನೆ ಎಲ್ಲರಿಗೂ ತಿಳಿದಿದೆ. ಅವರೊಬ್ಬ ನಿಜಕ್ಕೂ ಅದಮ್ಯ ಸ್ಪೂರ್ತಿಯ ರೂಪಿ. ನಿಮ್ಮನ್ನು ನಾವು ಎಂದೆಂದಿಗೂ ಪ್ರೀತಿಸುತ್ತೇವೆ . ನೀವು ಮತ್ತೆ ನೀಲಿ ಬಟ್ಟೆ ತೊಟ್ಟು ಕ್ರಿಕೆಟ್​ ಆಡುವುದನ್ನು ನೋಡಬೇಕು ಎಂಬುದು ನಮ್ಮ ಇಚ್ಚೆ. ನಿಮ್ಮನ್ನು ನಾವು ಮಿಸ್​ ಮಾಡಿಕೊಳ್ಳುತ್ತೇವೆ. ನಿಮಗೊಂದು ದೊಡ್ಡ ಸಲ್ಯೂಟ್​ ಎಂದಿದ್ದಾರೆ.


Loading...

ಯುವರಾಜ್​ ಸಿಂಗ್​ ಕೇವಲ ಕ್ರಿಕೆಟಿಗನಾಗಿರದೇ ಕ್ಯಾನ್ಸರ್​ ವಿರುದ್ಧ ಹೋರಾಡುವ ಮೂಲಕ ಅವರು ತಮ್ಮ ಕ್ರೀಡಾ ಸ್ಪೂರ್ತಿಯನ್ನು ಮರೆದಿದ್ದರು. ಇನ್ನು ಕಿಚ್ಚ ಸುದೀಪ್​ ಕೂಡ ಕ್ರಿಕೆಟ್ ಪಟುವಾಗಿದ್ದು, ಹತ್ತಿರದಿಂದ ಕ್ರಿಕೆಟ್​ ಬಲ್ಲವರಾಗಿದ್ದಾರೆ. ಭಾರತ ತಂಡದ ಕ್ರಿಕೆಟಿಗರೊಬ್ಬರು ನಿವೃತ್ತಿ ಹೊಂದಿರುವುದು ಸುದೀಪ್​ಗೆ ಬೇಸರ ತಂದಿರುವುದು ಅವರ ಟ್ವೀಟ್​ ಅಲ್ಲಿ ಅಭಿವ್ಯಕ್ತವಾಗಿದೆ.

First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...