news18-kannada Updated:January 12, 2021, 8:54 PM IST
ಕಬ್ಜ
ರಿಯಲ್ ಸ್ಟಾರ್ ಉಪೇಂದ್ರ ಕಬ್ಜ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಚಾರ ಅನೇಕರಿಗೆ ಗೊತ್ತಿದೆ. ಬಹಳ ಕುತೂಹಲಕಾರಿ ಚಿತ್ರಕಥೆಯನ್ನು ಹೊಂದಿರುವ ಈ ಸಿನಿಮಾಗೆ ಆರ್ ಚಂದ್ರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೀಗ ಈ ಚಿತ್ರತಂಡದೊಂದಿಗೆ ಕಿಚ್ಚ ಸುದೀಪ್ ಸೇರಿಕೊಳ್ಳಲ್ಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
‘ಕಬ್ಜ‘ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ನಿರ್ದೇಶಕ ಆರ್ ಚಂದ್ರು ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದಿದ್ದರು ಆದರೆ ಇನ್ನು ಪ್ರಾರಂಭವಾಗಿಲ್ಲ. ಆದರೀಗ ಕಬ್ಬ ಚಿತ್ರತಂಡದಿಂದ ಹೊಸ ಮಾಹಿತಿಯೊಂದು ಹೊರ ಬಿದ್ದಿದೆ.
ಸದ್ಯ ಸುಗ್ಗಿ ಸಂಕ್ರಾತಿ ಹಬ್ಬ ಸಮೀಪದಲ್ಲಿದೆ. ಆ ಸುದಿನದಂದು ಕಬ್ಜ ಚಿತ್ರತಂಡ ಸಿನಿ ರಸಿಕರಿಗೆ ಸಿಹಿ ಸುದ್ದಿಯನ್ನು ನೀಡಲಿದೆ. ಜನವರಿ 14ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಚಿತ್ರತಂಡ ಸಿಹಿಸುದ್ದಿಯನ್ನು ಬಹಿರಂಗಗೊಳಿಸಲಿದ್ದಾರೆ. ಒಂದೆಡೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂಬ ಮಾಹಿತಿಯಾದರೆ ಮತ್ತೊಂದೆಡೆ ಕಿಚ್ಚ ಸುದೀಪ್ ಅವರು ಚಿತ್ರತಂಡವನ್ನು ಸೇರಲಿದ್ದಾರೆ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.
ಅಂದಹಾಗೆಯೇ ಕಬ್ಜ ಸಿನಿಮಾದ ಶೇ40 ರಷ್ಟು ಚಿತ್ರೀಕರಣ ಮುಗಿದಿದೆ, ಇನ್ನುಳಿದಿರುವ ಚಿತ್ರೀಕರಣವನ್ನು ಬೇಗನೆ ಪ್ರಾರಂಭಿಸಿ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಬೇಕು ಎಂಬ ಪ್ಲಾನ್ನಲ್ಲಿದ್ದಾರೆ ನಿರ್ದೇಶಕ ಆರ್ ಚಂದ್ರು.
ಬೆಂಗಳೂರು, ಹೈದರಾಬಾದ್ ಮುಂತಾದ ಕಡೆಯಲ್ಲಿ ಕಬ್ಜ ಸಿನಿಮಾದ ಚಿತ್ರೀಕರಣ ನಡೆದಿದೆ. ಮಾತ್ರವಲ್ಲದೆ ಅದ್ಧೂರಿ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗಿದೆ.
ಕಬ್ಜ ಸಿನಿಮಾದ ಮೂಲಕ ಆರ್ ಚಂದ್ರು ಅವರು ರಿಯಲ್ ಸ್ಟಾರ್ ಅವರನ್ನು ವಿಭಿನ್ನ ಗೆಟಪ್ನಲ್ಲಿ ತೆರೆ ಮೇಲೆ ತರಲಿದ್ದಾರೆ. ಉಪೇಂದ್ರ ಅವರು ಕೂಡ ಈ ಸಿನಿಮಾಗಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಚಿತ್ರದ ನಾಯಕಿ ಯಾರೆಂಬ ಮಾಹಿತಿ ತಿಳಿದುಬರಬೇಕಿದೆ. ಆದರೆ ಜಗಪತಿ ಬಾಬು, ಅನೂಪ್ ರೇವಣ್ಣ, ಕಾಮರಾಜನ್, ರಾಹುಲ್ ಜಗಪತ್, ಜಾನ್ ಕೊಕ್ಕಿನ್, ರಾಹುಲ್ ದೇವ್, ಕೋಟ ಶ್ರೀನಿವಾಸ್ ರಾವ್, ಜಯ ಪ್ರಕಾರ್ಶ್, ಕಾಟ್ ರಾಜು, ಸುಬ್ಬರಾಜು, ರಾಹುಲ್ ದೇವ್ ಮುಂತಾದವರು ಕಾಣಿಸಿಕೊಳ್ಳಲ್ಲಿದ್ದಾರೆ
ರವಿ ಬಸ್ರೂರು ಅವರ ಸಂಗೀತ, ಎ.ಜೆ ಶೆಟ್ಟಿ ಛಾಯಾಗ್ರಹಣದಲ್ಲಿ ಕಬ್ಬ ಮೂಡಿಬರುತ್ತಿದೆ. ಆರ್ ಚಂದ್ರು ಅವರೇ ಬಂಡವಾಗಳ ಹೂಡುತ್ತಿದ್ದಾರೆ. ಸದ್ಯ ಸಂಕ್ರಾತಿ ಹಬ್ಬದವರೆಗೆ ಸಿಹಿ ಸುದ್ದಿಗಾಗಿ ಕಾಯಬೇಕಿದೆ.
Published by:
Harshith AS
First published:
January 12, 2021, 8:32 PM IST