ಫಿಟ್ನೆಸ್​ಗಾಗಿ ರಾಕೆಟ್​ ಹಿಡಿದು ‌ಬ್ಯಾಡ್ಮಿಂಟನ್‌ ಆಡಲು ಆರಂಭಿಸಿದ ಕಿಚ್ಚ ಸುದೀಪ್​..!

ಪೈಲ್ವಾನ್‌ನಂತೆಯೇ ಫ್ಯಾಂಟಮ್‌ ಚಿತ್ರದಲ್ಲೂ ಕಿಚ್ಚ ಸುದೀಪ್‌ ಸಖತ್‌ ಫಿಟ್‌ ಆಗಿ ಕಾಣುತ್ತಾರೆ. ಅದಕ್ಕಾಗಿಯೇ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಹಾಕಲಾಗಿದ್ದ ಫ್ಯಾಂಟಮ್‌ ಸೆಟ್‌ನಲ್ಲೇ ತಮಗಾಗಿ ಮಿನಿ ಜಿಮ್‌ ಮಾಡಿಕೊಂಡಿದ್ದರು ಕಿಚ್ಚ. ಅಲ್ಲಿ ಶೂಟಿಂಗ್‌ ತಯಾರಿ ನಡೆಯುತ್ತಿದ್ದರೆ, ಇಲ್ಲಿ ಕಿಚ್ಚನ ಖಡಕ್‌ ವರ್ಕೌಟ್‌ ನಡೆಯುತ್ತಿತ್ತು. ಈಗ ಬೆಂಗಳೂರಿಗೆ ವಾಪಸ್ಸಾಗಿರುವ ಅವರು, ಜಿಮ್‌ ವರ್ಕೌಟ್‌ ಜೊತೆಗೆ ಬ್ಯಾಡ್ಮಿಂಟನ್‌ ಆಡುತ್ತಿದ್ದಾರೆ.

ಕಿಚ್ಚ ಸುದೀಪ್‌

ಕಿಚ್ಚ ಸುದೀಪ್‌

  • Share this:
ಸ್ಯಾಂಡಲ್‌ವುಡ್‌ ಕಿಚ್ಚ ಸುದೀಪ್‌ (Kichcha Sudeep) ಅವರು ಕಳೆದ ಕೆಲ ವರ್ಷಗಳಿಂದ ಫಿಟ್ನೆಸ್‌ನತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಅದರಲ್ಲೂ ಪೈಲ್ವಾನ್‌ ಸಿನಿಮಾದ ಬಳಿಕವಂತೂ, ವರ್ಕೌಟ್‌ ಕಿಚ್ಚ ಸುದೀಪ್‌ ಅವರ ಪ್ರತಿದಿನದ ಹವ್ಯಾಸವಾಗಿದೆ. ಹಾಗಂತ ಡಂಬಲ್‌, ವೇಯ್ಟ್‌ ಲಿಫ್ಟ್‌ ಮಾತ್ರವಲ್ಲ ಬದಲಾಗಿ ಬೇರೆ ಬೇರೆ ಕ್ರೀಡೆಗಳ ಮೂಲಕವೂ ಕಿಚ್ಚ ತಮ್ಮ ಫಿಟ್ನೆಸ್‌ ಕಾಪಾಡಿಕೊಳ್ಳುತ್ತಿದ್ದಾರೆ. ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಒಬ್ಬ ಅತ್ಯುತ್ತಮ ಕ್ರಿಕೆಟ್‌ ಪಟು ಎಂಬುದು ಎಲ್ಲರಿಗೂ ಗೊತ್ತೇಯಿದೆ. ಅದನ್ನು ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಮಾತ್ರವಲ್ಲ ಹೆಸರಾಂತ ಲಾರ್ಡ್ಸ್‌ ಮೈದಾನದಲ್ಲಿ ಕ್ಲಬ್‌ ಒಂದರ ಪರ ಆಡುವುದನ್ನೂ ನೋಡಿದ್ದೀವಿ. ಒಳ್ಳೆಯ ಕ್ರಿಕೆಟ್​ ಆಟಗಾರ ನಾಗಿರುವ  ಸುದೀಪ್​ ಈಗ ರಾಕೆಟ್​​ ಹಿಡಿದು ಬ್ಯಾಡ್ಮಿಂಟನ್​ ಆಡಲಾರಂಭಿಸಿದ್ದಾರೆ. ಹೌದಾ ಅಂತ ನೀವೂ ಆಶ್ಚರ್ಯಪಡಬಹುದು. ಅದಕ್ಕೆ ಸಾಕ್ಷಿ ಈ ವಿಡಿಯೋ.

ಪೈಲ್ವಾನ್‌ನಂತೆಯೇ ಫ್ಯಾಂಟಮ್‌ ಚಿತ್ರದಲ್ಲೂ ಕಿಚ್ಚ ಸುದೀಪ್‌ ಸಖತ್‌ ಫಿಟ್‌ ಆಗಿ ಕಾಣುತ್ತಾರೆ. ಅದಕ್ಕಾಗಿಯೇ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಹಾಕಲಾಗಿದ್ದ ಫ್ಯಾಂಟಮ್‌ ಸೆಟ್‌ನಲ್ಲೇ ತಮಗಾಗಿ ಮಿನಿ ಜಿಮ್‌ ಮಾಡಿಕೊಂಡಿದ್ದರು ಕಿಚ್ಚ. ಅಲ್ಲಿ ಶೂಟಿಂಗ್‌ ತಯಾರಿ ನಡೆಯುತ್ತಿದ್ದರೆ, ಇಲ್ಲಿ ಕಿಚ್ಚನ ಖಡಕ್‌ ವರ್ಕೌಟ್‌ ನಡೆಯುತ್ತಿತ್ತು. ಈಗ ಬೆಂಗಳೂರಿಗೆ ವಾಪಸ್ಸಾಗಿರುವ ಅವರು, ಜಿಮ್‌ ವರ್ಕೌಟ್‌ ಜೊತೆಗೆ ಬ್ಯಾಡ್ಮಿಂಟನ್‌ ಆಡುತ್ತಿದ್ದಾರೆ.ಏನು ಈ ಫೆಟಲ್‌? ಕಿಚ್ಚ ಅಲ್ಲಿಗೆ ಹೋಗಲು ಕಾರಣವೇನು?

ಫೆಟಲ್‌, ಜೆಪಿನಗರ 9ನೇ ಫೇಸ್‌ನಲ್ಲಿರುವ ಫಿಟ್ನೆಸ್‌ ಮತ್ತು ಸ್ಪೋರ್ಟ್ಸ್‌ ಕ್ಲಬ್‌. ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒಳಗೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌. ಇಲ್ಲಿ ಆರು ಬ್ಯಾಡ್ಮಿಂಟನ್‌ ಕೋರ್ಟ್‌ಗಳಿವೆ, ಸ್ಕೇಟಿಂಗ್‌ ಮಾಡಲು ಕೋರ್ಟ್‌ ಇದೆ. ಒಳಾಂಗಣ ಈಜುಕೊಳವೂ ಇದೆ. ಎರಡು ಕ್ರಿಕೆಟ್‌ ನೆಟ್‌ಗಳಿವೆ, ಜೊತೆಗೊಂದು ಫುಟ್‌ಬಾಲ್‌ ಕೋರ್ಟ್‌, ಜಾಗಿಂಗ್‌ ಟ್ರ್ಯಾಕ್‌ ಕೂಡ ಇದೆ. ಮಾತ್ರವಲ್ಲ ಯೋಗ ಮಾಡಲು, ಧ್ಯಾನ ಮಾಡಲು ಹಸಿರು ಲಾನ್‌ ವ್ಯವಸ್ಥೆಯಿದೆ.

ಜಿಮ್‌ ಪ್ರೇಮಿಗಳಿಗೆ ವರ್ಕೌಟ್‌ ಮಾಡಲು ಜಿಮ್‌ ಕೂಡ ಇದೆ, ಸ್ನಾನ ಗ್ರಹದ ಜೊತೆಗೆ ಸೌನಾ ಸೌಲಭ್ಯವೂ ಇದೆ. ಜೊತೆಗೊಂದು ಗೆಸ್ಟ್‌ ಹೌಸ್‌, ರೆಸ್ಟೋರೆಂಟ್‌ ಸೇರಿದಂತೆ ಹತ್ತು ಹಲವು ಸೇವೆಗಳು ಇಲ್ಲಿ ಲಭ್ಯವಿದೆ. ಟೇಬಲ್‌ ಟೆನ್ನಿಸ್‌, ಬಿಲಿಯರ್ಡ್ಸ್‌, ಚೆಸ್‌, ಕೇರಮ್‌ ಬೋರ್ಡ್‌, ವಾಲ್‌ ಕ್ಲೈಂಬಿಂಗ್‌ ಹೀಗೆ ಹಲವು ಅಡ್ವೆಂಚರಸ್‌, ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳು ಒಂದೇ ಜಾಗದಲ್ಲಿವೆ. ಹೀಗಾಗಿಯೇ ಫಿಟ್ನೆಸ್‌ ಪ್ರೇಮಿ ಕಿಚ್ಚ ಸುದೀಪ್‌ ಫೆಟಲ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Abishek Ambareesh: ಪವರ್​ ಫುಲ್​ ಆ್ಯಕ್ಷನ್​ಗೆ ಸಿದ್ಧರಾಗುತ್ತಿದ್ದಾರೆ ಅಭಿಷೇಕ್​ ಅಂಬರೀಷ್..!

ಜಿಮ್ಮಿಂಗ್‌ ಮಾಡಲು ಒಂದು ಕಡೆ, ಬ್ಯಾಡ್ಮಿಂಟನ್‌ ಆಡಲು ಮತ್ತೊಂದು ಕಡೆ, ಸ್ವಿಮ್ಮಿಂಗ್‌ಗಾಗಿ ಇನ್ನೊಂದು ಕಡೆ, ರೆಸ್ಟ್‌ ಮಾಡಲು ಮಗದೊಂದು ಕಡೆ ಅಂತ ಅಲ್ಲಿ ಇಲ್ಲಿ ತಿರುಗಾಡುವ ಬದಲು, ಎಲ್ಲವೂ ಒಂದೇ ಜಾಗದಲ್ಲಿರುವ ಕಾರಣ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟ ಹಾಗೂ ಸೌಲಭ್ಯಗಳಿರುವ ಕಾರಣ ಫಿಟೆಲ್‌ಗೆ ಹೋಗಿದ್ದಾರೆ ಕಿಚ್ಚ ಸುದೀಪ್‌.
Published by:Anitha E
First published: