Kotigobba 3-Salaga: ತಲೆಯೆತ್ತುತ್ತಿದೆ ಕಿಚ್ಚನ 75 ಅಡಿ ಉದ್ದದ ಕಟೌಟ್​: 300 ಚಿತ್ರಮಂದಿರಗಳಲ್ಲಿ ಸಲಗ ವಿಜಯಯಾತ್ರೆ

ನಿನ್ನೆಯವರೆಗೂ ಕೋಟಿಗೊಬ್ಬ 3 ಸಿನಿಮಾ ಕೆಜಿ ರಸ್ತೆಯ ಪ್ರಮುಖ ಚಿತ್ರತಂದಿ ನರ್ತಕಿ ಹಾಗೂ ಸಲಗ ಸಿನಿಮಾ ಸಂತೋಷ್ ಥಿಯೇಟರ್​ಗಳಲ್ಲಿ ರಿಲೀಸ್ ಆಗುತ್ತಿವೆ ಎನ್ನಲಾಗಿತ್ತು. ಚಿತ್ರತಂಡಗಳೂ ಸಹ ಹಾಗೇ ಅನೌನ್ಸ್ ಕೂಡ ಮಾಡಿದ್ದವು. ಆದರೆ ಕಾರಣಾಂತರಗಳಿಂದ ಕೊನೆಯ ಕ್ಷಣದಲ್ಲಿ ಎರಡೂ ಚಿತ್ರಗಳ ಪ್ರಮುಖ ಚಿತ್ರಮಂದಿರಗಳು ಬದಲಾಗಿವೆ.

ನಾಳೆ ರಿಲೀಸ್ ಆಗುತ್ತಿವೆ ಕೋಟಿಗೊಬ್ಬ 3 ಹಾಗೂ ಸಲಗ ಸಿನಿಮಾಗಳು

ನಾಳೆ ರಿಲೀಸ್ ಆಗುತ್ತಿವೆ ಕೋಟಿಗೊಬ್ಬ 3 ಹಾಗೂ ಸಲಗ ಸಿನಿಮಾಗಳು

  • Share this:
ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಸಿನಿಮಾ ದಸರ ಹಬ್ಬ ಶುರುವಾಗಿದೆ. ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಅಪ್ಪಳಿಸಲು ರೆಡಿಯಾಗುತ್ತಿದ್ದಂತೆಯೇ ಮತ್ತು ಥಿಯೇಟರ್​ಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಅಕ್ಟೋಬರ್ 1ರಿಂದಲೇ ಹೌಸ್‍ಫುಲ್ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು, ಪ್ರತಿವಾರ ಎರಡು ಮೂರು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ ಈ ವಾರ ಎರಡು ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿರುವುದು ವಿಶೇಷ. ಹೌದು, ಆಯುಧ ಪೂಜೆಯ ಅಂಗವಾಗಿ ಕೋಟಿಗೊಬ್ಬ 3 (Ktoigobba 3) ಚಿತ್ರದಲ್ಲಿ ಕಿಚ್ಚ ಸುದೀಪ್ (Kichcha Sudeep) ಹಾಗೂ ಸಲಗ  (Salaga)ಚಿತ್ರದಲ್ಲಿ ದುನಿಯಾ ವಿಜಯ್  (Duniya Vijay) ಆಯುಧಗಳನ್ನು ಹಿಡಿದು ಥಿಯೇಟರ್‍ಗಳಿಗೆ ಎಂಟ್ರಿ ಕೊಡುತ್ತಿದ್ದಾರೆ. ಕೋಟಿಗೊಬ್ಬ ಚಿತ್ರದಲ್ಲಿ ಕಿಚ್ಚ ಸುದೀಪ್ ಇಂಟರ್​ ನ್ಯಾಷನಲ್​  ಖಿಲಾಡಿಯಾಗಿದ್ದು, ಸಲಗ ಚಿತ್ರದಲ್ಲಿ ದುನಿಯಾ ವಿಜಯ್ ಲೋಕಲ್ ಡಾನ್ ಆಗಿದ್ದಾರೆ. ಒಂದೇ ದಿನ ಎರಡೂ ಸ್ಟಾರ್ ಸಿನಿಮಾಗಳು ತೆರೆಗೆ ಬರುತ್ತಿರುವುದರಿಂದ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ನಿನ್ನೆಯವರೆಗೂ ಕೋಟಿಗೊಬ್ಬ 3 ಸಿನಿಮಾ ಕೆಜಿ ರಸ್ತೆಯ ಪ್ರಮುಖ ಚಿತ್ರತಂದಿ ನರ್ತಕಿ ಹಾಗೂ ಸಲಗ ಸಿನಿಮಾ ಸಂತೋಷ್ ಥಿಯೇಟರ್​ಗಳಲ್ಲಿ ರಿಲೀಸ್ ಆಗುತ್ತಿವೆ ಎನ್ನಲಾಗಿತ್ತು. ಚಿತ್ರತಂಡಗಳೂ ಸಹ ಹಾಗೇ ಅನೌನ್ಸ್ ಕೂಡ ಮಾಡಿದ್ದವು. ಆದರೆ ಕಾರಣಾಂತರಗಳಿಂದ ಕೊನೆಯ ಕ್ಷಣದಲ್ಲಿ ಎರಡೂ ಚಿತ್ರಗಳ ಪ್ರಮುಖ ಚಿತ್ರಮಂದಿರಗಳು ಬದಲಾಗಿವೆ. ಕೋಟಿಗೊಬ್ಬ 3 ಭೂಮಿಕಾ ಥಿಯೇಟರ್​ಗೆ ಶಿಫ್ಟ್ ಆಗಿದ್ದು, ಸಲಗ ತ್ರಿವೇಣಿ ಚಿತ್ರಮಂದಿರಕ್ಕೆ ಶಿಫ್ಟ್ ಆಗಿದೆ.

Kotigobba 3 Release, Sudeep in Double shade in Kotigobba 3, Salga will release in 300 screens, Kotigobba Cutout, Kichcha Sudeep in Kotigobba, Salaga, Duniya Vijay's Salaga, Salaga, Duniya Vijay's Salaga, Duniya Vijay's Salaga Pre-Release Event, Duniya Vijay Visit to annamma devi temple, ಸಲಗ, ಸಲಗ ಬಿಡುಗಡೆ, ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ, ಅಣ್ಣಮ್ಮ ದೇವಿ ಆಶೀರ್ವಾದ ಪಡೆದ ದುನಿಯಾ ವಿಜಯ್, Duniya Vijay's Salaga Pre-Release Event, siddaramaiah to attend Salaga Pre-Release Event, dk shivakumar to attend Salaga Pre-Release Event, puneeth rajkumar to attend Salaga Pre-Release Event, upendra to attend Salaga Pre-Release Event, ಸಲಗ, ಸಲಗ ಬಿಡುಗಡೆ, ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ, ಸಲಗ ಕಾರ್ಯಕ್ರಮಕ್ಕೆ ಅತಿಥಿಗಳ ಪಟ್ಟಿ, Duniya Vijay starrer Salaga Movie, Salaga Movie trailer release, Salaga movie release date, Salaga Pre Release event, Puneeth Rajkumar will attend trailer launch event, Salaga trailer launch event, Salaga Team Invites Puneeth Rajkumar For Trailer Launch, Puneeth Rajkumar will launch salaga trailer, Former CM Siddaramaiah, ಸಲಗ ಸಿನಿಮಾದ ಟ್ರೇಲರ್ ಲಾಂಚ್, ಟ್ರೇಲರ್ ಲಾಂಚ್ ಮಾಡಲಿದ್ದಾರೆ ಪುನೀತ್ ರಾಜ್‌ಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, Kichcha Sudeep, Mehreen Pirzada, Nee Sigovaregu, Ram Dhulipudi, Shivarajkumar, Shivarajkumar, Nee Sigovaregu, Kichcha Sudeep, Mehreen Pirzada, Ram Dhulipudi, ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​, ನೀ ಸಿಗೋವರೆಗೆ, ಗೀತಾ ಶಿವರಾಜ್​ಕುಮಾರ್​, ಸ್ಯಾಂಡಲ್​ವುಡ್​
ತ್ರಿವೇಣಿ ಚಿತ್ರಮಂದಿರದಲ್ಲಿ ದುನಿಯಾ ವಿಜಯ್​ ಅಭಿನಯದ ಸಲಗ ಸಿನಿಮಾ


ವಿಶೇಷ ಅಂದರೆ ಈಗಾಗಲೇ ಭೂಮಿಕಾ ಥಿಯೇಟರ್​ನಲ್ಲಿ ಕೋಟಿಗೊಬ್ಬನನ್ನು ಸ್ವಾಗತಿಸಲು ಸಕಲ ಸಿದ್ಧತೆಗಳು ಪ್ರಾರಂಭವಾಗಿವೆ. ಬರೋಬ್ಬರಿ 75 ಅಡಿ ಉದ್ದದ ಕಟೌಟ್ ನಿರ್ಮಾಣದ ಕೆಲಸಗಳು ಭರದಿಂದ ಸಾಗಿವೆ. ಮಾತ್ರವಲ್ಲ ಬ್ಯಾನರ್, ಬಂಟಿಂಗ್‍ಗಳನ್ನು ಹಾಕಿ ಅಭಿಮಾನಿಗಳು ನಾಳೆ ಕಿಚ್ಚ ಸುದೀಪ್ ಸಿನಿಮಾ ರಿಲೀಸ್ ಅನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ರೆಡಿಯಾಗುತ್ತಿದ್ದಾರೆ. ರಾಜ್ಯಾದ್ಯಂತ 250ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ: ಸಂತೋಷ್‌ನಿಂದ ತ್ರಿವೇಣಿ ಚಿತ್ರಮಂದಿರಕ್ಕೆ ಹೋದ Salaga: 300 ಚಿತ್ರಮಂದಿರಗಳಲ್ಲಿ 1,200 ಶೋಗಳು..!

ಹಾಗೇ ತ್ರಿವೇಣಿ ಥಿಯೇಟರ್​ನಲ್ಲೂ ಸಹ ದುನಿಯಾ ವಿಜಯ್ ಅಭಿಮಾನಿಗಳು ಇಂದೇ ಸಿದ್ಧತೆ ನಡೆಸಿದ್ದಾರೆ. ತಮ್ಮ ನೆಚ್ಚಿನ ನಟ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಕಾರಣ ಸಲಗ ಚಿತ್ರದ ಬಗ್ಗೆ ಅವರ ಫ್ಯಾನ್ಸ್‍ಗಳಲ್ಲಿ ಹೆಚ್ಚಿನ ನಿರೀಕ್ಷೆಗಳಿವೆ. ಜೊತೆಗೆ ಡಾಲಿ ಧನಂಜಯ ಕೂಡ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವುದು ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಹೀಗಾಗಿಯೇ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ಕಟೌಟ್ ನಿರ್ಮಾಣಕ್ಕೆ ಫ್ಯಾನ್ಸ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ರಾಜ್ಯಾದ್ಯಂತ ಬರೋಬ್ಬರಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಲಗ ಸಿನಿಮಾ ರಿಲೀಸ್ ಆಗುತ್ತಿದ್ದು, ಪ್ರತಿದಿನ 1200 ಶೋಗಳು ಇರಲಿವೆ.

Kotigobba 3 Release, Sudeep in Double shade in Kotigobba 3, Salga will release in 300 screens, Kotigobba Cutout, Kichcha Sudeep in Kotigobba, Salaga, Duniya Vijay's Salaga, Salaga, Duniya Vijay's Salaga, Duniya Vijay's Salaga Pre-Release Event, Duniya Vijay Visit to annamma devi temple, ಸಲಗ, ಸಲಗ ಬಿಡುಗಡೆ, ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ, ಅಣ್ಣಮ್ಮ ದೇವಿ ಆಶೀರ್ವಾದ ಪಡೆದ ದುನಿಯಾ ವಿಜಯ್, Duniya Vijay's Salaga Pre-Release Event, siddaramaiah to attend Salaga Pre-Release Event, dk shivakumar to attend Salaga Pre-Release Event, puneeth rajkumar to attend Salaga Pre-Release Event, upendra to attend Salaga Pre-Release Event, ಸಲಗ, ಸಲಗ ಬಿಡುಗಡೆ, ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ, ಸಲಗ ಕಾರ್ಯಕ್ರಮಕ್ಕೆ ಅತಿಥಿಗಳ ಪಟ್ಟಿ, Duniya Vijay starrer Salaga Movie, Salaga Movie trailer release, Salaga movie release date, Salaga Pre Release event, Puneeth Rajkumar will attend trailer launch event, Salaga trailer launch event, Salaga Team Invites Puneeth Rajkumar For Trailer Launch, Puneeth Rajkumar will launch salaga trailer, Former CM Siddaramaiah, ಸಲಗ ಸಿನಿಮಾದ ಟ್ರೇಲರ್ ಲಾಂಚ್, ಟ್ರೇಲರ್ ಲಾಂಚ್ ಮಾಡಲಿದ್ದಾರೆ ಪುನೀತ್ ರಾಜ್‌ಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, Kichcha Sudeep, Mehreen Pirzada, Nee Sigovaregu, Ram Dhulipudi, Shivarajkumar, Shivarajkumar, Nee Sigovaregu, Kichcha Sudeep, Mehreen Pirzada, Ram Dhulipudi, ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​, ನೀ ಸಿಗೋವರೆಗೆ, ಗೀತಾ ಶಿವರಾಜ್​ಕುಮಾರ್​, ಸ್ಯಾಂಡಲ್​ವುಡ್​
ಭೂಮಿಕಾ ಚಿತ್ರಮಂದಿರದಲ್ಲಿ ಕೋಟಿಗೊಬ್ಬ 3 ಸಿನಿಮಾದ ಕಟೌಟ್​


ಸ್ಟಾರ್​ಗಳ ಸಿನಿಮಾ ಒಂದೇ ದಿನ ರಿಲೀಸ್ ಆಗುತ್ತಿರುವುದರಿಂದ ಸ್ಟಾರ್ ವಾರ್, ಫ್ಯಾನ್ಸ್ ವಾರ್ ಅಥವಾ ಬಾಕ್ಸಾಫಿಸ್ ವಾರ್ ಅಂತೆಲ್ಲ ಲೆಕ್ಕಾಚಾರಗಳು ಇರುವುದು ಸಾಮಾನ್ಯ. ಆದರೆ ಸಲಗ ಹಾಗೂ ಕೋಟಿಗೊಬ್ಬ 3 ಚಿತ್ರಗಳ ವಿಷಯದಲ್ಲಿ ಅಂತಹ ಯಾವುದೇ ವಾರ್ ಕೂಡ ಆಗಿಲ್ಲ. ಬದಲಾಗಿ ಕೊರೋನಾ ಕಷ್ಟ ಹಾಗೂ ಲಾಕ್‍ಡೌನ್ ಸಂಕಷ್ಟದಿಂದ ಹೊರಬಂದು ಈಗಷ್ಟೇ ಎರಡು ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದ್ದು, ಎರಡೂ ಸಿನಿಮಾಗಳನ್ನು ನೋಡುತ್ತೇವೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ: Kotigobba 3 Release Date: ಕೋಟಿಗೊಬ್ಬ 3 ಚಿತ್ರದ ರಿಲೀಸ್ ಬಗ್ಗೆ ಖುಷಿಯಿಂದ ಹಂಚಿಕೊಂಡ ಕಿಚ್ಚ ಸುದೀಪ್​

ಆಯುಧ ಪೂಜೆಯಂದು ಸಲಗ ಮತ್ತು ಕೋಟಿಗೊಬ್ಬ 3 ರಿಲೀಸ್ ಆಗುತ್ತಿದ್ದು, ಅವುಗಳ ಬೆನ್ನಲ್ಲೇ ಅಕ್ಟೋಬರ್ 15ರ ವಿಜಯದಶಮಿ ಹಬ್ಬದಂದು ಡಾರ್ಲಿಂಗ್ ಕೃಷ್ಣ ಅಭಿನಯದ, ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ ಅಟ್ ಜೀಮೇಲ್ ಡಾಟ್ ಕಾಂ ಚಿತ್ರ ರಿಲೀಸ್ ಆಗುತ್ತಿದೆ. ಒಟ್ಟು 100ರಿಂದ 150 ಸ್ಕ್ರೀನ್‍ಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಒಟ್ಟಾರೆ ಸ್ಯಾಂಡಲ್‍ವುಡ್‍ನಲ್ಲಿ ಈ ಬಾರಿಯ ದಸರ ಹಬ್ಬದ ಸಂಭ್ರಮ ಸ್ಟಾರ್ ಸಿನಿಮಾಗಳಿಂದಾಗಿ ಮತ್ತಷ್ಟು ಸ್ಪೆಷಲ್ ಆಗಿರಲಿದೆ.
Published by:Anitha E
First published: