Sudeep New Movie: ಹಿಂದೆಂದೂ ನೋಡದ ಅವತಾರದಲ್ಲಿ ಸುದೀಪ್: ಕಿಚ್ಚನ ಜೊತೆ ಹೊಸ ಸಿನಿಮಾ ಪ್ರಕಟಿಸಿದ ಪ್ರೇಮ್..!
Jogi Prem - Kichcha Sudeep: ಕಿಚ್ಚ ಸುದೀಪ್ ಹುಟ್ಟುಹಬ್ಬದ ಉಡುಗೊರೆಯಾಗಿ ಹೊಸ ಸಿನಿಮಾ ಪ್ರಕಟಿಸಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ಸುದೀಪ್ ಅವರನ್ನು ಹಿಂದೆಂದೂ ನೋಡದ ಅವತಾರದಲ್ಲಿ ತೋರಿಸಲಿದ್ದಾರಂತೆ ಪ್ರೇಮ್.

ಪ್ರೇಮ್ ಹಾಗೂ ಸುದೀಪ್
- News18 Kannada
- Last Updated: September 3, 2020, 1:04 PM IST
ಕಿಚ್ಚ ಸುದೀಪ್ ನಿನ್ನೆಯಷ್ಟೆ 47ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ನಿರ್ದೇಶಕ ಪ್ರೇಮ್ ಭರ್ಜರಿ ಉಡುಗೊರೆ ನೀಡಿದ್ದಾರೆ. ಕಿಚ್ಚನ ಅಭಿಮಾನಿಗಳಿಗಾಗಿ ಸಿಹಿ ಸುದ್ದಿ ನೀಡಿದ್ದಾರೆ. ಕಿಚ್ಚ ಹಾಗೂ ಪ್ರೇಮ್ ಕಾಂಬಿನೇಷನ್ನಲ್ಲಿ ಒಂದು ಹೊಸ ಸಿನಿಮಾ ಬರಲಿದೆ.
ಈ ಹಿಂದೆ ಸುದೀಪ್, ಶಿವಣ್ಣ ಹಾಗೂ ಪ್ರೇಮ್ ಕಾಂಬಿನೇಷನ್ನಲ್ಲಿ ದಿ ವಿಲನ್ ಸಿನಿಮಾ ಬಂದಿತ್ತು. ಈ ಚಿತ್ರದ ಮೂಲಕ ಸುದೀಪ್ಗೆ ಮೊದಲ ಬಾರಿಗೆ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದರು. ಆ ಸಿನಿಮಾ ಬಾಕ್ಸಾಫಿಸ್ನಲ್ಲಿ ಹೇಳಿಕೊಳ್ಳುವಷ್ಟು ಪ್ರದರ್ಶನ ಕಾಣಲಿಲ್ಲವಾದರೂ, ಸುದೀಪ್ ಹಾಗೂ ಕಿಚ್ಚನ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು. ಈಗ ಇದೇ ಕಾರಣದಿಂದಲೇ ಪ್ರೇಮ್, ಕಿಚ್ಚನಿಗಾಗಿ ಹೊಸ ಸಿನಿಮಾ ಮಾಡಲು ಅಣಿಯಾಗುತ್ತಿದ್ದಾರೆ.
ಹೌದು, ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿರುವ ಪ್ರೇಮ್, ನನ್ನ ಡಾರ್ಲಿಂಗ್ ಸುದೀಪ್ ಜತೆ ಮತ್ತೆ ಕೆಲಸ ಮಾಡಲಿದ್ದೇನೆ. ಅವರ ಹುಟ್ಟುಹಬ್ಬದಂದು ಸುದೀಪ್ ಜೊತೆಗೆ ಮಾಡಲಿರುವ ಹೊಸ ಸಿನಿಮಾದ ಪ್ರಕಟಣೆ ಮಾಡುತ್ತಿದ್ದೇನೆ. ಈ ಸಿನಿಮಾದಲ್ಲಿ ಸುದೀಪ್ ಅವರನ್ನು ಹಿಂದೆಂದೂ ನೋಡದ ಅವತಾರದಲ್ಲಿ ತೋರಿಸಲಿದ್ದೇನೆ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರೇಮ್ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಮಾಡಿಕೊಂಡಿದ್ದು, ಅದರ ಮೂಲಕವೇ ಈ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರಂತೆ. ಈ ಸಿನಿಮಾವನ್ನು ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಇನ್ನೂ ಹಲವಾರು ಭಾಷೆಗಳಲ್ಲಿ ರಿಲೀಸ್ ಮಾಡುವ ಆಲೋಚನೆ ಇದೆಯಂತೆ. ಈ ಸಿನಿಮಾ ಚಿತ್ರೀಕರಣ ಏಕ್ಲವ್ಯಾ ಸಿನಿಮಾದ ಚಿತ್ರೀಕರಣ ಮುಗಿದ ನಂತರ ಆರಂಭಿಸಲಿದ್ದಾರಂತೆ.
ಈ ಚಿತ್ರಕ್ಕಾಗಿ ಪ್ರೇಮ್ ಸಿಕ್ಕಾಪಟ್ಟೆ ಹೋಂವರ್ಕ್ ಮಾಡಿದ್ದು, ಸಿನಿಮಾ ಸೆಟ್ಟೇರುವ ಮುನ್ನ 7-8 ತಿಂಗಳ ಪ್ರೀಪ್ರೊಡಕ್ಷನ್ ಕೆಲಸ ಇರಲಿದೆಯಂತೆ. ಹೀಗಾಗಿಯೇ ಚಿತ್ರೀಕರಣಕ್ಕೆ ಗಡಿಬಿಡಿ ಮಾಡುವುದಿಲ್ಲವಂತೆ ನಿರ್ದೇಶಕರು.