ಜಾರ್ಜಿಯಾದಲ್ಲಿ 'ಸೈರಾ ನರಸಿಂಹ ರೆಡ್ಡಿ' ಚಿತ್ರೀಕರಣ: ಕಿಚ್ಚನ ಹೊಸ ಲುಕ್ ರಿಲೀಸ್​..!​

news18
Updated:October 12, 2018, 2:06 PM IST
ಜಾರ್ಜಿಯಾದಲ್ಲಿ 'ಸೈರಾ ನರಸಿಂಹ ರೆಡ್ಡಿ' ಚಿತ್ರೀಕರಣ: ಕಿಚ್ಚನ ಹೊಸ ಲುಕ್ ರಿಲೀಸ್​..!​
news18
Updated: October 12, 2018, 2:06 PM IST
ನ್ಯೂಸ್​ 18 ಕನ್ನಡ ‘

ಮೆಗಾಸ್ಟಾರ್​ ಚಿರಂಜೀವಿ ಅವರ 151ನೇ ಸಿನಿಮಾವಾದ 'ಸೈರಾ ನರಸಿಂಹರೆಡ್ಡಿ' ಚಿತ್ರೀಕರಣ ಈಗ ಜಾರ್ಜಿಯಾದಲ್ಲಿ ನಡೆಯುತ್ತಿದೆ. ಇಲ್ಲಿ ಸಿನಿಮಾದ ಕ್ಲೈಮ್ಯಾಕ್ಸ್​ ಚಿತ್ರೀಕರಣ ನಡೆಯುತ್ತಿದ್ದು, ಇದರಲ್ಲಿ ಅಮಿತಾಭ್​, ಚಿರಂಜೀವಿ ಹಾಗೂ ವಿಜಯ್​ ಸೇತುಪತಿ ಸಹ ಭಾಗಿಯಾಗಿದ್ದಾರೆ.

ಈ ಕ್ಲೈಮ್ಯಾಕ್ಸ್​ ಚಿತ್ರೀಕರಣಕ್ಕೆ ಕನ್ನಡದ ಕಿಚ್ಚ ಸಹ ಇತ್ತೀಚೆಗೆ ಎಂಟ್ರಿಕೊಟ್ಟಿದ್ದು, ಅವರೂ ಭಾಗಿಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಜಾರ್ಜಿಯಾದಲ್ಲಿರುವ ಕಿಚ್ಚನ ಹೊಸ ಲುಕ್​ ಈಗ ಬಿಡುಗಡೆಯಾಗಿದೆ. ಹೌದು ನಟ ವಿಜಯ್​ ಸೇತುಪತಿ ಜತೆ ಉದ್ದುದ್ದ ಜುಟ್ಟು ಬಿಟ್ಟುಕೊಂಡಿರುವ ವಿಭಿನ್ನ ಕಿಚ್ಚನ್ನನ್ನು ನೋಡಬಹುದಾಗಿದೆ.

ಸೈರಾದಲ್ಲಿ ನಟ ಚಿರಂಜೀವಿ


18ನೇ ಶತಮಾನದ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ನಟ ಚಿರಂಜೀವಿ ಕಾಣಿಸಿಕೊಳ್ಳಲಿರುವ ಈ ಸಿನಿಮಾದ ಚಿತ್ರೀಕರಣಕ್ಕಾಗಿ ಜಾರ್ಜಿಯಾದಲ್ಲಿ ಒಂದು ನಗರವನ್ನೇ ಕಟ್ಟಲಾಗಿದೆ. ಹೌದು ಈಸ್ಟ್​ ಇಂಡಿಯಾ ಕಂಪೆನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ನಡುವಿನ ಕನದದ ಚಿತ್ರೀಕರಣಕ್ಕಾಗಿ ಸುಮಾರು 2,300 ಕಲಾವಿದರು ಹಾಗೂ ಇತರೆ ಸಿಬ್ಬಂದಿಗಳಿಗಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆಯಂತೆ.

ರಾಮ್​ಚರಣ್​ ನಿರ್ಮಿಸುತ್ತಿರುವ ಈ ಸಿನಿಮಾವನ್ನು ಸುರೇಂದರ್​ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ನಿನ್ನೆ (ಅ.11)ರಂದು ಅಮಿತಾಭ್​ ಹುಟ್ಟುಹಬ್ಬಕ್ಕಾಗಿ ವಿಶೇಷವಾಗಿ ಅಮಿತಾಭ್​ ಅವರ ಫಸ್ಟ್​ ಲುಕ್​ ಮೋಷನ್​ ಪೋಸ್ಟರ್​ ಅನ್ನು ಬಿಡುಗಡೆ ಮಾಡಿತ್ತು ಸಿನಿ ತಂಡ.
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...