ಸಲ್ಮಾನ್ ಖಾನ್​ ಜತೆ ತೆರೆ ಹಂಚಿಕೊಳ್ಳಲಿರುವ ಕಿಚ್ಚ ಸುದೀಪ್​!

news18
Updated:July 18, 2018, 4:59 PM IST
ಸಲ್ಮಾನ್ ಖಾನ್​ ಜತೆ ತೆರೆ ಹಂಚಿಕೊಳ್ಳಲಿರುವ ಕಿಚ್ಚ ಸುದೀಪ್​!
news18
Updated: July 18, 2018, 4:59 PM IST
ನ್ಯೂಸ್​ 18 ಕನ್ನಡ

ಕಿಚ್ಚಾ ಸುದೀಪ್ ಸದ್ಯ ಸ್ಯಾಂಡಲ್‍ವುಡ್‍ನಲ್ಲಷ್ಟೇ ಅಲ್ಲದೆ ಪರ ಭಾಷಾ ಚಿತ್ರಗಳಲ್ಲೂ ಫುಲ್ ಬ್ಯುಸಿಯಾಗಿರೊ ನಾಯಕ ನಟ. ಕನ್ನಡ , ತೆಲುಗಿನಲ್ಲಿ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿರೋ ಸುದೀಪ್ , ಬಾಲಿವುಡ್‍ಗೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ.

2008ರಲ್ಲಿ ಬಾಲಿವುಡ್‍ನ 'ಫೂಂಕ್' ಚಿತ್ರದಲ್ಲಿ ಅಭಿನಯಿಸಿದ್ದ ಕಿಚ್ಚ ಸುದೀಪ್ ಇದೀಗ ಮತ್ತೊಮ್ಮೆ ಬಾಲಿವುಡ್‍ಗೆ ಎಂಟ್ರಿಕೊಡುತ್ತಿದ್ದಾರೆ. 'ದಬಂಗ್ 3' ಚಿತ್ರದಲ್ಲಿ ಸುದೀಪ್ ಅಭಿನಯಿಸೋದು ಖಚಿತವಾಗಿದೆ.

ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಸುದೀಪ್​, ಈಗಾಗಲೇ ಕಾಲ್‍ಶೀಟ್ಸ್ ಕೂಡ ನೀಡಿದ್ದಾರೆ. ಈ ಸಿನಿಮಾವನ್ನ ಪ್ರಭುದೇವ ನಿರ್ದೇಶನ ಮಾಡುತ್ತಿದ್ದು, ಕಿಚ್ಚನ ಪಾತ್ರ ಹೇಗಿರಲಿದೆ ಎನ್ನುವುದರ ಬಗ್ಗೆ ಮಾಹಿತಿ ಇನ್ನು ತಿಳಿದು ಬಂದಿಲ್ಲ.

ಸುದೀಪ್ ಆಪ್ತ ಮೂಲದಿಂದಲೇ ಈ ಸುದ್ದಿ ಖಚಿತವಾಗಿದ್ದು, ಕನ್ನಡ ಮತ್ತು ತೆಲುಗು ಸಿನಿಮಾಗಳ ಚಿತ್ರೀಕರಣ ಮುಗಿದ ನಂತರ ಅಂದರೆ, ಡಿಸೆಂಬರ್ ತಿಂಗಳ ಕೊನೆ ವಾರದಲ್ಲಿ ಸುದೀಪ್ ಬಾಲಿವುಡ್‍ಗೆ ಪ್ರಯಾಣ ಬೆಳೆಸಲಿದ್ದಾರೆ.

 
First published:July 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ