ಮತ್ತೊಂದು ತೆಲುಗು ಸಿನಿಮಾದಲ್ಲಿ ಕಿಚ್ಚ: ಮೆಗಾಸ್ಟಾರ್​ ಜತೆ ತೆರೆ ಹಂಚಿಕೊಳ್ಳಲಿರುವ ಸುದೀಪ್​!

news18
Updated:July 11, 2018, 12:51 PM IST
ಮತ್ತೊಂದು ತೆಲುಗು ಸಿನಿಮಾದಲ್ಲಿ ಕಿಚ್ಚ: ಮೆಗಾಸ್ಟಾರ್​ ಜತೆ ತೆರೆ ಹಂಚಿಕೊಳ್ಳಲಿರುವ ಸುದೀಪ್​!
news18
Updated: July 11, 2018, 12:51 PM IST
ನ್ಯೂಸ್​ 18 ಕನ್ನಡ 

ಕಿಚ್ಚಾ ಸುದೀಪ್ ಚಂದನವನದ ಬಹು ಬೇಡಿಕೆಯ ನಟ. ಸ್ಯಾಂಡಲ್‍ವುಡ್‍ನಿಂದ ಹಿಡಿದು ಹಾಲಿವುಡ್​ವರೆಗೂ ತನ್ನ ನಟನಾ ಕೌಶಲ್ಯವನ್ನು ಮೆರೆದಿರೋ ಸುದೀಪ್ ಟಾಲಿವುಡ್‍ನಲ್ಲೂ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಷ್ಟೆ ಯಾಕೆ ಬಾಹುಬಲಿ ನಂತರ ಇದೀಗ ಮತ್ತೊಂದು ತೆಲುಗು ಸಿನಿಮಾದಲ್ಲಿ ಕಿಚ್ಚ ಅಭಿನಯಿಸೋದು ಪಕ್ಕಾ ಆಗಿದೆ.

ಕನ್ನಡದ 'ಪೈಲ್ವಾನ್', 'ಕೋಟಿಗೊಬ್ಬ 3' ಸೇರಿದಮತೆ ತನ್ನದೇ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿರೋ ಕಿಚ್ಚಾ ಸುದೀಪ್, ಇದರ ನಡುವೆಯೆ ತೆಲುಗಿನ ದೊಡ್ಡ ಬಜೆಟ್​ನ ಚಿತ್ರವೊಂದಕ್ಕೆ ಹಸಿರು ನಿಶಾನೆ ನೀಡಿದ್ದಾರೆ. ಅದು ಬೇರೆ ಯಾವುದೂ ಅಲ್ಲ ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಸಿನಿಮಾ.

ಸೈರಾ ನರಸಿಂಹ ರೆಡ್ಡಿ ಸಿನಿಮಾದ ಸ್ಟಿಲ್ಸ್​ ನೋಡಲು ಈ ಲಿಂಕ್​ ಕ್ಲಿಕ್​ ಮಾಡಿ

https://kannada.news18.com/photogallery/amitabh-bachhan-and-chiranjeevi-is-sharing-a-screen-for-the-first-time-in-telugu-movie-syeraa-narasimha-reddy-24963.html

'ಸೈರಾ ನರಸಿಂಹಾ ರೆಡ್ಡಿ' ಚಿತ್ರದಲ್ಲಿ ಅಭಿನಯಿತ್ತಿರೋದನ್ನ ಖಚಿತಪಡಿಸಿರುವ ಕಿಚ್ಚ ಸುದೀಪ್, ಈ ಖುಷಿಯ ವಿಚಾರವನ್ನ ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗೇ  ಈ ಸಿನಿಮಾದಲ್ಲಿ ಅಭಿನಯಿಸಲು ಬಹಳ ಕಾತರರಾಗಿರುವುದಾಗಿ ಬರೆದುಕೊಂಡಿದ್ದಾರೆ.

 
Loading...




'ಸೈರಾ ನರಸಿಂಹ ರೆಡ್ಡಿ' ಚಿತ್ರವು ಐತಿಹಾಸಿಕ ಸಿನಿಮಾವಾಗಿದ್ದು, ಕೋಟಿ ಬಜೆಟ್​ನಲ್ಲಿ ಚಿತ್ರ ತಯಾರಾಗುತ್ತಿದೆ. ಸುರೇಂಧರ್ ರೆಡ್ಡಿ ಚಿತ್ರಕ್ಕೆ ನಿರ್ದೇಶನದ ಈ ಸಿನಿಮಾದಲ್ಲಿ ಸುದೀಪ್ ಪಾಲಿನ ಚಿತ್ರೀಕರಣ ಆದಷ್ಟು ಬೇಗ ನಡೆಯಲಿದೆಯಂತೆ.

 

 
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...