ಹಾಲಿವುಡ್​ ಸಾಹಸ ನಿರ್ದೇಶನೊಂದಿಗೆ ಕೆಲಸ ಮಾಡಲಿರುವ ಕಿಚ್ಚ ಸುದೀಪ್​!

news18
Updated:July 18, 2018, 12:52 PM IST
ಹಾಲಿವುಡ್​ ಸಾಹಸ ನಿರ್ದೇಶನೊಂದಿಗೆ ಕೆಲಸ ಮಾಡಲಿರುವ ಕಿಚ್ಚ ಸುದೀಪ್​!
news18
Updated: July 18, 2018, 12:52 PM IST
ನ್ಯೂಸ್​ 18 ಕನ್ನಡ 

ಈಗಾಗಲೇ ಹಾಲಿವುಡ್​ ಸಿನಿಮಾ 'ದ ರೈಸನ್​'ನಲ್ಲಿ ಅಭಿನಯಿಸಿರುವ ಕನ್ನಡದ ಕಿಚ್ಚ ಸುದೀಪ್​, ಈಗ ಹಾಲಿವುಡ್​ನ ಖ್ಯಾತ್​ ಸಾಹಸ ನಿರ್ದೇಶಕ ಗ್ರೆಗ್​​ ಪಾವೆಲ್​ ಅವರೊಂದಿಗೆ ಕೆಲಸ ಮಾಡಲಿದ್ದಾರೆ.

ಹೌದು ಈ ವಿಷಯ ನಿಜ. ಕಾರಣ ಸುದೀಪ್​ ಅವರೇ ಖುದ್ದು ತನ್ನ ಟ್ವಿಟರ್​ನಲ್ಲಿ ಈ ಕುರಿತಾಗಿ ಬರೆದುಕೊಂಡಿದ್ದಾರೆ. ಹಾಲಿವುಡ್​ನ ಸ್ಟಂಟ್ ಮಾಸ್ಟರ್ ಪಾವೆಲ್ ಜೊತೆ ಕೆಲಸ ಮಾಡಲಿರುವ ಖುಷಿಯನ್ನ ಕಿಚ್ಚ ಹಂಚಿಕೊಂಡಿದ್ದಾರೆ.

'ಹಾಲಿವುಡ್​ನಲ್ಲಿ 'ಹ್ಯಾರಿ ಪಾಟರ್', 'ಸ್ಕೈ ಫಾಲ್', 'ಫಾಸ್ಟ್​ ಆ್ಯಂಡ್​ ಫ್ಯೂರಿಯಸ್​ 6' ಸೇರಿದಂತೆ ಹಲವು ಹಿಟ್​ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಪಾವೆಲ್ ಲಂಡನ್​ ಮೂಲದ ಸ್ಟಂಟ್ ಮಾಸ್ಟರ್. 'ವಿಲನ್' ಚಿತ್ರಕ್ಕಾಗಿ ಪಾವೆಲ್ ಜೊತೆ ಕೆಲಸ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ 'ಸೈರಾ ನರಸಿಂಹರೆಡ್ಡಿ'  ಚಿತ್ರದ ಮೂಲಕ ಅವರೊಡನೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಅದಕ್ಕಾಗಿ ಕಾತುರನಾಗಿದ್ದೇನೆ' ಸುದೀಪ್​ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.


Loading...'ಸೈರಾ ನರಸಿಂಹರೆಡ್ಡಿ' ಚಿರಂಜೀವಿ ಅಭಿನಯದ 151ನೇ ಸಿನಿಮಾ. ಇದರಲ್ಲಿ ಅಮಿತಾಭ್​ ಬಚ್ಚನ್​ ಅವರು ಅಭಿನಯಿಸುತ್ತಿದ್ದು, ಸುದೀಪ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

 
First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...