HOME » NEWS » Entertainment » SUDEEP HIM SELF HAS DONE DUBBING IN FOUR LANGUAGES FOR PAILWAAN MOVIE AE

Pailwaan: ನಾಲ್ಕು ಭಾಷೆಗಳಲ್ಲಿ ತಾವೇ ಕಂಠದಾನ ಮಾಡಿದ ಕಿಚ್ಚ: ಸುದೀಪ್​ಗೆ ಡಬ್​ ಮಾಡುವಾಗ ಕಷ್ಟ-ಇಷ್ಟವಾದ ಭಾಷೆ ಯಾವುದು ಗೊತ್ತಾ..?

Pailwaan: ದೊಡ್ಡ ತಾರಾಬಳಗ, ಅದ್ದೂರಿ ಸೆಟ್​ ಹಾಗೂ ಭಾರೀ ಬಜೆಟ್​ನಿಂದ ನಿರ್ಮಾಣಗೊಂಡಿರುವ ಪೈಲ್ವಾನ್​ ಸಿನಿಮಾದಲ್ಲಿ ಒಂದು ವಿಶೇಷ ಇದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ನಾಲ್ಕು ಭಾಷೆಗಳಲ್ಲಿ ಸುದೀಪ್​ ಅವರ ಕಂಠವನ್ನೇ ಕೇಳಬಹುದಾಗಿದೆ. ಈ ವಿಷಯವನ್ನು ಖುದ್ದು ಕಿಚ್ಚ ಟ್ವಿಟರ್​ ಲೈವ್​ನಲ್ಲಿ ಹೇಳಿಕೊಂಡಿದ್ದಾರೆ. 

Anitha E | news18-kannada
Updated:September 9, 2019, 9:06 AM IST
Pailwaan: ನಾಲ್ಕು ಭಾಷೆಗಳಲ್ಲಿ ತಾವೇ ಕಂಠದಾನ ಮಾಡಿದ ಕಿಚ್ಚ: ಸುದೀಪ್​ಗೆ ಡಬ್​ ಮಾಡುವಾಗ ಕಷ್ಟ-ಇಷ್ಟವಾದ ಭಾಷೆ ಯಾವುದು ಗೊತ್ತಾ..?
ಪೈಲ್ವಾನ್​ ಸಿನಿಮಾ ಪೋಸ್ಟರ್
  • Share this:
- ಅನಿತಾ ಈ, 

ಕಿಚ್ಚ ಸುದೀಪ್​ ಅಭಿನಯದ 'ಪೈಲ್ವಾನ್'​ ಸಿನಿಮಾ ಬಿಡುಗಡೆಗೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿವೆ. ಐದು ಭಾಷೆಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರ ಕುರಿತಂತೆ ಒಂದೊಂದೇ ಹೊಸ ವಿಷಯಗಳು ಬಹಿರಂಗವಾಗುತ್ತಿವೆ.

ಹೌದು, ದೊಡ್ಡ ತಾರಾಬಳಗ, ಅದ್ದೂರಿ ಸೆಟ್​ ಹಾಗೂ ಭಾರೀ ಬಜೆಟ್​ನಿಂದ ನಿರ್ಮಾಣಗೊಂಡಿರುವ 'ಪೈಲ್ವಾನ್​' ಸಿನಿಮಾದಲ್ಲಿ ಒಂದು ವಿಶೇಷ ಇದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ನಾಲ್ಕು ಭಾಷೆಗಳಲ್ಲಿ ಸುದೀಪ್​ ಅವರ ಕಂಠವನ್ನೇ ಕೇಳಬಹುದಾಗಿದೆ. ಈ ವಿಷಯವನ್ನು ಖುದ್ದು ಕಿಚ್ಚ ಟ್ವಿಟರ್​ ಲೈವ್​ನಲ್ಲಿ ಹೇಳಿಕೊಂಡಿದ್ದಾರೆ.

At the Blue room n Wil be Goin live on Twitter in jus a bit.... Keep sending ur questions by using #AskPailwaan...
ಹೌದು, ಕಿಚ್ಚ ಸುದೀಪ್​, ತಮ್ಮ ಪಾತ್ರಕ್ಕೆ ನಾಲ್ಕು ಭಾಷೆಗಳಲ್ಲಿ ತಾವೇ ಡಬ್​ ಮಾಡಿದ್ದಾರೆ. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳಿನಲ್ಲಿ ಸುದೀಪ್​ ಡೈಲಾಗ್​ ಹೇಳುವುದನ್ನು ಕೇಳಬಹುದಾಗಿದೆ.

ಇದನ್ನೂ ಓದಿ: ಕನ್ನಡ ಸಿನಿಮಾ 'ಪೈಲ್ವಾನ್​' ಟಿಕೆಟ್​ ಬುಕಿಂಗ್​ಗೆ ಸಿಕ್ಕಿದೆ ಕಿಕ್​ ಸ್ಟಾರ್ಟ್​

ಕನ್ನಡಕ್ಕೆ ಸದಾ ಮೊದಲ ಆದ್ಯತೆ ನೀಡುವ ಕಿಚ್ಚನಿಗೆ ಈ ಸಿನಿಮಾದಲ್ಲಿ ಡಬ್​ ಮಾಡುವಾಗ ತೆಲುಗು ಡೈಲಾಗ್ಸ್​ ಹೇಳುವಾಗ ಎಂಜಾಯ್​ ಮಾಡಿದ್ದರಂತೆ. 'ಕನ್ನಡ ನಮ್ಮ ಭಾಷೆ ಹೀಗಾಗಿ ಅದು ತುಂಬಾ ಸುಲಭ, ಆದರೆ ಏಕಾಗ್ರತೆಯಿಂದ ಡೈಲಾಗ್​ ಹೇಳುವುದನ್ನು ಮತ್ತಷ್ಟು ಚೆನ್ನಾಗಿ ಮಾಡಬಹುದು. ಆದರೆ ನನಗೆ ತಮಿಳು ಡಬ್ಬಿಂಗ್​ ತುಂಬಾ ಸುಲಭವಾಗಿತ್ತು. ಕಷ್ಟವಾಗಿದ್ದು ಮಾತ್ರ ಹಿಂದಿಯಲ್ಲಿ ಮಾಡಿದ ಕಂಠದಾನ. ಕಾರಣ ದಕ್ಷಿಣ ಭಾರತದ ಭಾಷೆಗಳ ಪ್ರಭಾವ ತುಂಬಾ ಆಗುತ್ತದೆ. ಇದರಿಂದಾಗಿ ನನಗೆ ಹಿಂದಿ ಡಬ್ಬಿಂಗ್​ ಕಷ್ಟವಾಯಿತು. ಆದರೆ ಮಲಯಾಳಂ ಮಾತ್ರ ನಾನು ಪ್ರಯತ್ನಿಸಲು ಹೋಗಲೇ ಇಲ್ಲ' ಎಂದಿದ್ದಾರೆ ಕಿಚ್ಚ.

(10:02 ರಿಂದ 11:20ರ ವರೆಗಿನ ಆಡಿಯೋದಲ್ಲಿದೆ)


ನಾಲ್ಕೈದು ಭಾಷೆಗಳಲ್ಲಿ ಸರಾಗವಾಗಿ ಮಾತನಾಡುವ ಕಿಚ್ಚನಿಗೆ ಯಾವ ಭಾಷೆಯಲ್ಲಿ ಡೈಲಾಗ್​ ಹೇಳುವುದು ಕಷ್ಟ, ಯಾವುದು, ಸುಲಭ ಹಾಗೂ ಯಾವುದನ್ನು ಅವರು ಎಂಜಾಯ್​ ಮಾಡ್ತಾರೆ ಹಾಗೂ ಅದಕ್ಕೆ ಕಾರಣ ಏನು ಅನ್ನೋದನ್ನು ಅವರ ಮಾತಲ್ಲೆ ಕೇಳಿದಿರಿ. ಇನ್ನೂ ಅವರು ಹೇಳಿರುವ ಡೈಲಾಗ್​ ಅನ್ನು ಆಯಾ ಭಾಷೆಗಳಲ್ಲಿ ಕೇಳೋಕೆ ಇನ್ನೂ ನಾಲ್ಕು ದಿನ ಕಾಯಲೇಬೇಕು.

Shanvi Srivastava: ಹಾಟ್​ ಫೋಟೋಶೂಟ್​ಗೆ ಕ್ಯೂಟ್​ ಆಗಿ ಪೋಸ್​ ಕೊಟ್ಟ ಶಾನ್ವಿ..!


 
First published: September 8, 2019, 2:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories