Kiccha Sudeep: ವಿಕ್ರಾಂತ್​ ರೋಣ ಚಿತ್ರಕ್ಕಾಗಿ ದೆಹಲಿಗೆ ತೆರಳಿದ ಸುದೀಪ್, ಕುತೂಹಲ ಮೂಡಿಸಿದ ಕಿಚ್ಚನ ನಡೆ

ಬರೋಬ್ಬರಿ 13 ವರ್ಷಗಳ ನಂತರ ಸುದೀಪ್ ದೆಹಲಿಗೆ ತೆರೆಳಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರನ್ನು ಭೇಟಿ ಆಗಿದ್ದು, ಕಿಚ್ಚನ ಈ ನಡೆ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. 

ನಟ ಸುದೀಪ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನಟ ಸುದೀಪ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

  • Share this:
ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್​ ರೋಣ  (Vikrant Rona)​ ಸಿನಿಮಾದ ಟ್ರೈಲರ್ (Trailer)​ ಈಗಾಗಲೇ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಇದರ ನಡುವೆ ಚಿತ್ರತಂಡ ದೇಶದಾದ್ಯಂತ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. ಇದರ ಭಾಗವಾಗಿ ಚಿತ್ರದ ಹಾಡುಗಳನ್ನು, ಬಿಡುಗಡೆ ಮಾಡುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ರಾ..ರಾ.. ರಕ್ಕಮ್ಮ, ರಾಜಕುಮಾರಿ ಹಾಗೂ ಹೇ.. ಫಕೀರಾ ಸಾಂಗ್ ಸೂಪರ್ ಹಿಟ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರ ನಡುವೆ ಬರೋಬ್ಬರಿ 13 ವರ್ಷಗಳ ನಂತರ ಸುದೀಪ್ ದೆಹಲಿಗೆ ತೆರೆಳಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರನ್ನು ಭೇಟಿ ಆಗಿದ್ದಾರೆ. 

13 ವರ್ಷಗಳ ನಂತರ ಸುದೀಪ್ ದೆಹಲಿಗೆ ಬೇಟಿ ನೀಡಿದ ಕಿಚ್ಚ:

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ‘ ಚಿತ್ರ ಇದೇ ಜುಲೈ 28ರಂದು ಬಿಡುಗಡೆ ಆಗಲಿದೆ. ಹೀಗಾಗಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಸುದೀಪ್ ಬರೋಬ್ಬರಿ 13 ವರ್ಷಗಳ ನಂತರ ದೆಹಲಿಗೆ ಭೇಟಿ ನೀಡಿದ್ದಾರೆ. ‘ಈಗ‘ ಸಿನಿಮಾ ಮಾಡುವಾಗ ದೆಹಲಿಗೆ ಹೋಗಿದ್ದ ಸುದೀಪ್, ಬಳಿಕ ಇದೀಗ ವಿಕ್ರಾಂತ್ ರೋಣ ಚಿತ್ರಕ್ಕಾಗಿ ಮತ್ತೆ ದೆಹಲಿಗೆ ಹೋಗಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಕೆಲ ಸಮಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಪ್ರಹ್ಲಾದ್ ಜೋಶಿ ಜೊತೆ ಬೆಳಗಿನ ಉಪಹಾರ ಸವಿದಿದ್ದಾರೆ. ಈ ವೇಳೆ ಪ್ರಹ್ಲಾದ್ ಜೋಶಿ ಅವರು ಕಿಚ್ಚ ಸುದೀಪ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಪ್ರಹ್ಲಾದ್​ ಜೋಶಿ ಅವರೊಂದಿಗೆ ಕಿಚ್ಚ ಸುದೀಪ್


ಪ್ರಚಾರಕ್ಕಾಗಿ ದೆಹಲಿಗೆ ಹಾರಿರುವ ಕಿಚ್ಚ:

ಇನ್ನು, ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿದ್ದಾರೆ. ಇದಲ್ಲದೇ ಸುದೀಪ್ ದೆಹಲಿಯ ಇಂಡಿಯಾ ಗೇಟ್ ಗೂ ಭೇಟಿ ಕೊಟ್ಟಿದ್ದು, ಇಂದಿನಿಂದ ಉತ್ತರ ಭಾರತದಾದ್ಯಂತ ವಿಕ್ರಾಂತ್ ರೋಣ ಸಿನಿಮಾ ಪ್ರಚಾರ ಮಾಡಲಿದ್ದಾರಂತೆ. ಕೆಜಿಎಪ್ ಬಳಿಕ ಕನ್ನಡ‌ ಚಿತ್ರರಂಗದಿಂದ ಬರುತ್ತಿರೋ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಚಿತ್ರವಾಗಿದ್ದು, ಅನೂಪ್ ಭಂಡಾರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.ಚಿತ್ರವು ಜುಲೈ 28 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ: Vikrant Rona: ಅಲೆಮಾರಿ ಫಕೀರನಾದ ನಿರೂಪ್, ವಿಕ್ರಾಂತ್ ರೋಣ ಚಿತ್ರದ ಹೊಸ ಸಾಂಗ್​ ರಿಲೀಸ್

ವಿಕ್ರಾಂತ್ ರೋಣನ ಅಬ್ಬರ ಆರಂಭ:

ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿ ಅಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: Bigg Boss Kannada: ಬಿಗ್​ಬಾಸ್​ ಸೀಸನ್​ 9ರ ರಿಲೀಸ್​ ಡೇಟ್​ ಫಿಕ್ಸ್? ಲೀಕ್​ ಆಯ್ತು ಕಿಚ್ಚನ ಹೊಸ ಲುಕ್​

ಜುಲೈ 28ಕ್ಕೆ ಸಿನಿಮಾ ರಿಲೀಸ್​:

ವಿಕ್ರಾಂತ್ ರೋಣ ಈ ಸಿನಿಮಾವನ್ನು ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಈ ಚಿತ್ರದ ರಾ ರಾ ರಕ್ಕಮ್ಮ ಹಾಡು ಹಾಗೂ ಟ್ರೈಲರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಜುಲೈ 28ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಕಿಚ್ಚನ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದಲ್ಲದೇ ಇಂದು ಬಿಡುಗಡೆ ಆದ ಸಾಂಗ್​ ನೋಡಿದ ಮೇಲೆ ಪ್ರೇಕ್ಷಕರಲ್ಲಿ ಮತ್ತಷ್ಟು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.
Published by:shrikrishna bhat
First published: