ಇಲ್ಲಿ ಕಿಚ್ಚ, ಅಲ್ಲಿ ಪವರ್ ಸ್ಟಾರ್ ಹುಟ್ಟುಹಬ್ಬ; ಅಭಿಮಾನಿಗಳಿಗೆ ಇನ್ನಿಲ್ಲದ ಸಂಭ್ರಮ


Updated:September 2, 2018, 4:28 PM IST
ಇಲ್ಲಿ ಕಿಚ್ಚ, ಅಲ್ಲಿ ಪವರ್ ಸ್ಟಾರ್ ಹುಟ್ಟುಹಬ್ಬ; ಅಭಿಮಾನಿಗಳಿಗೆ ಇನ್ನಿಲ್ಲದ ಸಂಭ್ರಮ

Updated: September 2, 2018, 4:28 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಸೆಪ್ಟೆಂಬರ್​​.02): ಇವತ್ತು ಸ್ಯಾಂಡಲ್​ವುಡ್ ಜೊತೆಗೆ ಟಾಲಿವುಡ್​ನ ಅಭಿಮಾನಿಗಳಿಗೂ ಹಬ್ಬದ ವಾತಾವರಣ. ಇಲ್ಲಿ ಕರುನಾಡ ಕಿಚ್ಚ ಸುದೀಪ್ ಮತ್ತು ಅಲ್ಲಿ ಟಾಲಿವುಡ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸುದೀಪ್‌ 45, ಪವನ್‌ 47 ವಂಸತಕ್ಕೆ ಕಾಲಿಟ್ಟಿರುವ ಇಬ್ಬರು ಸ್ಟಾರ್​ಗಳು ವಿಶೇಷವಾಗಿ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಬರ್ತ್​ಡೇ ಮೂಡಿನಲ್ಲಿರುವ ಪವನ್‌ ಕಲ್ಯಾಣ್‌ ಮತ್ತು ಕಿಚ್ಚ ಸುದೀಪ್​​ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನ್ಮದಿನದಂದೇ ಪೈಲ್ವಾನ್ ಹಾಗೂ ಕೊಟ್ಟಿಗೊಬ್ಬ-3 ಚಿತ್ರತಂಡಗಳು ಟೀಸರ್ ರೀಲೀಸ್ ಮಾಡಿವೆ. ಈ ಮೂಲಕ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿವೆ.

ಸುದೀಪ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇಡೀ ದಿನ ಬೆಳಿಗ್ಗೆಯಿಂದ ಸಂಜೆಯತನಕ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ಧಾರೆ. ಯಾವುದೇ ಹಾರ, ಕೇಕ್, ಕಾಣಿಕೆ ಆಡಂಬರವಿಲ್ಲದೆ ಬರ್ತ್​ಡೇ ಆಚರಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಸುದೀಪ್ ದುಬಾರಿ ಉಡುಗೊರೆಗಳನ್ನು​ ತರುವುದು ಬೇಡ ಎಂದು ಅಭಿಮಾನಿಗಳಲ್ಲಿ ಮೊದಲೇ ಮನವಿ ಮಾಡಿದ್ದರು. ಅದರಂತೆಯೇ ಸುದೀಪ್​ ಮನವಿಗೆ ಅಭಿಮಾನಿಗಳು ಸ್ಪಂದಿಸಿದ್ದಾರೆ. ಕಿಚ್ಚನ ಹುಟ್ಟುಹಬ್ಬಕ್ಕಾಗಿಯೇ ವಿಶೇಷವಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಅದು ತೆಲುಗು ಮೆಗಸ್ಟಾರ್​​ ನೂತನ “ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಸುದೀಪ್ ರಗಡ್​ ಲುಕ್​ನಲ್ಲಿ​ ಕಾಣಿಸಿಕೊಳ್ಳುತ್ತಿರುವ ಪೋಸ್ಟರ್​ ಅನ್ನುವುದು ವಿಶೇಷ.

ಇನ್ನೊಂದೆಡೆ ಟಾಲಿವುಡ್​ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಕೂಡ ತಮ್ಮ ಹುಟ್ಟುಹಬ್ಬವನ್ನು ತೆಲುಗು ಚಿತ್ರರಂಗದಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಪವರ್ ಸ್ಟಾರ್ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾ ಅನೌನ್ಸ್​ ಮಾಡುತ್ತಿದ್ಧಾರೆ ಎನ್ನುವುದು ಸುದ್ದಿ.
Loading...

ಒಟ್ನಲ್ಲಿ ಕಿಚ್ಚ ಮತ್ತು ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಸ್ಟಾರ್ ಸೆಲೆಬ್ರಿಟಿಗಳು ಶುಭಾಶಯಗಳು ಕೋರಿದ್ದಾರೆ. ಇಬ್ಬರೊಂದಿಗೆ ಕೆಲಸ ಮಾಡಿದ ಅನುಭವವನ್ನು ಫೇಸ್ಬುಕ್ಕಿನಲ್ಲಿ ಸ್ಟಾರ್​ಗಳು ಹಂಚಿಕೊಂಡಿದ್ಧಾರೆ. ಟಾಲಿವುಡ್​ ದಿಗ್ಗಜರಂತೂ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ ಸಂದರ್ಭಗಳನ್ನು ನೆನಪಿಸಿಕೊಂಡು, 2 ಮಿಲಿಯನ್ಸ್​ ಟ್ವೀಟ್​ ಮಾಡುವ ಮೂಲಕ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಸದ್ಯ ಟ್ವಿಟರ್​ನಲ್ಲಿ ಪವನ್​​ ಹುಟ್ಟುಹಬ್ಬ ವಿಶ್​​ಗಳೇ ಟ್ರೆಂಡ್.

First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ