Pavitra Lokesh: ಪವಿತ್ರಾ ಲೋಕೇಶ್​ ವಿರುದ್ಧ ಸುಚೇಂದ್ರ ಪ್ರಸಾದ್ ಕಿಡಿ, ರಮ್ಯಾ ಕಷ್ಟ ಅರ್ಥ ಆಗುತ್ತೆ ಅಂದ ನಟ

Pavitra Lokesh: ಈ ಎಲ್ಲಾ ಸುದ್ದಿಗಳ ಮಧ್ಯೆ ಪವಿತ್ರಾ ಲೋಕೇಶ್​ ಪತಿ ಸುಚೇಂದ್ರ ಪ್ರಸಾದ್ ಮಾತ್ರ ಏನು ಮಾತನಾಡಿರಲಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಖಾಸಗಿ ಮಾಧ್ಯಮದ ಪ್ರತಿನಿಧಿಯೊಬ್ಬರ ಜೊತೆ ಮಾತನಾಡಿದ್ದು ಈ ಪ್ರಕರಣದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.  

ನಟ ಸುಚೇಂದ್ರ

ನಟ ಸುಚೇಂದ್ರ

  • Share this:
ನಟಿ ಪವಿತ್ರಾ ಲೋಕೇಶ್​ (Pavitra Lokesh) ನಟನೆಯ ವಿಚಾರದಿಂದ ಸ್ಯಾಂಡಲ್​ವುಡ್​ (Sandalwood) ಹಾಗು ಟಾಲಿವುಡ್​ (Tollywood) ಜನರ ಮನಗೆದ್ದವರು. ಆದರೆ ಇದೀಗ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ನಲ್ಲಿ ಅದೇ ಸುದ್ದಿ ಹರಿದಾಡುತ್ತಿದೆ.  ಟಾಲಿವುಡ್​ನ ಹೆಸರಾಂತ ನಟ ನರೇಶ್​ ಅವರ ಜೊತೆ ಪವಿತ್ರಾ ಲೋಕೇಶ್​ ಅವರ ಸಂಬಂಧದ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಈಗಷ್ಟೇ ನರೇಶ್​ ಅವರ ಪತ್ನಿ ರಮ್ಯಾ ಕೂಡ ಇಬ್ಬರ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಈ ಎಲ್ಲಾ ಸುದ್ದಿಗಳ ಮಧ್ಯೆ ಪವಿತ್ರಾ ಲೋಕೇಶ್​ ಪತಿ ಸುಚೇಂದ್ರ ಪ್ರಸಾದ್ ಮಾತ್ರ ಏನು ಮಾತನಾಡಿರಲಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಖಾಸಗಿ ಮಾಧ್ಯಮದ ಪ್ರತಿನಿಧಿಯೊಬ್ಬರ ಜೊತೆ ಮಾತನಾಡಿದ್ದು ಈ ಪ್ರಕರಣದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.  

ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುಚೇಂದ್ರ

ಈ ಬಗ್ಗೆ ಖಾಸಗಿ ಮಾಧ್ಯವಾದ ಪವರ್ ಟಿವಿ ಪ್ರತಿನಿಧಿ ಜೊತೆ ಮಾತನಾಡಿದ ಅವರು ನಿಜಕ್ಕೂ ಇದು ಬೇಸರದ ವಿಚಾರ. ನಾನು ಈ ಬಗ್ಗೆ ಅವರ ಜೊತೆ ಮಾತನಾಡಿದ್ದೇನೆ, ಆದರೆ ಆ ರೀತಿ ಏನಿಲ್ಲಾ ಎಂದು ವಾದ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಅಂದರೆ ಈ ಬಗ್ಗೆ ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್​ ಬಳಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಯಾರಿಗೋ ಅನ್ಯಾಯವಾಗುತ್ತಿರುವುದನ್ನ ನೋಡಲು ಸಾಧ್ಯವಾಗುತ್ತಿಲ್ಲ, ಕರುಳು ಹಿಂಡುತ್ತಿದೆ. ಅಸಹಾಯಕ ಸ್ಥಿತಿ ತಲುಪಿದೆ ಎಂದು ಮರುಗಿದ್ದಾರೆ.

ಇನ್ನು ರಮ್ಯಾ ಅವರ ಕಷ್ಟ ನನಗೆ ಅರ್ಥವಾಗುತ್ತದೆ. ನಾನು ಕೂಡ ಎನೂ ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ನನ್ನ ಮಕ್ಕಳಿಗೂ ಅರ್ಥ ಮಾಡಿಸಿದ್ದೇನೆ. ಆತನದ್ದು ಲಂಪಟ ಈಕೆಯದ್ದು ಲಪಟಾಯಿಸುವ ಬುದ್ದಿ ಎಂದು ಟಾಂಗ್ ಕೊಟ್ಟಿದ್ದಾರೆ. ಅಲ್ಲದೇ ಇದು ಮನೆಹಾಳು ಬುದ್ದಿ ಎಂದು ಪವಿತ್ರಾ ಲೋಕೇಶ್ ವಿರುದ್ದ ಕಿಡಿಕಾರಿದ್ದಾರೆ.  ಇನ್ನು ಇದು ಹೆಚ್ಚು ದಿನ ಇರುವುದಿಲ್ಲ. ನಾನು ಅವರ ಕೈನಲ್ಲಿ ನರಳಿದ್ದೇನೆ. ಈಗಲೇ ಭವಿಷ್ಯ ನುಡಿದ್ದೇನೆ. ಕೇವಲ 6 ತಿಂಗಳಿದು ಎಂದಿದ್ದಾರೆ.

ಇದನ್ನೂ ಓದಿ: ದೃಶ್ಯಂ ಸುಂದರಿ ಆರೋಹಿ ನಾರಾಯಣ್ ರಿಯಲ್ ಲೈಫ್​ನಲ್ಲಿ ಎಷ್ಟು ಸ್ಟೈಲಿಶ್​ ನೋಡಿ

ಪವಿತ್ರಾ ಲೋಕೇಶ್​ ವಿರುದ್ಧ ರಮ್ಯಾ ಕಿಡಿ 

ಇಂದು ನ್ಯೂಸ್​ 18 ಕನ್ನಡ ಪ್ರತಿನಿಧಿ ಜೊತೆ ಮಾತನಾಡಿದ್ದ ನರೇಶ್​ ಮೂರನೇ ಪತ್ನಿ ರಮ್ಯಾ ಪವಿತ್ರಾ ಲೋಕೇಶ್ ವಿರುದ್ದ ಕೆಂಡಕಾರಿದ್ದರು. ಪವಿತ್ರಾ ಲೋಕೇಶ್ ಒಂದು ಸಲ ನಮ್ಮ ಮನೆಗೆ ಬಂದಿದ್ಲು. ನಾನೇ  ನನ್ನ ಕೈಯಾರೆ ಬೆಳ್ಳಿ ತಟ್ಟೆಯಲ್ಲಿ  ಅನ್ನ ತುಪ್ಪದ ಊಟದ ಹಾಕಿದ್ದೆ. ನನ್ನ ಮನೆ ಬೆಳ್ಳಿ ತಟ್ಟೆಯನ್ನು ಪವಿತ್ರಾ ಲೋಕೇಶ್ ರಂಧ್ರ ಮಾಡ್ತಾಳೆ  ಅಂತ ನಾನು ಅನ್ಕೊಂಡಿರಲಿಲ್ಲ ಎಂದು ರಮ್ಯಾ ಪವಿತ್ರಾ ಲೋಕೇಶ್​ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಏನೇ ಆಗ್ಲೀ, ನರೇಶ್​ಗೆ ಡೈವೋರ್ಸ್ ಕೊಡಲ್ಲ ಅಂದ ರಮ್ಯಾ ರಘುಪತಿ

ಹಾಗೆಯೇ, ಇಷ್ಟು ದಿನ ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ ಈಗ ನನಗೆ ನನ್ನ ಗಂಡ ಡೈವೋರ್ಸ್ ಲೆಟರ್ ಕಳುಹಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ಡೈವೋರ್ಸ್ ಕೊಡೊದಿಲ್ಲ ನನ್ನ ಅತ್ತೆ ಹೇಳಿ ಹೋಗಿದ್ದಾರೆ ನಮ್ಮ ಮನೆಯೊಳಗೆ ಯಾವುದೇ ದುಷ್ಟ ಶಕ್ತಿ ಬರಬಾರದು ಅಂತ ಎಂದಿದ್ದಾರೆ.  ನನ್ನ ಗಂಡನ ಹೆಸರು ಪವಿತ್ರಾ ಲೋಕೇಶ್ ಅಷ್ಟೇ ಅಲ್ಲ ಇನ್ನು 6-7 ಜನರ ಜೊತೆ ಕೇಳಿ ಬಂದಿದೆ ಎಂದಿರುವ ಅವರು ಈ ಮೊದಲು ಸಹ ನರೇಶ್​ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದರು.
Published by:Sandhya M
First published: