• Home
  • »
  • News
  • »
  • entertainment
  • »
  • TV Celebrities: ಚಿಕ್ಕ ವಯಸ್ಸಿನಲ್ಲಿಯೇ ಕನಸಿನ ಬಂಗಲೆ ಖರೀದಿಸಿದ ಕಿರುತೆರೆ ಸೆಲೆಬ್ರಿಟಿಗಳಿವರು

TV Celebrities: ಚಿಕ್ಕ ವಯಸ್ಸಿನಲ್ಲಿಯೇ ಕನಸಿನ ಬಂಗಲೆ ಖರೀದಿಸಿದ ಕಿರುತೆರೆ ಸೆಲೆಬ್ರಿಟಿಗಳಿವರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಯುವ ಕಿರುತೆರೆ ಸೆಲೆಬ್ರೆಟಿಗಳು ಉತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಸಿನಿಮಾ ಉದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಕಿರುತೆರೆ ಸೆಲೆಬ್ರೆಟಿಗಳಲ್ಲಿ ಪ್ರಮುಖರಾದ ಅಶ್ನೂರ್ ಕೌರ್, ಜನ್ನತ್ ಜುಬೇರ್, ತೇಜಸ್ವಿ ಪ್ರಕಾಶ್, ಅವನೀತ್ ಕೌರ್ ಮತ್ತು ಹಲವಾರು ಯುವ ಸೆಲೆಬ್ರಿಟಿಗಳು ತಮ್ಮ ಸ್ವಂತ ಅದ್ಧೂರಿ ಮನೆಗಳನ್ನು ಖರೀದಿ ಮಾಡಿದ್ದಾರೆ. ಅದರ ಕುರಿತು ಕಿರು ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

ಪ್ರತಿಯೊಬ್ಬರಿಗೂ ಕನಸಿನ ಮನೆ (Home) ನಿರ್ಮಿಸಬೇಕು, ದುಬಾರಿ ಕಾರು ಖರೀದಿಸಬೇಕು ಹೀಗೆ ಅನೇಕ ಕನಸುಗಳು ಇರುತ್ತವೆ. ಆಸೆಗಳಿಗೆ ಮಿತಿಯೇ ಇರುವುದಿಲ್ಲ. ಆದರೂ ಒಂದಿಷ್ಟು ಕನಸುಗಳನ್ನು (Dreams) ನನಸು ಮಾಡಿಕೊಳ್ಳಲು ಜೀವನದ ಕೊನೆಯವರೆಗೂ ಹೋರಾಡುತ್ತಲೆ ಇರಬೇಕಾಗುತ್ತದೆ. ಈ ಯುವ ಕಿರುತೆರೆ ಸೆಲೆಬ್ರೆಟಿಗಳು (Television celebrities) ಉತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಸಿನಿಮಾ ಉದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಕಿರುತೆರೆ ಸೆಲೆಬ್ರೆಟಿಗಳಲ್ಲಿ ಪ್ರಮುಖರಾದ ಅಶ್ನೂರ್ ಕೌರ್, ಜನ್ನತ್ ಜುಬೇರ್, ತೇಜಸ್ವಿ ಪ್ರಕಾಶ್, ಅವನೀತ್ ಕೌರ್ ಮತ್ತು ಹಲವಾರು ಯುವ ಸೆಲೆಬ್ರಿಟಿಗಳು ತಮ್ಮ ಸ್ವಂತ ಅದ್ಧೂರಿ ಮನೆಗಳನ್ನು ಖರೀದಿ ಮಾಡಿದ್ದಾರೆ. ಅದರ ಕುರಿತು ಕಿರು ಮಾಹಿತಿ ಇಲ್ಲಿದೆ.


ತೇಜಸ್ವಿ ಪ್ರಕಾಶ್
ಕೇವಲ 29 ವರ್ಷ ವಯಸ್ಸಿನ ಬಿಗ್ ಬಾಸ್ 15 ರ ವಿಜೇತೆ ತೇಜಸ್ವಿ ಪ್ರಕಾಶ್ ಅವರು ಇತ್ತೀಚೆಗೆ ಗೋವಾದಲ್ಲಿ ಅದ್ದೂರಿ ಬೀಚ್ ಮನೆಯನ್ನು ಖರೀದಿಸುವ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದಾರೆ. ಸಿನಿಮಾ ಉದ್ಯಮದಲ್ಲಿ ದುಡಿದು ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುತ್ತಿದ್ದಾಳೆ.




ಇದನ್ನೂ ಓದಿ: Sreenath Bhasi: ಆಕ್ಷೇಪಾರ್ಹ ಪ್ರಶ್ನೆ ಕೇಳಿದ ಆ್ಯಂಕರ್, ವಿರೋಧಿಸಿದ ಸೌತ್ ನಟ ಅರೆಸ್ಟ್


“ಬಿಗ್ ಬಾಸ್ 15 ರ ನಂತರ, ತೇಜಸ್ವಿಯು ಐಷಾರಾಮಿ ಆಡಿ ಕಾರನ್ನು ಖರೀದಿ ಮಾಡಿದ್ದರು. ಈಗ ಗೋವಾದಲ್ಲಿ ಒಂದು ಅದ್ದೂರಿ ಮನೆಯನ್ನು ಖರೀದಿ ಮಾಡಿದ್ದಾರೆ" ಎಂದು ತೇಜಸ್ವಿ ಅವರ ಗೆಳೆಯ ಕರಣ್ ಕುಂದ್ರಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಟೊದ ಮೂಲಕ ಈ ಸುದ್ದಿ ಖಚಿತವಾಗಿದೆ.


ಜನ್ನತ್ ಝುಬೈರ್
ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ. ಸೆನ್ಸೇಷನ್ ಸ್ಟಾರ್ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. 21 ವರ್ಷದ ಈ ನಟಿ ಅಚ್ಚರಿ ಪಡುವ ಹಾಗೆ ಬೆಳೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಈಕೆಯ ಯಶಸ್ಸಿನ ಪಯಣ ಅನೇಕರಿಗೆ ಸ್ಫೂರ್ತಿ.


ಸ್ಟಂಟ್ ಆಧಾರಿತ ರಿಯಾಲಿಟಿ ಶೋ ಖತ್ರೋನ್ ಕೆ ಖಿಲಾಡಿ 12 ನಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ನಟಿ ಇತ್ತೀಚೆಗೆ ಹಂಚಿಕೊಂಡ ಕೆಲವು ಪೋಟೊಗಳು ಆಕೆಯ ಹೊಸ ಮನೆಯ ಪೋಟೊಗಳಾಗಿವೆ. ಪೋಟೊಗಳ ಸರಣಿಯನ್ನು ಹಂಚಿಕೊಳ್ಳುತ್ತಿರುವಾಗ, ಅವರು ಕನಸುಗಳು ನನಸಾಗುತ್ತಿವೆ ಎಂದು ಶಿರ್ಷಿಕೆ ನೀಡಿದ್ದಾರೆ.


ಅಶ್ನೂರ್ ಕೌರ್
ಹಿಂದಿ ಕಿರುತೆರೆ ಖ್ಯಾತಿಯ ಅಶ್ನೂರ್ ಕೂಡ ಅದ್ದೂರಿ ಮನೆ ಹೊಂದುವ ಕನಸನ್ನು ಈಗಾಗಲೇ ನನಸಾಗಿಸಿಕೊಂಡಿದ್ದಾರೆ. ಪಟಿಯಾಲಾ ಬೇಬ್ಸ್‌ನಲ್ಲಿನ ಪಾತ್ರಕ್ಕೆ ಹೆಸರು ಮಾಡಿರುವ 18 ವರ್ಷದ ಈ ನಟಿ, ದುಬಾರಿ ವಸ್ತುಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದಕ್ಕೆ ಅವರು ಐಷಾರಾಮಿ ಕಾರನ್ನು ಸಹ ಹೊಂದಿರುವುದೇ ಸಾಕ್ಷಿ ಅಂತ ಹೇಳಬಹುದು.


ಅವನೀತ್ ಕೌರ್
ಅವನೀತ್ ಕೌರ್ ಚಿಕ್ಕ ವಯಸ್ಸಿನಲ್ಲೇ ತನ್ನದೇ ಆದ ಸಾಕಷ್ಟು ಸಂಪತ್ತನ್ನು ಹೊಂದಿದ್ದಾರೆ. 21 ವರ್ಷ ವಯಸ್ಸಿನ ಈಕೆಯು ಮುಂಬೈನಲ್ಲಿ ಐಷಾರಾಮಿ ಮನೆ ಮತ್ತು ರೇಂಜ್ ರೋವರ್‌ನಂತಹ ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಈ ನಟಿಯು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್‌ಗಳನ್ನು ಸಹ ಹೊಂದಿದ್ದಾರೆ.


ಆಶಿ ಸಿಂಗ್
ಅಲ್ಲಾದೀನ್: ನಾಮ್ ತೋ ಸುನಾ ಹೋಗಾ ಸಿನಿಮಾದ ನಟಿ ಆಶಿ ಅವರು ತಮ್ಮ ರಾಯಲ್‌ ಜೀವನವನ್ನು ಆನಂದಿಸುತ್ತಿದ್ದಾರೆ ಎಂಬುದು ಅವರು ಇತ್ತೀಚೆಗೆ ಹೊಸ ಮನೆಯನ್ನು ಖರೀದಿಸಿರುವುದರಿಂದ ತಿಳಿದು ಬಂದಿದೆ.


ಅವರು ತಮ್ಮ ಹೊಸ ಮನೆ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮನೆ ತನ್ನ ತಾಯಿಗೆ ಉಡುಗೊರೆ ಎಂದು ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಖಚಿತಪಡಿಸಿದ್ದಾರೆ. ಮೀತ್ ಪಾತ್ರದಲ್ಲಿ ನಟಿಸಿರುವ ಯುವ ನಟಿ ಹೊಸ ಮನೆ ಖರೀದಿಸಿ ತಮ್ಮ ಸ್ವಂತ ಮನೆಗೆ ಶಿಫ್ಟ್ ಆಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.


ರಣದೀಪ್ ರೈ
ಜನಪ್ರಿಯ TV ಶೋ "ಯೇ ಉನ್ ದಿನೋನ್ ಕಿ ಬಾತ್ ಹೈ" ನಲ್ಲಿ ಸಮೀರ್ ಪಾತ್ರವನ್ನು ನಿರ್ವಹಿಸುವ ರಣದೀಪ್ 2018 ರಲ್ಲಿ ಸ್ವತಃ ಹೊಸ ಮನೆಯನ್ನು ಖರೀದಿ ಮಾಡಿದರು. ಈ ನಟ ತನ್ನ Instagram ಖಾತೆಯಲ್ಲಿ ಹಂಚಿಕೊಂಡ ತನ್ನ ಐಷಾರಾಮಿ ಹೊಸ ಮನೆಯ ಪೋಟೊಕ್ಕೆ "APNA GHAR" ಎಂಬ ಶೀರ್ಷಿಕೆ ನೀಡಿದ್ದಾರೆ.


ಇದನ್ನೂ ಓದಿ:  Jungle Gym: ಸಿದ್ಧಾರ್ಥ್ ಮಲ್ಹೋತ್ರಾ ಜಂಗಲ್ ಜಿಮ್‌ ವರ್ಕೌಟ್ ವಿಡಿಯೋ ವೈರಲ್


ನಿಕ್ಕಿ ತಾಂಬೋಲಿ
ಬಿಗ್ ಬಾಸ್ 14 ರ ಖ್ಯಾತಿಯ ನಿಕ್ಕಿ ಮುಂಬೈನ ಅದ್ದೂರಿ ಮನೆಯ ಮಾಲೀಕರಾಗಿದ್ದಾರೆ. ಈ ನಟಿ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ಮನೆಯು ಸುಂದರವಾದ ನೋಟವನ್ನು ಹೊಂದಿದೆ.

Published by:Ashwini Prabhu
First published: