ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ಹ್ಯಾಂಡ್ ಸಮ್ ಹಂಕ್, ಸ್ಟಾರ್ ನಟ ದುಲ್ಕರ್ ಸಲ್ಮಾನ್ (Dulquer Salmaan) ಇತ್ತೀಚಿಗೆ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ ʼಸೀತಾ ರಾಮಂʼ ಚಿತ್ರದ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್-ಇಂಡಿಯನ್ ಸ್ಟಾರ್ ಆಗಿ ಕೂಡ ಹೊರಹೊಮ್ಮಿದ್ದಾರೆ. ಮಲಯಾಳಂ ನಟ (Malayalam actor) ಎಂದು ಗುರುತಿಸಿಕೊಂಡಿದ್ದ ದುಲ್ಕರ್ ಈಗ ಬಾಲಿವುಡ್, ಟಾಲಿವುಡ್ ನಲ್ಲೂ ತಮ್ಮ ಹವಾ ಸೃಷ್ಟಿಸಿದ್ದಾರೆ. ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಸೀತಾ ರಾಮಂ' (Sita Ramam) ತೆಲುಗು ಸಿನಿಮಾ ಈ ವರ್ಷದ ಟಾಪ್ ಸಿನಿಮಾ ಎನ್ನಬಹುದು. ಬಾಕ್ಸ್ ಆಫೀಸ್ನಲ್ಲಿ (BoxOffice) ಸಖತ್ ಮೋಡಿ ಮಾಡಿದ ಈ ಸಿನಿಮಾ ಓಟಿಟಿಯಲ್ಲೂ ಸದ್ದು ಮಾಡಿದೆ.
ಸೀತಾ ರಾಮಂ ಸಕ್ಸಸ್...ಹೆಚ್ಚಾಯ್ತು ದುಲ್ಕರ್ ಇಮೇಜ್
ವೈ. ಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿ. ಅಶ್ವಿನಿ ದತ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. 30 ಕೋಟಿ ರೂ. ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಗಲ್ಲಾ ಪೆಟ್ಟಿಗೆಯನ್ನು ಧೂಳೆಬ್ಬಿಸಿದೆ. ಸೀತಾ ರಾಮಂ ಚಿತ್ರದ ಮೂಲಕ ದುಲ್ಕರ್ ಸಿನಿಮಾ ಇಮೇಜ್ ಮತ್ತಷ್ಟು ಹೆಚ್ಚಾಗಿದ್ದು, ತೆಲುಗು, ಹಿಂದಿಯಲ್ಲಿ ಫುಲ್ ಡಿಮ್ಯಾಂಡ್ ಪಡೆದುಕೊಂಡಿದ್ದಾರೆ.
ಬಾಲಿವುಡ್, ಟಾಲಿವುಡ್ ನಲ್ಲೂ ಡಿಕ್ಯೂ ಹವಾ
ಮೂಲತಃ ಮಲಯಾಳಂ ನಟನಾಗಿರುವ ದುಲ್ಕರ್ ಈಗ ತೆಲುಗು ಮತ್ತು ಹಿಂದಿ ಚಿತ್ರ ನಿರ್ಮಾಪಕರಿಗೆ ಹಾಟ್ ಫೇವರಿಟ್ ಆಗಿದ್ದಾರೆ. ತೆಲುಗಿನ 'ಸೀತಾ ರಾಮಂ' ಮೂಲಕ ದೊಡ್ಡ ಯಶಸ್ಸನ್ನು ಪಡೆಯುವದರ ಜೊತೆ ಬಾಲಿವುಡ್ ಸೇರಿ ಎಲ್ಲಾ ಕಡೆ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಈ ನಟ.
ಇದನ್ನೂ ಓದಿ: Dhoomam: ಫಹಾದ್-ಅಪರ್ಣಾ ಜೊತೆ ಪವನ್ ಕುಮಾರ್ ಸಿನಿಮಾ ಧೂಮಂ ಶುರು!
ದುಲ್ಕರ್ ಅಭಿನಯದ ಹಿಂದಿ ಚುಪ್ ಚಿತ್ರ
ಸೀತಾ ರಾಮಂ ನಂತರ ದುಲ್ಕರ್ ಬಾಲಿವುಡ್ ನಲ್ಲಿ ಆರ್. ಬಾಲ್ಕಿ ನಿರ್ದೇಶನದ ಚುಪ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಚುಪ್ ಚಿತ್ರದಲ್ಲಿ ದುಲ್ಕರ್ ಜೊತೆ ಸನ್ನಿ ಡಿಯೋಲ್, ಶ್ರೇಯಾ ಧನ್ವಂತರಿ ಮತ್ತು ಪೂಜಾ ಭಟ್ ಕೂಡ ನಟಿಸಿದ್ದಾರೆ. ಈ ಚಿತ್ರವು ಒಂದು ಕುತೂಹಲಕಾರಿ ಕ್ರೈಮ್ ಥ್ರಿಲ್ಲರ್ ಮೂವಿಯಾಗಿದ್ದು, ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಕೂಡ ಮುಂದುವರಿಯುತ್ತಿದೆ. ಈ ಮೂಲಕ ದುಲ್ಕರ್ ಸಲ್ಮಾನ್ ಇಂದು ಭಾರತೀಯ ಚಿತ್ರರಂಗದ ದೊಡ್ಡ ಸ್ಟಾರ್ಗಳಲ್ಲಿ ಒಬ್ಬರಾಗಿದ್ದಾರೆ.
ದುಲ್ಕರ್ ಸಲ್ಮಾನ್ ತನಗೆ ನೀಡಿದ ಯಾವುದೇ ಪಾತ್ರವನ್ನು ಸಲೀಸಾಗಿ ನಿರ್ವಹಿಸುವ, ಜೀವ ತುಂಬುವ ನಟ. ಸಣ್ಣ ವಯಸ್ಸಿನಲ್ಲೇ ಮೊದಲ ಬಾರಿಗೆ ಜಾಹೀರಾತು ಒಂದಕ್ಕೆ ಕ್ಯಾಮರಾ ಮುಂದೆ ನಟಿಸಿದ ಈ ನಟ, ಬೆಳ್ಳಿತೆರೆ ಮೇಲೆ ಮಿಂಚುತ್ತಿರುವ ಟಾಪ್ ನಟ. ಅನೇಕ ವಿಭಿನ್ನ ಚಿತ್ರದ ಮೂಲಕ ದುಲ್ಕರ್ ಸಲ್ಮಾನ್ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಬಹುಭಾಷಾ ಪ್ರತಿಭೆ ಅವರ ಸಾದಾ-ಸೀದ ಗುಣಗಳಿಂದಲೇ ಚಲನಚಿತ್ರ ನಿರ್ಮಾಪಕರ ಮತ್ತು ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
ಇದನ್ನೂ ಓದಿ: Shivaji Surathkal: ಒಂದೇ ಸಿನಿಮಾ 4 ನಾಮಿನೇಷನ್! ಫಿಲ್ಮ್ ಫೇರ್ ಪ್ರಶಸ್ತಿಗೆ ಹೆಚ್ಚಿದ ಶಿವಾಜಿ ಸುರತ್ಕಲ್ ನಿರೀಕ್ಷೆ
ಚಾರ್ಲಿ, ಓಕೆ ಕಣ್ಮಣಿ, ಡೇಸ್ ಆಪ್ ಲವ್, ಉಸ್ತಾದ್ ಹೋಟೆಲ್, ಬೆಂಗಳೂರು ಡೇಸ್’ ‘ಕಮ್ಮಟ್ಟಿಪಾದಮ್’ ವರನೆ ಅವಶ್ಯಮುಂಡು’ ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟಿರುವ ದುಲ್ಕರ್ ಗೆ ಈಗ ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಹೆಚ್ಚು ಆಫರ್ ಬರುತ್ತಿವೆಯಂತೆ. ʼಸೀತಾ ರಾಮಂ ಚಿತ್ರದ ದೊಡ್ಡ ಸಕ್ಸಸ್ ಖುಷಿಯಲ್ಲಿರುವ ದುಲ್ಕರ್ ಸಲ್ಮಾನ್ ಹಲವು ಸಿನಿಮಾಗಳನ್ನು ಬತ್ತಳಿಕೆಯಲ್ಲಿ ಹೊಂದಿದ್ದಾರೆ. ಓತಿರಂ ಕದಕಮ್, ಕೋಥಾ ರಾಜ, ಸ್ಮಗ್ಲರ್ ಸೇರಿ ಹಲವು ಚಿತ್ರಗಳು ದುಲ್ಕರ್ ಅವರ ಮುಂಬರುವ ಪ್ರಾಜೆಕ್ಟ್ ಗಳಾಗಿವೆ. ಸದಾ ಡಿಫರೆಂಟ್ ಚಿತ್ರಗಳನ್ನು ನೀಡುವ ದುಲ್ಕರ್ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಯಾವಾಗಲೂ ಕಾತುರದಿಂದ ಕಾಯುತ್ತಿರುತ್ತಾರೆ ಎನ್ನೋದಂತೂ ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ