• Home
  • »
  • News
  • »
  • entertainment
  • »
  • Akshay Kumar: ಸಂಕಷ್ಟಕ್ಕೆ ಸಿಲುಕಿದ ಅಕ್ಷಯ್ ಕುಮಾರ್, ಸಿನಿಮಾ ವಿರುದ್ದ ಗುಡುಗಿದ ಸುಬ್ರಮಣಿಯನ್ ಸ್ವಾಮಿ

Akshay Kumar: ಸಂಕಷ್ಟಕ್ಕೆ ಸಿಲುಕಿದ ಅಕ್ಷಯ್ ಕುಮಾರ್, ಸಿನಿಮಾ ವಿರುದ್ದ ಗುಡುಗಿದ ಸುಬ್ರಮಣಿಯನ್ ಸ್ವಾಮಿ

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

Subramanian Swamy: ಈ ವಿಷಯದ ಬಗ್ಗೆ ಚಿತ್ರದ ನಿರ್ಮಾಪಕರಿಂದ ಪರಿಹಾರವನ್ನು ಕೇಳುವುದಾಗಿ ಸ್ವಾಮಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.  ಸುಬ್ರಮಣಿಯನ್ ಸ್ವಾಮಿ ಅವರು ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ.

  • Share this:

ಸಾಮಾಜಿಕ ಸಂದೇಶವನ್ನು (Social Message) ಹೊಂದಿರುವ ಚಲನಚಿತ್ರಗಳನ್ನು (Films)  ಮಾಡುವಲ್ಲಿ ನಟ ಅಕ್ಷಯ್ ಕುಮಾರ್ (Akshay Kumar) ಮುಂಚೂಣಿಯಲ್ಲಿರುತ್ತಾರೆ. ಆದರೆ ಸದ್ಯ ಅವರ ಚಿತ್ರವೊಂದರ ಕಾರಣದಿಂದ ವಿವಾದಕ್ಕೆ ಸಿಲುಕಿದ್ದಾರೆ. ಅವರ ಮುಂದಿನ ಸಿನಿಮಾ ರಾಮಸೇತು (Rama setu) ವಿಚಾರವಾಗಿ ಕಾನೂನು ಸಮಸ್ಯೆಗೆ ಸಿಲುಕಿದ್ದಾರೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy) ಅವರು, ಅಕ್ಷಯ್​ ಕುಮಾರ್ ತಮ್ಮ ಸಿನಿಮಾದಲ್ಲಿ ರಾಮಸೇತು ವಿಚಾರವನ್ನು ತಪ್ಪಾಗಿ ಚಿತ್ರಿಸಿದ್ದಾರೆ ಎಂದು ಆರೋಪಿಸಿ ನಟನ ವಿರುದ್ಧ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.


ಅಕ್ಷಯ್ ವಿರುದ್ದ ಸ್ವಾಮಿ ಕಿಡಿ


ಈ ವಿಷಯದ ಬಗ್ಗೆ ಚಿತ್ರದ ನಿರ್ಮಾಪಕರಿಂದ ಪರಿಹಾರವನ್ನು ಕೇಳುವುದಾಗಿ ಸ್ವಾಮಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.  ಸುಬ್ರಮಣಿಯನ್ ಸ್ವಾಮಿ ಅವರು ಈ ಬಗ್ಗೆ ಟ್ವೀಟ್​ ಮಾಡಿದ್ದು, ನಾನು ಈ ಸಿನಿಮಾ ವಿಚಾರವಾಗಿ ಪ್ರಕರಣ ದಾಖಲು ಮಾಡುತ್ತಿದ್ದೇನೆ. ಪರಿಹಾರದ ಮೊಕದ್ದಮೆಯನ್ನು ನನ್ನ ಸಹವರ್ತಿ ಸತ್ಯ ಸಬರ್ವಾಲ್ ಅಡ್ವ್ ಅಂತಿಮಗೊಳಿಸಿದ್ದಾರೆ. ನಾನು ಅಕ್ಷಯ್ ಕುಮಾರ್, ನಟ ಮತ್ತು ಕರ್ಮ ಮೀಡಿಯಾ ವಿರುದ್ದ ತಮ್ಮ ರಾಮಸೇತು ಸಿನಿಮಾದಲ್ಲಿ, ರಾಮಸೇತು ಬಗ್ಗೆ  ಸುಳ್ಳು ಮಾಹಿತಿ ನೀಡಿದ್ದಾರೆ. ಇದರಿಂದ ಉಂಟಾದ ಹಾನಿಗಾಗಿ ಮೊಕದ್ದಮೆ ಹೂಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ, ಫ್ರೆಂಡ್​ ಶಿಪ್​ ಮಹತ್ವ ಸಾರುವ ಕನ್ನಡ ಸಿನಿಮಾಗಳಿವು


ಸ್ವಾಮಿ ಅವರ ವಕೀಲ ಸತ್ಯ ಸಬರ್ವಾಲ್ ಅವರು ಸಹ ಈ ವಿಚಾರವನ್ನು ದೃಢಪಡಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ, “ರಾಮ ಸೇತುವನ್ನು ಆಧರಿಸಿದ ಚಲನಚಿತ್ರವನ್ನು ಕರ್ಮ ಮೀಡಿಯಾ ನಿರ್ಮಿಸಿದೆ, ಅಲ್ಲಿ ಡಾ. @ ಸ್ವಾಮಿ 39 ರ ಸುಪ್ರೀಂ ಕೋರ್ಟ್​ ಆದೇಶವನ್ನು ಪೋಸ್ಟರ್ ಆಗಿ ಬಳಸಲಾಗಿದೆ. ಹಾಗಾಗಿ ಇದರ ವಿರುದ್ದ ಮೊಕದ್ದಮೆ ದಾಖಲಿಸಲಾಗುವುದು.  ಡಾ. ಸ್ವಾಮಿ ಅವರ ಅರ್ಜಿಯಲ್ಲಿ ಪೋಸ್ಟರ್ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಆದೇಶವನ್ನು ಲಗತ್ತಿಸಲಾಗಿದೆ ಎಂದು ಬರೆದಿದ್ದಾರೆ.


ಸುಬ್ರಮಣಿಯನ್ ಸ್ವಾಮಿ ಅವರು ರಾಮಸೇತು ನಿರ್ಮಾಪಕರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, "ನಟ ಅಕ್ಷಯ್ ಕುಮಾರ್ ವಿದೇಶಿ ಪ್ರಜೆಯಾಗಿದ್ದರೆ ಅವರನ್ನು ಬಂಧಿಸಿ ಮತ್ತು ದೇಶದಿಂದ ಹೊರಹಾಕುವಂತೆ ನಾವು ಆಗ್ರಹಿಸಬಹುದು ಎಂದು ಅಕ್ಷಯ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಟ್ವೀಟ್​ ಮಾಡಿದ್ದಾರೆ.


ಅಕ್ಟೋಬರ್​ನಲ್ಲಿ ಸಿನಿಮಾ ರಿಲೀಸ್​


ರಾಮ್ ಸೇತು ಬಗ್ಗೆ ಹೇಳುವುದಾದರೆ, ಈ ಚಲನಚಿತ್ರವು ಮುಂಬರುವ ಆಕ್ಷನ್- ಡ್ರಾಮ ಸಿನಿಮಾವಾಗಿದ್ದು, ದಿ ಶೌಕೀನ್ಸ್ ನಿರ್ದೇಶಕ ಅಭಿಷೇಕ್ ಶರ್ಮಾ ಅವರು ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಅವರಲ್ಲದೆ, ಜಾಕ್ಲೀನ್ ಫರ್ನಾಂಡಿಸ್ ಮತ್ತು ನುಶ್ರತ್ ಭರುಚ್ಚ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಾಮಸೇತುವಿನ ಸ್ವರೂಪವನ್ನು ತನಿಖೆ ಮಾಡುವ ಪುರಾತತ್ವಶಾಸ್ತ್ರಜ್ಞರ ಬದುಕಿನ ಕಥೆಯನ್ನು ತೋರಿಸಲಾಗಿದೆ.


ಇದನ್ನೂ ಓದಿ: ವಿದೇಶದಲ್ಲಿ ರಾಕಿಭಾಯ್ ನೋಡಿ ಫ್ಯಾನ್ಸ್ ಖುಷ್, ಅಭಿಮಾನಿಗಳ ಜೊತೆ ಫೋಟೋ ಹಂಚಿಕೊಂಡ ಯಶ್​


ರಾಮಸೇತು ಅಕ್ಟೋಬರ್ 24, 2022 ರಂದು ಬಿಡುಗಡೆಯಾಗುತ್ತಿದೆ. ರಾಮಸೇತು ಹೊರತುಪಡಿಸಿ, ಅಕ್ಷಯ್ ಕುಮಾರ್ ರಕ್ಷಾ ಬಂಧನ, ಕತ್ಪುತ್ಲಿ, ಸೆಲ್ಫಿ, OMG 2  ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ, ಕ್ಯಾಪ್ಸುಲ್ ಗಿಲ್ ಮತ್ತು ಸೂರಿಯ ಸೂರರೈ ಪೊಟ್ರು ಚಿತ್ರದ ಶೀರ್ಷಿಕೆಯಿಲ್ಲದ ರಿಮೇಕ್​ ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ.

Published by:Sandhya M
First published: