ಕೋಟಿಗೊಬ್ಬ ಕಿಚ್ಚನ ಬೆನ್ನಟ್ಟಲಿದ್ದಾರೆ ಬಾಲಿವುಡ್​ ಸ್ಟೈಲಿಷ್ ಹೀರೋ..!

Kotigobba 3 : ಈ ಹಿಂದೆ ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಅವರ ಕತ್ತಿ ಚಿತ್ರದಿಂದ ನಾಯಕ-ಖಳನಾಟ ಪ್ರಾರಂಭವಾಗಿತ್ತು. ಕತ್ತಿ ಚಿತ್ರದಲ್ಲಿ ವಿಜಯ್​ಗೆ ಎದುರಾಳಿಯಾಗಿ ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಕಾಣಿಸಿಕೊಂಡಿದ್ದರು.

zahir | news18-kannada
Updated:August 5, 2019, 9:17 AM IST
ಕೋಟಿಗೊಬ್ಬ ಕಿಚ್ಚನ ಬೆನ್ನಟ್ಟಲಿದ್ದಾರೆ ಬಾಲಿವುಡ್​ ಸ್ಟೈಲಿಷ್ ಹೀರೋ..!
Kiccha sudeep
  • Share this:
ಬಾಲಿವುಡ್​ ಸಿನಿಮಾಗಳಲ್ಲಿ ಕನ್ನಡದ ನಟರು ವಿಲನ್ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದು ಹೊಸದೇನಲ್ಲ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ 'ದಬಂಗ್- 3' ಸಿನಿಮಾ. ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಚುಲ್​ಬುಲ್ ಪಾಂಡೆ ಸಲ್ಮಾನ್ ಖಾನ್​ ವಿರುದ್ಧ ಘರ್ಜಿಸಲಿದ್ದಾರೆ. ಇಲ್ಲಿನ ನಾಯಕರು ಬಾಲಿವುಡ್​ನಲ್ಲಿ ಖಳನಾಯಕರಾಗುತ್ತಿದ್ದರೆ, ಬಿಟೌನ್​ನ ಹೀರೋಗಳನ್ನು ದಕ್ಷಿಣ ಭಾರತದ ಚಿತ್ರಗಳಲ್ಲಿ ವಿಲನ್​ಗಳಾಗುತ್ತಿರುವ ಹೊಸ ಟ್ರೆಂಡ್​ವೊಂದು ಹುಟ್ಟಿಕೊಂಡಿದೆ.

ಈಗಾಗಲೇ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್​'ನಲ್ಲಿ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ನೆಗೆಟಿವ್ ಶೇಡ್ ಹೊಂದಿರುವ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಕಿಚ್ಚ ಅಭಿನಯದ ಮತ್ತೊಂದು ಚಿತ್ರದಲ್ಲಿ ಬಾಲಿವುಡ್​ ನಟನಿಗೆ ಬುಲಾವ್ ನೀಡಲಾಗಿದೆ.

ಅಫ್ತಾಬ್ ಶಿವದಾಸನಿ


ಅಭಿನಯದ ಚಕ್ರವರ್ತಿ ಅಭಿನಯ 'ಕೋಟಿಗೊಬ್ಬ-3' ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ತಾರೆ ಅಫ್ತಾಬ್ ಶಿವದಾಸನಿ ನಟಿಸಲಿರುವುದು ಪಕ್ಕಾ ಆಗಿದೆ. ಈ ಹಿಂದೆ ಅಫ್ತಾಬ್ ಕಿಚ್ಚನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ವರ್ಷಗಳ ಹಿಂದೆಯೇ ಇಂತಹದೊಂದು ಸುದ್ದಿ ಹುಟ್ಟಿಕೊಂಡರು ಬಳಿಕ ಯಾವುದೇ ಅಪ್​ಡೇಟ್​ಗಳು ಕೇಳಿ ಬಂದಿರಲಿಲ್ಲ.

ಅಫ್ತಾಬ್ ಶಿವದಾಸನಿ


ಇದೀಗ 'ಕೋಟಿಗೊಬ್ಬ-3' ರಲ್ಲಿ ಅಫ್ತಾಬ್ ಪೊಲೀಸ್ ಕಾಪ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಇಲ್ಲಿ ಬಾಲಿವುಡ್ ನಟನ ಪಾತ್ರವು ನೆಗೆಟಿವ್ ಶೇಡ್​ನಲ್ಲಿ ಇರಲಿದೆ ಎಂದು ಹೇಳಲಾಗಿದೆ. ಈಗಾಗಲೇ ಅಫ್ತಾಬ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ರೆಡಿಯಾಗಿದ್ದಾರಂತೆ. ಇಲ್ಲಿ ಸುದೀಪ್ ಹಣ ಲೂಟಿಕೋರನ ಪಾತ್ರದಲ್ಲಿ ಕಾಣಿಸಿಕೊಂಡರೆ, ದರೋಡೆಕೋರನ ಬೆನ್ನತ್ತುವ ಪಾತ್ರದಲ್ಲಿ ಅಫ್ತಾಬ್ ಎಂಟ್ರಿಯಾಗಲಿದ್ದಾರೆ.

ಅಫ್ತಾಬ್ ಶಿವದಾಸನಿ
ಮಸ್ತ್ ಚಿತ್ರದ ಮೂಲಕ ಬಾಲಿವುಡ್​ನಲ್ಲಿ ಹೀರೋ ಪಟ್ಟ ಅಲಂಕರಿಸಿದ್ದ ಅಫ್ತಾಬ್, ಕಸೂರ್, ಮಸ್ತಿ , ಗ್ರ್ಯಾಂಡ್ ಮಸ್ತಿ, ಸೆಟ್ಟರ್ಸ್​ ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದಾರೆ.

ಈ ಹಿಂದೆ ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಅವರ 'ಕತ್ತಿ' ಚಿತ್ರದಿಂದ ನಾಯಕ-ಖಳನಾಟ ಪ್ರಾರಂಭವಾಗಿತ್ತು. 'ಕತ್ತಿ' ಚಿತ್ರದಲ್ಲಿ ವಿಜಯ್​ಗೆ ಎದುರಾಳಿಯಾಗಿ ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಕಾಣಿಸಿಕೊಂಡಿದ್ದರು. ಇದರ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯ '2.0' ಚಿತ್ರದಲ್ಲಿ ಅಕ್ಷಯ್ ಕುಮಾರ್ ನೆಗೆಟಿವ್ ಶೇಡ್ ಹೊಂದಿರುವ ರೋಲ್​ನಲ್ಲಿ ಅಬ್ಬರಿಸಿದ್ದರು.

ಇನ್ನು ಮಲಯಾಳಂನಲ್ಲಿ ಮೋಹನ್ ಲಾಲ್ ಅಭಿನಯದ ಸೂಪರ್ ಡೂಪರ್ ಹಿಟ್ 'ಲೂಸಿಫರ್' ಚಿತ್ರದಲ್ಲಿ ವಿವೇಕ್ ಓಬೆರಾಯ್ ವಿಲನ್ ಅವತಾರದಲ್ಲಿ ಮಿಂಚಿದ್ದರು. ಇದೀಗ ಅಫ್ತಾಬ್, ಸುನೀಲ್ ಶೆಟ್ಟಿ ಸೇರಿದಂತೆ ಒಂದಷ್ಟು ಬಾಲಿವುಡ್​ನ ನಾಯಕ ನಟರುಗಳು ಕನ್ನಡದಲ್ಲಿ ವಿಲನ್ ಅವತಾರವೆತ್ತಲು ಅಣಿಯಾಗುತ್ತಿದ್ದಾರೆ.

ಒಟ್ಟಿನಲ್ಲಿ ಹೀರೋ-ವಿಲನ್ ಅವತಾರಗಳ ಬದಲಾವಣೆಯಿಂದ ಸಿನಿ ಪ್ರಿಯರಿಗಂತು ಭರಪೂರ ಮನರಂಜನೆಯಂತು ಸಿಗುತ್ತಿದೆ.

First published:August 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading