HOME » NEWS » Entertainment » STUNT MASTER SHIVA TEACHING STUNT TO DIRECTOR PREMS SON SOORYA

ನಿರ್ದೇಶಕ ಜೋಗಿ ಪ್ರೇಮ್​ರ ಮಗನ ಸ್ಟಂಟ್​ ಟ್ರೈನಿಂಗ್​ ಹೇಗಿದೆ ಗೊತ್ತಾ..?

ತಮಿಳಿನ ವೀರಂ, ವೇದಾಳಂನಂತರ ಸೂಪರ್​ಹಿಟ್​  ಸಿನಿಮಾಗೆ ಫೈಟ್ಸ್​ ಕೊರಿಯೋಗ್ರಾಫ್ ಮಾಡಿರುವ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕ ಸ್ಟಂಟ್ ಶಿವ ಕನ್ನಡದ ಏಕಲವ್ಯ ಚಿತ್ರದಲ್ಲಿ ಸಾಹಸ​ ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲೂ ಚಿತ್ರೀಕರಣದ ಸೆಟ್​ನಲ್ಲಿ ಪ್ರೇಮ್​ ಅವರ ಮಗ ಸೂರ್ಯನಿಗೆ ಸ್ಟಂಟ್​ ಹೇಳಿಕೊಡುತ್ತಿದ್ದಾರೆ.

Anitha E | news18
Updated:May 27, 2019, 6:09 PM IST
ನಿರ್ದೇಶಕ ಜೋಗಿ ಪ್ರೇಮ್​ರ ಮಗನ ಸ್ಟಂಟ್​ ಟ್ರೈನಿಂಗ್​ ಹೇಗಿದೆ ಗೊತ್ತಾ..?
ಜೋಗಿ ಪ್ರೇಮ್​ ಮಗ ಸೂರ್ಯ ಹಾಗೂ ಸ್ಟಂಟ್​ ಮಾಸ್ಟರ್ ಶಿವ
  • News18
  • Last Updated: May 27, 2019, 6:09 PM IST
  • Share this:
ನಿರ್ದೇಶಕ ಜೋಗಿ ಪ್ರೇಮ್ 'ದಿ ವಿಲನ್' ಬಳಿಕ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ 'ಏಕಲವ್ಯ'. ಈ ಚಿತ್ರದ ಮೂಲಕ ರಕ್ಷಿತಾ ಪ್ರೇಮ್ ಸಹೋದರ ರಾಣಾ ಸ್ಯಾಂಡಲ್‍ವುಡ್‍ಗೆ ನಾಯಕನಾಗಿ ಡೆಬ್ಯೂ ಮಾಡ್ತಿರೋದು ತಿಳಿದಿರುವ ವಿಷಯ.

'ತಮಿಳಿನ ವೀರಂ', 'ವೇದಾಳಂ'ನಂತರ ಸೂಪರ್​ಹಿಟ್​  ಸಿನಿಮಾಗೆ ಫೈಟ್ಸ್​ ಕೊರಿಯೋಗ್ರಾಫ್ ಮಾಡಿರುವ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕ ಸ್ಟಂಟ್ ಶಿವ ಈ ಚಿತ್ರಕ್ಕೆ ಫೈಟ್ಸ್ ನಿರ್ದೇಶಿಸುತ್ತಿದ್ದಾರೆ.

ಕಳೆದ ಎರಡು ವಾರಗಳಿಂದ 'ಏಕಲವ್ಯ' ಚಿತ್ರೀಕರಣ ಸಾಗುತ್ತಿದ್ದು, ಶಾಲೆ ರಜೆಯಿರುವ ಕಾರಣ ಪ್ರೇಮ್, ಮಡದಿ ಹಾಗೂ ಮಗ ಸೂರ್ಯನ ಜತೆ ಸೆಟ್‍ಗೆ ಹೋಗುತ್ತಿದ್ದಾರೆ. ಈ ವೇಳೆ ಜೂನಿಯರ್​ ಪ್ರೇಮ್​ ಅಂದರೆ ಸೂರ್ಯ ಚಿತ್ರೀಕರಣದ ಸೆಟ್​ನಲ್ಲಿ ಸ್ಟಂಟ್​ ಮಾಡುವ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಸೈಲೆಂಟ್ ಆಗಿದ್ದೇಕೆ ಕಿರಿಕ್ ಹುಡುಗಿ: ಏಕೆ ಹೀಗಾದ್ರು ಸಂಯುಕ್ತಾ ಹೆಗ್ಡೆ..!

ಹೌದು, ಪ್ರೇಮ್​ ಅವರ ಮಗ ಸೂರ್ಯ ಭವಿಷ್ಯದಲ್ಲಿ ರಂಗಿನ ಲೋಕಕ್ಕೆ ಎಂಟ್ರಿ ಕೊಡುವ ಸೂಚನೆ ನೀಡುತ್ತಿದ್ದಾರೆ.  ಶಿವ ಕೈಯಲ್ಲಿ ಬಾಟೆಲ್​ ಹಿಡಿದು ಸೂರ್ಯನಿಗೆ ಸ್ಟಂಟ್​ ಹೇಳಿಕೊಡುತ್ತಿರುವ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗಿದೆ.

@silva_stunt master shocked with Soorya’s performance 😅😁😍ಸ್ಟಂಟ್ ಮಾಸ್ಟರ್​  ಶಿವ ಕೈಯಲ್ಲೊಂದು ಬಾಟಲ್ ಹಿಡಿದು, ಅದನ್ನು ಸೂರ್ಯ ಕಾಲಿನಿಂದ ಒದ್ದು ಪೀಸ್ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋ ಇದಾಗಿದ್ದು, ಅದನ್ನು ಖುದ್ದು ಪ್ರೇಮ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

First published: May 27, 2019, 6:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories