Vivek Death: ವಿವೇಕ್​ ಸಾವಿನ ಪ್ರಕರಣ: ಮೃತರ ಕುಟುಂಬದ ಕಣ್ಣೀರು ಒರೆಸುತ್ತೇವೆ ಎಂದ ನಿರ್ಮಾಪಕ ಗುರು ದೇಶಪಾಂಡೆ ಪತ್ನಿ

ಸಿನಿಮಾ ನಿರ್ಮಾಕರ ಕಡೆಯಿಂದ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿದೆಯಂತೆ. ಒಮ್ಮೆ 5 ಲಕ್ಷ ಹಾಗೂ ಕೆಲದಿನಗಳ ನಂತರ ಮತ್ತೊಂದು 5 ಲಕ್ಷದ ಚೆಕ್ ನೀಡುವುದಾಗಿ ಪ್ರತೀಕ್ಷಾ ತಿಳಿಸಿದ್ದಾರೆ.

ಸಾಹಸ ಕಲಾವಿದ ವಿವೇಕ್​ ಸಾವಿನ ಪ್ರಕರಣ

ಸಾಹಸ ಕಲಾವಿದ ವಿವೇಕ್​ ಸಾವಿನ ಪ್ರಕರಣ

  • Share this:
ರಚಿತಾ ರಾಮ್​ ಹಾಗೂ ಅಜಯ್ ರಾವ್ ಅಭಿನಯದ ಸಿನಿಮಾ ಲವ್​ ಯೂ ರಚ್ಚು ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಸಾಹಸ ಕಲಾವಿದ ವಿವೇಕ್​ ಅವರು ಸಾವನ್ನಪ್ಪಿದಾಗಿನಿಂದ ನಿರ್ಮಾಪಕ ನಾಪತ್ತೆಯಾಗಿದ್ದಾರೆ. ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಅವರು ಈ ಘಟನೆ ನಡೆದಾಗಿನಿಂದ ತಲೆ ಮರೆಸಿಕೊಂಡಿದ್ದು, ಎಲ್ಲೂ ಒಂದು ಹೇಳಿಯನ್ನೂ ನೀಡಿಲ್ಲ. ಆದರೆ ಈಗ, ನಿರ್ಮಾಪಕ ಗುರು ದೇಶಪಾಂಡೆ ಅವರ ಮಡದಿ ಪ್ರತೀಕ್ಷಾ ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ನಮ್ಮ ಪ್ರೊಡಕ್ಷನ್​ನಲ್ಲಿ ಅಪಘಾತವಾಗಿದೆ. ನಮಗೂ ತುಂಬಾ ನೋವಾಗಿದೆ. ನಮಗೆ ತಡವಾಗಿ ಈ ಘಟನೆ ಬಗ್ಗೆ ತಿಳಿದಿದೆ. ನನ್ನ ಪತಿ ಗುರು ದೇಶಪಾಂಡೆ ಎಲ್ಲಿದ್ದಾರೆ ಅಂತ ನಮಗೂ ಗೊತ್ತಿಲ್ಲ. ಸದ್ಯಕ್ಕೆ ಹೋದ ಜೀವವನ್ನು ಮತ್ತೆ ತರಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬದ ಕಣ್ಣೀರನ್ನು ಒರೆಸುತ್ತೇವೆ. ಮೃತ ವಿವೇಕ್ ಅವರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮಾತ್ರ ಮಾತಾಡ್ತೀವಿ ಎಂದು ಹೇಳಿದ್ದಾರೆ. 

ಸಿನಿಮಾ ನಿರ್ಮಾಕರ ಕಡೆಯಿಂದ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿದೆಯಂತೆ. ಒಮ್ಮೆ 5 ಲಕ್ಷ ಹಾಗೂ ಕೆಲದಿನಗಳ ನಂತರ ಮತ್ತೊಂದು 5 ಲಕ್ಷದ ಚೆಕ್ ನೀಡುವುದಾಗಿ ಪ್ರತೀಕ್ಷಾ ತಿಳಿಸಿದ್ದಾರೆ.

ighter Vivek Death, Rachita Ram, Ajay Rao, Love You Racchu, Sandalwood, ಫೈಟರ್​ ವಿವೇಕ್​ ಸಾವು, ರಚಿತಾ ರಾಮ್​, ಅಜಯ್​ ರಾವ್​, ಲವ್​ ಯೂ ರಚ್ಚು, ಸ್ಯಾಂಡಲ್​ವುಡ್, Ajay rao, Fighter Vivek Death, love you racchu, Rachita Ram, Sandalwood, Love You Rachchu Movie stunt man Vivek death case movie director and other 3 members facing police enquiry ae
ಸಾವನ್ನಪ್ಪಿದ ಸಾಹಸ ಕಲಾವಿದ ವಿವೇಕ್​


ಹಾದಿಬೀದಿಯಲ್ಲಿ ಹೋಗೋರೆಲ್ಲ ಸಿನಿಮಾ ಮಾಡಬಾರದು....

ವಿವೇಕ್​ ಸಾವನ್ನಪ್ಪಿರುವ ವಿಷಯ ಇಂದು ಮುಖ್ಯಮಂತ್ರಿಗಳ ಜತೆ ಸಹ ಚರ್ಚಿಸಲಾಗಿದೆ. ಈ ರೀತಿಯ ಘಟನೆಗಳು ನಡೆಯದಂತೆ ತಡೆಯಬೇಕು. ನಾವು ಹಾಗೂ ವಾಣಿಜ್ಯ ಮಂಡಳಿಯವರು ನಿಯಮಾವಳಿಗಳ ಬಗ್ಗೆ ಚರ್ಚೆ ಮಾಡ್ತೇವೆ. ನಾವು ನಿಯಮಗಳ ಕರಡನ್ನು ರೂಪಿಸಿ ಸಿಎಂಗೆ ಕೊಡುತ್ತೇವೆ. ಸರ್ಕಾರ ಪರಿಶೀಲಿಸಿ ಫೈನಲ್ ಮಾಡುತ್ತೆ. ಹಾದಿ ಬೀದಿಯಲ್ಲಿ ಹೋಗೋರೆಲ್ಲ ಸಿನಿಮಾ ಮಾಡಕ್ಕಾಗಲ್ಲ. ಹಾದಿಬೀದಿಯಲ್ಲಿ ಹೋಗೋರು ಸಿನಿಮಾ ಮಾಡಿದ್ರೆ ಮೊನ್ನೆ ನಡೆದ ದುರ್ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಯಾರು ಸಿನಿಮಾ ಮಾಡಬೇಕು, ಯಾರು ಮಾಡಬಾರದು ಎಂದು ನಿರ್ಧರಿಸುವ ನಿಯಮಗಳ ಅಗತ್ಯ ಇದೆ ಎಂದು ಲವ್ ಯು ರಚ್ಚು ಸಿನಿಮಾ ತಂಡದ ಮೇಲೆ  ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ನಿರ್ಮಾಪಕ ಕೆ ಮಂಜು.

ಇದನ್ನೂ ಓದಿ: Sonali Bendre: ಮಗನ 16ನೇ ಹುಟ್ಟುಹಬ್ಬಕ್ಕೆ ಅಪರೂಪದ ಫೋಟೋ ಶೇರ್ ಮಾಡುವ ಮೂಲಕ ವಿಶ್​ ಮಾಡಿದ ಸೋನಾಲಿ ಬೇಂದ್ರೆ..!

ಘಟನೆ ವಿವರ:

ರಾಮನಗರ ತಾಲ್ಲೂಕಿನ ಜೋಗರಪಾಳ್ಯದಲ್ಲಿ ಆಗಸ್ಟ್ 9ರಂದು ಈ ಘಟನೆ ಸಂಭವಿಸಿತ್ತು.  ಶೂಟಿಂಗ್ ನಡೆಯುವಾಗ ವಿದ್ಯುತ್ ತಂತಿ ತಗುಲಿ 28 ವರ್ಷದ ಕಲಾವಿದ ವಿವೇಕ್​ ಕೊನೆಯುಸಿರೆಳೆದಿದ್ದರು. ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯಿಸುತ್ತಿರುವ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್​ನಲ್ಲಿ ಘಟನೆ ಈ ಘಟನೆ ನಡೆದಿತ್ತು. 11 KV ವಿದ್ಯುತ್ ಲೈನ್​ ತಗುಲಿ ವಿವೇಕ್​ ಸಾವನ್ನಪ್ಪಿದರೆ, ಅವರ ಜೊತೆಗಿದ್ದ ಮತ್ತೊರ್ವ ಕಲಾವಿದವನ್ನು ಆಸ್ಪತ್ರೆಗೆ ದಾಖಲು‌ ಮಾಡಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: BBK8 Winner Manju Pavagada: ಟ್ರೋಫಿ ಗೆದ್ದ ನಂತರ ಶಿವಣ್ಣನನ್ನು ಭೇಟಿ ಮಾಡಿದ ಮಂಜು ಪಾವಗಡ

2017ರ ನವೆಂಬರ್ ತಿಂಗಳಲ್ಲಿ ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಉದಯ್ ಮತ್ತು ಅನಿಲ್ ಎಂಬ ಇಬ್ಬರು ಉದಯೋನ್ಮುಖ ಪ್ರತಿಭಾನ್ವಿತ ಕಲಾವಿದರು ಚಿತ್ರತಂಡದ ಅಜಾಗರೂಕತೆಯಿಂದ ಬಲಿಯಾದ ಘಟನೆ ಇನ್ನೂ ಹಸಿರಾಗಿಯೇ ಇದೆ. ಅದಾಗಿ ಎರಡು ವರ್ಷಗಳಲ್ಲೇ ಅರ್ಥಾತ್ 2019ರ ಮಾರ್ಚ್ನಲ್ಲಿ ವೀರಂ ಚಿತ್ರದ ಚಿತ್ರೀಕರಣದ ವೇಳೆ ಸಿಲಿಂಡರ್ ಸಿಡಿದು ಸಿನಿಮಾ ಶೂಟಿಂಗ್ ನೋಡಲು ಬಂದಿದ್ದ ಇಬ್ಬರು ಬಲಿಯಾಗಿದ್ದೂ ಗೊತ್ತೇಯಿದೆ. ಇಂತಹ ದುರ್ಘಟನೆಗಳ ನಡುವೆಯೂ ಆಗೊಮ್ಮೆ ಈಗೊಮ್ಮೆ ಫೈಟ್ ಸೀನ್‌ಗಳು, ಸ್ಟಂಟ್ ದೃಶ್ಯಗಳ ಚಿತ್ರೀಕರಣದ ವೇಳೆ ನಟರಿಗೆ, ಸಾಹಸ ಕಲಾವಿದರಿಗೆ ಪೆಟ್ಟಾದ ಕೆಲ ಘಟನೆಗಳು ನಡೆದಿವೆ.
Published by:Anitha E
First published: