Puneeth Rajkumar: ಆಕಾಶದಲ್ಲೂ ಮಿನುಗಲಿದೆ ಪವರ್‌'ಸ್ಟಾರ್'! ಉಪಗ್ರಹಕ್ಕೆ ಈಗ 'ವೀರ ಕನ್ನಡಿಗ'ನ ಹೆಸರು

ಪುನೀತ್ ರಾಜ್‌ಕುಮಾರ್ ತಮ್ಮ ನಟನೆಯಿಂದ 'ಆಕಾಶ'ದೆತ್ತರಕ್ಕೆ ಬೆಳೆದವರು, ತಮ್ಮ ಸಮಾಜಸೇವೆಯಿಂದ 'ಸ್ಟಾರ್‌'ನಂತೆ ಬೆಳಗಿದವರು. ಇದೀಗ ಈ 'ಪವರ್ ಸ್ಟಾರ್‌' ಹೆಸರು 'ಆಕಾಶ'ದಲ್ಲಿ ಮಿನುಗೋಕೆ ಸಮಯ ಕೂಡಿ ಬಂದಿದೆ!

ನಟ ಪುನೀತ್ ರಾಜಕುಮಾರ್

ನಟ ಪುನೀತ್ ರಾಜಕುಮಾರ್

  • Share this:
ಸ್ಯಾಂಡಲ್‌ವುಡ್ (Sandalwood) ಪವರ್ ಸ್ಟಾರ್ (Power Star) ಪುನೀತ್ ರಾಜ್‌ಕುಮಾರ್ (Puneeth Rajkumar) ದೈಹಿಕವಾಗಿ ‌ನಮ್ಮನ್ನು ಅಗಲಿ ಇಂದಿಗೆ 4 ತಿಂಗಳಾಯ್ತು. ಆದರೆ ‘ಅಪ್ಪು’ (Appu) ಕನ್ನಡಿಗರ ಮನೆ, ಮನಗಳಲ್ಲಿ ಎಂದೆಂದಿಗೂ ಅಮರರಾಗಿ ಇರುತ್ತಾರೆ. ಈ ‘ವೀರ ಕನ್ನಡಿಗ’ (Veera Kannadiga) ತಮ್ಮ ನಟನೆಯಿಂದ 'ಆಕಾಶ'ದ ಎತ್ತರಕ್ಕೆ ಬೆಳೆದವರು, ತಮ್ಮ ಸಮಾಜಸೇವೆಯಿಂದ 'ಸ್ಟಾರ್‌'ನಂತೆ (Star) ಬೆಳಗಿದವರು. ಇದೀಗ ಈ 'ಪವರ್ ಸ್ಟಾರ್‌' ಹೆಸರು 'ಆಕಾಶ'ದಲ್ಲಿ ಮಿನುಗೋಕೆ ಸಮಯ ಕೂಡಿ ಬಂದಿದೆ! ಹೌದು ಮುಂದಿನ ದಿನಗಳಲ್ಲಿ ನಭಕ್ಕೆ ಸೇರಲಿರುವ ಉಪಗ್ರಹವೊಂದಕ್ಕೆ (Satellite) ಪುನೀತ್ ರಾಜ್‌ಕುಮಾರ್ ಹೆಸರು (Name) ಇಡಲಾಗುತ್ತಿದೆ. ಏನಿದು ಹೊಸ ವಿಚಾರ? ಏನಿದು ಉಪಗ್ರಹ ಅನ್ನೋ ಕುತೂಹಲನಾ? ಹಾಗಿದ್ರೆ ಮುಂದೆ ಓದಿ…

ಉಪಗ್ರಹಕ್ಕೆ ‘ಪುನೀತ್ ರಾಜ್‌ಕುಮಾರ್’ ಹೆಸರು ನಾಮಕರಣ

ಉಪಗ್ರಹ ತಯಾರಿಸಲು ಕರ್ನಾಟಕದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು, ಅದರಲ್ಲೂ ಮಲ್ಲೇಶ್ವರಂ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಇದು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಯಾರಿಸುತ್ತಿರುವ ಮೊದಲ ಉಪಗ್ರಹವಾಗಿದೆ. ಇದಕ್ಕೆ ಪುನೀತ್ ರಾಜ್‌ಕುಮಾರ್ ಅವರ ಹೆಸರು ಇಡುವುದಕ್ಕೆ ಚಿಂತನೆ ನಡೆದಿದೆ.

ಸಚಿವ ಅಶ್ವತ್ಥ್ ನಾರಾಯಣ್ ಅವರಿಂದ ಘೋಷಣೆ

ವಿದ್ಯಾರ್ಥಿಗಳು ತಯಾರಿಸಲಿರುವ ಉಪಗ್ರಹಕ್ಕೆ ಪುನೀತ್ ರಾಜ್‌ಕುಮಾರ್ ಅವರ ಹೆಸರಿಡುವ ಬಗ್ಗೆ ಖುದ್ದು ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರೇ ಮಾಹಿತಿ ನೀಡಿದ್ದಾರೆ.  ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಹಾಗೂ ಐಟಿಬಿಟಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಭಾಗಿಯಾಗಿ, ವಿದ್ಯಾರ್ಥಿಗಳು ತಯಾರಿಸುತ್ತಿರುವ ಉಪಗ್ರಹ ಯೋಜನೆಗೆ ಚಾಲನೆ ನೀಡಿದರು.

ಇದನ್ನೂ ಓದಿ: James: 15 ದೇಶಗಳಲ್ಲಿ ರಾರಾಜಿಸಲಿದ್ದಾನೆ `ಜೇಮ್ಸ್’​, ಯಾರೆ ಬರಲಿ.. ಯಾರೆ ಇರಲಿ.. ನಿಮ್ಮ ರೇಂಜಿಗೆ ಯಾರಿಲ್ಲ!

ಸುಮಾರು 1.9 ಕೋಟಿ ರೂಪಾಯಿ ವೆಚ್ಚದ ಯೋಜನೆ

ವಿದ್ಯಾರ್ಥಿಗಳು ತಯಾರಿಸಲಿರುವ ಈ ಉಪಗ್ರಹ ಯೋಜನೆಗೆ ಸುಮಾರು 1.90 ಕೋಟಿ ರೂಪಾಯಿ ವೆಚ್ಚವಾಗಲಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಸುಮಾರು 20 ಶಾಲೆಗಳ ಮಕ್ಕಳು ಭಾಗಿಯಾಗಲಿದ್ದಾರೆ. ಈ ಉಪಗ್ರಹವನ್ನು ಸೆಪ್ಟೆಂಬರ್–ಅಕ್ಟೋಬರ್‌ ತಿಂಗಳಲ್ಲಿ ಉಡಾವಣೆ ಮಾಡಲು ತೀರ್ಮಾನಿಸಲಾಗಿದೆ.

ಸಾಮಾನ್ಯ ಉಪಗ್ರಹ ಅಭಿವೃದ್ಧಿಪಡಿಸಲು ಸುಮಾರು 50 ಕೋಟಿಯಿಂದ  60 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. ಅಲ್ಲದೆ, ಅದರ ತೂಕ ಕೂಡಾ 50 ಕಿಲೋ ಇರುತ್ತದೆ. ಆದರೆ, ಈಗ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ, ಪರಿವರ್ತನೆ ಆಗಿದೆ. ಇಲ್ಲಿ ಒಂದೂವರೆ ಕಿಲೋ ತೂಕದಲ್ಲಿ 1. ಕೋಟಿ 90 ಲಕ್ಷ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿ ಉಪಗ್ರಹ ಉಡಾವಣೆ ಯೋಜನೆಯ ಪರಿಕಲ್ಪನೆ ರೂಪಿಸಲಾಗಿದೆ  ಎಂದು ಸಚಿವ ಅಶ್ವತ್ಥ್ ನಾರಾಯಣ ಅವರು ವಿವರಿಸಿದರು.

ಪುನೀತ್ ರಾಜ್‌ಕುಮಾರ್ ಹೆಸರೇ ಯಾಕೆ?

ಪುನೀತ್ ರಾಜ್‌ಕುಮಾರ್ ಎಂದರೆ ಬರೀ ಅಭಿಮಾನಿಗಳಿಗಷ್ಟೇ ಅಲ್ಲ, ಪ್ರತಿ ಕನ್ನಡಿಗರಿಗೂ ಇಷ್ಟ. ಅದರಲ್ಲೂ ಯುವಕರು ಹಾಗೂ ಮಕ್ಕಳಿಗೆ ಅಪ್ಪು ಎಂದರೆ ಫೇವರೇಟ್‌. ಹೀಗಾಗಿ ವಿದ್ಯಾರ್ಥಿಗಳು ತಯಾರಿಸುತ್ತಿರುವ ಈ ಉಪಗ್ರಹಕ್ಕೆ ಪುನೀತ್ ರಾಜ್‌ಕುಮಾರ್ ಹೆಸರಿಟ್ಟು, ಮುಖ್ಯವಾಗಿ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಸೆಳೆಯಲು ಪ್ರಯತ್ನಿಸಲಾಗಿದೆ. ಜೊತೆಗೆ ಸಮಾಜಸೇವೆ ಹಾಗೂ ಚಿತ್ರರಂಗದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಮಾಡಿರುವ ಸಾಧನೆಗೂ ಗೌರವ ಸಲ್ಲಿಸಿದಂತಾಗುತ್ತದೆ.

ಇದನ್ನೂ ಓದಿ: James: ಅಪ್ಪು ಕೊನೆಯ ಚಿತ್ರದ ಅಪರೂಪದ ಫೋಟೋಗಳು, ಹೇಗಿದ್ದಾನೆ ನೋಡಿ ಜೇಮ್ಸ್

ಅಪ್ಪು ಅಗಲಿ ಇಂದಿಗೆ ನಾಲ್ಕು ತಿಂಗಳು

ಇನ್ನು ಪುನೀತ್ ರಾಜ್‌ಕುಮಾರ್ ಅವರು ಅಗಲಿ ಇಂದಿಗೆ 4 ತಿಂಗಳು ಕಳೆದಿದೆ. ಇಷ್ಟು ದಿನಗಳಾದರೂ ಕನ್ನಡಿಗರ ಮನದಿಂದ ಪುನೀತ್ ಮರೆಯಾಗಿಲ್ಲ. ಇಂದೂ ಸಹ ಅಸಂಖ್ಯಾತ ಅಭಿಮಾನಿಗಳು ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಪುನೀತ್ ಅವರನ್ನು ಸ್ಮರಿಸಿಕೊಂಡಿದ್ದಾರೆ.
Published by:Annappa Achari
First published: