‘ಜೇಮ್ಸ್’(James) ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್(Response) ಪಡೆದುಕೊಳ್ಳುತ್ತಿದೆ. ಇವತ್ತು ಹಬ್ಬ(Festival)ದಂತೆ ಜೇಮ್ಸ್ ಸಿನಿಮಾವನ್ನು ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಯಿಂದಲೆ. ‘ಜೇಮ್ಸ್’ ಸಿನಿಮಾದ ಶೋಗಳು ಆರಂಭವಾಗಿವೆ. ಇಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಹುಟ್ಟುಹಬ್ಬ. ಹೀಗಾಗಿ ಅಪ್ಪು ಅವರ ಕೊನೆಯ ಸಿನಿಮಾ ಜೇಮ್ಸ್ (James) ಸಿನಿಮಾ ರಿಲೀಸ್. ಮುಂಜಾನೆಯಿಂದಲೇ ಅಪ್ಪು ಅಭಿಮಾನಿಗಳು ಜೇಮ್ಸ್ ದರ್ಶನ ಪಡೆಯುತ್ತಿದ್ದಾರೆ. ಬೆಳ್ಳಿ ತೆರೆಯಲ್ಲಿ ಕಡೆಯ ಬಾರಿಗೆ ಅಪ್ಪು ಅವರನ್ನು ಕಂಡ ಅಭಿಮಾನಿಗಳು ಎದೆ ಬಡಿದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಅಪ್ಪು ಕೆರಿಯರ್ನಲ್ಲೇ ಈ ಪುನೀತ್ ರಾಜ್ಕುಮಾರ್ ಅವರ ಬೆಸ್ಟ್ ಪರ್ಫಾಮೆನ್ಸ್ (Best Performance) ಅಂದರೆ ತಪ್ಪಾಗಲಾರದು. ಈ ಸಿನಿಮಾ ನೋಡಲು ನಿನ್ನೆ ಅಪ್ಪು ಅಭಿಮಾನಿಯೊಬ್ಬ ತನ್ನಕಂಪನಿಗೆ ರಜೆ ಕೋರಿ ಪತ್ರ ಬರೆದಿದ್ದರು. ಆ ಫೋಟೋ ಸಖತ್ ವೈರಲ್ ಆಗಿತ್ತು.
ಅಪ್ಪು ಹುಟ್ಟುಹಬ್ಬಕ್ಕೆ 2 ದಿನ ರಜೆ ಕೊಟ್ಟ ಅಂಬೇಡ್ಕರ್ ಕಾಲೇಜ್
ಹೌದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಡಾ.ಅಂಬೇಡ್ಕರ್ ಇನ್ಸ್ಟಿಟ್ಯೂಶನ್ ಆಫ್ ಟೆಕ್ನಾಲಜಿ ವಿಟಿಯು, ಬೆಳಗಾವಿ ಕಾಲೇಜಿನ ಲೆಟರ್ವೊಂದು ಸಖತ್ ವೈರಲ್ ಆಗುತ್ತಿದೆ. ಕಾಲೇಜಿನ ಫಸ್ಟ್ ಸೆಮಿಸ್ಟರ್ ಹಾಗೂ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾರ್ಚ್ 17 ಹಾಗೂ ಮಾರ್ಚ್ 18ರಂದು ಕಾಲೇಜಿಗೆ ರಜೆ ನೀಡಲಾಗಿದೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಮಿಳು ಕಬಾಲಿ ಸಿನಿಮಾ ರಿಲೀಸ್ ಆದ ಟೈಮ್ನಲ್ಲಿ ಎಲ್ಲರೂ ರಜನಿಕಾಂತ್ ಸಿನಿಮಾ ನೋಡಲು ರಜೆ ಕೋರಿ ಪತ್ರ ಬರೆದಿದ್ದರು. ಆದರೆ, ಅಪ್ಪು ಚಿತ್ರದಿಂದ ಸ್ಯಾಂಡಲ್ವುಡ್ಗೂ ಈ ಟ್ರೆಂಡ್ ಬಂದಿದೆ.
this is historic💥💥#CelebratePuneethRajkumar pic.twitter.com/B5EQVf10tt
— Karnataka Box Office | ಕರ್ನಾಟಕ ಬಾಕ್ಸ್ ಆಫೀಸ್ (@Kannada_BO) March 16, 2022
ಇಂದು ಪುನೀತ್ ರಾಜ್ಕುಮಾರ್ ಅವರ ಜನ್ಮದಿನವಾಗಿರುವ ಹಿನ್ನಲೆ ಬೆಂಗಳೂರಿನ ಮೂವರು ಪುನೀತ್ ಅಭಿಮಾನಿಗಳು ಮೌಂಟ್ ಎವರೆಸ್ಟ್ನ ಬೇಸ್ ಕ್ಯಾಂಪ್ ಬಳಿ ಅಪ್ಪು ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮೌಂಟ್ ಎವರೆಸ್ಟ್ ಕೇಕ್ ಕತ್ತರಿಸಿ ಅಪ್ಪುಗೆ ಜೈಕಾರ್ ಕೂಗಿ ವಿಶೇಷವಾಗಿ ಜನ್ಮದಿನವನ್ನು ಆಚರಿಸಿದ್ದಾರೆ. ಅಲ್ಲದೇ ಇಂದು ಜೇಮ್ಸ್ ಚಿತ್ರ ಬಿಡುಗಡೆಯಾಗುತ್ತಿದ್ದು, ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾವನ್ನು ನೋಡಿ ಹಬ್ಬದಂತೆ ಆಚರಿಸಿ ಎಂದು ಅಪ್ಪು ಅಭಿಮಾನಿಗಳಿಗೆ ಸಂದೇಶವನ್ನೂ ಕಳುಹಿಸಿದ್ದಾರೆ.
ಇದನ್ನೂ ಓದಿ: Puneeth Rajkumar ನಮ್ ಜೊತೆ ಇಲ್ಲ ಅಂತ ಅದೊಂದು ಜೀವಕ್ಕೆ ಗೊತ್ತೇ ಇಲ್ಲ.. `ಜೇಮ್ಸ್’ಗೆ ವಿಶ್ ಮಾಡಿದ ಸೋದರತ್ತೆ ನಾಗಮ್ಮ!
ಜೇಮ್ಸ್ಗೆ ವಿಶ್ ಮಾಡಿದ ಸೋದರತ್ತೆ ನಾಗಮ್ಮ!
ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ, ಪುನೀತ್ ರಾಜ್ಕುಮಾರ್ ಅವರ ಸೋದರ ಅತ್ತೆ. ಇವರಿಗೆ ಪುನೀತ್‌ರಾಜ್‌ಕುಮಾರ್ ನಿಧನ ಹೊಂದಿರುವ ವಿಚಾರ ಇನ್ನೂ ಕೂಡ ತಿಳಿಸಿಲ್ಲ. ಕುಟುಂಬಸ್ಥರು ಕೂಡ ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದಾರೆ. ಅವರಿಂದ ಈ ವಿಚಾರವನ್ನು ಮುಚ್ಚಿಡಲು ಮುಖ್ಯ ಕಾರಣ ಎಂದರೆ ಅವರಿಗೆ ವಯಸ್ಸಾಗಿದೆ. ಜೊತೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುನೀತ್ ನಿಧನದ ವಿಚಾರ ತಿಳಿದರೆ ಅವರಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಆದರೆ, ಅಪ್ಪು ಬಗ್ಗೆ ಏನು ಗೊತ್ತಿರುದ ನಾಗಮ್ಮ ‘ಜೇಮ್ಸ್’ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.
ಲೈಫ್ ಬಾಯ್ ಸೋಪಿನಲ್ಲಿ ಅರಳಿದ ‘ಜೇಮ್ಸ್’
ಮಂಗಳೂರಿನಲ್ಲೊಬ್ಬ ಅಪ್ಪಟ ಅಪ್ಪು ಅಭಿಮಾನಿಯೊಬ್ಬರು ಲೈಫ್ ಬಾಯ್ ಸೋಪ್ನಲ್ಲಿ ಪುನೀತ್ ರಾಜ್ಕುಮಾರ್ ಅವರ ಚಿತ್ರ ರಚಿಸಿ ತಮ್ಮ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಗಣೇಶಪುರ ನಿವಾಸಿಯಾದ ಕಲಾವಿದ ದೇವಿಕಿರಣ್ ಸೋಪ್ನಲ್ಲಿ ಅಪ್ಪು ಚಿತ್ರ ಬಿಡಿಸಿದ್ದಾರೆ. ಕೇವಲ ಎರಡು ಗಂಟೆಗಳಲ್ಲಿ ಸೋಪ್ ಅನ್ನು ಗುಂಡು ಪಿನ್ ಮೂಲಕ ಕೊರೆದು ಪುನೀತ್ ರಾಜ್ಕುಮಾರ್ ಅವರ ಚಿತ್ರ ಅರಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ