• Home
  • »
  • News
  • »
  • entertainment
  • »
  • Karan Johar: ಈ ಮೂವರೂ ನನ್ನ ಕುಟುಂಬವಿದ್ದಂತೆ! ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡ ಕರಣ್‌ ಜೋಹರ್‌

Karan Johar: ಈ ಮೂವರೂ ನನ್ನ ಕುಟುಂಬವಿದ್ದಂತೆ! ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡ ಕರಣ್‌ ಜೋಹರ್‌

ಕರಣ್‌ ಜೋಹರ್‌, ಆಲಿಯಾ ಭಟ್‌, ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ವರುಣ್‌ ಧವನ್‌

ಕರಣ್‌ ಜೋಹರ್‌, ಆಲಿಯಾ ಭಟ್‌, ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ವರುಣ್‌ ಧವನ್‌

ನಿರ್ದೇಶಕ ಕರಣ್‌ ಜೋಹರ್‌ ಅವರ 2012 ರ ಅಕ್ಟೋಬರ್‌ 19 ರಂದು ಬಿಡುಗಡೆಯಾಗಿದ್ದ ನಟಿ ಆಲಿಯಾ ಭಟ್‌, ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ವರುಣ್‌ ಧವನ್‌ ಅವರ ಚೊಚ್ಚಲ ಚಿತ್ರ ಸ್ಟೂಡೆಂಟ್‌ ಆಫ್‌ ದ ಇಯರ್‌ ಚಿತ್ರ ಭಾರೀ ಯಸಸ್ಸು ಕಂಡಿತ್ತು. ಚಿತ್ರ ಬಿಡುಗಡೆಯಾದ 10 ವರ್ಷಗಳಾದ ಹಿನ್ನೆಲೆಯಲ್ಲಿ ನಿರ್ದೇಶಕ ಕರಣ್‌ ಜೋಹರ್‌ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರ ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಬಾಲಿವುಡ್‌ ನ (Bollywood) ಸೂಪರ್‌ ಹಿಟ್‌ ಚಿತ್ರಗಳಲ್ಲಿ ಒಂದಾದ ಸ್ಟೂಡೆಂಟ್‌ ಆಫ್‌ ದಿ ಇಯರ್‌ (Student Of The Year) ಬಿಡುಗಡೆಯಾಗಿ 10 ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಕರಣ್‌ ಜೋಹರ್‌ ಚಿತ್ರೀಕರಣದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 2012 ರ ಅಕ್ಟೋಬರ್‌ 19 ರಂದು ಬಿಡುಗಡೆಯಾಗಿದ್ದ ನಟಿ ಆಲಿಯಾ ಭಟ್‌ (Alia Bhatt), ಸಿದ್ಧಾರ್ಥ್‌ ಮಲ್ಹೋತ್ರಾ ( Sidharth Malhotra) ಹಾಗೂ ವರುಣ್‌ ಧವನ್‌ (Varun Dhawan) ಅವರ ಚೊಚ್ಚಲ ಚಿತ್ರ ಸ್ಟೂಡೆಂಟ್‌ ಆಫ್‌ ದ ಇಯರ್‌ ಚಿತ್ರ ಭಾರೀ ಯಸಸ್ಸು ಕಂಡಿತ್ತು. ಚಿತ್ರ ಬಿಡುಗಡೆಯಾದ 10 ವರ್ಷಗಳಾದ ಹಿನ್ನೆಲೆಯಲ್ಲಿ ನಿರ್ದೇಶಕ ಕರಣ್‌ ಜೋಹರ್‌ (Karana Johar) ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರ ಹಂಚಿಕೊಂಡಿದ್ದಾರೆ.


ತಮ್ಮ ಪಾಲಿಗೆ ಇದೊಂದು ರಜಾದಿನದ ಚಿತ್ರದಂತೆ ಭಾಸವಾಗಿತ್ತು ಎಂದಿದ್ದಾರೆ ಕರಣ್‌. ಇನ್ನು ಚಲನಚಿತ್ರದ ತುಣುಕುಗಳನ್ನು ಒಳಗೊಂಡಿರುವ ವೀಡಿಯೊ ಜೊತೆಗೆ “ಸ್ಟೂಡೆಂಟ್ ಆಫ್ ದಿ ಇಯರ್ ಎಂಬುದು ನಾನು ಸಿನಿಮಾದಲ್ಲಿ ಇಷ್ಟಪಡುವ ಎಲ್ಲವನ್ನೂ ಒಳಗೊಂಡಿದೆ. ಉತ್ಸಾಹ, ಯೌವನ, ಹಾಸ್ಯ, ಸಂಗೀತ, ಕಾಮಿಕ್ ಟೈಮಿಂಗ್ ಹೀಗೆ ಹಿಂದಿ ಚಿತ್ರರಂಗದಲ್ಲಿ ನಾನು ಇಷ್ಟಪಡುವ ಎಲ್ಲವೂ ಸ್ಟೂಡೆಂಟ್ ಆಫ್ ದ ಇಯರ್‌ ಒಳಗೊಂಡಿದೆ.


ನಾವು ಒಂದು ಸಂತೋಷದ ಕುಟುಂಬ ಎಂದು ಹೇಳುವುದು ನಿಜವಾಗಿಯೂ ಕ್ಲೀಷೆಯಾಗಿದೆ. ಏಕೆಂದರೆ ನಾವು ಎಂದಿಗೂ ಹಾಗೆ ಇರಲಿಲ್ಲ. ನಾವು ಕೂಗುತ್ತಿದ್ದೆವು, ಕಿರುಚುತ್ತಿದ್ದೆವು. ನನಗೆ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಯಂತೆ ಭಾವವಾಸುತ್ತಿತ್ತು" ಎನ್ನುತ್ತಾರೆ.


ಮೂವರ ಜೊತೆಗೆ ವಿಶೇಷ ಸಂಬಂಧ!
ಸ್ಟೂಡೆಂಟ್‌ ಆಫ್‌ ದಿ ಇಯರ್‌ ಚಿತ್ರ ತಮಗೆ ಕಮರ್ಷಿಯಲ್‌ ಸಕ್ಸೆಸ್‌ ಅಥವಾ ನಿರ್ದೇಶಕನಾಗಿ ನೀಡಿದ ಯಶಸ್ಸಿಗಿಂತ ಹೆಚ್ಚಿನದನ್ನು ನೀಡಿದೆ ಎನ್ನುವ ಕರಣ್‌ ಜೋಹರ್‌, ಇದು ಆಲಿಯಾ, ವರುಣ್ ಮತ್ತು ಸಿದ್ಧಾರ್ಥ್ ಅವರೊಂದಿಗಿನ ವಿಶೇಷ ಸಂಬಂಧ ಬೆಳೆಯುವಂತೆ ಮಾಡಿತು ಎಂದಿದ್ದಾರೆ.


ಇದನ್ನೂ ಓದಿ:  Actor Kiran Srinivas: ನಾನು ಹಿಂದೂವಲ್ಲ! ಹೀಗೆ ಹೇಳಿದ್ದೇಕೆ ನಟ ಕಿರಣ್ ಶ್ರೀನಿವಾಸ್?


ಹಾಲಿಡೇ ಫಿಲ್ಮ್‌ ರೀತಿಯಲ್ಲಿ ನಡೆದ ಶೂಟಿಂಗ್‌ ನಲ್ಲಿ ನಾವು ಸಾಕಷ್ಟು ಖುಷಿಯ ಕ್ಷಣಗಳನ್ನು ಕಳೆದಿದ್ದೇವೆ. ಇದು ಇಂದಿಗೂ ಒಂದು ಯಂಗ್‌, ಫನ್‌ ಹಾಗೂ ಎಂಟರ್‌ ಟೇನಿಂಗ್‌ ಚಿತ್ರವಾಗಿದೆ ಎನ್ನುತ್ತಾರೆ. ಅಲ್ಲದೇ, ಈ ಚಿತ್ರವು ಕಮರ್ಷಿಯಲ್‌ ಯಶಸ್ಸಿಗಿಂತ ಹೆಚ್ಚಾಗಿ ಈ ಆಲಿಯಾ, ವರುಣ್‌ ಹಾಗೂ ಸಿದ್ಧಾರ್ಥ್‌ ಜೊತೆಗಿನ ಸುಂದರ ನೆನಪುಗಳ್ನು ನೀಡಿದೆ ಎನ್ನುತ್ತಾರೆ. ಈ ಮೂವರು ನನ್ನ ಕುಟುಂಬವಾಗಿದ್ದಾರೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ ಕರಣ್.‌


ಅವರೊಂದಿಗೆ ದಿನವೂ ಮಾತಾಡ್ತಾರಂತೆ ಕರಣ್!‌
ಕರಣ್ ಜೋಹರ್ ಅವರು ಮೂವರ ಜೊತೆ ದಿನವೂ ಮಾತನಾಡ್ತಾರಂತೆ. ಅವರ ಪೋಷಕರ ಹಾಗೆ ಅವರ ಬಗ್ಗೆ ಪ್ರೊಟೆಕ್ಟಿವ್‌ ಫೀಲ್‌ ಮಾಡುವುದಾಗಿ ಕರಣ್‌ ಬರೆದುಕೊಂಡಿದ್ದಾರೆ. "ನಾನು ನನ್ನ ಸ್ವಂತ ಮಕ್ಕಳನ್ನು ಹೊಂದುತ್ತೇನೆ ಎಂದು ನನಗೆ ತಿಳಿದಿರಲಿಲ್ಲ ... ಆದರೆ ನನ್ನ ಮೊದಲ ರಕ್ಷಣಾತ್ಮಕ ಪೋಷಕರ ಭಾವನೆ ಅವರ ಮೂವರ ಮೇಲೂ ಇತ್ತು ... ನಾನು ನಿನ್ನನ್ನು ಪ್ರೀತಿಸುತ್ತೇನೆ SID! ನಾನು ನಿನ್ನನ್ನು ಪ್ರೀತಿಸುತ್ತೇನೆ ವರುಣ್ ಮತ್ತು ನಾನು ನಿನ್ನನ್ನು ಪ್ರೀತಿಸುತ್ತೇನೆ ಅಲಿಯಾ... ನಾನು ಅದನ್ನು ನನ್ನ ಮಕ್ಕಳಿಗೆ ಹೇಳುತ್ತೇನೆ ಮತ್ತು ನಾನು ಅದನ್ನು ನಿಮ್ಮ ಮೂವರಿಗೂ ಹೇಳಲು ಬಯಸುತ್ತೇನೆ" ಎಂದಿದ್ದಾರೆ.


ಇದನ್ನೂ ಓದಿ:  Madhuri Dixit: ಮದುವೆ ಆದ್ರೂ ಡಾನ್ಸ್​ ಮಾಡ್ತೀರಾ? ಸುಮ್ಮನೆ ಮನೇಲಿರಿ ಅಂದಿದ್ರಂಥೆ ಅವ್ರು!


ಈ ಹಿಂದೆ, ಕರಣ್ ಅವರ ಚಾಟ್ ಶೋ ಕಾಫಿ ವಿತ್ ಕರಣ್‌ನಲ್ಲಿ ಚಿತ್ರವನ್ನು ಸ್ವತಃ ರೋಸ್ಟ್ ಮಾಡಿದ್ದರು. ಚಿತ್ರದ ಚಿತ್ರೀಕರಣದ ವೇಳೆ ಚಿತ್ರದ ಸ್ಕ್ರಿಪ್ಟ್ ಬಗ್ಗೆ ಅನುಮಾನವಿತ್ತು ಎಂಬುದನ್ನು ಅವರು ಹಂಚಿಕೊಂಡಿದ್ದರು. “ನಾವು ಅಂತಿಮವಾಗಿ ಚಿತ್ರೀಕರಿಸಿದ್ದು ಸ್ಕ್ರಿಪ್ಟ್ ನಲ್ಲಿರುವುದಕ್ಕಿಂತ ತುಂಬಾ ಭಿನ್ನವಾಗಿತ್ತು ಎಂದೂ ಅವರು ಹಂಚಿಕೊಂಡಿದ್ದರು. ಅಂದಹಾಗೆ, ಸ್ಟೂಡೆಂಟ್ ಆಫ್ ದಿ ಇಯರ್ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸನ್ನು ಕಂಡಿತ್ತು. ಚಿತ್ರದ ಆರಂಭಿಕ ವಾರಾಂತ್ಯದ ಸಂಗ್ರಹವು ರೂ 30 ಕೋಟಿ ಆಗಿತ್ತು. ಅಲ್ದೇ, ಈ ಚಿತ್ರ 2012 ರಲ್ಲಿ ಥಿಯೇಟರ್‌ಗಳಲ್ಲಿ ಸುಮಾರು 70 ಕೋಟಿ ಬಾಚಿತ್ತು.

Published by:Ashwini Prabhu
First published: