Nagarjuna Akkineni: ಒಟಿಟಿಯಲ್ಲೂ ಕಮಾಲ್​ ಮಾಡಲಿದ್ದಾರೆ ನಟ ನಾಗಾರ್ಜುನ, ಜೊತೆಗೆ ಮಗ ನಾಗಚೈತನ್ಯ ಬಗ್ಗೆ ತಂದೆ ಹೇಳಿದ್ದೇನು?

ಒಟಿಟಿ ವೇದಿಕೆಗಳು ಮನರಂಜನಾ ವಲಯದಲ್ಲಿನ ಹೊಸ ಕ್ರಾಂತಿಯಾಗಿದೆ. ಇದು ಖಂಡಿತವಾಗಿ ಮುಂದಿನ ದಿನಗಳಲ್ಲಿ ಸಿನಿಮಾಗಳನ್ನು ನೋಡುವ ಬಗೆಯನ್ನೇ ಬದಲಾಯಿಸಲಿದೆ. ಇದನ್ನು ಪ್ರತಿಕೂಲ ತಂತ್ರಜ್ಞಾನವೆಂತಲೂ ಕರೆಯಲಾಗುತ್ತದೆ.

ನಾಗಾರ್ಜುನ

ನಾಗಾರ್ಜುನ

  • Share this:
ಕಿಂಗ್ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಸ್ (Nagarjuna's Annapurna Studios) ಜೀ5ನಲ್ಲಿ ತನ್ನ ಎರಡನೆ ಋತುವಿನ ಲೂಸರ್ ವೆಬ್ ಸರಣಿಯೊಂದಿಗೆ ಮರಳಿ ಬರುತ್ತಿದೆ. ಈ ವೆಬ್ ಸರಣಿಯು (Web series) ಜನವರಿ 21ರಿಂದ ಪ್ರಸಾರವಾಗಲಿದೆ. ಈ ಸಂಬಂಧ ವೆಬ್ ಸೀರೀಸ್ ತಂಡವು ಹೈದರಾಬಾದ್‌ನ (Hyderabad) ಪಂಚತಾರಾ ಹೋಟೆಲ್ ಒಂದರಲ್ಲಿ ಬಿಡುಗಡೆ ಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಒಟಿಟಿ ವೇದಿಕೆಗಳ(OTT platforms) ಪ್ರವೇಶದ ಕುರಿತು ನಟ ಅಕ್ಕಿನೇನಿ ನಾಗಾರ್ಜುನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಒಟಿಟಿ ವೇದಿಕೆಗಳಲ್ಲಿ ಅಡೆತಡೆ
ಒಟಿಟಿ ವೇದಿಕೆಗಳು ಮನರಂಜನಾ ವಲಯದಲ್ಲಿನ ಹೊಸ ಕ್ರಾಂತಿಯಾಗಿದೆ. ಇದು ಖಂಡಿತವಾಗಿ ಮುಂದಿನ ದಿನಗಳಲ್ಲಿ ಸಿನಿಮಾಗಳನ್ನು ನೋಡುವ ಬಗೆಯನ್ನೇ ಬದಲಾಯಿಸಲಿದೆ. ಇದನ್ನು ಪ್ರತಿಕೂಲ ತಂತ್ರಜ್ಞಾನವೆಂತಲೂ ಕರೆಯಲಾಗುತ್ತದೆ. ಅದೇ ಸಂದರ್ಭದಲ್ಲಿ ವೆಬ್ ಸರಣಿಗಳನ್ನು ನಿರ್ಮಾಣ ಮಾಡುವುದು ಸುಲಭದ ಸಂಗತಿಯಲ್ಲ. ಚಿತ್ರಮಂದಿರಗಳು ದೊಡ್ಡ ಮಟ್ಟದ ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯ ಹೊಂದಿವೆ. ಆದರೆ, ಒಟಿಟಿ ವೇದಿಕೆಗಳಲ್ಲಿ ಹಲವಾರು ಅಡೆತಡೆಗಳಿವೆ. ಈ ಅಡೆತಡೆಗಳನ್ನು ಮೀರಿ ಉತ್ತಮ ಯೋಜನೆಗಳನ್ನು ನಿರ್ಮಿಸುವುದು ಸುಲಭವಲ್ಲ” ಎಂದು ನಾಗಾರ್ಜುನ ಹೇಳಿದ್ದಾರೆ.

ವೆಬ್ ಸರಣಿ ನಿರ್ಮಿಸಲು ಕಷ್ಟ
ನಾನು ಕಳೆದ 2 ವರ್ಷಗಳಿಂದ ವೆಬ್ ಸರಣಿ ನಿರ್ಮಿಸಲು ಕಷ್ಟ ಪಡುತ್ತಿದ್ದೇನೆ. ಇದಕ್ಕಾಗಿ ನಾನು ಹಲವಾರು ಪ್ರಯತ್ನಗಳನ್ನು ಮಾಡಿರುವೆನಾದರೂ ಅವು ಸುಲಭವಲ್ಲ. ಲೂಸರ್ ತಂಡ ಅದನ್ನು ಕಾರ್ಯಗತಗೊಳಿಸಿದೆ. ನಾನು ಅವರೊಂದಿಗೆ ಕುಳಿತುಕೊಂಡು ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಿದೆ. ನಾನು ಹಾಗೂ ಅಮಲಾ ಪ್ರತಿನಿತ್ಯ ಒಂದೂವರೆ ಗಂಟೆಯಿಂದ ಎರಡು ಗಂಟೆಗಳ ಕಾಲ ಒಟಿಟಿ ಚಿತ್ರಗಳನ್ನು ಬಹುತೇಕ ತಪ್ಪಿಸದೆ ನೋಡುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Bangaraaju Movie Review: ಕೊಟ್ಟ ಕಾಸಿಗೆ ಮೋಸ ಮಾಡಲ್ಲ ಅಪ್ಪ-ಮಗ: ಮಾಸ್‌ಗೆ ಮಾಸ್..‌ ಕ್ಲಾಸ್​ಗೆ ಕ್ಲಾಸ್​ ಬಂಗಾರ್​ರಾಜು..

ಬಂಗಾರರಾಜು ಚಿತ್ರ ಯಶಸ್ಸು
ಇತ್ತೀಚೆಗೆ ಬಿಡುಗಡೆಯಾಗಿರುವ ‘ಬಂಗಾರರಾಜು’ ಚಿತ್ರದ ಬಿಡುಗಡೆಯ ಯಶಸ್ಸಿನಲ್ಲಿ ನಾಗಾರ್ಜುನ ತೇಲುತ್ತಿದ್ದಾರೆ. ಅವರು ಡಿಸ್ನಿ+ಹಾಟ್‍ಸ್ಟಾರ್‌ನಲ್ಲಿ ಪ್ರಸಾರವಾಗಲಿರುವ ಬಿಗ್‍ಬಾಸ್ ಒಟಿಟಿ ಪ್ರಥಮ ಆವೃತ್ತಿಯ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಅವರ ಪ್ರಪ್ರಥಮ ಒಟಿಟಿ ಪ್ರವೇಶವಾಗಿದೆ. ಲೂಸರ್2 ಜೀ5ನಲ್ಲಿ ಪ್ರಸಾರವಾಗಲಿರುವ ಭಾರತೀಯ ವೆಬ್ ಸರಣಿಯಾಗಿದೆ. ಈ ತೆಲುಗು ಭಾಷೆಯ ವೆಬ್ ಸರಣಿ ಜನವರಿ 21ರಂದು ಬಿಡುಗಡೆಯಾಗಲಿದ್ದು, ಇದನ್ನು ಜೀ5 ಅಂತರ್ಜಾಲ ತಾಣ ಹಾಗೂ ಆ್ಯಪ್‌ನಲ್ಲಿ ನೋಡಬಹುದಾಗಿದೆ. ಈ ವೆಬ್ ಸರಣಿಯಲ್ಲಿ ಧನ್ಯ ಬಾಲಕೃಷ್ಣ, ಪ್ರಿಯದರ್ಶಿ ಪುಲಿಕೊಂಡ ಮತ್ತಿತರರು ನಟಿಸಿದ್ದಾರೆ.

ರೋಚಕ ಚಿತ್ರ
ಈ ಕತೆಯ ಹಂದರವು ಹಲವಾರು ವ್ಯಕ್ತಿಗಳು ವಿಭಿನ್ನ ವಲಯಗಳಲ್ಲಿ ಎದುರಿಸುವ ಸವಾಲು, ಸಮಸ್ಯೆಗಳ ಕುರಿತಾಗಿದೆ. ಕ್ರೀಡೆ ಮತ್ತು ವಾಸ್ತವ ಜೀವನ ಸಂಘರ್ಷಕ್ಕೀಡಾಗುತ್ತವೆ. ಅವರು ಆ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಮ್ಮ ಬದುಕಿನಲ್ಲಿ ಎದುರಾಗಿರುವ ಸವಾಲುಗಳನ್ನು ಸೋಲಿಸುತ್ತಾರೆಯೆ ಎಂಬ ಕೌತುಕ ಎಳೆಯನ್ನು ಹೊಂದಿದೆ. ಈ ವೆಬ್ ಸರಣಿಯಲ್ಲಿ ಧನ್ಯ ಬಾಲಕೃಷ್ಣ, ಪ್ರಿಯದರ್ಶಿ ಪುಲಿಕೊಂಡರೊಂದಿಗೆ ಪಾವನಿ ಗಂಗಿರೆಡ್ಡಿ, ಕಲ್ಪಿಕಾ ಗಣೇಶ್, ಗಾಯತ್ರಿ ಭಾರ್ಗವಿ, ತಾರಕ್ ಪೊನ್ನಪ್ಪ, ಹರ್ಷಿತಾ ರೆಡ್ಡಿ, ಸಯ್ಯಾಜಿ ಶಿಂಧೆ, ಅರ್ಮಾನ್, ಶಿಶಿರ್ ಶರ್ಮ, ರೆಯಾಂಶ್, ವೆಂಕಿ ಹಾಗೂ ಶಶಾಂಕ್ ನಟಿಸಿದ್ದಾರೆ. ಈ ಚಿತ್ರವನ್ನು ಕ್ರೀಡೆ, ನಿಗೂಢ ಹಾಗೂ ರೋಚಕ ಚಿತ್ರಗಳ ವರ್ಗಕ್ಕೆ ಸೇರಿಸಲಾಗಿದೆ.

ಇದನ್ನೂ ಓದಿ: Jacqueline Fernandez: ಅಕ್ಕಿನೇನಿ ನಾಗಾರ್ಜುನ ಚಿತ್ರದಿಂದ ಜಾಕಲಿನ್​​​ ಔಟ್​.. ಕಾರಣ ಕೇಳಿದ್ರೆ ಶಾಕ್​ ಆಗ್ತಿರಾ..!

ಈ ವೆಬ್ ಸರಣಿಗೂ ಮುನ್ನ ಮೇ 20, 2020ರಿಂದ ಲೂಸರ್ ವೆಬ್ ಸರಣಿಯನ್ನು ಜೀ5 ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವೆಬ್ ಸರಣಿಯು ಮೂವರು ಕ್ರೀಡಾಳುಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡುವ ಆಕಾಂಕ್ಷೆ ಹೊಂದಿರುತ್ತಾರೆ. ಆದರೆ, ಅವರೆಲ್ಲ ರಾಜಕೀಯ ಹಸ್ತಕ್ಷೇಪದ ಕಾರಣಕ್ಕೆ ಹಲವಾರು ಸಂಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಈ ವೆಬ್ ಸರಣಿಯನ್ನು ಅಭಿಲಾಷ್ ರೆಡ್ಡಿ ನಿರ್ದೇಶಿಸಿದ್ದರು. ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಸ್ ನಿರ್ಮಾಣ ಮಾಡಿತ್ತು. ಈ ಸರಣಿಯ ಯಶಸ್ಸಿನಿಂದ ಉತ್ತೇಜಿತರಾಗಿರುವ ನಾಗಾರ್ಜುನ ಲೂಸರ್2 ವೆಬ್ ಸರಣಿಯೊಂದಿಗೆ ಜೀ5 ಒಟಿಟಿ ವೇದಿಕೆಗೆ ಮರಳಿ ಬಂದಿದ್ದಾರೆ.
Published by:vanithasanjevani vanithasanjevani
First published: