Streaming in July 2022: ಓಟಿಟಿ ವೇದಿಕೆಯಲ್ಲಿ ಜುಲೈನಲ್ಲಿ ಬಿಡುಗಡೆ ಆಗಲಿರುವ 7 ಶೋಗಳಿವು

ಓಟಿಟಿ ವೇದಿಕೆಗಳಲ್ಲಿ  ನೀವು ಈಗಾಗಲೇ ಈ ಹಿಂದಿನ ವೆಬ್ ಸರಣಿಗಳನ್ನು ಮತ್ತು ಸಿನಿಮಾಗಳನ್ನು ನೋಡಿ ಮುಗಿಸಿರಬಹುದು. ಮುಂದೇನು ಎಂದು ಯೋಚಿಸಬೇಕಿಲ್ಲ. ನಿಮಗಾಗಿ ಈ ತಿಂಗಳು ಮತ್ತಷ್ಟು ವಿಭಿನ್ನ ಶೋಗಳು ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಲಿವೆ. ಕಾಫಿ ವಿತ್ ಕರಣ್ ಸೀಸನ್ 7, ದ ಗಾನ್ ಗೇಮ್ ಸೀಸನ್ 2, ಸ್ಟ್ರೇಂಜರ್ ಥಿಂಗ್ಸ್ 4 ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳ ಕುರಿತ ಮಾಹಿತಿ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಓಟಿಟಿ ವೇದಿಕೆಗಳಲ್ಲಿ (OTT Platform)  ನೀವು ಈಗಾಗಲೇ ಈ ಹಿಂದಿನ ವೆಬ್ ಸರಣಿಗಳನ್ನು (Web Series) ಮತ್ತು ಸಿನಿಮಾಗಳನ್ನು (Cinema) ನೋಡಿ ಮುಗಿಸಿರಬಹುದು. ಮುಂದೇನು ಎಂದು ಯೋಚಿಸಬೇಕಿಲ್ಲ. ನಿಮಗಾಗಿ ಈ ತಿಂಗಳು ಮತ್ತಷ್ಟು ವಿಭಿನ್ನ ಶೋಗಳು ಓಟಿಟಿ ವೇದಿಕೆಯಲ್ಲಿ ಬಿಡುಗಡೆ (Release) ಆಗಲಿವೆ. ಕಾಫಿ ವಿತ್ ಕರಣ್ ಸೀಸನ್ 7 (Koffee with Karan Season  7), ದ ಗಾನ್ ಗೇಮ್ ಸೀಸನ್ 2 (The Gone Game S2), ಸ್ಟ್ರೇಂಜರ್ ಥಿಂಗ್ಸ್ 4 (Stranger Things 4 )ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳ ಕುರಿತ ಮಾಹಿತಿ ಇಲ್ಲಿದೆ.

ದ ಟರ್ಮಿನಲ್ ಲಿಸ್ಟ್ : ಅಮೆಜಾನ್ ಪ್ರೈಮ್ ವಿಡಿಯೋ (ಜುಲೈ 1 ರಿಂದ ಪ್ರಸಾರ)
ದಿ ಟರ್ಮಿನಲ್ ಲಿಸ್ಟ್ , ಜಾಕ್ ಕಾರ್ ಅವರ ಅತೀ ಹೆಚ್ಚು ಮಾರಾಟವಾದ ಕಾದಂಬರಿಯನ್ನು ಆಧರಿಸಿ ತಯಾರಿಸಲಾದಸರಣಿ. ನೌಕಾ ಪಡೆಯ ನಿಗೂಢ ಕಾರ್ಯಾಚರಣೆಯ ಕುರಿತ ಕಥೆಯನ್ನು ಹೊಂದಿದೆ. ಈ ಸರಣಿ ಎಂಟು ಸಂಚಿಕೆಗಳನ್ನು ಒಳಗೊಂಡಿದೆ.

ಸಾಮ್ರಾಟ್ ಪ್ರಥ್ವಿರಾಜ್ : ಅಮೆಜಾನ್ ಪ್ರೈಮ್ ( ಜುಲೈ 1 ರಿಂದ ಪ್ರಸಾರ)
ಅಕ್ಷಯ್ ಕುಮಾರ್ ಅಭಿನಯದ ಐತಿಹಾಸಿಕ ಕಥಾವಸ್ತುವುಳ್ಳ ಚಲನಚಿತ್ರ ಸಾಮ್ರಾಟ್ ಪ್ರಥ್ವಿರಾಜ್ ಈ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ. ವಿಮರ್ಶಕರಿಂದ ಕೆಟ್ಟ ವಿಮರ್ಶೆಗಳನ್ನು ಪಡೆದ ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಹೀನಾಯವಾಗಿ ಸೋತಿದೆ. ಚಂದ್ರ ಪ್ರಕಾಶ್ ದ್ವಿವೇದಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಮಿಯಾ ಬೀಬಿ ಔರ್ ಮರ್ಡರ್ : ಎಂಎಕ್ಸ್ ಫ್ಲೇಯರ್ (ಜುಲೈ 1 ರಿಂದ ಪ್ರಸಾರ)
ಮಿಯಾ ಬೀಬಿ ಔರ್ ಮರ್ಡರ್, ಒಂದು ದಂಪತಿಯ ಜೀವನದ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ. ಈ ಕಥೆ ಕೊಲೆ, ಗ್ಯಾಂಗ್‍ಸ್ಟರ್ ಮತ್ತು ಬ್ಲಾಕ್‍ಮೇಲ್ ಇತ್ಯಾದಿಗಳನ್ನು ಕೂಡ ಒಳಗೊಂಡಿದೆ. ಮಂಜರಿ ಫಡ್ನಿಸ್ ಮತ್ತು ರಾಜೀವ್ ಖಂಡೇಲ್‍ವಾಲ ಈ ಸರಣಿಯಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಸ್ಟ್ರೇಂಜರ್ ಥಿಂಗ್ಸ್ 4 , ವಾಲ್ಯೂಮ್ 2 : ನೆಟ್‍ಫ್ಲಿಕ್ಸ್ ( ಪ್ರಸಾರ ಜುಲೈ 1 ರಿಂದ )
ಸ್ಟ್ರೇಂಜರ್ ಥಿಂಗ್ಸ್ 4, ವಾಲ್ಯೂಮ್ 2 ಹಿಂದಿನ ಭಾಗದ ಕಥೆಯ ಮುಂದುವರಿಕೆಯಾಗಿದೆ. ಹಿಂದಿನ ಸರಣಿ, ವೆಕ್ನಾ ಅವರು ತಾನು ಬೇರೆ ಯಾರೂ ಅಲ್ಲ, ಹೆನ್ರಿ ಕ್ರೀಲ್ ಅಕಾ ಒನ್ ಎಂದು ಬಹಿರಂಗ ಪಡಿಸುವುದರ ಜೊತೆ ಮುಕ್ತಾಯವಾಗಿತ್ತು. “ದೂರದಿಂದ ಭಾಗ ಮಾಡಲಾಗಿದೆ ಆದರೆ ಯಾವಾಗಲೂ ನಿರ್ಧರಿಸಲ್ಪಟ್ಟಿರುತ್ತದೆ, ಚದುರಿರುವ ನಮ್ಮ ಸ್ನೇಹಿತರ ಭಯಾನಕ ಭವಿಷ್ಯವನ್ನು ಎದುರಿಸಲಿದ್ದಾರೆ. ಆದರೆ ಇದು ಕೇವಲ ಆರಂಭವಷ್ಟೆ.

ಇದನ್ನೂ ಓದಿ: Janhvi Kapoor: ಫೋಟೋಶೂಟ್​ನಲ್ಲಿ ಜಾನ್ವಿ ಫುಲ್ ಮಿಂಚಿಂಗ್, ಯಾವ್ದೇ ಡ್ರೆಸ್​ ಹಾಕಿದ್ರೂ ನಾನು ಸೂಪರ್ ಅಂದ ನಟಿ

ಅಂತ್ಯದ ಆರಂಭ” ಎಂದು ಈ ಸರಣಿಯ ಅಧಿಕೃತ ವಿವರಣೆಯಲ್ಲಿ ಬರೆಯಾಗಿದೆ. ಈ ಸರಣಿಯ ಟ್ರೇಲರ್ ಈಗಾಗಲೇ ವೀಕ್ಷಕರ ಮನ ಗೆದ್ದಿದ್ದು, ಈ ಬಾರಿಯ ಸರಣಿ ಇನ್ನಷ್ಟು ಆ್ಯಕ್ಷನ್ ಮತ್ತು ಸಸ್ಪೆನ್ಸ್‍ನಿಂದ ಕೂಡಿರುತ್ತದೆ ಎಂಬ ನಿರೀಕ್ಷೆಯಿದೆ.

ಕಾಫಿ ವಿತ್ ಕರಣ್ ಸೀಸನ್ 7 : ಡಿಸ್ನಿ ಪ್ಲಸ್ ಹಾಟ್‍ಸ್ಟಾರ್ ( ಜುಲೈ 7 ರಿಂದ ಪ್ರಸಾರ)
ಕರಣ್ ಜೋಹರ್ ಅವರ ನಿರೂಪಣೆಯ ಜನಪ್ರಿಯ ಚಾಟ್ ಶೋ ಕಾಫಿ ವಿತ್ ಕರಣ್‍ನ 7 ನೇ ಸೀಸನ್ ಪ್ರಸಾರವಾಗಲಿದೆ. ಆದರೆ ಈ ಬಾರಿ ಟೀವಿಯ ಬದಲಿಗೆ ಡಿಸ್ನಿ ಪ್ಲಸ್ ಹಾಟ್‍ಸ್ಟಾರ್‍ನಲ್ಲಿ ಪ್ರಸಾರವಾಗಲಿದೆ ಈ ಶೋ.

ಈ ಬಾರಿ ಕಾಫಿ ವಿತ್ ಕರಣ್ ಶೋ ನಲ್ಲಿ ಕರಣ್ ಜೊತೆ ಯಾವೆಲ್ಲಾ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂಬ ಕುರಿತು ನಿಖರವಾದ ಮಾಹಿತಿ ಸಿಕ್ಕಿಲ್ಲ. ಆದರೂ, ಐಶ್ವರ್ಯ ರೈ ಬಚ್ಚನ್, ಸುಶ್ಮಿತಾ ಸೇನ್, ಶಾಹಿದ್ ಕಪೂರ್, ಆಲಿಯಾ ಭಟ್, ರಣ್‍ಬೀರ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ. ತಮ್ಮ ಈ ಹೊಸ ಸೀಸನ್‍ನ ಟೀಸರ್‍ನಲ್ಲಿ ಕರಣ್, ಕಾಫಿ ವಿತ್ ಕರಣ್ ಸೀಸನ್ 7 ನಲ್ಲಿ ಅಭಿಮಾನಿಗಳಿಗೆ ಇನ್ನೂ ಉತ್ತಮವಾದ ಮತ್ತು ಸುಂದರವಾದ ಅನುಭವ ಸಿಗಲಿದೆ ಎಂದು ಹೇಳಿಕೊಂಡಿದ್ದಾರೆ.

ದ ಗಾನ್ ಗೇಮ್ ಸೀಸನ್ 2 : ವೂಟ್ ಸೆಲೆಕ್ಟ್ ( ಜುಲೈ 7 ರಿಂದ ಪ್ರಸಾರ)
ದ ಗಾನ್ ಗೇಮ್ ಸೀಸನ್ 2 , ಹಿಂದಿನ ಸೀಸನ್‍ನ ಮುಂದುವರಿಕೆಯಾಗಿದೆ. ಸಂಜಯ್ ಕಪೂರ್, ಅರ್ಜುನ್ ಮಾಥುರ್, ಶ್ವೇತಾ ತ್ರಿಪಾಟಿ ಶರ್ಮಾ, ಶ್ರಿಯಾ ಫಿಲ್‍ಗಾಂವಕರ್ ಮತ್ತು ದಿಬ್ಯೇಂದು ಭಟ್ಟಾಚಾರ್ಯ ಈ ಸರಣಿಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಸರಣಿಯಲ್ಲೂ ಸಾಹಿಲ್ ಗುಜ್ರಾಲ್‍ಗಾಗಿ ಹುಡುಕಾಟ ಮುಂದುವರೆಯಲಿದೆ( ಅರ್ಜುನ್ ಮಾಥುರ್ ಅಭಿನಯಿಸಿದ್ದ ಪಾತ್ರ). ಕೆಲವರು ಆತ ಕೊರೋನಾ ವೈರಸ್‍ನಿಂದ ಮೃತಪಟ್ಟಿದ್ದಾನೆ ಎಂದು ನಂಬಿದ್ದರೆ, ಇನ್ನು ಕೆಲವರು ಆತ ತನ್ನ ಪತ್ನಿ ಹಾಗೂ ಆತ್ಮೀಯ ಸ್ನೇಹಿತನಿಂದ ಕೊಲೆಯಾಗಿರಬೇಕು ಎಂದು ಭಾವಿಸಿದ್ದಾರೆ. ಆದರೆ, ಆತನ ಪತ್ನಿ (ಶ್ರಿಯಾ ಫಿಲ್‍ಗಾಂವಕರ್) ಆತ ಇನ್ನೂ ಬದುಕಿದ್ದಾನೆ ಎಂದು ನಂಬಿದ್ದಾಳೆ. ಈ ಸೀಸನ್‍ಗೆ ನಟ ಹರ್ಲೀನ್ ಸೇಥಿ ಕೂಡ ಸೇರ್ಪಡೆಯಾಗಿದ್ದಾರೆ.

ಮಾರ್ಡನ್ ಲವ್ ಹೈದರಾಬಾದ್ : ಅಮೇಜಾನ್ ಪ್ರೈಂ ವಿಡಿಯೋ ( ಜುಲೈ 8 ರಿಂದ ಪ್ರಸಾರ)
ಮಾರ್ಡನ್ ಲವ್ ಮುಂಬೈನ ಬಳಿಕ, ಇದೀಗ ಅಮೇಜಾನ್ ಪ್ರೈಮ್ ವಿಡಿಯೋ, ಹೈದರಾಬಾದಿನ ಪ್ರೇಮ ಕಥೆಗಳನ್ನು ಪ್ರಸ್ತುತಪಡಿಸುವ ಮಾರ್ಡನ್ ಲವ್ ಹೈದರಾಬಾದ್ ಸರಣಿಗಳನ್ನು ಪ್ರಸಾರ ಮಾಡಲಿದೆ. ನಾಗೇಶ್ ಕುಕನೂರ್, ವೆಂಕಟೇಶ್ ಮಹಾ, ಉದಯ್ ಗುರ್ರಾಲ ಮತ್ತು ದೇವಿಕಾ ಬಹುಧನಮ್ ಮುಂತಾದವರು ಈ ಸರಣಿಯ ಎಪಿಸೋಡ್‍ಗಳನ್ನು ನಿರ್ದೇಶಿಸಿದ್ದಾರೆ. ಈ ಸರಣಿಯಲ್ಲಿ ವಿಭಿನ್ನ ಕಥೆಗಳ ಮೂಲಕ ಪ್ರೀತಿಯ ವಿವಿಧ ಆಯಾಮಗಳನ್ನು ಕಾಣಬಹುದು. ರೇವತಿ, ನಿತ್ಯಾ ಮೆನನ್, ಮಾಲವಿಕಾ ನಾಯರ್ ಮತ್ತು ಅಲ್ಕಾ ಗುಪ್ತಾ ಮುಂತಾದವರು ಮಾರ್ಡನ್ ಲವ್ ಹೈದರಾಬಾದ್‍ನಲ್ಲಿ ನಟಿಸಿದ್ದಾರೆ.

ರಣ್‍ವೀರ್ ವರ್ಸಸ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್ : ನೆಟ್‍ಫ್ಲಿಕ್ಸ್ ( ಜುಲೈ 8 ರಿಂದ ಪ್ರಸಾರ)
ರಣ್‍ವೀರ್ ಸಿಂಗ್ ನೆಟ್‍ಫ್ಲಿಕ್ಸ್ ಮೂಲಕ, ಪ್ರಥಮ ಬಾರಿಗೆ ಡಿಜಿಟಲ್ ವೇದಿಕೆಯ ಕಾರ್ಯಕ್ರಮವನ್ನು ಪ್ರವೇಶಿಸುತ್ತಿದ್ದಾರೆ. ರಣ್‍ವೀರ್ ವರ್ಸಸ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಸಂವಾದಾತ್ಮಕ ವಿಶೇಷ ರಿಯಾಲಿಟಿ ಕಾರ್ಯಕ್ರಮ. ಗ್ರಿಲ್ಸ್ ನ, ಯೂ ವರ್ಸಸ್ ವೈಲ್ಡ್ ನ ಅದೇ ಫಾರ್ಮ್ಯಾಟ್ ಈ ಶೋನಲ್ಲೂ ಮುಂದುವರೆಯಲಿದೆ.

ಇದನ್ನೂ ಓದಿ: Sini Shetty: ಕರಾವಳಿ ಸುಂದರಿಗೆ ಮಿಸ್​ ಇಂಡಿಯಾ ಪಟ್ಟ, ಸಿನಿ ಶೆಟ್ಟಿಯ ಕಿರು ಪರಿಚಯ ಇಲ್ಲಿದೆ

ರಣ್‍ಬೀರ್, ಗ್ರೀಲ್ಸ್ ಜೊತೆ ಕಾಡುಗಳನ್ನು ಮತ್ತು ಗುಹೆಗಳನ್ನು ನೋಡಲು ಹೋಗುವುದನ್ನು ಕಾಣಬಹುದು. ಈ ಕಾರ್ಯಕ್ರಮದ ಟ್ರೇಲರ್‍ನಲ್ಲಿ ರಣ್‍ಬೀರ್, ಸರ್ಬಿಯಾದ ಕಾಡುಗಳಲ್ಲಿನ ತನ್ನ ಸಾಹಸಗಳ ಸಮಯದಲ್ಲಿ, ಪತ್ನಿ ದೀಪಿಕಾಗಾಗಿ ಅಪರೂಪದ ಕಾಡು ಹೂವೊಂದನ್ನು ಹುಡುಕಿ ತರುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.

ಸಾಸ್ ಬಹು ಅಚಾರ್ ಪ್ರೈವೆಟ್ ಲಿಮಿಟೆಡ್ : ಜೀ5 ( ಜುಲೈ 8 ರಿಂದ ಪ್ರಸಾರ)
ಓವಿಎಫ್‍ನ ಶೋ, ಸಾಸ್ ಬಹು ಅಚಾರ್ ಪ್ರೈವೆಟ್ ಲಿಮಿಟೆಡ್, ಸುಮನ್ (ಅಮೃತಾ ಸುಭಾಶ್) ಎಂಬ ಮಹಿಳೆಯ ಕಥೆ. ಆಕೆ ತನ್ನ ಮಕ್ಕಳ ಕಸ್ಟಡಿಯನ್ನು ಪಡೆಯುವುದಕ್ಕೋಸ್ಕರ ಯಾವುದಾದರೂ ರೀತಿಯಲ್ಲಿ ಹಣ ಗಳಿಸಬೇಕು ಎಂಬ ಗುರಿ ಹೊಂದಿರುತ್ತಾಳೆ. ಅದಕ್ಕಾಗಿ ಅವರು ಉಪ್ಪಿನಕಾಯಿ ಉದ್ಯಮ ಆರಂಭ ಮಾಡುತ್ತಾಳೆ. ಆದರೆ ಸರಿಯಾದ ಹಣಕಾಸಿನ ವ್ಯವಸ್ಥೆ ಮತ್ತು ಶಿಕ್ಷಣ ಇಲ್ಲದ ಕಾರಣ ಆಕೆಗೆ ಮನೆಯಲ್ಲೇ ತಯಾರಿಸಿದ ಉತ್ಪನ್ನವನ್ನು ಮಾರುವಲ್ಲಿ ಕಷ್ಟಗಳು ಎದುರಾಗುತ್ತವೆ. ಸಾಸ್ ಬಹು ಅಚಾರ್ ಪ್ರೈವೆಟ್ ಲಿಮಿಟೆಡ್ ನಲ್ಲಿ ಯಾಮಿನಿ ದಾಸ್, ಅನುಪ್ ಸೋನಿ, ಅಂಜನಾ ಸುಖಾನಿ ಮತ್ತು ಆನಂದೇಶ್ವರ್ ದ್ವಿವೇದಿ ನಟಿಸಿದ್ದಾರೆ. ಈ ಶೋ 6 ಭಾಗಗಳನ್ನು ಹೊಂದಿದೆ.

ಮಿಡ್‍ನೈಟ್ ಇನ್ ದ ಸ್ವಿಟ್ಚ್‍ಗ್ರಾಸ್ : ಬುಕ್‍ಮೈಶೋ ( ಜುಲೈ 8 ರಿಂದ ಪ್ರಸಾರ)
ಮಿಡ್‍ನೈಟ್ ಇನ್ ದ ಸ್ವಿಟ್ಚ್‍ಗ್ರಾಸ್, 2004 ರ ಅವಧಿಯ ಕಥೆಯನ್ನು ಹೊಂದಿದೆ. ಇದರಲ್ಲಿ, ಎಫ್‍ಬಿಐ ಏಜೆಂಟ್ (ಮೆಗಾನ್ ಫಾಕ್ಸ್) ಮತ್ತು ಒಬ್ಬ ಫ್ಲೊರಿಡಾಸ್ಟೇಟ್ ಅಧಿಕಾರಿ ಜೊತೆ ಸೇರಿ ಒಂದು ಕೊಲೆ ಪ್ರಕರಣವನ್ನು ಬೇಧಿಸಲು ಪ್ರಯತ್ನಿಸುತ್ತಾರೆ. ಬ್ರೂಸ್ ವಿಲ್ಲಿಸ್ ಫಾಕ್ಸ್ ನ ಎಫ್‍ಬಿಐ ಏಜೆಂಟ್ ಪಾಟ್ನರ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಜಾದೂಗರ್ : ನೆಟ್‍ಫ್ಲಿಕ್ಸ್ ( ಜುಲೈ 15 ರಿಂದ ಪ್ರಸಾರ)
ಓಟಿಟಿಯ ಜನಪ್ರಿಯ ಸ್ಟಾರ್ ಜೀತೇಂದ್ರ ಕುಮಾರ್ ಅವರ ಅಭಿನಯದ ಸಿನಿಮಾವಿದು. ತಾನು ಮೆಚ್ಚಿದ ಹುಡುಗಿಯನ್ನು ಆಕರ್ಷಿಸಲು ತನ್ನ ಕಾಲೋನಿಯ ಫುಟ್‍ಬಾಲ್ ತಂಡದಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸುವ ಯುವಕನ ಕಥೆಯನ್ನು ಇದು ಹೊಂದಿದೆ. ಈ ಸಿನಿಮಾವನ್ನು ಸಮೀರ್ ಸಕ್ಸೇನಾ ನಿರ್ದೇಶಿಸಿದ್ದು, ಇದರಲ್ಲಿ ಜಾವೇದ್ ಜಾಫ್ರಿ ಮತ್ತು ಆರುಷಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಶೂರ್‍ವೀರ್ : ಡಿಸ್ನಿ ಫ್ಲಸ್ ಹಾಟ್‍ಸ್ಟಾರ್ (ಜುಲೈ 15 ರಿಂದ ಪ್ರಸಾರ)
ಈ ವೆಬ್ ಸರಣಿ, ವಾಯುಸೇನೆ, ಭೂ ಸೇನೆ ಮತ್ತು ನೌಕಾದಳದ ಅತ್ಯುತ್ತಮ ಅಧಿಕಾರಿಗಳು ದೇಶವನ್ನು ರಕ್ಷಿಸಲು ಹೋರಾಡುವ ಕಥೆಯನ್ನು ಹೊಂದಿದೆ. ಅವರು ಶತ್ರುಗಳನ್ನು ಸೋಲಿಸಲು ಏನೆಲ್ಲಾ ತಯಾರಿಗಳನ್ನು ಮಾಡುತ್ತಾರೆ ಎಂಬುವುದನ್ನು ಇದರ ಎಪಿಸೋಡ್‍ಗಳಲ್ಲಿ ಕಾಣಬಹುದು. ಮಕರಂದ್ ದೇಶಪಾಂಡೆ, ಮನೀಶ್ ಚೌಧರಿ ಮುಂತಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂಡಿಯನ್ ಪ್ರಿಡೇಟರ್ : ದ ಬುಚರ್ ಆಫ್ ಡೆಲ್ಲಿ : ನೆಟ್‍ಫ್ಲಿಕ್ಸ್ ( ಜುಲೈ 20 ರಿಂದ ಪ್ರಸಾರ)
ಇಂಡಿಯನ್ ಪ್ರಿಡೇಟರ್ : ದ ಬುಚರ್ ಆಫ್ ಡೆಲ್ಲಿ , ಕೊಲೆಗಾರನೊಬ್ಬ ಮಾಡಿದ ಘೋರ ಕೊಲೆಗಳನ್ನು ವಿವರಿಸುವ ವೆಬ್‍ಸರಣಿ. ನಿಮ್ಮ ಮೈ ನಡುಗಿಸುವ, ಭಯದಿಂದ ಬೆವರುವಂತೆ ಮಾಡುವ ಕೊಲೆಗಳ ಕಥೆಗಳನ್ನು ಇದರಲ್ಲಿ ನೋಡಬಹುದು.

ಮಸಬಾ ಮಸಬಾ : ನೆಟ್‍ಫ್ಲಿಕ್ಸ್ ( ಜುಲೈ 29 ರಿಂದ ಪ್ರಸಾರ)
ನಟಿ ನೀನಾ ಗುಪ್ತಾ ಮತ್ತು ಅವರ ಮಗಳು ಮಸಬಾ, ಜೀವನದ ಏಳು ಬೀಳುಗಳನ್ನು ಈ ಹೊಸ ಸೀಸನ್‍ನಲ್ಲಿ ಕಾಣಬಹುದು. ವಿನಿಯಾರ್ಡ್ ಫಿಲ್ಮ್ಸ್ ನಿರ್ಮಿಸಿರುವ ಈ ಸರಣಿಯನ್ನು ಸೋನಮ್ ನಾಯರ್ ನಿರ್ದೇಶಿಸಿದ್ದಾರೆ. ನೀಲ್ ಭೂಪಾಲನ್, ರಿತಾಶ ರಾಥೋಡ್, ಕುಶಾ ಕಪೀಲ, ಬರ್ಖಾ ಸಿಂಗ್, ರಾಮ್ ಕಪೂರ್ ಮತ್ತು ಅರ್ಮಾನ್ ಖೇರಾ ಈ ಸರಣಿಯಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Breaking: ಯುವ ನಟನ ದಾರುಣ ಅಂತ್ಯ! 30ಕ್ಕೆ ಬದುಕಿನ ಪಾತ್ರ ಮುಗಿಸಿದ ಪ್ರತಿಭಾವಂತ

ಸ್ಕ್ಯಾಮ್ 2003 : ಸೋನಿ ಲಿವ್ (ಸದ್ಯದಲ್ಲೇ ಪ್ರಸಾರವಾಗಲಿದೆ)
ಪತ್ರಕರ್ತ ಸಂಜಯ್ ಸಿಂಗ್ ಅವರ ‘ರಿಪೋರ್ಟರ್ ಕಿ ಡೈರಿ’ ಎಂಬ ಹಿಂದಿ ಪುಸ್ತಕವನ್ನು ಆಧರಿಸಿದ ಸರಣಿ ಇದು. ಇದು ಅಬ್ದುಲ್ ಕರೀಂ ತೆಲಗಿಯ ಅಪರಾಧ ಜೀವನದ ಕುರಿತ ಕಥೆಯಾಗಿದೆ. ರಂಗಭೂಮಿ ನಟ ಗಗನ್ ದೇವ್ ರಾಯರ್ ಈ ಸರಣಿಯಲ್ಲಿ ಅಬ್ದುಲ್ ಕರೀಂ ತೆಲಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
Published by:Ashwini Prabhu
First published: