Salman Khan: ಸಲ್ಮಾನ್​ರನ್ನು ಹಿಂಬಾಲಿಸಿ ಸ್ಟಾರ್​ ಆದ ನಾಯಿ..!

ಐಐಎಫ್​ಎ ಕಾರ್ಯಕ್ರಮದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದು ಯಾವುದೋ ನಟ-ನಟಿಯರ ವಿಡಿಯೋ ಅಲ್ಲ. ಅದು ಒಂದು ನಾಯಿ ಸಲ್ಮಾನ್​ ಖಾನ್​ರನ್ನು ಹಿಂಬಾಲಿಸುತ್ತಾ 'ದಬಂಗ್​ 3'ರ ನಟಿ ಸಾಯಿ ಮಂಜ್ರೇಕರ್ ಜತೆ ಹೆಜ್ಜೆ ಹಾಕಿತ್ತು.

ಐಐಎಫ್​ಎ ಕಾರ್ಯಕ್ರಮದಲ್ಲಿ ಸಲ್ಮಾನ್​ ಜತೆ ಬಂದ ನಾಯಿ

ಐಐಎಫ್​ಎ ಕಾರ್ಯಕ್ರಮದಲ್ಲಿ ಸಲ್ಮಾನ್​ ಜತೆ ಬಂದ ನಾಯಿ

  • Share this:
ಇತ್ತೀಚೆಗಷ್ಟೆ IIFA ಅವಾರ್ಡ್ಸ್​ ಕಾರ್ಯಕ್ರಮ ನಡೆದಿದ್ದು ಗೊತ್ತೇ ಇದೆ. ಇದರಲ್ಲಿ ತಾರೆಯರು ವಿನ್ಯಾಸಿತ ಬಟ್ಟೆಗಳು ಹಾಗೂ ಮೇಕಪ್​ ಮಾಡಿಕೊಂಡು ಮಿಂಚಿದರೆ, ಕರೆಯದೆ ಬಂದ ಅತಿಥಿಯೊಬ್ಬರು ಈಗ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ.

ಹೌದು, ಐಐಎಫ್​ಎ ಕಾರ್ಯಕ್ರಮದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದು ಯಾವುದೋ ನಟ-ನಟಿಯರ ವಿಡಿಯೋ ಅಲ್ಲ. ಅದು ಒಂದು ನಾಯಿ ಸಲ್ಮಾನ್​ ಖಾನ್​ರನ್ನು ಹಿಂಬಾಲಿಸುತ್ತಾ 'ದಬಂಗ್​ 3'ರ ನಟಿ ಸಾಯಿ ಮಂಜ್ರೇಕರ್ ಜತೆ ಹೆಜ್ಜೆ ಹಾಕಿತ್ತು.

  
View this post on Instagram
 

Every dog has his day this was his time to shine and he knew #SalmanKhan is a big animal lover ❤


A post shared by Viral Bhayani (@viralbhayani) on


ನಟಿಯೊಂದಿಗೆ ಹೆಜ್ಜೆ ಹಾಕಿದ ನಾಯಿ ಎಂದರೆ ಅದು ಯಾರನ್ನೋ ಸಾಕು ನಾಯಿ ಲ್ಲ. ಅದೊಂದು ಬೀದಿ ನಾಯಿ. ಹೌದು, ಐಐಎಫ್​ಎ ಕಾರ್ಯಕ್ರಮಕ್ಕೆ ಸಲ್ಮಾನ್​ ಖಾನ್​ ಎಂಟ್ರಿ ಕೊಟ್ಟಾಗ ಅವರ ಹಿಂದೆಯೇ ಈ ನಾಯಿಯೂ ಬಂದಿದೆ.

ಇದನ್ನೂ ಓದಿ: ಮೆಗಾಸ್ಟಾರ್​ ಚಿರಂಜೀವಿ ಕುಟುಂಬದ ವಿರುದ್ಧ 50 ಕೋಟಿ ವಂಚನೆ ಆರೋಪ..!

ಅಲ್ಲೇ ಇದ್ದ ನಿರೂಪಕಿಯೊಬ್ಬರು ನಾಯಿಯನ್ನು ಮುದ್ದಿಸುತ್ತಾ ಒಂದು ವಿಡಿಯೋ ಮಾಡಿದ್ದು, ಅದೂ ಸಹ ಈಗ ವೈರಲ್​ ಆಗುತ್ತಿದೆ.

  
View this post on Instagram
 

Spread love! 🐶❤️


A post shared by Aditi Bhatia 🎭 (@aditi_bhatia4) on


ಐಐಎಫ್​ಎ ಅವಾರ್ಡ್ಸ್​ನಲ್ಲಿ ಸಲ್ಮಾನ್​ ಖಾನ್​ ಎಂಟ್ರಿಗೆ ಸಿಗಬೇಕಿದ್ದ ಎಲ್ಲ ಕ್ರೆಡಿಟ್​ ಆ ಮುದ್ದು ನಾಯಿಗೆ ಸಿಕ್ಕಿತ್ತು. ಈ ವಿಡಿಯೋ ತುಂಬಾ ಜನ ನಾನಾ ರೀತಿಯ ಕಮೆಂಟ್​ ಮಾಡುತ್ತಿದ್ದಾರೆ. ಒಬ್ಬರಂತೂ ಹಿಂದೆ ಹೋದರೆ ಯಾವತ್ತೂ ಗಾಡಿಯ ಮುಂದೆ ಬರುವುದಿಲ್ಲ ಎಂದು ಬರೆದರೆ, ನಿಖಿತಾಶಾ ಎಂಬುವರು, ನಾನು ಈಗಷ್ಟೆ ಡಾಗ್ಬೀರ್​ ಕಪೂರ್​ ಅವರನ್ನು ನೋಡಿದೆ ಎಂದು ಬರೆದಿದ್ದಾರೆ.

 

 

Alia Bhatt: ವೈರಲ್​ ಆಗುತ್ತಿದೆ ಅಲಿಯಾರ ಮೇಕಪ್​ ಇಲ್ಲದ ಫೋಟೋ..!


 

 
First published: