ಅಮಿತಾಭ್​ರನ್ನು ಕಂಡು ಸಲ್ಮಾನ್​ ಖಾನ್​ ಹೇಗಿದ್ದೀರಾ ಎಂದವರು ಯಾರು ಗೊತ್ತಾ?

news18
Updated:July 2, 2018, 6:06 PM IST
ಅಮಿತಾಭ್​ರನ್ನು ಕಂಡು ಸಲ್ಮಾನ್​ ಖಾನ್​ ಹೇಗಿದ್ದೀರಾ ಎಂದವರು ಯಾರು ಗೊತ್ತಾ?
news18
Updated: July 2, 2018, 6:06 PM IST
ನ್ಯೂಸ್​ 18 ಕನ್ನಡ 

ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಸಕ್ರಿಯವಾಗಿರುವ ಸೆಲೆಬ್ರಿಟಿಗಳಲ್ಲಿ ಅಮಿತಾಭ್​ ಅವರೂ ಒಬ್ಬರು. ಅದರಲ್ಲೂ ಅವರು ಟ್ವಿಟರ್​ನಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ. ಅದರಲ್ಲಿ ತಮ್ಮ ಅನುಭವಗಳನ್ನು ಹಿಂಬಾಲಕರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಬಾಲಿವುಡ್‍ನಲ್ಲಿ ತಮ್ಮ ನಟನೆ ಹಾಗೂ ಸ್ವಭಾವದ ಮೂಲಕವೇ ಜಗತ್ತಿನಾದ್ಯಂತ ಪರಿಚಿತವಾರೋ ನಟ ಅಮಿತಾಭ್​ ಬಚ್ಚನ್. ಅದೆಷ್ಟೋ ಅಭಿಮಾನಿಗಳನ್ನು ಹೊಂದಿರೋ ಬಿಗ್​-ಬಿ ಚಿತ್ರೀಕರಣಕ್ಕೆಂದು ಇತ್ತೀಚೆಗೆ ಗ್ಲಾಸ್‍ಗೋಗೆ ತೆರಳಿದ್ದರು.

ಅಲ್ಲಿನ ಬೀದಿಗಳಲ್ಲಿ ಒಬ್ಬರೇ ನಡೆದುಕೊಂಡು ಹೋಗುವಾಗ ಎಲ್ಲಿಂದಲೋ ಕಾರಿನಲ್ಲಿ ಬಂದ ಒಬ್ಬ ವ್ಯಕ್ತಿಯೊಬ್ಬರು ಅಮಿತಾಭ್​ ಅವರನ್ನು ನೋಡುತ್ತಲೇ 'ಹೇ ಸಲ್ಮಾನ್ ಖಾನ್ ಹೌ ಆರ್​ ಯೂ ಡೂಯಿಂಗ್' ಎಂದು ಕೇಳಿದ್ದಾರೆ.

 ತನ್ನ ಹೆಸರಿನ ಬದಲಿಗೆ ಸಲ್ಮಾನ್ ಖಾನ್ ಹೆಸರಲ್ಲಿ ನನ್ನನ್ನು ಗುರುತಿಸಿದ ವ್ಯಕ್ತಿ ಬಗ್ಗೆ, ಸ್ವತಃ ಅಮಿತಾಭ್​ ಬಚ್ಚನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...