ಕನ್ನಡಿಗ ಜಿ ಆರ್ ಗೋಪಿನಾಥ್ ಅವರ ಕಥೆಯನ್ನಿಟ್ಟುಕೊಂಡು ತಯಾರಾದ 'ಸೂರರೈ ಪೊಟ್ರು' (Soorarai Pottru ) ತಮಿಳು ಸಿನಿಮಾ 2020ರಲ್ಲಿ ಬಿಗ್ ಹಿಟ್ ಆಗಿತ್ತು. ಸುಧಾ ಕೊಂಗಾರ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ತಮಿಳಿನ ಸ್ಟಾರ್ ನಟ ಸೂರ್ಯ (Actor Surya) ಅಭಿನಯಿಸಿದ್ದರು. ಈ ಚಿತ್ರ ಆಸ್ಕರ್ ಪ್ರಶಸ್ತಿ ರೇಸ್‌ನಲ್ಲೂ ಇತ್ತು. ಸೂರರೈ ಪೊಟ್ರು ಚಿತ್ರ ತಂಡಕ್ಕೆ ಭರ್ಜರಿ ಯಶಸ್ಸು ನೀಡಿತ್ತು. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಈ ಸಿನಿಮಾ (Movie) ರಿಲೀಸ್ ಆಗಿ, ಓಟಿಟಿಯಲ್ಲಿ ಪ್ರದರ್ಶನ ಕಂಡಿತ್ತು.
ಬಾಲಿವುಡ್‌ನಲ್ಲಿ ʻಸೂರರೈ ಪೊಟ್ರುʼ
ತಮಿಳಿನ ಈ ಯಶಸ್ವಿ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುತ್ತಿರುವ ವಿಚಾರ ಈಗ ಎಲ್ಲರಿಗೂ ಗೊತ್ತಿರುವಂತದ್ದು. ʻಸೂರರೈ ಪೊಟ್ರು' ಸಿನಿಮಾದಲ್ಲಿ ಸೂರ್ಯ ನಿಭಾಯಿಸಿದ್ದ ಪಾತ್ರವನ್ನು ಕಿಲಾಡಿ ಅಕ್ಷಯ್ ಕುಮಾರ್ ನಿರ್ವಹಿಸುತ್ತಿದ್ದಾರೆ.
ಈ ರೀತಿಯ ಸತ್ಯಕಥೆ ಆಧಾರಿತ ಮತ್ತು ಬಯೋಪಿಕ್ ಸಿನಿಮಾಗಳಲ್ಲಿ ನಟಿಸುವಲ್ಲಿ ಹಿಂದಿಯಲ್ಲಿ ಅಕ್ಷಯ್ ಕುಮಾರ್ ಎತ್ತಿದ ಕೈ. ಇಂತಹ ಅವರ ಹಲವು ಚಿತ್ರಗಳು ಬ್ಲಾಕ್ ಬಸ್ಟರ್ ಆಗಿವೆ ಕೂಡ.
ಈಗ ಕನ್ನಡಿಗ ಜಿ ಆರ್ ಗೋಪಿನಾಥ್ ಅವರ ಜೀವನ ಕಥೆಯಾಧಾರಿತ ಸಿನಿಮಾವಾದ, ʻಸೂರರೈ ಪೊಟ್ರುʼ ನಲ್ಲಿ ಅಕ್ಷಯ್ ಬಣ್ಣ ಹಚಿದ್ದು, ಇನ್ನೂ ಹೆಸರಿಡದ ಈ ಸಿನಿಮಾ ಸೆಪ್ಟೆಂಬರ್ 1, 2023 ರಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ʻಸೂರರೈ ಪೊಟ್ರುʼ ಹಿಂದಿ ರಿಮೇಕ್ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್
ʻಸೂರರೈ ಪೊಟ್ರುʼ ಹಿಂದಿ ರಿಮೇಕ್ ಬಿಡುಗಡೆ ಬಗ್ಗೆ ಅಕ್ಷಯ್ ಕುಮಾರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯ ಪ್ರಕಟಣೆಯ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
ವಿಶ್ವದಾದ್ಯಂತ 1 ಸೆಪ್ಟೆಂಬರ್, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಕ್ಷಯ್ ತಿಳಿಸಿದ್ದಾರೆ. ಸೂರರೈ ಪೊಟ್ರು ಹಿಂದಿ ರಿಮೇಕ್‌ನಲ್ಲಿ ತಮಿಳಿನಲ್ಲಿ ಅಪರ್ಣಾ ಬಾಲಮುರಳಿ ನಿಭಾಯಿಸಿದ ಪಾತ್ರವನ್ನು ಹಿಂದಿಯಲ್ಲಿ ರಾಧಿಕಾ ಮದನ್ ಅಕ್ಷಯ್‌ಗೆ ನಾಯಕಿಯಾಗಿ ಪರದೆ ಹಂಚಿಕೊಂಡಿದ್ದಾರೆ.
ರಿಮೇಕ್ ಸಿನಿಮಾ ಮಾಡದಂತೆ ʻಕಿಲಾಡಿʼಗೆ ಫ್ಯಾನ್ಸ್ ಸಲಹೆ
ಅಕ್ಷಯ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದೇ ತಡ ಅಭಿಮಾನಿಗಳು, ಸಿನಿ ರಸಿಕರು ಶುಭಾಶಯ ತಿಳಿಸಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ಅಕ್ಷಯ್ ಅವರಿಗೆ ಒಂದು ಸಲಹೆ ಕೂಡ ನೀಡಿದ್ದಾರೆ. ಹೌದು, ಅಕ್ಷಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ "ದಯವಿಟ್ಟು ಚಿತ್ರಗಳನ್ನು ರಿಮೇಕ್ ಮಾಡುವುದನ್ನು ನಿಲ್ಲಿಸಿ" ಅಂತಾ ಕಾಮೆಂಟ್ ಮಾಡುವ ಮೂಲಕ ಸಲಹೆ ನೀಡಿದ್ದಾರೆ.
ಇನ್ನೋರ್ವ ಬಳಕೆದಾರ ನೀವು ರಿಮೇಕ್ ಚಿತ್ರ ಮಾಡಲು ಏಕೆ ತೀರ್ಮಾನಿಸಿದ್ದೀರಿ, ನಾವು ನಿಮ್ಮ ಹೊಸ ಸಿನಿಮಾಗಳನ್ನು, ಹೊಸ ಕಟೆಂಟ್ ಇರುವ ಸಿನಿಮಾಗಳನ್ನು ನೋಡಲು ಬಯಸುತ್ತೇವೆ.
ಹೀಗಾಗಿ ಪ್ಲೀಸ್ ರಿಮೇಕ್ ಸಿನಿಮಾ ಮಾಡಬೇಡಿ ಅಂತಾ ಫ್ಯಾನ್ಸ್ ಅಕ್ಷಯ್‌ಗೆ ಸಲಹೆ ನೀಡಿದ್ದಾರೆ. ಇನ್ನೋರ್ವ ಅಭಿಮಾನಿ ಪ್ರಮಾಣಕ್ಕಿಂತ ಗುಣಮಟ್ಟದ ಮೇಲೆ ಹೆಚ್ಚು ಗಮನ ಹರಿಸಬೇಕು ಅಂತಾ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಕಾಮೆಂಟ್ ವಿಭಾಗ ರಿಮೇಕ್ ಸಿನಿಮಾ ಮಾಡಬೇಡಿ ಎಂದು ಹೇಳುವುದರಿಂದ ತುಂಬಿ ಹೋಗಿತ್ತು. ಅಕ್ಷಯ್ ತಮ್ಮ ಫ್ಯಾನ್ಸ್‌ಗಳಿಗೆ ಮುಂದೆ ಬೆಲೆ ಕೊಡ್ತಾರಾ ಅಥವಾ ಕಟೆಂಟ್‌ಗೆ ಪ್ರಾಮುಖ್ಯತೆ ಕೊಡ್ತಾರಾ ನೋಡಬೇಕಿದೆ.
ಅಕ್ಷಯ್ ಅವರ ಇತ್ತೀಚಿನ ಚಿತ್ರಗಳು ದಕ್ಷಿಣ ಭಾರತದ ಚಿತ್ರಗಳ ರಿಮೇಕ್ ಆಗಿವೆ. ಅವರ ಕೊನೆಯ ಸಿನಿಮಾ ಸೆಲ್ಫಿ, ಮಲಯಾಳಂ ಚಲನಚಿತ್ರ ಡ್ರೈವಿಂಗ್ ಲೈಸೆನ್ಸ್‌ನ ರಿಮೇಕ್ ಆಗಿತ್ತು. ಕಳೆದ ವರ್ಷ ಬಿಡುಗಡೆಯಾದ ಕಟ್‌ಪುತ್ಲಿ ಮತ್ತು ಬಚ್ಚನ್ ಪಾಂಡೆ, ತಮಿಳಿನ ರಾತ್ಸಾಸನ್ ಮತ್ತು ಜಿಗರ್ ತಂಡಾದ ರೀಮೇಕ್‌ಗಳಾಗಿವೆ.
ಇದನ್ನೂ ಓದಿ: Ajay Devgn: ಕಾಜೋಲ್ ಮುಖ ನೋಡಲು ಕೂಡ ನನಗೆ ಇಷ್ಟವಿರಲಿಲ್ಲ, ಆಕೆ ಸೊಕ್ಕಿನ ಹುಡುಗಿ ಎಂದಿದ್ಯಾಕೆ ಅಜಯ್ ದೇವಗನ್?
ಸೂರರೈ ಪೊಟ್ರು ಅತ್ಯುತ್ತಮ ನಟಿ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಮೂಲ ತಮಿಳು ಚಿತ್ರವನ್ನೂ ನಿರ್ದೇಶಿಸಿದ ಸುಧಾ ಕೊಂಗರ ನಿರ್ದೇಶಿಸುತ್ತಿರುವ ಹಿಂದಿ ರಿಮೇಕ್‌ನಲ್ಲಿ ಸೂರ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ