ನಿರ್ದೇಶಕ ವಿವೇಕ್ ಅಗ್ನಿಹೋತ್ರಿ(Vivek Agnihotri) ಅವರ “ದಿ ಕಾಶ್ಮೀರ್ ಫೈಲ್ಸ್”(The Kashmir Files) ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಬಿಡುಗಡೆಯಾದ ದಿನದಿಂದಲೂ ಭಾರಿ ಸದ್ದು ಮಾಡುತ್ತಿರುವ ಚಿತ್ರಕ್ಕೆ ಒಳ್ಳೆಯ ವಿಮರ್ಶೆಗಳು ಬರುತ್ತಿವೆ. 1990ರಲ್ಲಿ ಕಾಶ್ಮೀರ(Kashmir) ದಂಗೆಯ ಸಮಯದಲ್ಲಿ ಕಾಶ್ಮೀರಿ ಪಂಡಿತರು(Kashmir Pandith)s ಅನುಭವಿಸಿದ ಕ್ರೂರ ನೋವುಗಳ ನೈಜ ಕಥೆಯನ್ನು ‘ದಿ ಕಾಶ್ಮೀರ್ ಫೈಲ್ಸ್ʼ ಚಿತ್ರ ಪ್ರೇಕ್ಷಕರ ಮುಂದೆ ಅನಾವರಣಗೊಳಿಸಿದೆ. ಈಗಾಗಲೇ ಪ್ರೇಕ್ಷಕರ ಮನಗೆದ್ದಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಾಕ್ಸ್ ಆಫೀಸ್(Box Office)ನಲ್ಲೂ ದೊಡ್ಡಮಟ್ಟದ ಸದ್ದು ಮಾಡುತ್ತಿದೆ. ಉತ್ತಮ ಕಲೆಕ್ಷನ್(Collection) ಮಾಡುತ್ತಿರುವ ಈ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ 100 ಕೋಟಿ ಕ್ಲಬ್(100 Crore Club) ಪ್ರವೇಶಿಸಿದೆ. ಸಿನಿಪ್ರಿಯರನ್ನ ಚಿತ್ರಮಂದಿರಗಳಿಗೆ ಆಕರ್ಷಿಸುವಲ್ಲಿ ಯಶಸ್ವಿಯಾಗಿರುವ ಈ ಚಿತ್ರ ಇದೇ ರೀತಿಯ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಶೀಘ್ರವೇ 150 ಕೋಟಿ ಕ್ಲಬ್‌ಗೆ ಎಂಟ್ರಿಕೊಡುವುದರಲ್ಲಿ ಸಂದೇಹವೇ ಇಲ್ಲ.
ಹರಿಯಾಣದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಉಚಿತ ಪ್ರದರ್ಶನ!
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದರ ನಡುವೆಯೂ ಹರಿಯಾಣದಲ್ಲಿ ಕೆಲವು ರಾಜಕಾರಣಿಗಳು, ಚಿತ್ರ ವೀಕ್ಷಣೆಗೆ ಉಚಿತ ಪ್ರವೇಶ ಕಲ್ಪಿಸಿರುವ ಬಗ್ಗೆ ವರದಿಯಾಗಿದೆ. ಜನಪ್ರತಿನಿಧಿಗಳ ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ನಿರ್ದೇಶಕ ಹಾಗೂ ಸಹ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ, ʼಸೃಜನಶೀಲ ವ್ಯವಹಾರವನ್ನು ಗೌರವಿಸುವಂತೆʼ ರಾಜಕಾರಣಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿರುವ ವಿವೇಕ್ ಅಗ್ನಿಹೋತ್ರಿ, ರೇವಾರಿಯಲ್ಲಿ ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದ ಉಚಿತ ಪ್ರದರ್ಶನ ನಿಲ್ಲಿಸುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನ ಒತ್ತಾಯಿಸಿದ್ದಾರೆ.
ಇದು ಕ್ರಿಮಿನಲ್ ಅಪರಾಧವೆಂದ ವಿವೇಕ್ ಅಗ್ನಿಹೋತ್ರಿ
ಅಲ್ಲದೇ ಚಲನಚಿತ್ರವನ್ನು ಮುಕ್ತವಾಗಿ ಮತ್ತು ಉಚಿತವಾಗಿ ಪ್ರದರ್ಶಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದಿರುವ ವಿವೇಕ್ ಅಗ್ನಿಹೋತ್ರಿ, “ಈ ರೀತಿಯಾಗಿ ದಿ ಕಾಶ್ಮೀರ್ ಫೈಲ್ಸ್” ಚಿತ್ರವನ್ನು ಉಚಿತ ಮತ್ತು ಮುಕ್ತವಾಗಿ ತೋರಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಆತ್ಮೀಯ ಮನೋಹರ್ ಲಾಲ್ ಖಟ್ಟರ್ ಅವರೇ, ಇದನ್ನು ನಿಲ್ಲಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ರಾಜಕೀಯ ನಾಯಕರು ಸೃಜನಶೀಲ ವ್ಯವಹಾರವನ್ನು ಗೌರವಿಸಬೇಕು. ನಿಜವಾದ ರಾಷ್ಟ್ರೀಯತೆ, ಸಮಾಜ ಸೇವೆ ಎಂದರೆ ಕಾನೂನಾತ್ಮಕವಾಗಿ, ಶಾಂತ ರೀತಿಯಲ್ಲಿ ಟಿಕೆಟ್ ಖರೀದಿಸುವುದಾಗಿದೆ ಎಂದು ವಿವೇಕ್ ಅಗ್ನಿಹೋತ್ರಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
WARNING:
Showing #TheKashmirFiles like this in open and free is a CRIMINAL OFFENCE. Dear @mlkhattar ji, I’d request you to stop this. Political leaders must respect creative business and true Nationalism and Social service means buying tickets in a legal and peaceful manner. 🙏 pic.twitter.com/b8yGqdrmUh
— Vivek Ranjan Agnihotri (@vivekagnihotri) March 20, 2022
ಇದನ್ನೂ ಓದಿ: ಬಾಕ್ಸ್ ಆಫೀಸ್ ಕೊಳ್ಳೆ! 100 ಕೋಟಿ ಕ್ಲಬ್ ಸೇರಿದ The Kashmir Files!
ವ್ಯಾಪಕ ಮೆಚ್ಚುಗೆ ಗಳಿಸಿದ ‘ದಿ ಕಾಶ್ಮೀರ್ ಫೈಲ್ಸ್’
ವಿವೇಕ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿರುವ “ದಿ ಕಾಶ್ಮೀರ್ ಫೈಲ್ಸ್” ಚಿತ್ರ ದೇಶದ ಎಲ್ಲಾ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ನೈಜ ಕಥೆಯನ್ನು ಆಧರಿಸಿರುವ ಈ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಈ ಚಿತ್ರವು ಕಾಶ್ಮೀರದಲ್ಲಿ ನಡೆದ ದಂಗೆ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳಾದ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿದ್ದು, ಈ ಚಿತ್ರವು ಜನಾಂಗೀಯ ಹತ್ಯೆಯನ್ನು ಪ್ರತಿಬಿಂಬಿಸುತ್ತದೆ.
ಚಿತ್ರಕ್ಕೆ ಹಲವೆಡೆ ಟ್ಯಾಕ್ಸ್ ಫ್ರೀ!
“ದಿ ಕಾಶ್ಮೀರ್ ಫೈಲ್ಸ್” ಚಿತ್ರಕ್ಕೆ ದೇಶದ ಹಲವು ರಾಜ್ಯಗಳಲ್ಲಿ ತೆರಿಗೆಯನ್ನ ಮುಕ್ತಗೊಳಿಸಲಾಗಿದೆ. ಪ್ರಮುಖವಾಗಿ ಕರ್ನಾಟಕ, ಉತ್ತರ ಪ್ರದೇಶ, ತ್ರಿಪುರಾ, ಗೋವಾ, ಹರಿಯಾಣ, ಗುಜರಾತ್ ಮತ್ತು ಉತ್ತರಾಖಂಡ ಸೇರಿದಂತೆ ಹಲವು ಕಡೆಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಈ ನಡುವೆ ನೈಜ ಘಟನೆಯನ್ನು ಆಧರಿಸಿ ತೆಗೆಯಲಾಗಿರುವ ಈ ಚಿತ್ರ ರಾಜಕೀಯ ಪಕ್ಷಗಳ ಪರ-ವಿರೋಧಕ್ಕೆ ಕಾರಣವಾಗಿದೆ.
ಇದನ್ನೂ ಓದಿ: 'The Kashmir Files' ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ 'ವೈ' ಕೆಟಗರಿ ಭದ್ರತೆ
ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಬಿಜೆಪಿ ನಾಯಕರು ಪರವಾಗಿ ಚರ್ಚೆ ನಡೆಸುತ್ತಿದ್ದರೆ, ಕಾಂಗ್ರೆಸ್ ನಾಯಕರು ಈ ಚಿತ್ರದ ಬಗ್ಗೆ ವಿರೋಧದ ಮಾತುಗಳನ್ನ ಆಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ