ಹಾಲಿವುಡ್ (Hollywood) ಸಿನಿಮಾಗಳ ರೇಂಜ್ನಲ್ಲಿ ಸಿನಿಮಾ ಮಾಡಬೇಕು ಎನ್ನುವುದು ಭಾರತೀಯ ಚಿತ್ರರಂಗದಲ್ಲಿ ಪ್ರತಿ ನಿರ್ದೇಶಕನ (Director) ಕನಸು. ಆ ಟೆಕ್ನಿಕಲ್ ಸೌಲಭ್ಯ, ಆ್ಯಕ್ಷನ್, ಸ್ಟಂಟ್, ಸೌಂಡ್, ಲೈಟಿಂಗ್ಸ್ ನಮ್ಮಲ್ಲೂ ಬೇಕು, ನಾವು ಭರ್ಜರಿ ಸಿನಿಮಾ ಮಾಡಬೇಕು ಎಂದು ಪ್ರತಿ ನಿರ್ದೇಶಕ ಕನಸು ಕಾಣುತ್ತಾರೆ. ಆದರೆ ಈಗ ಹಾಲಿವುಡ್ ನಿರ್ದೇಶಕರೆಲ್ಲ ಭಾರತೀಯ ಸಿನಿಮಾಗಳನ್ನು ನೋಡಿ ವಾವ್ ವಾವ್ ಎನ್ನುವ ಸಮಯ ಬಂದಿದೆ. ಇತ್ತೀಚೆಗೆ ಹಾಲಿವುಡ್ನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರ ತ್ರಿಬಲ್ ಆರ್ (RRR) ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಸ್ಎಸ್ ರಾಜಮೌಳಿ ಮತ್ತು ಸಿನಿಮಾ ಲೆಜೆಂಡ್ ಸ್ಟೀವನ್ ಸ್ಪೀಲ್ಬರ್ಗ್ (Steven Spielberg) ಇತ್ತೀಚೆಗೆ ಜೂಮ್ ಕಾಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರು ಸಿನಿಮಾಗಳ ಮೇಲಿನ ತಮ್ಮ ಪ್ರೀತಿಯ ಬಗ್ಗೆ ಚರ್ಚಿಸಿದರು.
ಸಂವಾದವನ್ನು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಆಯೋಜಿಸಿತ್ತು. ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸ್ಟೀವನ್ ಸ್ಪೀಲ್‌ಬರ್ಗ್‌ನ ದಿ ಫ್ಯಾಬೆಲ್‌ಮ್ಯಾನ್ಸ್ ಅನ್ನು ಸಹ-ನಿರ್ಮಾಣ ಮತ್ತು ಬಿಡುಗಡೆ ಮಾಡಿದೆ. ಮಾತುಕತೆಯ ಸಮಯದಲ್ಲಿ, SS ರಾಜಮೌಳಿ ಅವರ RRR ಸಿನಿಮಾ ವಿಚಾರ ಕೂಡಾ ಚರ್ಚೆಯಾಗಿದೆ.
ಸ್ಟೀವನ್ ಸ್ಪೀಲ್ಬರ್ಗ್ RRR ಸಿನಿಮಾದ ವಿಮರ್ಶೆ
ಸ್ಟೀವನ್ ಸ್ಪೀಲ್ಬರ್ಗ್ RRR ಸಿನಿಮಾದ ವಿಮರ್ಶೆಯನ್ನು ತಿಳಿಸಿದ್ದಾರೆ. ನಿಮ್ಮ ಸಿನಿಮಾ ಅತ್ಯುತ್ತಮವಾಗಿದೆ. ಇದು ಅದ್ಭುತವಾಗಿದೆ. ನನಗೆ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಸುಂದರವಾದ ದೃಶ್ಯ ಶೈಲಿ. ಸಿನಿಮಾ ನೋಡುವಾಗ ಮತ್ತು ಅನುಭವಿಸುವಾಗ ಅಸಾಮಾನ್ಯ ಅನುಭವ ಕೊಡುತ್ತದೆ. ಆದ್ದರಿಂದ RRR ಗೆ ಅಭಿನಂದನೆಗಳು ಎಂದಿದ್ದಾರೆ.
ಸಿನಿಮಾ ಹೊಗಳಿದ ಹಾಲಿವುಡ್ ನಿರ್ದೇಶಕ
ಆರ್‌ಆರ್‌ಆರ್‌ನ ಶೋಗಳ ಬಗ್ಗೆ ಹಿರಿಯ ಚಲನಚಿತ್ರ ನಿರ್ಮಾಪಕ ಮಾತನಾಡಿ, ನನಗೆ ಸಿನಿಮಾ ಒಂದು ಶೋ ಅನಿಸಿತು. ನಿಮ್ಮ ಚಿತ್ರದಲ್ಲಿ, ನೀವು ಅಲಿಸನ್ ಡೂಡಿಯ ಕಥೆಯನ್ನು ಕೊನೆಗೊಳಿಸಿದ ರೀತಿ ಮೆಚ್ಚುಗೆಯಾಯಿತು. ಇದು ಸುಂದರವಾದ ದೃಶ್ಯ ವೈಭವವಾಗಿತ್ತು. ಅಲಿಸನ್ ಡೂಡಿ ಸ್ಟೀವನ್ ಸ್ಪೀಲ್‌ಬರ್ಗ್‌ನ 1989 ರ ಸಿನಿಮಾ ಇಂಡಿಯಾನಾ ಜೋನ್ಸ್ ಮತ್ತು ದಿ ಲಾಸ್ಟ್ ಕ್ರುಸೇಡ್‌ನಲ್ಲಿ ನಟಿಸಿದ್ದರು.
ಹಿರಿಯ ನಿರ್ದೇಶಕನ ವಿಮರ್ಶೆಯಿಂದ ಫುಲ್ ಹ್ಯಾಪಿ ಆದ ಎಸ್‌ಎಸ್ ರಾಜಮೌಳಿ ಪ್ರತಿಕ್ರಿಯಿ, ನನಗೆ ಕುರ್ಚಿಯಿಂದ ಎದ್ದು ಡ್ಯಾನ್ಸ್ ಮಾಡಬೇಕೆನಿಸುತ್ತದೆ. ನೀವು ಹೇಳಿದ ಮಾತುಗಳು ನನಗೆ ಭಾರೀ ದೊಡ್ಡದು ಎಂದಿದ್ದಾರೆ.
ಇದನ್ನೂ ಓದಿ: Rishab Shetty-Kantara Movie: ಕಾಂತಾರ 2 ಟ್ರೈಲರ್ ರೆಡಿ! ಪ್ರೀಕ್ವೆಲ್ ಬಗ್ಗೆ ರಿಷಬ್ ಮಾತು
ತ್ರಿಬಲ್ ಆರ್ ಪಾತ್ರವರ್ಗದಲ್ಲಿ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಜೊತೆಗೆ ಬ್ರಿಟಿಷ್ ನಟರಾದ ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ನಟಿಸಿದ್ದಾರೆ. RRR ಹಾಡು ನಾಟು ನಾಟು ಈ ವರ್ಷದ ಆಸ್ಕರ್‌ನಲ್ಲಿ ಅತ್ಯುತ್ತಮ ಹಾಡು ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಗೋಲ್ಡನ್ ಗ್ಲೋಬ್ಸ್ ಅವಾರ್ಡ್ನಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿ ಗೆದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ