Puneeth Rajkumar: ಯುವರತ್ನನ ಜನ್ಮದಿನವಿನ್ನು ಸ್ಫೂರ್ತಿ ದಿನ! ಸರ್ಕಾರದಿಂದ ಪುನೀತ್‌ ರಾಜ್‌ಕುಮಾರ್‌ಗೆ ಮತ್ತೊಂದು ಗೌರವ

ದೊಡ್ಮನೆ ರಾಜಕುಮಾರ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪುಗಳ (memories) ಜೊತೆ ಫ್ಯಾನ್ಸ್ ಹೇಗೋ ಜೀವನ ಮಾಡ್ತಿದ್ದಾರೆ. ಅವರು ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ. ಹೀಗೆ ಪ್ರತಿ ದಿನ ಪ್ರತಿ ಕ್ಷಣ ಅಭಿಮಾನಿಗಳಿಗೆ, ಅದೆಷ್ಟೋ ಯುವಜನರಿಗೆ (Youths), ಯುವ ನಟ-ನಟಿಯರಿಗೆ (Young Actors Actress) ಯುವರತ್ನನೇ (Yuvaratna) ಸ್ಫೂರ್ತಿಯಾಗಿದ್ದಾರೆ. ಇದೀಗ ಅವರ ಜನ್ಮದಿನವನ್ನು (Birthday) ‘ಸ್ಫೂರ್ತಿ ದಿನ’ವನ್ನಾಗಿ (Inspiration Day) ಆಚರಿಸಲು ರಾಜ್ಯ ಸರ್ಕಾರ (State Government) ನಿರ್ಧರಿಸಿದೆ.

ಪುನೀತ್​ ರಾಜ್​ಕುಮಾರ್​​

ಪುನೀತ್​ ರಾಜ್​ಕುಮಾರ್​​

  • Share this:
ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟ (Sandalwood Famous Actor), ಪವರ್‌ ಸ್ಟಾರ್‌ (Power Star) ಪುನೀತ್ ರಾಜ್‌ಕುಮಾರ್ (Puneeth Rajkumar) ದೈಹಿಕವಾಗಿ ನಮ್ಮನ್ನು ಅಗಲಿ ಸುಮಾರು 10 ತಿಂಗಳು ಆಯ್ತು. ಆದ್ರೆ ಕನ್ನಡಿಗರು, ಅದರಲ್ಲೂ ಅವರ ಅಭಿಮಾನಿಗಳು (Fans) ಒಂದೇ ಒಂದು ಕ್ಷಣ ಅವರನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಕನ್ನಡಿಗರ ಎದೆಯಲ್ಲಿ ಅಪ್ಪು (Appu) ಎಂದಿಗೂ ಜೀವಂತ. ದೊಡ್ಮನೆ ರಾಜಕುಮಾರ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪುಗಳ (memories) ಜೊತೆ ಫ್ಯಾನ್ಸ್ ಹೇಗೋ ಜೀವನ ಮಾಡ್ತಿದ್ದಾರೆ. ಅವರು ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ. ಹೀಗೆ ಪ್ರತಿ ದಿನ ಪ್ರತಿ ಕ್ಷಣ ಅಭಿಮಾನಿಗಳಿಗೆ, ಅದೆಷ್ಟೋ ಯುವಜನರಿಗೆ (Youths), ಯುವ ನಟ-ನಟಿಯರಿಗೆ (Young Actors Actress) ಯುವರತ್ನನೇ (Yuvaratna) ಸ್ಫೂರ್ತಿಯಾಗಿದ್ದಾರೆ. ಇದೀಗ ಅವರ ಜನ್ಮದಿನವನ್ನು (Birthday) ‘ಸ್ಫೂರ್ತಿ ದಿನ’ವನ್ನಾಗಿ (Inspiration Day) ಆಚರಿಸಲು ರಾಜ್ಯ ಸರ್ಕಾರ (State Government) ನಿರ್ಧರಿಸಿದೆ.

ಮಾರ್ಚ್ 17 ಇನ್ಮುಂದೆ ಸ್ಫೂರ್ತಿ ದಿನ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟಿದ್ದು ಮಾರ್ಚ್ 17, 1975. ಪ್ರತಿ ವರ್ಷ ಅಭಿಮಾನಿಗಳು ಈ ದಿನವನ್ನು ಅಪ್ಪು ಹಬ್ಬವನ್ನಾಗಿ ಮಾಡುತ್ತಾರೆ.  ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ತಮ್ಮೊಡನೆ ಇರಲಿ, ಇಲ್ಲದಿರಲಿ ಅವರ ಹೆಸರಲ್ಲಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಾರೆ. ಇದೀಗ ಈ ದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ನಡೆದ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ,ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ , ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬವನ್ನು ಸ್ಫೂರ್ತಿ ದಿನವಾಗಿ ಆಚರಣೆ ಮಾಡಬೇಕೆಂಬುದು ಸೇರಿದಂತೆ ಮಾಡಿದ ಮನವಿಗಳಿಗೆ ಸ್ಪಂದಿಸಿದ ಅವರು ಈ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Lucky Man Movie: ಅಪ್ಪು ನೆನಪಿಸಿಕೊಂಡು ಫ್ಯಾನ್ಸ್ ಕಣ್ಣೀರು, ಭಾವುಕರಾಗಿ ಸಿನಿಮಾ ನೋಡ್ತಿದ್ದಾರೆ ಜನ

ಸಚಿವ ಸುನೀಲ್ ಕುಮಾರ್ ಟ್ವೀಟ್

ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.



‘ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ಅವರಿಗೆ ಧನ್ಯವಾದಗಳು. ಅಪ್ಪು ಜನ್ಮದಿನ, ಮಾರ್ಚ್ 17 ಇನ್ನುಮುಂದೆ ಸ್ಫೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ’ ಎಂದು ಸುನೀಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Puneeth Rajkumar: ಲಕ್ಕಿ ಮ್ಯಾನ್​ನಲ್ಲಿ ಅಪ್ಪು-ಪ್ರಭು ಸಖತ್​ ಡ್ಯಾನ್ಸ್​; ಈ ಸಿನಿಮಾ ಮಿಸ್​ ಮಾಡ್ಕೊಬೇಡಿ ಎಂದ್ರು ಸುದೀಪ್​

ಲಕ್ಕಿಮ್ಯಾನ್ ನೋಡಿ ಅಪ್ಪು ಕಣ್ತುಂಬಿಕೊಂಡ ಫ್ಯಾನ್ಸ್

ಬಹುನಿರೀಕ್ಷಿತ ಸಿನಿಮಾ ಲಕ್ಕಿ ಮ್ಯಾನ್ (Lucky Man) ಈಗಾಗಲೇ ಥಿಯೇಟರ್​ಗೆ ತಲುಪಿದೆ. ಸಿನಿ ಪ್ರಿಯರು ಈಗಾಗಲೇ ಪುನೀತ್ ರಾಜ್​​ಕುಮಾರ್ (Puneeth Rajkumar) ಅವರ ಲಕ್ಕಿ ಮ್ಯಾನ್ ಸಿನಿಮಾ ವೀಕ್ಷಿಸಿ ಭಾವುಕರಾಗಿದ್ದಾರೆ. ಅಪ್ಪು ಹಾಗೂ ಪ್ರಭುದೇವ ಅವರ ಡ್ಯಾನ್ಸ್‌ ಬಂದಾಗ ಜನ ಶಿಳ್ಳೆ ಹೊಡೆದು ಡ್ಯಾನ್ಸ್‌ ಮಾಡುತ್ತಾರೆ. ಅದು ಮುಗಿದ ತಕ್ಷಣ ಪುನೀತ್ ರಾಜ್​ಕುಮಾರ್ ನಟಿಸಿದ್ದ ದೃಶ್ಯಗಳ ಮೇಕಿಂಗ್‌ ವಿಡಿಯೋ ಪ್ಲೇ ಮಾಡಲಾಗುತ್ತದೆ. ಪ್ರೇಕ್ಷಕರು ನೆಚ್ಚಿನ ನಟನ ವಿಡಿಯೋ ನೋಡಿ ಭಾವುಕರಾಗಿ ಥಿಯೇಟರ್​ನಿಂದ ಹೊರ ಹೋಗುತ್ತಿದ್ದಾರೆ.
Published by:Annappa Achari
First published: