Sandalwood: ಸಿನಿರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸಿನಿಮಾಗಳಿಂದ ದೂರ ಉಳಿದ ಸ್ಟಾರ್​ಗಳು..!

ಸ್ಯಾಂಡಲ್​ವುಡ್​ನಲ್ಲಿ (Sandalwood) ಎಂಟ್ರಿ ಕೊಟ್ಟು ಮಿಂಚಿ ಮಾರೆಯಾದವರು ಸಾಕಷ್ಟು ಮಂದಿ ಇದ್ದಾರೆ. ಕೆಲವರಂತೂ ಬಾಲ ಕಲಾವಿದರಾಗಿ ಪರಿಚಯವಾಗಿ, ನಂತರದಲ್ಲಿ ನಾಯಕ-ನಾಯಕಿಯಾಗಿ ನಟಿಸಿ, ಈಗ ಫೋಷಕ ಪಾತ್ರಗಳ ಮೂಲಕ  ರಂಜಿಸುತ್ತಿದ್ದಾರೆ. ಇನ್ನೂ ಕೆಲವರು ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸಿನಿ ರಂಗಕ್ಕೆ ವಿದಾಯ ಹೇಳಿದವರೂ ಇದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ ನಟ-ನಟಿಯರು

ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ ನಟ-ನಟಿಯರು

  • Share this:
ಭಾರತದಲ್ಲಿ ಆಯಾ ಭಾಷೆಗಳ ಸಿನಿರಂಗಕ್ಕೆ (Film Industry) ಅದರದ್ದೇ ಆದ ಅಭಿಮಾನಿ ಹಾಗೂ ವೀಕ್ಷಕರ ವರ್ಗವಿದೆ. ಅದರಲ್ಲೂ ಸಾಕಷ್ಟು ಮಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಕನಸು ಕಾಣುತ್ತಾರೆ. ಅವರಲ್ಲಿ ಎಲ್ಲೋ ಕೆಲವರು ಮಾತ್ರ ಕಂಡ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಸಿನಿರಂಗಕ್ಕೆ ಎಂಟ್ರಿ ಪೆಯೋದು ಅಷ್ಟು ಸುಲಭದ ಕೆಲಸವಲ್ಲ. ಇಂತಹ ಕ್ಷೇತ್ರಕ್ಕೆ ಕಷ್ಟುಪಟ್ಟು ಕಾಲಿಡುವ ಕಲಾವಿದರಲ್ಲಿ ತುಂಬಾ ಸಮಯ ಉಳಿಯಬೇಕು ಅನ್ನೋದು ಎಲ್ಲರ ಮನಸ್ಸಿನಲ್ಲಿರುವ ಆಸೆಯಾಗಿರುತ್ತದೆ. ಆದರೆ, ಅದೂ ಸಹ ಕೆಲವೇ ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ನಾನಾ ಕಾರಣಗಳಿಂದಾಗಿ ತುಂಬಾ ಜನರು ಅರ್ಧದಲ್ಲೇ ಸಿನಿ ಪಯಣಕ್ಕೆ ವಿದಾಯ ಹೇಳುತ್ತಾರೆ. ಇದಕ್ಕೆ ಸ್ಯಾಂಡಲ್​ವುಡ್​ ಸಹ ಹೊರತಾಗಿಲ್ಲ.   

ಸ್ಯಾಂಡಲ್​ವುಡ್​ನಲ್ಲಿ (Sandalwood) ಎಂಟ್ರಿ ಕೊಟ್ಟು ಮಿಂಚಿ ಮಾರೆಯಾದವರು ಸಾಕಷ್ಟು ಮಂದಿ ಇದ್ದಾರೆ. ಕೆಲವರಂತೂ ಬಾಲ ಕಲಾವಿದರಾಗಿ ಪರಿಚಯವಾಗಿ, ನಂತರದಲ್ಲಿ ನಾಯಕ-ನಾಯಕಿಯಾಗಿ ನಟಿಸಿ, ಈಗ ಫೋಷಕ ಪಾತ್ರಗಳ ಮೂಲಕ  ರಂಜಿಸುತ್ತಿದ್ದಾರೆ. ಇನ್ನೂ ಕೆಲವರು ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸಿನಿ ರಂಗಕ್ಕೆ ವಿದಾಯ ಹೇಳಿದವರೂ ಇದ್ದಾರೆ. ಇಂತಹ ನಟ-ನಟಿಯರ (Kannada Actor and Actress) ಪಟ್ಟಿದಲ್ಲಿ ಇವತ್ತು ಕೆಲವರು ಖ್ಯಾತ ಸ್ಟಾರ್​ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಈಗ ನಾವು ಮಾಹಿತಿ ನೀಡಲು ಹೊರಟಿರುವ ಸ್ಟಾರ್​ಗಳಲ್ಲಿ ಕೆಲವರು ಕನ್ನಡದ ಜೊತೆ ಬೇರೆ ಭಾಷೆಯ ಸಿನಿಮಾಗಳಲ್ಲೂ ಸಹ ನಟಿಸಿದ್ದಾರೆ.

Divya Spandana latest post, Ramya latest instagram post, Ramya latest movies, Ramya last kannada movie, Ramya Starrer Tamil Movie, Ramy foreign Boy friend, ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂಬರ್ 1 ನಟಿಯಾಗಿದ್ದ ರಮ್ಯಾ, actress ramya divya spandana instagram, ರಮ್ಯಾ, ದಿವ್ಯ ಸ್ಪಂದನಾ, ಕನ್ನಡ ಸಿನಿಮಾ, Ramya, Kannada movie, Divya Spandana, ರಮ್ಯಾ ಅವರ ಲೆಟೆಸ್ಟ್​ ಸಿನಿಮಾ, ರಮ್ಯಾ ಅಭಿನಯದ ಕೊನೆಯ ಸಿನಿಮಾ, ನೀನಾಸಂ ಸತೀಶ್​ ಜತೆ ರಮ್ಯಾ ಸಿನಿಮಾ, ಯೋಗಿ ಹಾಗೂ ರಮ್ಯಾ ಅಭಿನಯದ ಸಿನಿಮಾ ಸಿದ್ಲಿಂಗು, ರಮ್ಯಾ ಅವರ ಲೆಟೆಸ್ಟ್​ ಫೋಟೋಗಳು, ರಮ್ಯಾ ಇನ್​​ಸ್ಟಾಗ್ರಾಂ ಪೋಸ್ಟ್​,, Actress Ramya latest Instagram photos gone viral and fans says wow ae
ನಟಿ ರಮ್ಯಾ


ಮೋಹಕ ತರಾರೆ ರಮ್ಯಾ: ಸಿನಿಮಾ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿದ್ದ ರಮ್ಯಾ ಅವರು ಚಂದನವನದಲ್ಲಿ ಮೋಹತಾರೆ ಎಂದು ಕರೆಸಿಕೊಳ್ಳುತ್ತಾರೆ. ಕನ್ನಡದ ಪ್ರತಿಭಾನ್ವಿತ ನಟಿ. ಸಾಕಷ್ಟು ಹಿಟ್​ ಸಿನಿಮಾಗಳನ್ನು ಕೊಟ್ಟಿರುವ ಈ ನಟಿ 2003ರಲ್ಲಿ ತೆರೆಕಂಡ ಅಭಿ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಕನ್ನಡದಲ್ಲಿ ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಂಡು ಯಶ್ಸಿನ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿ ಜಯಗಳಿಸಿದರು. ಆಗ ಅವರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಕಾಂಗ್ರೆಸ್​ ಪಕ್ಷದ ಸೋಶಿಯಲ್ ಮೀಡಿಯಾ ವಿಂಗ್​ನ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದರು.

ಇದನ್ನೂ ಓದಿ: Happy Birthday Prem: ಕುಟುಂಬದ ಜೊತೆ ಕೇಕ್​ ಕತ್ತರಿಸಿ ಸಂಭ್ರಮಿಸಿದ ನಿರ್ದೇಶಕ ಪ್ರೇಮ್​

ಆದರೆ, ಈಗ ಸಿನಿಮಾ ಹಾಗೂ ರಾಜಕೀಯ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಒಮ್ಮೆ ಅವರನ್ನು ಅಭಿಮಾನಿಗಳು ಸಿನಿಮಾಗೆ ರೀ-ಎಂಟ್ರಿ ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ ಅದು ಮುಗಿದು ಹೋದ ಅಧ್ಯಾಯ ಎಂದಿದ್ದರು. ಆದರೆ, ಈಗಲೂ ರಮ್ಯಾ ಅವರನ್ನು ತೆರೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಕೊಡಗಿನ ಬೆಡಗಿ ಪ್ರೇಮಾ: ನಮ್ಮೂರ ಮಂದಾರ ಹೂವೆ ಖ್ಯಾತಿಯ ನಟಿ ಪ್ರೇಮಾ ಕನ್ನಡ ಸೇರಿದಂತೆ ತೆಲುಗಿನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಟಾಲಿವುಡ್​ನಲ್ಲೂ ಸ್ಟಾರ್​ ನಟಿಯಾಗಿ ಮಿಂಚಿದ್ದ ಪ್ರೇಮಾ ಸಾಕಷ್ಟು ಕಮರ್ಷಿಯಲ್ ಹಾಗೂ ವಿಭಿನ್ನ ಜಾನರ್​ನ ಚಿತ್ರಗಳ ಮೂಲಕ ರಂಜಿಸಿದ್ದಾರೆ. ಶಿರಾಜ್​ಕುಮಾರ್ ಜತೆ ನಟಿಸಿದ್ದ ಓಂ ಸಿನಿಮಾ ಅವರ ವೃತ್ತಿ ಜೀವನದ ದೊಡ್ಡ ಹಿಟ್​ ಆಗಿತ್ತು. ನಂತರದಲ್ಲಿ ತೆಲುಗಿನ ಜತೆಗೆ ಮಲಯಾಳಂನಲ್ಲೂ ಅಭಿನಯಿಸಿದರು. ವಿಷ್ಣುವರ್ಧನ್​ ಅವರ ಜತೆ ಯಜಮಾನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Sandalwood Actress Prema, Prema Second Marriage news, ಪ್ರೇಮಾ ಎರಡನೇ ಮದುವೆ ಸುದ್ದಿ, ನಟಿ ಪ್ರೇಮಾ, ಪ್ರೇಮಾ ಹೊಸ ಸಿನಿಮಾ, sandalwood, Prema, om movie, nammoora mandara hoove movie, ಸ್ಯಾಂಡಲ್‌ವುಡ್, ಪ್ರೇಮಾ, ನಮ್ಮೂರ ಮಂದಾರ ಹೂವೇ, Nammoora Mandara Hoove fame actress Prema looking gorgeous in her latest photoshoot ae
ನಮ್ಮೂರ ಮಂದಾರ ಹೂವೆ ಖ್ಯಾತಿಯ ನಟಿ ಪ್ರೇಮಾ


ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. 2006ರಲ್ಲಿ ಮದುವೆಯಾದರು. ನಂತರ 2017ರಲ್ಲಿ ಉಪೇಂದ್ರ ಮತ್ತೆ ಬಾ ಚಿತ್ರದಲ್ಲಿ ಅಭಿನಯಿಸಿದರು. ಅದು ಬಾಕ್ಸಾಫಿಸ್​ನಲ್ಲಿ ನೆಲ ಕಚ್ಚಿತ್ತು. ನಂತರ ಸಿನಿಮಾಗಳಿಂದ ಕೊಂಚ ದೂರಾಗಿದ್ದ ಪ್ರೇಮ ಅವರ ವೈವಾಹಿಕ ಜೀವನ ತುಂಬಾ ಸಮಯ ಉಳಿಯಲಿಲ್ಲ. ಈಗ ಕೇವಲ ಫೋಟೋಶೂಟ್​ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟಿ, ಇನ್ನೂ ತಮ್ಮ ರೀ-ಎಂಟ್ರಿ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲ.

ಕುಮಾರ್ ಬಂಗಾರಪ್ಪ: ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿರುವ ಕುಮಾರ್ ಬಂಗಾರಪ್ಪ ಅವರು ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳಲ್ಲಿ ರಾಜ್ಯಭಾರ ಮಾಡಿದವರು. ತೆಲುಗು ಸಿನಿಮಾದ ಮೂಲಕ ಸಿನಿರಂಗವನ್ನು ಪ್ರವೇಶಿಸಿದರು. ನಂತರ ಕನ್ನಡದಲ್ಲಿ ಶರವೇಗದ ಸರದಾರ ಸಿನಿಮಾ ಮಾಡುವ ಮೂಲಕ ಖಾತೆ ತೆರೆದರು. ಅಶ್ವಮೇಧ, ತೇಜ, ಪುರುಷೋತ್ತಮ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಅವರು ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಕಾಲಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಅವರು ಮೆಲ್ಲನೆ ಸಿನಿಮಾಗಳಿಂದ ದೂರ ಸರಿಯಲಾರಂಭಿಸಿದರು.

Stars who acted in Kannada movies who have distanced themselves from the industry ae
ಕುಟುಂಬದೊಂದಿಗೆ ಕುಮಾರ್ ಬಂಗಾರಪ್ಪ


ಮಾಸ್ಟರ್​ ಮಂಜುನಾಥ್​: ಮಾಸ್ಟರ್ ಮಂಜುನಾಥ್ ಎಂದೇ ಖ್ಯಾತಿಯಾಗಿರುವ ಮಂಜುನಾಥ್ ನಾಯ್ಕರ್​ ಕನ್ನಡ ಚಿತ್ರರಂಗದಲ್ಲಿ ತನ್ನ ಬಾಲ್ಯ ನಟನೆಯಿಂದ ಅದ್ಭುತ ಛಾಪು ಮೂಡಿಸಿರುವ ನಟ.3ನೇ ವಯಸ್ಸಿಗೆ ಬಣ್ಣ ಹಚ್ಚಿದ್ದ ಇವರು, ದೊಡ್ಡ ದೊಡ್ಡ ಸ್ಟಾರ್​ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು. 80-90ರ ದಶಕದಲ್ಲಿ ಮಿಂಚಿದ್ದ ಮಂಜುನಾಥ್ ಸಾಕಷ್ಟು ಪ್ರಶಸ್ರಿಗಳನ್ನು ಪಡೆದಿದ್ದಾರೆ. `ಮಾಲ್ಗುಡಿ ಡೇಸ್'ನ ಸ್ವಾಮಿ ಪಾತ್ರದ ಮೂಲಕ ರಾಷ್ಟ್ರವ್ಯಾಪಿ ಪ್ರಸಿದ್ಧಿ ಪಡೆದ ಮಂಜುನಾಥ್ ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿ, ತೆಲುಗು ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

Stars who acted in Kannada movies who have distanced themselves from the industry ae
ಮಾಸ್ಟರ್ ಮಂಜುನಾಥ್​


ಇಂತಹ ಪ್ರತಿಭೆ ಸಿನಿಮಾಗಳಿಂದ ದೂರ ಸರಿಯಲು ಒಂದು ಕಾರಣವಿದೆ. ವಿದೇಶದಲ್ಲಿ ಪ್ರಶಸ್ತಿ ಪಡೆಯಲು ಸಮಾರಂಭಕ್ಕೆ ಹೋದಾಗ ಅಲ್ಲಿ ಅವರಿಗೆ ತಾನು ಒಂಟಿನ ಕಾಡಿತ್ತಂತೆ. ಅಂಧೇ ಸಿನಿಮಾಗೆ ಗುಡ್​ ಬೈ ಹೇಳುವ ನಿರ್ಧಾರಕ್ಕೆ ಬಂದರಂತೆ. ಅಂದಿನಿಂದ ಅವರು ಸಿನಿಮಾಗಳಲ್ಲಿ ನಟಿಸೋದನ್ನ ನಿಲ್ಲಿಸಿದರಂತೆ. ಈಗ ಪಿಆರ್​ ಕನ್ಸಲ್ಟೆಂಟ್​ ಆಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಮದುವೆಯಾಗಿ ಒಂದು ಮಗುವಿದೆ.

ವಿನೋದ್​ ರಾಜ್​: ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಮಗ ವಿನೋದ್ ರಾಹ್​ ಅವರು ಡ್ಯಾನ್ಸ್ ರಾಜ ಡ್ಯಾನ್ಸ್​ ಮೂಲಕ ತಮ್ಮ ಸಿನಿ ಜೀವನ ಆರಂಭಿಸಿದರು. 1987ರಲ್ಲಿ ತೆರೆಕಂಡ ಆ ಸಿನಿಮಾ ಹಿಟ್​ ಆಗುವುದರ ಜೊತೆಗೆ ಅವರ ಡ್ಯಾನ್ಸಿಂಗ್ ಸ್ಟೈಲ್​ನಿಂದಾಗಿ ವಿನೋದ್​ ರಾಜ್​ ಅವರಿಗೆ ರಾತ್ರೋರಾತ್ರಿ ಸ್ಟಾರ್​ ಪಟ್ಟ ಸಿಕ್ಕಿತ್ತು. ನಂತರ ಕೃಷ್ಣ ನೀ ಕುಣಿದಾಗ, ನಂಜುಂಡ, ಮಹಾಭಾರತ, ಸ್ನೇಹಲೋಕ, ಶ್ರೀ ವೆಂಕಟೇಶ್ವರ ಮಹಿಮೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಆದರೆ ಅವುಗಳ ಊಹಿಸಿದಷ್ಟು ಯಶಸ್ಸು ಸಿಗಲಿಲ್ಲ. 2009ರಲ್ಲಿ ಯಾರದು ಚಿತ್ರದ ಮೂಲಕ ಸಿನಿರಂಗಕ್ಕೆ ವಿದಾಯ ಹೇಳಿದರು.

actress Leelavathis backbone was damaged by a foot slipping in the washroom
ನಟಿ ಲೀಲಾವತಿ, ಪುತ್ರ ವಿನೋದ್​ ರಾಜ್​


ಮಾಧವಿ ಶರ್ಮಾ: ಹೈದರಾಬಾದ್​ನ ಮಾಧವಿ ಶರ್ಮಾ  ಮೂಲ ಹೆಸರು ವಿಜಯಲಕ್ಷ್ಮಿ. ಗೋವಿಂದಸ್ವಾಮಿ ಮತ್ತು ಶಶಿರೇಖಾ ದಂಪತಿಗಳಿಗೆ ಜನಿಸಿದರು. ಬಡ ಕುಟುಂಬದಲ್ಲಿ ಜನಿಸಿದ ಮಾಧವಿ ಚಿಕ್ಕ ವಯಸ್ಸಿನಿಂದಲೇ ಕಲೆ ಮತ್ತು ನಾಟ್ಯದ ಮೇಲೆ ಸಾಕಷ್ಟು ಒಲವು ಹೊಂದಿದ್ದರು. ಹಾಗಾಗಿ ಉಮಾ ಮಹೇಶ್ವರಿ ಅವರಿಂದ ಭರತನಾಟ್ಯ ಮತ್ತು ಶ್ರೀ ಭಟ್ ಅವರಿಂದ ಜಾನಪದ ನೃತ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತರು. ನಂತರ ಭರತನಾಟ್ಯದಲ್ಲಿ ಪ್ರಾವೀಣ್ಯತೆ ಪಡೆದು ಸುಮಾರು ಸಾವಿರಕ್ಕೂ ಹೆಚ್ಚು ಸ್ಟೇಜ್ ಶೋ ಕೊಟ್ಟರು. ಹೀಗೆ ಕಾರ್ಯಕ್ರಮ ಕೊಡುತ್ತಿದ್ದ ಮಾಧವಿ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.

Stars who acted in Kannada movies who have distanced themselves from the industry ae
ಬಹಭಾಷಾ ನಟಿ ಮಾಧವಿ


ದಾಸರಿ ನಾರಾಯಣ್ ರಾವ್ ಅವರ ತೂರುಪು ಪಡಮರ ಎಂಬ ತೆಲುಗು ಚಿತ್ರದ ಮೂಲಕ ಮಾಧವಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾವು ಮಾಧವಿ ಅವರಿಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತು. ಅಲ್ಲದೆ, ಸ್ಟಾರ್​ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಗಲು ಕಾರಣವಾಯಿತು. ತೆಲುಗು ಮಾತ್ರವಲ್ಲದೆ ಕನ್ನಡ , ತಮಿಳು, ಮಲಯಾಳಂ, ಹಿಂದಿ, ಒರಿಯಾ ಭಾಷೆಯಲ್ಲಿ ನಟಿಸಿದ್ದಾರೆ. 300 ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಖ್ಯಾತಿಯನ್ನು ಪಡೆದಕೊಂಡರು. ಒಂದು ಸಮಯದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು. ಅಚ್ಚರಿ ವಿಚಾರವೆಂದರೆ, 20ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಮಾಧವಿ ಶರ್ಮ.

ಇದನ್ನೂ ಓದಿ: Prema: ಪ್ರೇಮಾರ ಎರಡನೇ ಮದುವೆ ಸುದ್ದಿ: ಸ್ಪಷ್ಟನೆ ಕೊಟ್ಟ ನಟಿ..!

ವರನಟ ಡಾಕ್ಟರ್ ರಾಜಕುಮಾರ್,ವಿಷ್ಣುವರ್ಧನ್,ಅನಂತ್ ನಾಗ್ ಮತ್ತು ಅಂಬರೀಶ್​ ಸೇರಿದಂತೆ ಅನೇಕ ಜನಪ್ರಿಯ ನಟರೊಂದಿಗೆ ನಟಿಸುವ ಮೂಲಕ ಪರದೆ ಮೇಲೆ ಮಿಂಚಿದ್ದರು. ಕನ್ನಡಿಗರ ನೆಚ್ಚಿನ ನಟಿಯಾಗಿ ಗುರುತಿಸಿಕೊಂಡಿದ್ದರು.ಸಿನಿಮಾ ನಟಿಸುತ್ತಿದ್ದ ಮಾಧವಿ ಅವರು ಹಿಂದೂ ಆಧ್ಯಾತ್ಮಿಕ ಶಿಕ್ಷಣ ಸ್ವಾಮಿರಾಮ ಅವರ ಅನುಯಾಯಿಗಳಲ್ಲಿ ಒಬ್ಬರಾದ ರಾಲ್ಫ್ ಶರ್ಮ ಅವರನ್ನು ವಿವಾಹವಾಗುತ್ತಾರೆ. 1996ರ ಫೆಬ್ರವರಿ 12, ರಂದು ಮಾಧವಿ ಮತ್ತು ರಾಲ್ಫ್ ಶರ್ಮ ಜೊತೆಗೆ ಹಸೆಮಣೆ ಏರುತ್ತಾರೆ. ರಾಲ್ಫ್ ಶರ್ಮ ಉದ್ಯಮಿಯಾಗಿದ್ದು ಅಮೇರಿಕಾದಲ್ಲಿ ದೊಡ್ಡ ಔಷಧಿ ಕಂಪನಿ ಇಟ್ಟಿದ್ದಾರೆ.ವಿವಾಹವಾದ ನಂತರ ಸಿನಿಮಾದಿಂದ ದೂರ ಉಳಿದ ಮಾಧವಿ ಶರ್ಮ ಪತಿಯೊಂದಿಗೆ ಅಮೆರಿಕಾ ಹಾರಿದರು. ಅಂದಿನಿಂದ ಸಿನಿಮಾಗಳಿಗೆ ವಿದಾಯ ಹೇಳಿದರು.

ನಟಿ ರಕ್ಷಿತಾ ಪ್ರೇಮ್​ ಸಹ ಸಿನಿಮಾಗಳಲ್ಲಿ ಅಭಿನಯಿಸುವುದರಿಂದ ದೂರ ಇದ್ದರೂ ಚಿತ್ರಗಳ ನಿರ್ಮಾಣ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಇನ್ನು ಕೆಲ ಹಿರಿಯ ನಟ-ನಟಿಯರು ಅವಕಾಶಗಳ ಕೊರತೆಯಿಂದಾಗಿ ಅವರು ಸಿನಿಮಾಗಳಿಂದ ದೂರ ಉಳಿದಿದ್ದಾರೆ.
Published by:Anitha E
First published: