ವಿದ್ಯುತ್​ ಜಮ್ವಾಲ್-ಕುನಾಲ್​ ಖೇಮು ಬೆಂಬಲಕ್ಕೆ ನಿಂತ ಕಂಗನಾ..!

ನಟ ವಿದ್ಯುತ್​ ಜಮ್ವಾಲ್ ಹಾಗೂ ಕುನಾಲ್ ಖೇಮು ಅವರನ್ನು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್ ಆಯೋಜಿಸಿದ್ದ ಡಿಜಿಟಲ್​ ಸುದ್ದಿಗೋಷ್ಠಿಗೆ ಆಹ್ವಾನಿಸಿಲ್ಲ. ಇದರಿಂದ ಬೇಸರಗೊಂಡ ಈ ಇಬ್ಬರು ನಟರು  ಟ್ವೀಟ್​ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

Anitha E | news18-kannada
Updated:July 1, 2020, 4:34 PM IST
ವಿದ್ಯುತ್​ ಜಮ್ವಾಲ್-ಕುನಾಲ್​ ಖೇಮು ಬೆಂಬಲಕ್ಕೆ ನಿಂತ ಕಂಗನಾ..!
ವಿದ್ಯುತ್​ ಜಮ್ವಾಲ್​, ಕಂಗನಾ ಹಾಗೂ ಕುನಾಲ್​ ಖೇಮು
  • Share this:
ಸುಶಾಂತ್ ಅಗಲಿಕೆಯಿಂದಾಗಿ ಬಾಲಿವುಡ್​ನಲ್ಲಿರುವ ನೆಪೋಟಿಸಮ್​ ಹಾಗೂ ಹೊರಗಿನಿಂದ ಬಂದ ಕಲಾವಿದರನ್ನು ನಿರ್ಲಕ್ಷಿಸುವ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನೆಟ್ಟಿಗರು ಸಮರವನ್ನೇ ಸಾರಿದ್ದಾರೆ. ಈಗ ಇದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.

ನಟ ವಿದ್ಯುತ್​ ಜಮ್ವಾಲ್ ಹಾಗೂ ಕುನಾಲ್ ಖೇಮು ಅವರನ್ನು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್ ಆಯೋಜಿಸಿದ್ದ ಡಿಜಿಟಲ್​ ಸುದ್ದಿಗೋಷ್ಠಿಗೆ ಆಹ್ವಾನಿಸಿಲ್ಲ. ಇದರಿಂದ ಬೇಸರಗೊಂಡ ಈ ಇಬ್ಬರು ನಟರು  ಟ್ವೀಟ್​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

A BIG announcement for sure!! 

 ಹಾಟ್​ಸ್ಟಾರ್​ನಲ್ಲಿ 7 ಬಾಲಿವುಡ್​ ಸಿನಿಮಾಗಳು ರಿಲೀಸ್​ ಆಗಲಿದ್ದು, ಅದರ ಪ್ರಕಟಣೆಗಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಗೆ ಆಲಿಯಾ, ವರುಣ್​ ಧವನ್​, ಅಕ್ಷಯ್ ಕುಮಾರ್​ ಹಾಗೂ ಅಜಯ್​ ದೇವಗನ್ ಅವರನ್ನು ಕರೆಯಲಾಗಿತ್ತು. ಆದರೆ ವಿದ್ಯುತ್ ಹಾಗೂ ಕುನಾಲ್​ ಅವರನ್ನು ಮಾತ್ರ ನಿರ್ಲಕ್ಷಿಸಲಾಗಿದೆ. ಹಾಟ್​ಸ್ಟಾರ್ ಅವರ ಈ ವರ್ತನೆಯನ್ನು ಸೆಲೆಬ್ರಿಟಿಗಳು ಸೇರಿದಂತೆ ನೆಟ್ಟಿಗರು ಖಂಡಿಸಿದ್ದಾರೆ.

ಇದನ್ನೂ ಓದಿ: Neha Kakkar: ದೊಡ್ಡ ದೊಡ್ಡ ಸ್ಟಾರ್​ಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ನೇಹಾ ಕಕ್ಕರ್..!

ಈಗ ನಟ ಜಮ್ವಾಲ್ ಹಾಗೂ ಕುನಾಲ್​ಗೆ ಬೆಂಬಲವಾಗಿ ಕಂಗನಾ ರನೋತ್​ ಬಂದಿದ್ದಾರೆ. ಇಷ್ಟೆಲ್ಲ ಆದರೂ ಹೊರಗಿನಿಂದ ಬಂದವರನ್ನು ನೋಡುವ ರೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಾಚಿಕೆಯಾಗಬೇಕು ಎಂದು ಟ್ವೀಟ್​ ಮಾಡಿದ್ದಾರೆ ಬಾಲಿವುಡ್​ ಕ್ವೀನ್​ ಕಂಗನಾ.

Such a shame that ill treatment of outsiders continues even in territories where everyone is new and an outsider. https://t.co/b5xlV6hZqxಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಲಿರುವ 7 ಸಿನಿಮಾಗಳಲ್ಲಿ ವಿದ್ಯುತ್ ಜಮ್ವಾಲ್ ಹಾಗೂ ಕುನಾಲ್​ ಖೇಮು ಅವರ ಸಿನಿಮಾಗಳೂ ಇವೆ. ಆದರೂ ಈ ಇಬ್ಬರು ನಟರನ್ನು ಬಿಟ್ಟು ಉಳಿದವರನ್ನು ಕರೆಯಲಾಗಿದೆ. ಇವರಲ್ಲಿ ಎಲ್ಲರೂ ಸ್ಟಾರ್ ಕಿಡ್​ಗಳೇ ಎನ್ನುವುದು ವಿಶೇಷ.

Ranjani Raghavan: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಪುಟ್ಟಗೌರಿ ರಂಜನಿ ರಾಘವನ್..!ಇದನ್ನೂಓದಿ: Alia Bhatt: ಟ್ರೋಲ್​ ಆಗುತ್ತಿದೆ ಆಲಿಯಾ ಭಟ್​ ಅಭಿನಯದ ಸಡಕ್​ 2 ಚಿತ್ರದ ಪೋಸ್ಟರ್​..!
First published: July 1, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading