Anchor Shalini: ನವಿಲು, ವೀಳ್ಯದೆಲೆ, ಬಾಳೆಹಣ್ಣು ಎಲ್ಲಾ ಆಯ್ತು ಇದೀಗ ದೇವಿ ದರ್ಶನ; ಶಾಲಿನಿ ಬ್ಲೌಸ್ ಡಿಸೈನರ್​ಗೆ ನಮೋ ನಮಃ

ಇತ್ತೀಚಿಗೆ ಅವರೇ ಒಂದು ರೀಲ್ಸ್​ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಅಪ್ಲೋಡ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶಾಲಿನಿ ತೊಟ್ಟ ಬ್ಲೌಸ್​ ಮೇಲೆ ದೇವಿ ಡಿಸೈನ್ ಮಾಡಲಾಗಿದೆ. ಮಹಿಳೆಯರು ಶಾಲಿನಿ ಬ್ಲೌಸ್​ಗೆ ಹೂವು, ಕುಂಕುಮ ಇಟ್ಟು ಪೂಜೆ ಮಾಡಿರೋ ವಿಡಿಯೋ ವೈರಲ್​ ಆಗಿದೆ.

ಶಾಲಿನಿ

ಶಾಲಿನಿ

  • Share this:
ಸ್ಟಾರ್ ಸುವರ್ಣ ವಾಹಿನಿಯಲ್ಲಿ (Star Suvarna)  ಪ್ರಸಾರವಾಗೋ ಸುವರ್ಣ ಸೂಪರ್ ಸ್ಟಾರ್ (Suverna Super star) ರಿಯಾಲಿಟಿ ಶೋ (Reality Show) ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮನೆಯಲ್ಲಿರೋ ಮಹಿಳೆಯರಿಗೆ ಸಮಯ ಕಳೆಯಲು ಇದು ಒಳ್ಳೆ ಮನರಂಜನಾ ಕಾರ್ಯಕ್ರಮವಾಗಿದೆ. (Entertainment Programme) ಈ ಶೋನಲ್ಲಿ ಒಂದಷ್ಟು ಗೇಮ್​, ಮತ್ತಷ್ಟೋ ತಮಾಷೆ ಇರುತ್ತೆ. ಸ್ಪರ್ಧಿಗಳಿಗೂ ಸಖತ್​ ಟಾಸ್ಕ್​ ನೀಡಿ ಸ್ಪರ್ಧಿಗಳನ್ನು ಪೋತ್ಸಾಹಿಸೋ ಕೆಲಸ ಮಾಡ್ತಾರೆ ಆ್ಯಂಕರ್ ಶಾಲಿನಿ, ಸೂಪರ್​ ಸ್ಟಾರ್ ರಿಯಾಲಿಟಿ ಶೋ ಜನಪ್ರಿಯವಾಗಲು ಶಾಲಿನಿ (Shalini) ಅವರು ಕೂಡ ಕಾರಣ ಎಂದೇ ಹೇಳಬಹುದು. ಇವ್ರ ನಿರೂಪಣೆ ಶೈಲಿಯೇ ಕಾರ್ಯಕ್ರಮ ಯಶಸ್ವಿಗೆ ಕಾರಣವಾಗಿದೆ. ಆದ್ರೆ ಅವ್ರು ಕಾರ್ಯಕ್ರಮದಲ್ಲಿ ಹಾಕೋ ಬ್ಲೌಸ್​ ಡಿಸೈನ್​ ಎಲ್ಲರ ಗಮನಸೆಳೆಯುತ್ತಿದೆ.

ಇದೆಂಥಾ ಡಿಸೈನ್​ಗಳು

ಸೋಶಿಯಲ್​ ಮೀಡಿಯಾದಲ್ಲಿ ಇವ್ರ ಬ್ಲೌಸ್​ ಡಿಸೈನ್​ಗಳ ಬಗ್ಗೆ ಅವ್ರೇ ಮಾಡೋ ರೀಲ್ಸ್​ಗಳಂತು ಸಖತ್​ ಫೇಮಸ್​ ಆಗಿದೆ. ಮಹಿಳೆಯರು ಮದುವೆ, ಸಭೆ, ಸಮಾರಂಭವೆಂದರೆ ಒಂದಷ್ಟು ಡಿಸೈನರಿ ಬ್ಲೌಸ್‌ಗಳನ್ನು ಸ್ಟಿಚ್ ಮಾಡಿಸ್ತಾರೆ. ಆದ್ರೆ ಶಾಲಿನಿ ಅವ್ರ ಡಿಸೈನ್ ಬ್ಲೌಸ್​ಗಳ ಮಾತ್ರ ಆಲೋಚನೆಗೂ ಮೀರಿದಂತಿರುತ್ತದೆ


ಶಾಲಿನಿ ತೊಟ್ಟ ಬ್ಲೌಸ್​ ಮೇಲೆ ದೇವಿ ಡಿಸೈನ್

ಇತ್ತೀಚಿಗೆ ಅವರೇ ಒಂದು ರೀಲ್ಸ್​ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಅಪ್ಲೋಡ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶಾಲಿನಿ ತೊಟ್ಟ ಬ್ಲೌಸ್​ ಮೇಲೆ ದೇವಿ ಡಿಸೈನ್ ಮಾಡಲಾಗಿದೆ. ಮಹಿಳೆಯರು ಶಾಲಿನಿ ಬ್ಲೌಸ್​ಗೆ ಹೂವು, ಕುಂಕುಮ ಇಟ್ಟು ಪೂಜೆ ಮಾಡಿರೋ ವಿಡಿಯೋ ವೈರಲ್​ ಆಗಿದೆ.


ವೀಳ್ಯದೆಲೆ  ಬ್ಲೌಸ್ ಡಿಸೈನ್​

ಸದ್ಯ, ವಾರಕ್ಕೆ ಎರಡು ಎಪಿಸೋಡ್‌ಗಳು ಪ್ರಸಾರವಾಗುತ್ತವೆ. ಹಾಗೆಲ್ಲಾ ಹೆಚ್ಚು ಗಮನ ಸೆಳೆಯುವುದು ಇದೆ ಶಾಲಿನಿ ಹಾಗೂ ಅವರ ಬ್ಲೌಸ್​ ಡಿಸೈನ್​ಗಳು. ಜನ ಕೂಡ ಶಾಲಿನಿ ಈ ಬಾರಿ ಯಾವ ಡಿಸೈನ್​ ಬ್ಲೌಸ್​ ಹಾಕಿಕೊಂಡು ಬರ್ತಾರೆ ಎಂದು ಕಾಯುತ್ತಿರುತ್ತಾರೆ. ವೀಳ್ಯದೆಲೆ ಬ್ಲೌಸ್​ ಡಿಸೈನ್​  ಹೇಗಿದೆ ನೋಡಿ.


ಇದು ಬಾವುಲಿ ಡಿಸೈನ್​ ಬ್ಲೌಸ್​

ಇದು ಬೇರೆ ಬ್ಲೌಸ್​ ಡಿಸೈನ್​ಗೆ ಹೋಲಿಕೆ ಮಾಡಿದ್ರೆ ಕೊಂಚ ಸಿಂಪಲ್​ ಹಾಗೂ ವಿಭಿನ್ನವಾಗಿದೆ. ಎರಡು ರೆಕ್ಕೆ ಕೊಟ್ಟು ಬಾವುಲಿ ಡಿಸೈನ್​ ಮಾಡಿದ್ದಾರೆ ಶಾಲಿನಿ ಬ್ಲೌಸ್​ ಡಿಸೈನರ್​ ಮೌನೀಶ್ , ಇವರ ಈ ರೀಲ್ಸ್​ಗೂ ತುಂಬಾ  ಲೈಕ್ಸ್​ ಕೂಡ ಬಂದಿದೆ.


ಶಾಲಿನಿ ಹಾಕುವ ಒಂದೊಂದು ಬ್ಲೌಸ್‌ಗಳು ಕೂಡ ವಿಭಿನ್ನವಾಗಿರುತ್ತದೆ. . ಶಾಲಿನಿ ಜೊತೆ ಮೂವರು ಸೇರಿ ಕಾಮಿಡಿ ಮಾಡಿ ರೀಲ್ಸ್​ ಅವ್ರು ಎಂಜಾಯ್​ ಮಾಡ್ತಾ ಪ್ರೇಕ್ಷಕರಿಗೂ ಮನರಂಜನೆ ನೀಡುತ್ತಿದ್ದಾರೆ.


ಈ ಎಲ್ಲಾ ಬ್ಲೌಸ್ ಡಿಸೈನ್ ಮಾಡುವವರು ಶಾಲಿನಿ ಜೊತೆಗೆ ಇರುವ ಮೋನಿಶ್ ಅವರೇ. ಮೋನಿಶಾ... ಅನ್ನೋ ಡೈಲಾಗ್​ ಸಖತ್​ ಫೇಮಸ್​ ಆಗಿದೆ.
Published by:Pavana HS
First published: