Sangharsha Serial: ಮುಗಿದೇ ಹೋಯ್ತು 'ಸಂಘರ್ಷ'ದ ಕಥೆ, 'ಸುವರ್ಣ' ಅವಕಾಶಕ್ಕೆ ಥ್ಯಾಂಕ್ಸ್ ಎಂದ ತೇಜಸ್ವಿನಿ ಶೇಖರ್

Kannada serial Update: ಸ್ಟಾರ್ ಸುವರ್ಣ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿ ಕೊನೆಯ ಹಂತದಲ್ಲಿದೆ ಎಂದು ಈ ಧಾರಾವಾಹಿಯಲ್ಲಿ ನಾಯಕಿ ಅಂದರೆ ಇಂದಿರಾ ಪಾತ್ರ ಮಾಡುತ್ತಿದ್ದ ನಟಿ ತೇಜಸ್ವಿನಿ ಶೇಖರ್ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದು, ಧಾರಾವಾಹಿ ಮುಗಿಯುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಂತ್ಯವಾಗುತ್ತಿರುವ ಧಾರಾವಾಹಿ

ಅಂತ್ಯವಾಗುತ್ತಿರುವ ಧಾರಾವಾಹಿ

  • Share this:
ಒಂದೊಂದು ಧಾರಾವಾಹಿಗಳು (Serial) ಜನರ ಮನಸ್ಸಿನಲ್ಲಿ ಬೇರೂರುತ್ತವೆ. ಅದು ಮುಗಿಯುವ ಸಂದರ್ಭ ಬಂದಾಗ ಬೇಜಾರಾಗುತ್ತದೆ. ಕತೆ ನಮ್ಮ ಮನೆಯಲ್ಲಿ ನಡೆಯುತ್ತಿದೆ ಎನ್ನುವ ಭಾವನೆಯಲ್ಲಿರುವ ವೀಕ್ಷಕರು ಆ ಧಾರಾವಾಹಿ ಅಂತ್ಯ ಕಂಡಾಗ ಯಾಕಾದರು ಮುಗಿಯುತ್ತಿದೆ ಅನಿಸುತ್ತದೆ, ಇದೇ ಭಾವನೆ ಇದೀಗ ಸ್ಟಾರ್ ಸುವರ್ಣ (Star Suvarna) ವೀಕ್ಷಕರಲ್ಲಿ ಮೂಡಿದ್ದು, ಅತ್ಯಂತ ಪ್ರಸಿದ್ದ ಧಾರಾವಾಹಿ ಮುಗಿಯುತ್ತಿದ್ದು, ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ.

ಸ್ಟಾರ್ ಸುವರ್ಣ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿ ಕೊನೆಯ ಹಂತದಲ್ಲಿದೆ ಎಂದು ಈ ಧಾರಾವಾಹಿಯಲ್ಲಿ ನಾಯಕಿ ಅಂದರೆ ಇಂದಿರಾ ಪಾತ್ರ ಮಾಡುತ್ತಿದ್ದ ನಟಿ ತೇಜಸ್ವಿನಿ ಶೇಖರ್ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದು, ಧಾರಾವಾಹಿ ಮುಗಿಯುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಂಘರ್ಷ ಧಾರಾವಾಹಿಯು ಕೇವಲ ಒಂದು ನೆನಪಿನಲ್ಲಿ ಉಳಿಯುವ ಪ್ರಯಾಣ ಅಲ್ಲ ಅದು ಒಂದು ಉತ್ತಮವಾದ ಜೀವನದ ಅನುಭವ. ಇಂತಹ ಸುಂದರ ಪ್ರಯಾಣವು ಕೊನೆಗೊಂಡಿದೆ ಎಂದು ಒಪ್ಪಿಕೊಳ್ಳುವುದು ಕಷ್ಟ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಸಂಘರ್ಷ ಧಾರವಾಹಿ ತಂಡವು ಕೇವಲ ಒಂದು ತಂಡವಾಗಿರಲಿಲ್ಲ, ಇಲ್ಲಿ ಉತ್ತಮ ಗುಣ ಹೊಂದಿರುವ ಹಲವಾರು ಸ್ನೇಹಿತರನ್ನು ನಾನು ಪಡೆದುಕೊಂಡೆ. ಅವರಿಂದಲೇ ಧಾರಾವಾಹಿಯಲ್ಲಿ ನನ್ನ ಪಯಣ ಆರಾಮದಾಯಕವಾಗಿತ್ತು. ತಂಡದ ಪ್ರತಿಯೊಬ್ಬ ಸದಸ್ಯರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಇನ್ನು ನನ್ನ ಎಲ್ಲಾ ಅಭಿಮಾನಿಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಪ್ರೀತಿ ತೋರಿಸುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಪ್ರೀತಿ ಬೆಂಬಲ ಇಲ್ಲದಿದ್ದರೆ ನಾನು ಈ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ. ನನ್ನ ಪ್ರತಿ ಹೆಜ್ಜೆಗೂ ನಿಮ್ಮ ಪ್ರೀತಿ ಬೆಂಬಲಕ್ಕೆ ನಾನು ಚಿರಋಣಿ, ಎಂದು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮತ್ತೆ ಬಣ್ಣ ಹಚ್ಚಿದ ಮನಸಾರೆ ಸುಂದರಿ - ಮೇ 20ರಂದು ಗರುಡ ಚಿತ್ರ ರಿಲೀಸ್​

ಈ ಸಂಘರ್ಷ ಧಾರಾವಾಹಿಯು ತಮಿಳಿನ ಆಯುಧ ಇಳದು ಧಾರಾವಾಹಿಯ ಕನ್ನಡ ರಿಮೇಕ್‌ ಆಗಿತ್ತು. ಕರ್ನಾಟಕದ ವೀಕ್ಷರಿಗೆ ತಕ್ಕಂತೆ ಹಲವು ಬದಲಾವಣೆಗಳನ್ನು ಮಾಡಿಕೊಂಡು ಜನರ ಮುಂದೆ ಪ್ರಸ್ತುತ ಪಡಿಸಲಾಗಿದ್ದು, ಜನರಿಗೆ ಬಹಳ ಹತ್ತಿರವಾಗಿತ್ತು.

ಇನ್ನು ಈ ಧಾರಾವಾಹಿ ನಿರ್ಮಾಣ ಸಂಸ್ಥೆಯ ಬಗ್ಗೆ ಮಾತನಾಡಿರುವ ನಟಿ, ಈ ಸಂಸ್ಥೆಯ ಬಗ್ಗೆ ಹೆಚ್ಚು ಹೇಳಲು ಏನಿಲ್ಲ. ಎಲ್ಲವೂ ಜನರಿಗೆ ಗೊತ್ತಿರುವುದೇ. ಒಳ್ಳೆಯ ಸೀರಿಯಲ್ಗಳನ್ನು ನೀಡಿ, ಜನರ ಮನಸ್ಸಲ್ಲಿ ಗೌರವ ಹಾಗೂ ಶಾಶ್ವತ ಸ್ಥಾನ ಪಡೆದಿರುವ ಸಂಸ್ಥೆಯಾಗಿದ್ದು, ಇವರ ಜೊತೆ ನಾನು ಎರಡನೇ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದು, ಅದ್ಭುತ ಅವಕಾಶ ಎನ್ನಬಹುದು. ಈ ಸಂಸ್ಥೆಯ ಜೊತೆ ನನ್ನ ಒಡನಾಟ ಹೀಗೆ ಮುಂದುವರೆಯಲಿ ಎಂದು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮಹತ್ವಾಕಾಂಕ್ಷೆ ಇರುವ ಇಂದಿರಾ ಎನ್ನುವ ಯುವತಿಯ ಸುತ್ತ ನಡೆಯುವ ಕಥೆಯೇ ಈ ಧಾರಾವಾಹಿಯ ಕಥಾ ಹಂದರವಾಗಿದ್ದು, ಬಹಳಷ್ಟು ಆಕಾಂಕ್ಷೆಗಳೊಂದಿಗೆ ಜಿಲ್ಲಾಧಿಕಾರಿಯಾಗುವ ಆಕೆ, ಯಾವ ರೀತಿ ಕೆಲಸ ಮಾಡುತ್ತಾಳೆ. ಬೈರಾದೇವಿ ಎಂಬ ಊರಿನ ಶ್ರೀಮಂತೆ ನಾಯಕಿಗೆ ಏನೆಲ್ಲ ತೊಂದರೆ ಕೊಡುತ್ತಾಳೆ? ಜನರು ವಿದ್ಯಾವಂತರಾದರೆ ತನ್ನ ಅಸ್ಥಿತ್ವಕ್ಕೆ ಧಕ್ಕೆ ಆಗುತ್ತದೆ ಎಂಬ ಕಾರಣದಿಂದ ಹಳ್ಳಿಯಲ್ಲಿ ಶಾಲೆ ತೆರೆಯದಂತೆ ಬೈರಾದೇವಿ ಏನು ಮಾಡುತ್ತಾಳೆ? ಆಕೆಯನ್ನು ಈ ಜಿಲ್ಲಾಧಿಕಾರಿ ಹೇಗೆ ಎದುರಿಸುತ್ತಾಳೆ ಎಂಬುದೇ ಇದರ ಮುಖ್ಯ ಕಥೆಯಾಗಿತ್ತು.

ಇದನ್ನೂ ಓದಿ: ಬಣ್ಣದ ಲೋಕಕ್ಕೆ ಕಿಂಗ್​ ಖಾನ್​ ಮಗಳು ಎಂಟ್ರಿ - ಚಿತ್ರದ ಫಸ್ಟ್​ ಲುಕ್​ ನೋಡಿ ಭಾವುಕರಾದ ಶಾರುಖ್​

ಇದೀಗ ಈ ಧಾರಾವಾಹಿ ಮುಗಿಯುವ ಅಂತ್ಯಕ್ಕೆ ಬಂದಿದ್ದು, ಅಂತ್ಯ ಹೇಗಾಗಲಿದೆ ಎಂಬುದು ಕುತೂಹಲವಾಗಿದ್ದು, ಜನರು ಕಾದು ಕುಳಿತಿದ್ದಾರೆ.
Published by:Sandhya M
First published: